Asianet Suvarna News Asianet Suvarna News

Sexual Assault: ಅಪ್ರಾಪ್ತ ಮಗಳ ರೇಪ್, ಪ್ರೇಮಿಗೆ ಸಹಾಯ ಮಾಡಿದ ಅಮ್ಮ, ತಪ್ಪು ಮುಚ್ಚಿಡಲು ಮದುವೆಯಾಟ!

* ಲೈಂಗಿಕ ದೌರ್ಜನ್ಯದ ಶಾಕಿಂಗ್ ಪ್ರಕರಣ ಬಯಲು

* ಅಪ್ರಾಪ್ತ ಮಗಳ ರೇಪ್ ಮಾಡಲು ಪ್ರೇಮಿಗೆ ಸಹಾಯ ಮಾಡಿದ ಅಮ್ಮ

* ತಪ್ಪು ಮುಚ್ಚಿಡಲು ಮದುವೆಯಾಟ

Maharashtra shocker Woman helps lover rape her 17 year old daughter tries to marry her off to keep crime under wraps pod
Author
Bangalore, First Published Nov 27, 2021, 6:54 PM IST
  • Facebook
  • Twitter
  • Whatsapp

ಔರಂಗಾಬಾದ್(ನ.27): ಲೈಂಗಿಕ ದೌರ್ಜನ್ಯದ (Sexual Assault) ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ (Maharashtra’s Aurangabad) 40 ವರ್ಷದ ಮಹಿಳೆಯೊಬ್ಬರು ತನ್ನ 17 ವರ್ಷದ ಮಗಳ ಮೇಲೆ ಅತ್ಯಾಚಾರ (Rape) ಮಾಡಲು 52 ವರ್ಷದ ತನ್ನ ಪ್ರೇಮಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಪ್ರಾಪ್ತ (Minor) ಬಾಲಕಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.

ಕೆಲ ಸಮಯದ ಹಿಂದೆ, ಅವರ ತಾಯಿ ಮತ್ತು ತಂದೆ ತಮ್ಮ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಹೀಗಿರುವಾ ಸಂತ್ರಸ್ತೆ ಹಾಗೂ ಆಕೆಯ ಸಹೋದರ ತಾಯಿ ಜೊತೆಗೆ ಉಳಿದುಕೊಂಡಿದ್ದಾರೆ, ಈ ನಡುವೆ ತಾಯಿಗೆ ವ್ಯಕ್ತಿಯೊಬ್ಬನ ಪರಿಚಯವಾಗಿದ್ದು, ಆತನೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆ. ಇದೇ ವ್ಯಕ್ತಿ ತನ್ನನ್ನು ಅತ್ಯಾಚಾರಗೈದಿರುವುದಾಗಿ ಬಾಲಕಿ ಆರೋಪಿಸಿದ್ದಾಳೆ. ಆಗಸ್ಟ್ 2020 ರಲ್ಲಿ, ಆ ವ್ಯಕ್ತಿ ತನ್ನ ತಾಯಿಯೊಂದಿಗೆ ಮಾತನಾಡಲು ಅವರ ಮನೆಗೆ ಭೇಟಿ ನೀಡಿದ್ದ. ಅದೇ ದಿನ, ಆಕೆಯ ಸಹೋದರನನ್ನು ಅವರ ತಾಯಿ ಸಂಬಂಧಿಕರ ಮನೆಗೆ ಕಳುಹಿಸಿದ್ದರೆಂದು ಬಾಲಕಿ ಘಟನೆ ವಿವರಿಸಿದ್ದಾಳೆ.

ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯ ಪ್ರಕಾರ, ಆರೋಪಿ ಬಾಲಕಿ ಮೇಲೆ ಆಗಲೇ ಕೆಟ್ಟ ದೃಷ್ಟಿ ಹಾಯಿಸಿದ್ದ, ಇದನ್ನು ಸಂತ್ರಸ್ತೆ ನೇರವಾಗಿ ವಿರೋಧಿಸಿದ್ದಳು. ಆದರೆ ಈ ನಡುವೆ ಆಕೆಯ ತಾಯಿಯೇ ಈ ಬೇಡಿಕೆಗಳನ್ನು ಪೂರೈಸುವಂತೆ ಮಗಳನ್ನು ಒತ್ತಾಯಿಸಿರುವುದು ಆಘಾತಕಾರಿ ವಿಚಾರ. ಇದಾದ ಬಳಿಕ ಆ ವ್ಯಕ್ತಿ ಅಪ್ರಾಪ್ತ ಬಾಲಕಿ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.  ಇದಲ್ಲದೆ, ಅಪರಾಧದ ಬಗ್ಗೆ ಯಾರಿಗೂ ತಿಳಿಸದಂತೆ ಬೆದರಿಕೆಯನ್ನೂ ಹಾಕಿದ್ದಾನೆ.

ಬಾಲಕಿ ಓಡಿಹೋಗಲು ಯತ್ನಿಸಿದ್ದಾಳೆ. ಆದರೆ, ಆಕೆಗೆ ಎಲ್ಲೂ ಆಶ್ರಯ ಸಿಗಲಿಲ್ಲ. ಹಿಉಂತಿರುಗಿ ಬಂದ ಮಗಳು ಎಲ್ಲಿ ಬಾಯ್ಬಿಡುತ್ತಾಳೋ ಎಂದು ಭಾವಿಸಿದ ತಾಯಿ ತನ್ನ ಅಪರಾಧ ಮುಚ್ಚಿಡಲು ಮಗಳಿಗೆ ಯುವಕನೊಬ್ಬನ ಜೊತೆ ಮದುವೆ (Wedding) ಮಾಡಿಸಲು ಮುಂದಾಗಿದ್ದಾಳೆ. ಹೀಗಿರುವಾಗ ಸಂತ್ರಸ್ತ ಬಾಲಕಿ ಮಕ್ಕಳ ಸಹಾಯವಾಣಿಗೆ (Helpline) ಕರೆ ಮಾಡಿ ರಕ್ಷಣೆ ನಿಡುವಂತೆ ಕೋರಿದ್ದಾಳೆ.

ಅಪ್ರಾಪ್ತ ವಯಸ್ಕನ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಸಂಬಂಧಿತ ನಿಬಂಧನೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆಕೆಯ ತಾಯಿ ಮತ್ತು ಲೈಂಗಿಕ ದೌರ್ಜನ್ಯ (Sexual Assault) ನಡೆಸಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬುಧವಾರ ಇಬ್ಬರು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಮಂಗಳವಾರ ತಮಿಳುನಾಡಿನ ಕೊಯಮತ್ತೂರು (Tamil Nadu’s Coimbatore) ಜಿಲ್ಲೆಯಲ್ಲಿ 16 ವರ್ಷದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತನ್ನ ಸಂಬಂಧಿ ಎಂ ಸರವಣಕುಮಾರ್ ಎಂಬಾತ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ ನಂತರ ಹದಿಹರೆಯದ ಯುವತಿ ಈ ಹೆಜ್ಜೆ ಇಟ್ಟಿದ್ದಾಳೆ.

ಸರವಣಕುಮಾರ್ ಅವರು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಜನವರಿಯಲ್ಲಿ ಮೊದಲ ಬಾರಿಗೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಪದೇ ಪದೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿಗಳು ನೀಡಿದ ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆಯಿಂದ ಬಾಲಕಿ ಖಿನ್ನತೆಗೆ ಜಾರಿದಳು. ಮಂಗಳವಾರ ಶಾಲೆಗೆ ಹೋಗಿದ್ದ ಬಾಲಕಿ ವಿಶ್ರಾಂತಿ ಕೊಠಡಿಯೊಂದರಲ್ಲಿ ತನ್ನ ಎಡಗೈಯಲ್ಲಿ ರಕ್ತನಾಳವನ್ನು ಕತ್ತರಿಸಿಕೊಂಡಿದ್ದಾಳೆ. ಇತರ ಬಾಲಕಿಯರಿಂದ ಮಾಹಿತಿ ಪಡೆದ ಶಾಲೆಯ ಶಿಕ್ಷಕರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಪೊಲೀಸರು ಎಚ್ಚೆತ್ತು ಆರೋಪಿಯನ್ನು ಬಂಧಿಸಿದ್ದಾರೆ.

Follow Us:
Download App:
  • android
  • ios