Shocking News of Pregnancy: ಬದಲಾದ ಭಾರತದಲ್ಲಿ 15ರ ಹರೆಯದಲ್ಲೇ ಹೆಚ್ಚಾಗ್ತಿದೆ ಗರ್ಭಧಾರಣೆ!

ಭಾರತ ಬದಲಾವಣೆಯ ಗೊಂದಲದಲ್ಲಿದೆ. ಅರ್ಥ ಆಗ್ಲಿಲ್ಲ ಅಲ್ವಾ? ಭಾರತದಲ್ಲಿ ಕೆಲವರು ಹಳೆ ಪದ್ಧತಿ,ಸಂಪ್ರದಾಯಗಳನ್ನು ಬಿಟ್ಟಿಲ್ಲ. ಯುವಕರು ವಿದೇಶಿ ಸಂಪ್ರದಾಯಕ್ಕೆ ಮನಸೋಲುತ್ತಿದ್ದಾರೆ. ಈ ಎರಡು ಮಿಕ್ಸ್ ಆಗಿ,ಕಲಸುಮೇಲೋಗರವಾಗಿದೆ. ಇದು ಹುಡುಗಿಯರ ಬಾಳಿನಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ. ಯಸ್. ಭಾರತದಲ್ಲಿ ಹದಿಹರೆಯದ ಗರ್ಭಧಾರಣೆ ಹೆಚ್ಚಾಗ್ತಿದೆ. ವರದಿಯೊಂದರ ವಿವರ ಆಘಾತಕ್ಕೆ ಕಾರಣವಾಗಿದೆ.
  
 

Teenagers pregnancy rate increased in India that should be controlled

ಭಾರತದಲ್ಲಿ ಬಾಲ್ಯ ವಿವಾಹ ಪದ್ಧತಿ ನಿರ್ಮೂಲನೆಗೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದರೂ ರಾಷ್ಟ್ರ ರಾಜಧಾನಿ ಸೇರಿದಂತೆ ಭಾರತದ ಸಾಕಷ್ಟು ಹಳ್ಳಿಗಳಲ್ಲಿ ಇನ್ನೂ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿದೆ. ಇದರ ಜೊತೆಯಲ್ಲಿ ಅತ್ಯಾಚಾರ ಪ್ರಕರಣವೂ ಭಾರತದಲ್ಲಿ ಕಡಿಮೆಯೇನಿಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧ ಮಹಿಳೆಯರೂ ಈ ಕ್ರೌರ್ಯಕ್ಕೆ ಬಲಿಯಾಗ್ತಿರುವುದು ನೋವಿನ ಸಂಗತಿ. ಈ ಎರಡರ ಮಧ್ಯೆ ಭಾರತದಲ್ಲಿ ಆಗಿರುವ ಇನ್ನೊಂದು ಸಮಸ್ಯೆ ಹದಿಹರೆಯದ ಸಂಬಂಧ. ಅರೆ-ಬರೆ ತಿಳಿಯುವ ಹುಡುಗಿಯರು,ಹೈಸ್ಕೂಲ್ ಮೆಟ್ಟಿಲು ಏರುತ್ತಿದ್ದಂತೆ ಪ್ರೀತಿ-ಪ್ರೇಮದ ಗುಂಗಿನಲ್ಲಿ ತೇಲಲು ಶುರು ಮಾಡಿದ್ದಾರೆ. ಪ್ರೀತಿ ರೂಮಿನವರೆಗೆ ಬರುವ ಕಾರಣ,ಸಂಬಂಧದ ವೇಳೆ ಸುರಕ್ಷಿತ ಕ್ರಮಕೈಗೊಳ್ಳದ ಕಾರಣ,ಹದಿಹರೆಯದಲ್ಲಿ ಮಕ್ಕಳಿಗೆ ತಾಯಿಯಾಗ್ತಿದ್ದಾರೆ. ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಹದಿಹರೆಯದ ಗರ್ಭಧಾರಣೆ ಬಗ್ಗೆ ಆಘಾತಕಾರಿ ವರದಿ ನೀಡಿದೆ.

ಅತ್ಯಾಚಾರ(Rape), ಬಾಲ್ಯ ವಿವಾಹ (Child marriage) ಮತ್ತು ಅವೈಜ್ಞಾನಿಕ ಶಾರೀರಿಕ ಸಂಬಂಧ (Relationship) ಗಳಿಂದಾಗಿ, ದೇಶದಲ್ಲಿ ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಅಚ್ಚರಿಯೆಂದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂತಹ ಅತಿ ಹೆಚ್ಚು ಪ್ರಕರಣ ವರದಿಯಾಗಿದೆ. ಸಮೀಕ್ಷೆಯ ಪ್ರಕಾರ, ಕಳೆದ ವರ್ಷ ದೆಹಲಿಯಲ್ಲಿ ಶೇಕಡಾ 1.2 ರಷ್ಟು ಹದಿಹರೆಯದ ಗರ್ಭಧಾರಣೆಯ ಪ್ರಕರಣಗಳು ವರದಿಯಾಗಿದ್ದು, ಅದು ಶೇಕಡಾ 3.3ರಷ್ಟು ಏರಿದೆ.

ಹದಿಹರೆಯದವರ ಗರ್ಭಧಾರಣೆ ಎಂದರೇನು? : ಹದಿಹರೆಯದ ಗರ್ಭಧಾರಣೆ ಅಂದರೆ 15 ಮತ್ತು 19 ವರ್ಷಗಳ ನಡುವೆ ಸಂಭವಿಸುವ ಗರ್ಭಧಾರಣೆಯನ್ನು ಹದಿಹರೆಯದವರ ಗರ್ಭಧಾರಣೆ ಎಂದು ಕರೆಯಲಾಗುತ್ತದೆ. 2021-21ರ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಇದಕ್ಕೆ ಕಾರಣವನ್ನೂ ಹೇಳಿದೆ. ಲೈಂಗಿಕ ಕಿರುಕುಳ ಅಂದರೆ ಅತ್ಯಾಚಾರ, ಬಾಲ್ಯ ವಿವಾಹ ಮತ್ತು ಹದಿಹರೆಯದಲ್ಲೇ ಸಂಬಂಧಗಳ ಸುಳಿಗೆ ಬೀಳುವುದು ಮುಖ್ಯ ಕಾರಣ.   
ಗ್ರಾಮದಲ್ಲಿ ಅತಿ ಹೆಚ್ಚು ಗರ್ಭಪಾತ ಪ್ರಕರಣಗಳು :  15 ರಿಂದ 19 ವರ್ಷದೊಳಗಿನ ಹುಡುಗಿಯರು ಗರ್ಭಧರಿಸುವ  ಪ್ರಕರಣ ಅಚ್ಚರಿ ಎಂಬಂತೆ ಗ್ರಾಮದಲ್ಲಿ ಅತಿ ಹೆಚ್ಚು ವರದಿಯಾಗಿದೆ. ಹದಿಹರೆಯದವರ ಗರ್ಭಧಾರಣೆಯ ಪ್ರಮಾಣವು ಹಳ್ಳಿಗಳಲ್ಲಿ ಶೇಕಡಾ  9.7 ರಷ್ಟಿದ್ದರೆ ನಗರಗಳಲ್ಲಿ ಶೇಕಡಾ 3.2 ರಷ್ಟಿದೆ.

ಗ್ರಾಮದ ಜನರಿಗೆ,ಹುಡುಗಿಯರ ಕುಟುಂಬಸ್ಥರಿಗೆ ವೈದ್ಯಕೀಯ ಸೌಲಭ್ಯದ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಇದೇ ಕಾರಣಕ್ಕೆ ಅವರು ಸಕಾಲಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹದಿಹರೆಯದ ಹುಡುಗಿಯರು ಗರ್ಭ ಧರಿಸುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಹಳ್ಳಿಗಳಲ್ಲಿ ಹೆಚ್ಚು ಗರ್ಭಧಾರಣೆಗೆ ಕಾರಣ,ಬಾಲ್ಯ ವಿವಾಹ. ಬದಲಾಗುತ್ತಿರುವ ಕಾಲದ ಮಧ್ಯೆಯೂ ಬಾಲ್ಯ ವಿವಾಹ ನಿಂತಿಲ್ಲ. 

ನಗರದಲ್ಲೇಕೆ ಕಡಿಮೆಯಿದೆ ಪ್ರಕರಣ ? : ನಗರಗಳಲ್ಲಿ ಬಾಲ್ಯವಿವಾಹವಿಲ್ಲ. ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ಬಳಕೆ  ಹದಿಹರೆಯದವರು ಸಂಬಂಧಗಳ ಬಗ್ಗೆ ಆಸಕ್ತಿ ವಹಿಸಲು ಕಾರಣವಾಗುತ್ತಿದೆ. ಮಾಡರ್ನ್ ಜಗತ್ತನ್ನು ಇಷ್ಟಪಡುತ್ತಿರುವ ಹುಡುಗಿಯರು, ಹದಿಹರೆಯದಲ್ಲಿಯೇ ಸಂಬಂಧ ಬೆಳೆಸಲು ಆಸಕ್ತಿ ತೋರಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿಯೂ ಗರ್ಭಧಾರಣೆ ಪ್ರಕರಣ ಹೆಚ್ಚಿದೆ. ಆದರೆ ಇಲ್ಲಿ ವೈದ್ಯಕೀಯ ಸೌಲಭ್ಯ ಸುಲಭವಾಗಿ ಲಭಿಸುತ್ತದೆ. ಹುಡುಗಿಯರು ಹಾಗೂ ಕುಟುಂಬಸ್ಥರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯಿದೆ. ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಸದ್ದಿಲ್ಲದೆ ನಡೆಯುತ್ತದೆ. ಗರ್ಭ ಧರಿಸಿದ 20 ವಾರಗಳಲ್ಲಿಯೇ ಗರ್ಭಪಾತ ಮಾಡಿಕೊಳ್ಳುವ ಕಾರಣ,ಹೆರಿಗೆ ಪ್ರಕರಣ ವರದಿಯಾಗುತ್ತಿಲ್ಲ.

ಹದಿಹರೆಯದಲ್ಲಿ ಗರ್ಭಧಾರಣೆ ಬಹಳ ಅಪಾಯಕಾರಿ. 15 ವರ್ಷದಲ್ಲಿ ಗರ್ಭ ಧರಿಸಿದರೆ ಹುಡುಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೆರಿಗೆ ಸಂದರ್ಭದಲ್ಲಿ ಸಾವು ಸಂಭವಿಸುವ ಸಾಧ್ಯತೆಯೂ ಇದೆ. ಹಾಗೆ ಕಡಿಮೆ ವಯಸ್ಸಿನಲ್ಲಿ ನಡೆಯುವ ಗರ್ಭಪಾತ ಮುಂದೆ ಸಂತಾನೋತ್ಪತ್ತಿ ಸಮಸ್ಯೆಗೆ ಕಾರಣವಾಗಲಿದೆ.

Latest Videos
Follow Us:
Download App:
  • android
  • ios