ಸಂಜೀವ್ ಕಪೂರ್‌ಗೆ ಕೆಟ್ಟ ಆಹಾರ ನೀಡಿ ಇಕ್ಕಟ್ಟಿಗೆ ಸಿಲುಕಿದ ಏರ್ ಇಂಡಿಯಾ
ವಿಮಾನ ಪ್ರಯಾಣದ ವೇಳೆ ನಾವು ಆಹಾರ ಸೇವನೆ ಮಾಡ್ತೇವೆ. ಕೆಲವೊಮ್ಮೆ ಆಹಾರ ಬಾಯಿಗೆ ಇಡೋಕೆ ಸಾಧ್ಯವಾಗಲ್ಲ. ಕೆಲ ಆಹಾರದಲ್ಲಿ ಕಲ್ಲು, ಹುಳವಿದ್ರೆ ಮತ್ತೆ ಕೆಲ ಆಹಾರದ ರುಚಿ ಕೆಟ್ಟದಾಗಿರುತ್ತದೆ. ಈಗ ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಗೆ ಇದರ ಅನುಭವವಾಗಿದೆ.
ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಯಾರಿಗೆ ತಿಳಿದಿಲ್ಲ ಹೇಳಿ. ಅವರ ರೆಸಿಪಿಯನ್ನು ಜನರು ಫಾಲೋ ಮಾಡ್ತಾರೆ. ಬಾಯಿ ಚಪ್ಪರಿಸುವಂತಹ ಅಡುಗೆ ಮಾಡೋದ್ರಲ್ಲಿ ಸಂಜೀವ್ ಕಪೂರ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಈಗ ಸಂಜೀವ್ ಕಪೂರ್ ಮಾಡಿರುವ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಂಜೀವ್ ಕಪೂರ್ ಯಾವುದೋ ಅಡುಗೆ ತಯಾರಿಸಿ ಅದನ್ನು ಟ್ವೀಟ್ ನಲ್ಲಿ ಹಂಚಿಕೊಂಡಿಲ್ಲ. ಬದಲಾಗಿ ಏರ್ ಇಂಡಿಯಾ ವಿಮಾನದಲ್ಲಿ ನೀಡಿದ ಆಹಾರವನ್ನು ಕಠುವಾಗಿ ಟೀಕಿಸಿದ್ದಾರೆ. ಅಷ್ಟಕ್ಕೂ ಏರ್ ಇಂಡಿಯಾ ವಿಮಾನದಲ್ಲಿ ಸಂಜೀವ್ ಕಪೂರ್ ಗೆ ಆದ ಕೆಟ್ಟ ಅನುಭವವೇನು ಎಂಬುದನ್ನು ನಾವಿಂದು ಹೇಳ್ತೇವೆ.
ಸಂಜೀವ್ ಕಪೂರ್ (Sanjeev Kapoor) ಮಾಡಿದ ಆರೋಪ ಏನು? : ಏರ್ ಇಂಡಿಯಾವನ್ನು ಎಚ್ಚರಗೊಳಿಸಿ. ನಾಗ್ಪುರ (Nagpur) -ಮುಂಬೈ 0740 ವಿಮಾನ. ಕಲ್ಲಂಗಡಿ, ಸೌತೆಕಾಯಿ, ಟೊಮೇಟೊ ಮತ್ತು ತಣ್ಣಗಾದ ಚಿಕನ್ ಟಿಕ್ಕಾ. ಮೇಯೊ ಜೊತೆ ಎಲೆಕೋಸಿನ ಸಣ್ಣ ತುಂಡುಗಳನ್ನು ತುಂಬಿದ ಸ್ಯಾಂಡ್ವಿಚ್ (Sandwich). ಸ್ಪಂಜಿನ ಬಣ್ಣದ ಸ್ವೀಟ್ ಕ್ರೀಮ್ ಮತ್ತು ಹಳದಿ ಗೇಜ್ ಶುಗರ್ ಸಿರಪ್ ಎಂದು ಟ್ವಿಟರ್‌ನಲ್ಲಿ ಸಂಜೀವ್ ಕಪೂರ್ ಟ್ವೀಟ್ ಮಾಡಿದ್ದಾರೆ. ಇದಲ್ಲದೆ ಸಂಜೀವ್ ಕಪೂರ್ ಇನ್ನೊಂದು ಟ್ವೀಟ್ ಮಾಡಿದ್ದಾರೆ. ಅದ್ರಲ್ಲಿ ಭಾರತೀಯರು ನಿಜವಾಗಿಯೂ ಬೆಳಗಿನ ಉಪಾಹಾರಕ್ಕಾಗಿ ಇದನ್ನು ತಿನ್ನಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಏರ್ ಇಂಡಿಯಾ ಸರ್ವ್ ಮಾಡಿದ ಆಹಾರದ ಫೋಟೋವನ್ನು ಸಂಜೀವ್ ಕಪೂರ್ ಹಂಚಿಕೊಂಡಿದ್ದಾರೆ.
2 ಲವಂಗ ಬಾಯಲ್ಲಿಟ್ಟು ರಸ ಹೀರಿದ್ರೆ ಸ್ಮೋಕಿಂಗ್, ಡ್ರಿಂಕಿಂಗ್ ಚಟನೂ ಆಗಬಹುದು ದೂರ!
ಹಿಂದೆಯೂ ನಡೆದಿತ್ತು ಇಂಥ ಘಟನೆ :
ವಿಮಾನದ ಆಹಾರದಲ್ಲಿ ಹುಳು : ಏರ್ ಇಂಡಿಯಾದ ಬಿಸಿನೆಸ್ ಕ್ಲಾಸ್‌ನ ಪ್ರಯಾಣಿಕರೊಬ್ಬರು ತಮ್ಮ ಆಹಾರದಲ್ಲಿ ಹುಳು ಕಂಡುಬಂದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮುಂಬೈನಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಅವರು ಆಹಾರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಪ್ರಯಾಣಿಕ ಮಹಾವೀರ್ ಜೈನ್, ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ. ನನ್ನ ವಿಮಾನ ಎಐ671 – ಮುಂಬೈನಿಂದ ಚೆನ್ನೈಗೆ ಸೀಟ್ ನಂಬರ್ 2ಸಿ’ ಎಂಬ ಶೀರ್ಷಿಕೆ ಅಡಿ ವಿಡಿಯೋ ಟ್ವೀಟ್ ಮಾಡಿದ್ದಾರೆ.
ಏರ್ ಇಂಡಿಯಾ ಪ್ರತಿಕ್ರಿಯೆ : ವಿಡಿಯೋಗೆ ಏರ್ ಇಂಡಿಯಾ ಪ್ರತಿಕ್ರಿಯೆ ನೀಡಿದೆ. ಪ್ರೀತಿಯ ಶ್ರೀ ಜೈನ್, ನಿಮ್ಮ ಕೆಟ್ಟ ಅನುಭವಕ್ಕೆ ನಾವು ವಿಷಾಧ ವ್ಯಕ್ತಪಡಿಸುತ್ತೇವೆ. ಇದು ಕೇಳಲು ಹಿತವಾಗಿಲ್ಲ. ಆದ್ರೆ ನಾವು ಪ್ರತಿ ಹಂತದಲ್ಲೂ ಕಂಪನಿ ನೈರ್ಮಲ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ ಎಂದು ಟ್ವೀಟ್ ಮಾಡಿದೆ. ಆದಾಗ್ಯೂ ನಿಮ್ಮ ಪ್ರಯಾಣದ ದಿನಾಂಕ, ವಿಮಾನದ ವಿವರ ಹಾಗೂ ಸೀಟ್ ನಂಬರನ್ನು ನಮಗೆ ನೀಡಿದ್ರೆ ನಾವು ಈ ಬಗ್ಗೆ ಸೂಕ್ತ ತನಿಖೆ ಮಾಡಿ ಅದ್ರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಏರ್ ಇಂಡಿಯಾ ಹೇಳಿದೆ.
ಕಳೆದ ತಿಂಗಳು ನಡೆದಿತ್ತು ಇಂಥಹದ್ದೇ ಘಟನೆ : ಪ್ರತಿ ವರ್ಷವೂ ಏರ್ ಇಂಡಿಯಾ ಆಹಾರದ ಬಗ್ಗೆ ಒಂದಲ್ಲ ಒಂದು ಸುದ್ದಿ ಬರ್ತಿರುತ್ತದೆ. ಕಳೆದ ತಿಂಗಳು, ಏರ್ ಇಂಡಿಯಾ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಸರ್ವ್ ಮಾಡಿದ ಆಹಾರದಲ್ಲಿ ಕಲ್ಲು ಕಂಡುಬಂದಿದೆ ಎಂದು ಹೇಳಿದ್ದರು. ಟ್ವಿಟರ್‌ನಲ್ಲಿ ಕಲ್ಲಿನ ಚಿತ್ರಗಳನ್ನು ಹಂಚಿಕೊಂಡ ಪ್ರಯಾಣಿಕರು, ವಿಮಾನಯಾನ ಸಂಸ್ಥೆಯ ಇಂತಹ ನಿರ್ಲಕ್ಷ್ಯ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದರು.
Healthy Food : ರುಚಿ ರುಚಿಯಾದ ಛೋಲೆ ಭಟೂರೆ ಇತಿಹಾಸ ಇಲ್ಲಿದೆ
ಮಿಮಿ ಚಕ್ರವರ್ತಿ ಆಹಾರದಲ್ಲಿ ಕೂದಲು : ಕಳೆದ ವಾರ, ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ವಿಮಾನ ಪ್ರಯಾಣದ ವೇಳೆ ತಮ್ಮ ಆಹಾರದಲ್ಲಿ ಕೂದಲು ಕಂಡು ಬಂದಿದೆ ಎಂದು ಹೇಳಿದ್ದರು. ಸಾಮಾಜಿಕ ಜಾಲತಾಣದ ಮೂಲಕ ದೂರಿದ್ದರು. ತನ್ನ ಎಮಿರೇಟ್ಸ್ ವಿಮಾನದಲ್ಲಿ ಸರ್ವ್ ಮಾಡಿದ ಆಹಾರದಲ್ಲಿ ಕೂದಲು ಕಂಡುಬಂದಿದೆ ಎಂದು ನಟಿ ಮತ್ತು ರಾಜಕಾರಣಿ ಮಿಮಿ ಹೇಳಿದ್ದರು. ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.