Viral Video : ಮೊದಲ ಬಾರಿ ವಿಮಾನವೇರಿದ ಯೂಟ್ಯೂಬರ್ ಗಂಗವ್ವ ವಿಡಿಯೋ ವೈರಲ್
ಯುಟ್ಯೂಬ್ ನಲ್ಲಿ ಪ್ರಸಿದ್ಧವಾದ ಗಂಗವ್ವ ಮತ್ತೆ ಸುದ್ದಿಯಲ್ಲಿದ್ದಾರೆ. ಎಲ್ಲರ ಮುಖದಲ್ಲಿ ನಗು ಮೂಡಿಸುವ ಅಜ್ಜಿ ಈಗ ವಿಮಾನವೇರಿದ್ದಾರೆ. ಅವರು ವಿಮಾನದಲ್ಲಿ ಏನು ಮಾಡಿದ್ರು ಎಂಬ ವಿಡಿಯೋಕ್ಕೆ ಸಿಕ್ಕಾಪಟ್ಟೆ ಪ್ರತಿಕ್ರಿಯೆ ಸಿಕ್ಕಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅನೇಕರು ಪ್ರಸಿದ್ಧಿ ಪಡೆಯುತ್ತಿದ್ದಾರೆ. ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯಸ್ಸಿನವರು ತಮ್ಮ ಕಲೆಯನ್ನು ಪ್ರದರ್ಶನ ಮಾಡ್ತಾ, ಗಳಿಕೆ ಕೂಡ ಮಾಡ್ತಿದ್ದಾರೆ. ಯೂಟ್ಯೂಬ್ ನಲ್ಲಿ ಫನ್ನಿ ವಿಡಿಯೋಗಳ ಮೂಲಕ ಫೇಮಸ್ ಆದ ಅಜ್ಜಿ ಗಂಗವ್ವ ಮಿಲ್ಕುರಿ ಕೂಡ ಇದ್ರಲ್ಲಿ ಸೇರ್ತಾರೆ. ಗಂಗವ್ವ ಹೈದರಾಬಾದಿನಿಂದ ಹಲವಾರು ಕಿಲೋಮೀಟರ್ ದೂರದ ಹಳ್ಳಿಯಲ್ಲಿ ವಾಸಿಸುವ ಕೃಷಿ ಮಹಿಳೆ. ತಮಾಷೆಯ ವೀಡಿಯೊಗಳೊಂದಿಗೆ ಸ್ವಲ್ಪ ಸಮಯದವರೆಗೆ ಯೂಟ್ಯೂಬ್ ಸ್ಟಾರ್ ಆಗಿದ್ದ ಗಂಗವ್ವ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಈಗ ಗಂಗವ್ವ ಮತ್ತೆ ಸುದ್ದಿಯಲ್ಲಿದ್ದಾರೆ.
ಗಂಗವ್ವ (Gangavva) ಮೊದಲ ಬಾರಿಗೆ ವಿಮಾನ (Plane) ಏರಿದ್ದಾರೆ. ಅವರ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಹಾರುತ್ತಿರುವ ಗಂಗವ್ವ ತಮಾಷೆ ಮಾಡುತ್ತಿರುವುದು ಕಂಡು ಬಂದಿದೆ.
ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ: ಭಾರತೀಯ ವಿದ್ಯಾರ್ಥಿಗೆ ಅಮೆರಿಕನ್ ಏರ್‌ಲೈನ್ಸ್ ನಿಷೇಧ
62 ವರ್ಷದ ಮಹಿಳೆ ಯೂಟ್ಯೂಬ್ (YouTube) ಸ್ಟಾರ್ ಆಗಿದ್ದು ಹೇಗೆ ? : ಹಳ್ಳಿಯಲ್ಲಿ ಜನಿಸಿದ್ದ ಗಂಗವ್ವ ಜೀವನ ಸುಲಭವಾಗಿರಲಿಲ್ಲ. 5 ವರ್ಷದವಳಿದ್ದಾಗಲೇ ಗಂಗವ್ವನಿಗೆ ಮದುವೆಯಾಗಿತ್ತು. ಓದಿದ್ದು ಒಂದನೇ ತರಗತಿವರೆಗೆ ಮಾತ್ರ. ಪತಿ ಕುಡಿತದ ಚಟ ಹೊಂದಿದ್ದ. 4 ಮಕ್ಕಳ ತಾಯಿಯಾದ್ಲು ಗಂಗವ್ವ. ನನ್ನ ಶ್ರಮದಿಂದಲೇ ಮಕ್ಕಳನ್ನು ಬೆಳೆಸಿದರು. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆ ಬೀಡಿ ಕಟ್ಟಿ ಮಾರುತ್ತಿದ್ದಳು. ಇದ್ರಿಂದ ಬಂದ ಹಣದಲ್ಲಿಯೇ ಮಕ್ಕಳಿಗೆ ವಿದ್ಯೆ ಕಲಿಸಿದರು. ಇಂದು ಎಲ್ಲಾ ಮಕ್ಕಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಶಸ್ವಿಯಾಗಿದ್ದಾರೆ.
ತೆಲಂಗಾಣ (Telangana) ದ ಗಂಗವ್ವಗೆ ಈ 62 ವರ್ಷ ವಯಸ್ಸು. ಅವರ ಅಳಿಯ ಶ್ರೀಕಾಂತ ಮೈ ವಿಲೇಜ್ ಶೋ ಎಂಬ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಶ್ರೀಕಾಂತ್ ತಮ್ಮ ವಿಡಿಯೋದಲ್ಲಿ ಅಜ್ಜಿಯನ್ನು ಸೆರೆ ಹಿಡಿದಿದ್ದರು. ನಂತ್ರ ಗಂಗವ್ವರಿಗಾಗಿಯೇ ವಿಶೇಷ ಎಪಿಸೋಡ್ ಶುರು ಮಾಡಿದ್ದರು. ಅದ್ರಲ್ಲಿ ಗಂಗವ್ವ ಸ್ಟಾರ್ ಗಳ ಸಂದರ್ಶನ (Interview) ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ರಿಯಾಲಿಟಿ ಶೋ ಬಿಗ್ ಬಾಸ್ ತೆಲುಗಿನ ನಾಲ್ಕನೇ ಸೀಸನ್ ನಲ್ಲಿ ಗಂಗವ್ವ ಭಾಗವಹಿಸಿದ್ದರು. ಇದ್ರ ನಂತ್ರ ಅವರ ಜನಪ್ರಿಯತೆ ಹೆಚ್ಚಾಯಿತು. ಈಗ ಅವರ ಒಂದು ವೀಡಿಯೊ ಮತ್ತೆ ಜನರು, ಗಂಗವ್ವರನ್ನು ಇಷ್ಟಪಡುವಂತೆ ಮಾಡ್ತಿದೆ.
ಈಗ ವೈರಲ್ ಆದ ವಿಡಿಯೋದಲ್ಲಿ ಏನಿದೆ? : ಇನ್ಸ್ಟಾಗ್ರಾಮ್ ನ ಗಂಗವ್ವ ಆಂಡ್ ವಿಲೇಜ್ ಶೋ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಗಂಗವ್ವ ಈ ವಿಡಿಯೋದಲ್ಲಿ ವಿಮಾನ ಹತ್ತುತ್ತಿದ್ದಾರೆ. ಗಂಗವ್ವ ಇದೇ ಮೊದಲ ಬಾರಿ ವಿಮಾನ ಹತ್ತಿದ್ದಾರೆ. ವಿಮಾನದಲ್ಲಿ ಕುಳಿತುಕೊಳ್ಳೋದು, ಅಲ್ಲಿ ತಮಾಷೆ ಮಾತನಾಡೋದನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.
ಗಂಗವ್ವರ ಈ ವಿಡಿಯೋ ಕ್ಲಿಪ್ ಅನ್ನು 6 ಮಿಲಿಯನ್ ಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ತೆಲುಗಿನಲ್ಲಿ ಫಸ್ಟ್ ಫ್ಲೈಟ್ ಮತ್ತು ಫಸ್ಟ್ ಟೈಮ್‌ಫ್ಲೈಟ್ ಅನುಭವದ ಹ್ಯಾಶ್‌ಟ್ಯಾಗ್‌ಗಳೊಂದಿಗೆ ವಿಮಾನ ಹತ್ತಿದ ಮಹಿಳೆ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಗಂಗವ್ವರ ಈ ವಿಡಿಯೋಕ್ಕೆ ಸಾಕಷ್ಟು ಲೈಕ್ಸ್ ಹಾಗೂ ಕಮೆಂಟ್ ಸಿಕ್ಕಿದೆ.
ಸಂಜೀವ್ ಕಪೂರ್‌ಗೆ ಕೆಟ್ಟ ಆಹಾರ ನೀಡಿ ಇಕ್ಕಟ್ಟಿಗೆ ಸಿಲುಕಿದ ಏರ್ ಇಂಡಿಯಾ
ಯಶಸ್ಸನ್ನು ಯಾವುದೇ ವಯಸ್ಸಿನಲ್ಲಾದ್ರೂ ಸಾಧಿಸಬಹುದು. ಇದಕ್ಕೆ ಮನಸ್ಸು ಹಾಗೂ ಪರಿಶ್ರಮ ಮುಖ್ಯ ಎಂಬದನ್ನು ಗಂಗವ್ವ ನೋಡಿ ಹೇಳ್ಬಹುದು. ಗಂಗವ್ವ ವಿಡಿಯೋಕ್ಕೆ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬರು ಗ್ರೇಟ್ ವರ್ಕ್ ಎಂದು ಬರೆದ್ರೆ ಮತ್ತೊಬ್ಬರು, ನಾನು ನನ್ನ ತಾಯಿಯನ್ನು ಫ್ಲೈಟ್ ನಲ್ಲಿ ಕರೆದೊಯ್ಯಲು ಕಾಯ್ತಿದ್ದೇನೆ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, ಗಂಗವ್ವ ಸ್ಫೂರ್ತಿ ಎಂದು ಬರೆದಿದ್ದಾರೆ.