Asianet Suvarna News Asianet Suvarna News

Domestic violence:ರಾಜ್ಯದಲ್ಲಿ ಹೆಚ್ಚಿದ ಕೌಟುಂಬಿಕ ಹಿಂಸೆ... ಹೆಲ್ತ್‌ ಸರ್ವೇ ತಿಳಿಸಿದ ಭೀಕರ ಸತ್ಯ

ಶಿಕ್ಷಣ, ಸ್ವಯಂ ರಕ್ಷೆಯ ತರಬೇತಿ ಇವು ಯಾವುದು ಕೂಡ ಹೆಣ್ಣಿನ ರಕ್ಷಣೆ ಮಾಡುತ್ತಿಲ್ಲವೇ. ಮನೆಯ ಹೊರಗೂ ಮನೆಯೊಳಗೆ ನಾಲ್ಕುಗೋಡೆಗಳ ಮಧ್ಯೆಯೂ ಹೆಣ್ಣಿನ ಮೇಲೆ ನಡೆಯುವ ಹಿಂಸೆ ದೌರ್ಜನ್ಯಕ್ಕೆ ಕೊನೆಯೆಂಬುದೇ ಇಲ್ಲವೇ ಹೀಗೊಂದು ಪ್ರಶ್ನೆ ಕಾಡಲು ಕಾರಣವಾಗಿದ್ದು, ರಾಷ್ಟ್ರೀಯ ಆರೋಗ್ಯ ಸಮೀಕ್ಷೆಯ ವರದಿ.

Health survey reveals Domestic violence raised in Karnataka akb
Author
Bangalore, First Published Nov 28, 2021, 2:30 PM IST

ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಆರೋಗ್ಯ ಸಮೀಕ್ಷೆ5  ರಾಜ್ಯ(Karnataka)ದಲ್ಲಿ ಮದುವೆಯಾದ ಸ್ತ್ರೀಯರ ಮೇಲೆ ಕೌಟುಂಬಿಕ ದೌರ್ಜನ್ಯ(domestic violence) ಹಾಗೂ ಮದುವೆಯಾಗದ ತರುಣಿಯರ ಮೇಲೆ ಲೈಂಗಿಕ ಹಿಂಸಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ತಿಳಿಸಿದೆ.  ಕಳೆದ ಬಾರಿಯ ಸಮೀಕ್ಷೆಗೆ ಹೋಲಿಸಿದರೆ ಈ ಬಾರಿ ಕರ್ನಾಟಕದಲ್ಲಿ ಯುವತಿಯರ ಮೇಲೆ ದೌರ್ಜನ್ಯ ಹೆಚ್ಚಿದೆ. 18ರಿಂದ ಆರಂಭವಾಗಿ 49 ವರ್ಷದವರೆಗಿನ ವಿವಾಹವಾದ ಮಹಿಳೆಯರ ಮೇಲಿನ ದೌರ್ಜನ್ಯ 20.6 ಶೇಕಡಾದಿಂದ 44.4 ಶೇಕಡಾದಷ್ಟು ಹೆಚ್ಚಾಗಿದೆ.  ಹಾಗೆಯೇ 18ರ ಯುವ ತರುಣಿಯರಿಂದ ಹಿಡಿದು 29 ವರ್ಷದ ಯುವತಿಯರವರೆಗೆ ಲೈಂಗಿಕ ದೌರ್ಜನ್ಯ(sexual violence)ಕ್ಕೆ ಒಳಗಾದವರ ಪ್ರಮಾಣ ಶೇ.10.3ರಿಂದ 11ಶೇಕಡಾಕ್ಕೆ ಏರಿಕೆಯಾಗಿದೆ.

ಬಡಿಯುವುದು, ಒದೆಯುವುದು, ಕೂದಲು ಎಳೆಯುವುದು, ಎಳೆದಾಡುವುದು, ಕೈ ಕಾಲುಗಳನ್ನು ತಿರುಗಿಸುವುದು, ದೂಡಿ ಹಾಕುವುದು, ಹಿಡಿದು ಅಲುಗಾಡಿಸುವುದು, ಮೇಲೆ ಏನನ್ನಾದರೂ ಎಸೆಯುವುದು, ಮುಷ್ಠಿ ಮಾಡಿ ಗುದ್ದುವುದು, ಉಸಿರುಗಟ್ಟಿಸುವುದು, ಅಥವಾ ಸುಟ್ಟು ಇಡುವುದು ಇತ್ಯಾದಿ ವಿವಿಧ ರೀತಿಗಳಲ್ಲಿ ರಾಜ್ಯದಲ್ಲಿ ಮಹಿಳೆಯರು ಕೌಟುಂಬಿಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ.  ಗಂಡನಿಂದ ಹಿಂಸೆ ಅನುಭವಿಸುವ ಈ ಸ್ಥಿತಿ ನಗರ ಪ್ರದೇಶ(urban areas)ಗಳಿಗಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು,  ನಗರದಲ್ಲಿ ಇದರ ಪ್ರಮಾಣ ಶೇ.48ರಷ್ಟಿದ್ದರೆ,  ಗ್ರಾಮೀಣ ಭಾಗದಲ್ಲಿ ಶೇ.49ರಷ್ಟಿದೆ. 

Poonam Pandey in Controversy; ಪತಿಯಿಂದ ಹಲ್ಲೆ ಆಸ್ಪತ್ರೆ ಸೇರಿದ್ದ ನಟಿ!

18ರಿಂದ49 ಪ್ರಾಯದ ವಿವಾಹಿತ ಮಹಿಳೆಯರಲ್ಲಿ ಶೇ.8ರಷ್ಟು ಮಹಿಳೆಯರು ತಮಗೆ  ಇಷ್ಟವಿಲ್ಲದಿದ್ದರು ಲೈಂಗಿಕ ಕ್ರಿಯೆ ನಡೆಸಲು ಅವರ ಗಂಡಂದಿರು ದೈಹಿಕವಾಗಿ ಬಲವಂತಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.  ಹಾಗೆಯೇ ಶೇ.6ರಷ್ಟು ಮಹಿಳೆಯರು ತಮಗೆ ಇಷ್ಟವಿಲ್ಲದಂತಹ ತಾವು ಬಯಸದಂತಹ ಲೈಂಗಿಕ ಕ್ರಿಯೆಯನ್ನು ನಡೆಸಲು ಬಲವಂತಪಡಿಸಲಾಗಿದೆ ಎಂದು ಸಮೀಕ್ಷೆ ವೇಳೆ ತಿಳಿಸಿದ್ದಾರೆ.  ಕೋವಿಡ್‌ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಕೆಲ ಪುರುಷರು ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುವಂತಾಗಿತ್ತು. ಹೀಗಾಗಿ ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಈ ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿದ್ದು ತಿಳಿದು ಬಂದಿದೆ ಎಂದು ಎನ್‌ಇಒ ವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಮತಾ ಯಜಮಾನ್‌( Mamatha Yajaman) ತಿಳಿಸಿದ್ದಾರೆ. 

ಇನ್ನು ಹಲವು ಸಂದರ್ಭಗಳಲ್ಲಿ ಅಂದರೆ ಮದ್ಯಪಾನ ಮಾಡಿದ್ದಂತಹ ಸಂದರ್ಭದಲ್ಲಿ ದೌರ್ಜನ್ಯ ನಡೆಸುವುದು ಕೆಲವು ಗಂಡಸರಿಗೆ ಹವ್ಯಾಸದಂತೆ ಮಾರ್ಪಟ್ಟಿದೆ. ಇಡೀ ವ್ಯವಸ್ಥೆಯೇ ಪಿತೃ ಪ್ರಧಾನವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸಂದರ್ಭದಲ್ಲಿ ಪೊಲೀಸರು ಕೂಡ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಸಹಾಯ ಮಾಡಲು ಅಸಹಾಯಕರಾಗಿದ್ದಾರೆ. ದೌರ್ಜನ್ಯಕ್ಕೊಳಗಾದ ಮಹಿಳೆ ದೂರು ನೀಡಿದರು ಸಹ ನ್ಯಾಯ ಸಿಗದಂತಹ ಪರಿಸ್ಥಿತಿ ಇದೆ ಎಂದು ಮಮತಾ ಹೇಳಿದರು. 

ಶೇ.82ರಷ್ಟು ಪುರುಷರು ಹೇಳುವುದು ಹೆಂಡತಿಗೆ ಹೊಡೆಯುವುದು ಸಮರ್ಥನೀಯ: ವರದಿ: 

18 ರಿಂದ 49 ಪ್ರಾಯದ ಮಹಿಳೆಯರಲ್ಲಿ ಶೇ. 6 ಷ್ಟು ಮಹಿಳೆಯರು ತಾವು ಗರ್ಭಿಣಿಯರಾಗಿದ್ದಂತಹ ಸಂದರ್ಭದಲ್ಲಿಯೂ ದೈಹಿಕ ಹಿಂಸಾಚಾರವನ್ನು ಅನುಭವಿಸಿದ್ದಾರೆ. ಮುರಿದ ಮೂಳೆಗಳು, ಮುರಿದ ಹಲ್ಲುಗಳು, ಆಳವಾದ ಗಾಯಗಳು, ಕಣ್ಣಿನ ಗಾಯಗಳು, ಕೀಲು ಕಳಚಿರುವುದು, ಸಣ್ಣ ಹಾಗೂ ದೊಡ್ಡದಾದ ಸುಟ್ಟ ಗಾಯಗಳು ಇವು ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ಅನುಭವಿಸಿದ ಬಹುತೇಕ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗಾಯಗಳಾಗಿವೆ. 

Stop Violence against Women: ಹೆಣ್ಣಿಗೆ ದೌರ್ಜನ್ಯರಹಿತ ಭವಿಷ್ಯದ ಅಗತ್ಯವೇನಿದೆ?

ಮಹಿಳೆಯರು ಗಂಡನ ತಂದೆ ತಾಯಿಗೆ ಗೌರವ ನೀಡದಿದ್ದಾಗ, ನಂಬಿಕೆಗೆ ಅನರ್ಹವಾಗಿದ್ದಾಗ, ಮಕ್ಕಳು ಮನೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದಾಗ ಆಕೆಯನ್ನು ಹೊಡೆಯುವುದು ತಪ್ಪಲ್ಲ ಎಂಬುದು  ಶೇ.82ರಷ್ಟು ಪುರುಷರು ನೀಡುವ ಸಮರ್ಥನೆಯಾಗಿದೆ ಎಂದು ವರದಿ ತಿಳಿಸಿದೆ. ಒಟ್ಟಿನಲ್ಲಿ ಕಾಲ ಬದಲಾಗಿದೆ ಎಂದು ನಾವು ಹೇಳುತ್ತಿದ್ದೇವೆ ಹೊರತು ಯಾವುದೇ ಬದಲಾವಣೆಯಾಗಿಲ್ಲ.  ಉತ್ತಮ ಶಿಕ್ಷಿತ ವರ್ಗ ಹೆಚ್ಚಾಗಿರುವ ಇಂದಿನ ಕಾಲದಲ್ಲೂ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆಯಾಗುವ ಬದಲು ಹೆಚ್ಚುತ್ತಲೆ ಹೋಗುತ್ತಿರುವುದು ವಿಪರ್ಯಾಸ. ಮಹಿಳೆ ಮೇಲಿನ ದೌರ್ಜನ್ಯ(Violence) ಈ ಮಟ್ಟದಲ್ಲಿದ್ದಾಗಲೂ ಅದನ್ನು ತಡೆಯಲು, ಆ ಬಗ್ಗೆ ಜಾಗೃತಿ(awareness) ಮೂಡಿಸಲು ಮುಂದಾಗದಿದ್ದರೆ ಭವಿಷ್ಯದ ದಿನಗಳು ಇನ್ನೂ ಕೆಟ್ಟದಾಗಲಿವೆ.

Follow Us:
Download App:
  • android
  • ios