Nepal Plane Crash ಸಾವಿಗೂ ಮುನ್ನ ಗಗನಸಖಿ ಮಾಡಿದ್ದ ಟಿಕ್‌ಟಾಕ್ ವಿಡಿಯೋ ವೈರಲ್!

ನೇಪಾಳ ವಿಮಾನ ದುರಂತಕ್ಕೆ ವಿಶ್ವವೇ ಮರುಗಿದೆ. ಅಪಘಾತದಲ್ಲಿ ಮಡಿದವರ 70 ಮೃತ ದೇಹಗಳನ್ನು ಹೊರಕ್ಕೆ ತೆಗಯಲಾಗಿದೆ. ಈಗಾಗಲೇ ವಿಮಾನದ ಅಂತಿಮ ಕ್ಷಣದ ಫೈಸ್‌ಬುಕ್ ಲೈವ್ ವಿಡಿಯೋ ಬೆಚ್ಚಿಬೀಳಿಸುವಂತಿದೆ. ಇದೀಗ ವಿಮಾನ ಟೇಕ್ ಆಫ್ ಮೊದಲು ಗಗನಸಖಿ ಮಾಡಿದ್ದ ವಿಡಿಯೋ ವೈರಲ್ ಆಗಿದೆ. 
 

Yeti Airlines Air Hostess Oshin Magar tiktok video before Nepal Plane Crash goes viral ckm

ಕಾಠ್ಮಂಡು(ಜ.17): ನೇಪಾಳ ವಿಮಾನ ಅಪಘಾತದ ದೃಶ್ಯಗಳು ಬೆಚ್ಚಿ ಬೀಳಿಸುವಂತಿದೆ. ಇದೀಗ ಅಫಘಾತಕ್ಕೀಡಾದ ನೇಪಾಳ ಯೇತಿ ಏರ್‌ಲೈನ್ಸ್ ವಿಮಾನ ಟೇಕ್ ಆಫ್‌ಗೂ ಮೊದಲು ಗಗನಸಖಿ ಮಾಡಿದ್ದ ಟಿಕ್‌ಟಾಕ್ ವಿಡಿಯೋ ವೈರಲ್ ಆಗಿದೆ. ಯೇತಿ ವಿಮಾನ ಟೇಕ್ ಆಫ್‌ಗೂ ಮೊದಲು ಗಗನಸಖಿ ವಿಮಾನದೊಳಗೆ ನಿಂತು ವಿಡಿಯೋ ಮಾಡಿದ್ದಾರೆ. ಪ್ರಯಾಣಿಕರು ಬರವು ಮುನ್ನ ಮಾಡಿದ ಈ ವಿಡಿಯೋದಲ್ಲಿ ವಿಮಾನದೊಳಗಿನ ಸಂಪೂರ್ಣ ದೃಶ್ಯವಿದೆ. ನಗುಮುಖದೊಂದಿಗೆ ಈ ವಿಡಿಯೋ ಮಾಡಿದ್ದಾರೆ. ಆದರೆ ಈ ವಿಡಿಯೋ ಮಾಡಿದ ಕೆಲ ಹೊತ್ತಿನ ಬಳಿಕ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಗಿದೆ. ಒಟ್ಟು 72 ಮಂದಿ ಇದ್ದ ಈ ವಿಮಾನದಲ್ಲಿನ 70 ಪ್ರಯಾಣಿಕರ ಮೃತದೇಹ ಹೊರಕ್ಕೆ ತೆಗೆಯಲಾಗಿದೆ. ಇನ್ನಿಬ್ಬರಿಗಾಗಿ ಶೋಧಕಾರ್ಯ ನಡೆಯುತ್ತಿದೆ. 

ಯೇತಿ ಏರ್‌ಲೈನ್ಸ್‌ನ ಗಗನಸಖಿ ಒಶಿನ್ ಮಗರ್ ಟಿಕ್‌ಟಾಕ್ ವಿಡಿಯೋ ಮಾಡಿದ್ದರು. ವಿಮಾನ ಟೇಕ್ ಆಫ್ ಆಗುವ ಮೊದಲೇ ಈ ವಿಡಿಯೋ ಮಾಡಿದ್ದರು. ನಗುಮುಖದಲ್ಲಿ ಸಂಪೂರ್ಣ ವಿಮಾನವನ್ನು ತೋರಿಸಿದ ಒಶಾನಿ ಮಗರ್ ಬಳಿಕ ತಮ್ಮ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಕೆಲ ಕ್ಷಣಗಳ ಬಳಿಕ 72 ಪ್ರಯಾಣಿಕರನ್ನು ಹೊತ್ತು ಯೇತಿ ಏರ್‌ಲೈನ್ಸ್ ಟೇಕಾಫ್ ಆಗಿದೆ. ಲ್ಯಾಂಡಿಂಗ್‌ಗೂ ಕೆಲವೇ ಕ್ಷಣಗಳಿಗೂ ಮುನ್ನ ವಿಮಾನ ಪತನಗೊಂಡಿದೆ. 

ನೇಪಾಳ ವಿಮಾನ ಅಪಘಾತದಲ್ಲೇ ಬಲಿಯಾದ ಪೈಲಟ್‌ ದಂಪತಿ..!

ಗಗನಸಖಿ ಒಶಿನ್ ಮಗರ್ ಮಾಡಿದ ಟಿಕ್‌ಟಾಕ್ ವಿಡಿಯೋ ವೈರಲ್ ಆಗಿದೆ. ಹಲವರು ಒಶಿನ್ ಮಗರ್ ಸೇರಿದಂತೆ ವಿಮಾನದಲ್ಲಿ ಮಡಿದವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನೇಪಾಳ ವಿಮಾನ ದುರಂತಕ್ಕೆ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಇದರ ಜೊತೆಗೆ ಈ ವಿಮಾನದಲ್ಲಿ ಪ್ರಯಾಣಿಸಿದವರು ಮಾಡಿದ ಕೊನ ಕ್ಷಣಗಳ ವಿಡಿಯೋಗಳು ಇದೀಗ ವೈರಲ್ ಆಗುತ್ತಿದೆ. ಭಾರತೀಯ ಪ್ರಯಾಣಿಕನ ಫೇಸ್‌ಬುಕ್ ಲೈವ್ ವಿಡಿಯೋ ಬೆಚ್ಚಿ ಬೀಳಿಸುವಂತಿದೆ.

 

 

ಭಾನುವಾರ ಬೆಳಗ್ಗೆ 10.33ಕ್ಕೆ ರಾಜಧಾನಿ ಕಾಠ್ಮಂಡುವಿನ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಮುಖ ಪ್ರವಾಸಿ ತಾಣವಾದ ಪೋಖರಾಗೆ ಹೊರಟಿತ್ತು. ಬೆಳಗ್ಗೆ 11 ಗಂಟೆಗೆ ವಿಮಾನ ಇನ್ನೇನು ವಿಮಾನದ ರನ್‌ವೇನತ್ತ ಇಳಿಯಲು ಸಜ್ಜಾಗುತ್ತಿದೆ ಎನ್ನುವ ಹಂತದಲ್ಲಿ, ಇದ್ದಕ್ಕಿದ್ದಂತೆ ವಿಚಿತ್ರ ರೀತಿಯಲ್ಲಿ ಮಗುಚಿಕೊಂಡು ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಸೇತಿ ನದಿಯ ಕಂದಕದಲ್ಲಿ ಪತನಗೊಂಡಿದೆ. ಲ್ಯಾಂಡಿಂಗ್‌ಗೆ ಕೇವಲ 10-20 ಸೆಕೆಂಡ್‌ ಇದ್ದಾಗ ಘಟನೆ ಸಂಭವಿಸಿತ್ತು.

ನೇಪಾಳ ವಿಮಾನ ದುರಂತ: ಫೇಸ್‌ಬುಕ್‌ ಲೈವ್‌ ಮಾಡುವಾಗ ಅಪಘಾತ.!

ವಿಮಾನ ನೆಲಕ್ಕೆ ಅಪ್ಪಳಿಸುತ್ತಲೇ ಭಾರೀ ಸದ್ದಿನೊಂದಿಗೆ ಬೆಂಕಿ ಹತ್ತಿಕೊಂಡು ವಿಮಾನದ ಬಹುತೇಕ ಭಾಗ ಸುಟ್ಟುಹೋಯಿತು. ಕಂದಕದ ಪ್ರದೇಶಕ್ಕೆ ಅಗ್ನಿಶಾಮಕ ಸಿಬ್ಬಂದಿ ವಾಹನ ತಲುಪುವುದು ಸಾಧ್ಯವಾಗದ ಕಾರಣ ಹೆಚ್ಚಿನ ಜನರ ರಕ್ಷಣೆ ಸಾಧ್ಯವಾಗಿಲ್ಲ. ಘಟನಾ ಸ್ಥಳದಲ್ಲೇ 50ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಷ್ಟರಲ್ಲೇ ಅವರು ಅಸುನೀಗಿದ್ದಾರೆ. 

ನೇಪಾಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ 5 ಭಾರತೀಯರು ಕೂಡಾ ಸಾವನ್ನಪ್ಪಿದ್ದಾರೆ. ಮೃತ ಪ್ರಯಾಣಿಕರನ್ನು ಅಭಿಷೇಕ್‌ ಕುಶ್ವಾಹ (25), ಬಿಶಾಲ್‌ ಶರ್ಮಾ (22), ಅನಿಲ್‌ ಕುಮಾರ್‌ ರಾಜಭರ್‌ (27), ಸೋನು ಜೈಸ್ವಾಲ್‌ (35) ಮತ್ತು ಸಂಜಯ್‌ ಜೈಸ್ವಾಲ್‌ ಎಂದು ಗುರುತಿಸಲಾಗಿದೆ.
 

Latest Videos
Follow Us:
Download App:
  • android
  • ios