ಟಿಕ್‌ಟಾಕ್‌ನಿಂದ ಫೇಮಸ್ ಆಗುತ್ತಿರುವವರ ಸಂಖ್ಯೆ ಇತ್ತೀಚಿಗೆ ಹೆಚ್ಚಾಗ್ತಿದೆ. ಸ್ಕೂಲ್, ಆಫೀಸ್‌, ರಸ್ತೆ, ಬಸ್, ಟ್ರೈನ್ ಹೀಗೆ ಎಲ್ಲೆಂದರಲ್ಲಿ ಜನರು ವೀಡಿಯೋ ಮಾಡುವುದನ್ನು ನೋಡಬಹುದು. ಹೀಗೆ ವಿದ್ಯಾರ್ಥಿಗಳೊಂದಿಗೆ ಅಶ್ಲೀಲ ಟಿಕ್‌ಟಾಕ್ ಡ್ಯಾನ್ಸ್ ವೀಡಿಯೊ ಮಾಡಿದ ಶಿಕ್ಷಕಿಯನ್ನು ಬ್ರೆಜಿಲ್‌ನಲ್ಲಿ ಅಮಾನತುಗೊಳಿಸಲಾಗಿದೆ.

ವಿದ್ಯಾರ್ಥಿಗಳೊಂದಿಗೆ ಅನುಚಿತ ರೀತಿಯಲ್ಲಿ ನೃತ್ಯ ಮಾಡಿ ಟಿಕ್‌ ಟಾಕ್‌ ಮಾಡಿದ್ದ ಇಂಗ್ಲೀಷ್‌ ಟೀಚರನ್ನು ಬ್ರೆಜಿಲ್‌ನ ಶಾಲೆಯಿಂದ ವಜಾ ಮಾಡಲಾಗಿದೆ. ನೋಡೋಕೆ ಹೀರೋಯಿನ್‌ ತರ ಇರುವ ಸಿಬೆಲ್ಲಿ ಫರೆರಾ ಟಿಕ್‌ ಟಾಕ್‌ನಲ್ಲಿ ಬರೋಬ್ಬರಿ 98 ಲಕ್ಷ ಫಾಲೋವ​ರ್ಸ್‌ ಹೊಂದಿದ್ದಾರೆ. ಈಕೆ ವಿದ್ಯಾರ್ಥಿಗಳ ಜತೆ ಟಿಕ್‌ ಟಾಕ್‌ ಮಾಡಿ ವಿಡೀಯೋಗಳನ್ನು ಅಪ್ಲೋಡ್‌ ಮಾಡುತ್ತಿದ್ದರು. ಟಿಕ್‌ ಟಾಕ್‌ ನನ್ನ ಆದಾಯದ ಮತ್ತೊಂದು ಮೂಲವಾಗಿದೆ ಅದರಲ್ಲೇನು ತಪ್ಪು ಎಂಬುದು ಇಂಗ್ಲೀಷ್‌ ಟೀಚರ್‌ ವಾದವಾಗಿದೆ.

Instagramನಲ್ಲಿ 1.2M ಅನುಯಾಯಿಗಳನ್ನು ಹೊಂದಿರುವ ಸಿಬೆಲ್ಲಾ ಆಗಾಗ ತನ್ನ ಸಾಮಾಜಿಕ ಮಾಧ್ಯಮ (Social media) ಖಾತೆಗಳಲ್ಲಿ ಮಾದಕ ಮತ್ತು ಹಾಟ್ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ತರಗತಿಯಲ್ಲಿ ವಿದ್ಯಾರ್ಥಿಗಳೊಂದಿಗೆ (Students) ಅಶ್ಲೀಲವಾಗಿ ನಡೆದುಕೊಂಡು ವಿಡಿಯೋ ಮಾಡಿದ್ದಕ್ಕಾಗಿ ಆಕೆಯ ವಿರುದ್ಧ ಕಠಿಣ ಕ್ರಮ (Action) ತೆಗೆದುಕೊಳ್ಳಲಾಗಿದೆ. ವರದಿಯೊಂದರ ಪ್ರಕಾರ, ತರಗತಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಿಬೆಲ್ಲಿ ತನ್ನ ವಿದ್ಯಾರ್ಥಿಗಳೊಂದಿಗೆ ತರಗತಿಯೊಳಗೆ ನೃತ್ಯ ಮತ್ತು ಟಿಕ್‌ಟಾಕ್ ವೀಡಿಯೊಗಳನ್ನು ಮಾಡಿದ್ದಾಗಿ ಹೇಳಿದ್ದಾರೆ. ಆದರೆ ನಂತರದ ದಿನಗಳಲ್ಲಿ, ಅವಳ ಇಂಗ್ಲಿಷ್ ತರಗತಿಯಲ್ಲಿ ನೃತ್ಯ ವೀಡಿಯೊಗಳನ್ನು ಮಾಡುವುದು ಸಾಮಾನ್ಯವಾಯಿತು ಎಂದು ತಿಳಿದುಬಂದಿದೆ.

ಮಗು ಅಳು ಕೇಳಿ ಕೆಂಡಾಮಂಡಲನಾದ ಪ್ರಯಾಣಿಕ ಹೀಗ್ ಮಾಡೋದಾ?

ಶಿಕ್ಷಕಿಯ ಉಡುಗೆ ಸರಿಯಿಲ್ಲವೆಂದು ಟೀಕಿಸಿದ ನೆಟ್ಟಿಗರು
ಮತ್ತೊಂದೆಡೆ, ತರಗತಿಯ ಒಳಗಿನ ವಿದ್ಯಾರ್ಥಿಗಳೊಂದಿಗೆ ಆಕೆಯ ವರ್ತನೆಗೆ ವಿರೋದ ವ್ಯಕ್ತಪಡಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತರಗತಿಗೆ ಆಕೆಯ ಉಡುಗೆ ಆಯ್ಕೆಯನ್ನು ಖಂಡಿಸಿದರು. ಪುರುಷ ವಿದ್ಯಾರ್ಥಿಗಳೊಂದಿಗೆ ಅಷ್ಟು ಸಲಿಗೆಯಿಂದ ಇರುವುದು ಸರಿಯಲ್ಲ ಎಂದು ಹೇಳಿದರು. ಆದರೆ ಇದು ಯಾವುದೂ ನನಗೆ ಕೆಟ್ಟದಾಗಿದೆ ಎಂದು ಅನಿಸುತ್ತಿಲ್ಲ. ಯಾಕೆಂದರೆ ನಾನು ಇದನ್ನು ಕೇವಲ ಹೆಚ್ಚುವರಿ ಆದಾಯದ ಮೂಲವೆಂದು ಪರಿಗಣಿಸಿದ್ದೇನೆ ಎಂದು ಸಿಬೆಲ್ಲಿ ಹೇಳಿದ್ದಾರೆ. 

ಘಟನೆಯ ಬಗ್ಗೆ ಮಾತನಾಡಿದ ಸಿಬೆಲ್ಲಿ, ವಯಸ್ಕ ಮಹಿಳೆಯಾಗಿ, ಹೆಚ್ಚುವರಿ ಆದಾಯದ ಅಗತ್ಯವಿತ್ತು, ನಾನು ಇತರ ರೀತಿಯ ಹಣಗಳಿಕೆಯನ್ನು ಹುಡುಕಿದೆ. ನಾನು ಟಿಕ್‌ ಟಾಕ್ ಮಾಡುವುದು ಉತ್ತಮವೆಂದು ಅಂದುಕೊಂಡೆ. ನಾನು ಈ ರೀತಿ ವೀಡಿಯೋ ಮಾಡುವುದು ನನ್ನ ತಾಯಿಗೆ ತಿಳಿದಿದೆ. ಅವರು ಅದನ್ನು ನೋಡಿ ಖುಷಿಪಡುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ಸಹ ತನ್ನ ದೇಹದಿಂದ ಮುಕ್ತವಾಗಿ ಮತ್ತು ಪೂರ್ಣತೆಯನ್ನು ಅನುಭವಿಸಬೇಕು ಎಂದು ಹೇಳಿದ್ದಾರೆ.. ವರದಿಗಳ ಪ್ರಕಾರ, ಸಿಬೆಲ್ಲಿ, ವೈರಲ್ ಸಂವೇದನೆಯು ಜೀವಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

Nepal Plane Crash ಸಾವಿಗೂ ಮುನ್ನ ಗಗನಸಖಿ ಮಾಡಿದ್ದ ಟಿಕ್‌ಟಾಕ್ ವಿಡಿಯೋ ವೈರಲ್!

ಸ್ನೇಹಿತರು ಚಾಲೆಂಜ್ ಮಾಡಿದ್ರು ಅಂತ ಬೇಕಾಬಿಟ್ಟಿ ನಿದ್ದೆ ಮಾತ್ರೆ ತಿಂದ ಬಾಲಕ ಸಾವು
ಟಿಕ್ ಟಾಕ್‌ ಸವಾಲು ಸ್ವೀಕರಿಸಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಅಮೆರಿಕದ ಓಹಿಯೋದಲ್ಲಿ ನಡೆದಿರುವುದು ವರದಿಯಾಗಿದೆ. ಸೋಷಿಯಲ್ ಮೀಡಿಯಾ ಬಂದ್ಮೇಲೆ ಎಲ್ಲವೂ ಬದಲಾಗಿದೆ. ಜನರು ತಮಗರಿವಿಲ್ಲದೆಯೇ ಹಲವು ಅಪಾಯಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ವೀಡಿಯೋ ವೈರಲ್ ಮಾಡುವುದು, ಟ್ರೆಂಡ್ ಮಾಡುವುದು, ಚಾಲೆಂಜ್ ಮಾಡುವುದು ಇಲ್ಲಿ ಸಾಮಾನ್ಯವಾಗಿದೆ. ಒಬ್ಬರು ಚಾಲೆಂಜ್‌ ಹಾಕಿದರೆ, ಇನ್ನೊಬ್ಬರು ಆ ಚಾಲೆಂಜ್‌ನ್ನು ಸ್ವೀಕರಿಸಿ ಗೆಲ್ಲಲು ಸೂಚಿಸಲಾಗುತ್ತದೆ. ಹಾಗೆಯೇ ಟಿಕ್‌ಟಾಕ್‌ನ ಸವಾಲ್ ಸ್ವೀಕರಿಸಲು ಹೋದ ಬಾಲಕ (Boy) ಮೃತಪಟ್ಟಿದ್ದಾನೆ. ಜಾಕೋಬ್ ಸ್ಟೀವನ್ಸ್ (13) ಎನ್ನುವ ಬಾಲಕ ಹೀಗೆ ಸವಾಲನ್ನು (Challenge) ಸ್ವೀಕರಿಸಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. 

View post on Instagram