ಅಮೆರಿಕದ ಟೆಕ್ಸಾಸ್‌ ರಾಜ್ಯ ಆರು ವಾರಗಳ ನಂತರದ ಅಬಾರ್ಷನ್ ಅನ್ನು ಸಂಪೂರ್ಣ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಹೈಸ್ಕೂಲ್‌ನಿಂದ ಹೊರ ಹೋಗುತ್ತಿರುವ ವಿದ್ಯಾರ್ಥಿನಿಯೊಬ್ಬಳು ಮಾಡಿದ ವಿದಾಯ ಭಾಷಣ ಈಗ ವೈರಲ್‌ ಆಗುತ್ತಿದೆ.

 

ಟೆಕ್ಸಾಸ್‌ನ ಪ್ರತಿಷ್ಠಿತ ಹೈಸ್ಕೂಲ್ ಒಂದರ  ಪಾಕ್ಸ್‌ಟನ್ ಸ್ಮಿತ್ ಎಂಬ ಹತ್ತನೇ ತರಗತಿ ವಿದ್ಯಾರ್ಥಿನಿಗೆ ಅದು ಮಾಮೂಲಿ ವಿದಾಯದ (ವ್ಯಾಲೆಡಿಕ್ಟರಿ) ಭಾಷಣ ಆಗಿರಲಿಲ್ಲ. ಸಾಮಾನ್ಯವಾಗಿ ಡಿಗ್ರಿ ತೆಗೆದುಕೊಂಡ ಬಳಿಕ, ಮೂರು ಅಥವಾ ನಾಲ್ಕು ನಿಮಿಷದ ಒಂದು ವಿದಾಯ ಭಾಷಣ ಮಾಡುವುದು ರೂಢಿ. ಆಕೆಯೂ ಹಾಗೇ ಮತನಾಡುತ್ತಾಳೆ ಎಂದು ಎಲ್ಲರೂ ಭಾವಿಸಿದ್ದರು. ಪಾಕ್ಸ್‌ಟನ್ ಸ್ಮಿತ್ ಕೂಡ ಅಂಥ ಒಂದು ಭಾಷಣವನ್ನು ಸಿದ್ಧಪಡಿಸಿ, ಅದನ್ನು ಲೆಕ್ಚರರರ್ಸ್‌ಗೆ ನೀಡಿದ್ದಳು. ಆದರೆ ಕೊನೆಯ ಗಳಿಗೆಯಲ್ಲಿ ಆಕೆ ತನ್ನ ಭಾಷಣವನ್ನು ಬದಲಿಸಿದಳು.

ಆ ಭಾಷಣ ಟೆಕ್ಸಾಸ್ ರಾಜ್ಯದಲ್ಲಿ ಸರಕಾರ ಜಾರಿಗೆ ತಂದ ಕ್ರೂರ ಅಬಾರ್ಷನ್ ಕಾನೂನಿನ ವಿರುದ್ಧ ಆಗಿತ್ತು. ಈ ಕಾನೂನು ಎಷ್ಟು ಕ್ರೂರವಾಗಿದೆ ಎಂದರೆ, ಪ್ರಜನನದ ಬಗ್ಗೆ ಮಹಿಳೆ ಹೊಂದಿರುವ ಹಕ್ಕುಗಳನ್ನೇ ನಿರಾಕರಿಸುವಂತಿದೆ. ಅಂದರೆ ಇಲ್ಲಿ ಗರ್ಭಕ್ಕೆ ಆರು ವಾರ ಅಥವಾ ಅದಕ್ಕಿಂತ ಹೆಚ್ಚು ಆಗಿದ್ದರೆ ಯಾವುದೇ ಕಾರಣಕ್ಕೂ ಅಬಾರ್ಷನ್ ಮಾಡಿಸುವಂತಿಲ್ಲ. ಒಂದು ವೇಳೆ ಈ ಗರ್ಭ ರೇಪ್‌ನ ಪರಿಣಾಮವಾಗಿ ಆಗಿದ್ದರೆ, ಆಗಲೂ ಆ ಮಹಿಳೆ ಅಬಾರ್ಷನ್ ಮಾಡಿಸುವಂತಿಲ್ಲ! ಇದೊಂದು ಅಮಾನವೀಯ ಕ್ರಮವೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ. 

ಹೆಚ್ಚಿನ ಮಂದಿಗೆ ಆರು ವಾರಗಳವರೆಗೆ ತಮಗೆ ಗರ್ಭ ನಿಂತಿದೆ ಎಂಬುವುದು ಗೊತ್ತು ಕೂಡ ಆಗುವುದಿಲ್ಲ. ಆರು ವಾರದ ಹೊತ್ತಿಗೆ ಗರ್ಭ ನಿಂತಿದೆಯೋ ಇಲ್ಲವೋ ಎಂಬುದು ಖಚಿತವಾಗುವ ಸಮಯ. ಭಾರತದಂಥ ದೇಶಗಳಲ್ಲಿ ಆರು ತಿಂಗಳು (24 ವಾರ) ವರೆಗೂ ಅಬಾರ್ಷನ್ ಮಾಡಿಸಿಕೊಳ್ಳಬಹುದು. ಅಮೆರಿಕದ ಉಳಿದೆಡೆಗಳಿಗೆ ಹೋಲಿಸಿದರೆ ಟೆಕ್ಸಾಸ್ ಹೆಚ್ಚು ಸಾಂಪ್ರದಾಯಿಕ ಪ್ರದೇಶ. ಹೀಗಾಗಿ ಇಲ್ಲಿ ಇಂಥ ಕಾಯಿದೆಗಳು ಕಠಿಣ. 

ಸರ್ವ ರೋಗಕ್ಕೂ ಮದ್ದಾಗಬಲ್ಲದು ಸಾಂಬಾರ್ ಪದಾರ್ಥದ ಅರಿಶಿನ ...

ಇದರ ವಿರುದ್ಧ ಸ್ಮಿತ್ ಮಾಡಿದ ಭಾಷಣದ ವಿಡಿಯೋ ಈಗ ಎಲ್ಲ ಕಡೆ ವೈರಲ್ ಆಗುತ್ತಿದೆ. ಮನ ಸೆಳೆದ ಆಕೆಯ ಮಾತುಗಳು ಹೀಗಿವೆ: 

ನಾನು ಈ ವೇದಿಕೆಯನ್ನು ಬರಿಯ ಮನವೊಲಿಸುವ ಮಾತುಗಳಿಗೆ ಬಳಸುವುದಿಲ್ಲ. ಒಂದು ಕಡೆ ನನ್ನ ದೇಹದೊಳಗೆ ಅಂತರ್ಯುದ್ಧ, ಇನ್ನೊಂದು ಕಡೆಗೆ ನನ್ನ ದೇಹದ ಮೇಲೇ ಯುದ್ಧ ಸಾರಿರುವ ವ್ಯವಸ್ಥೆ- ಹೀಗಿರುವಾಗ ನಾನು ಮಾತನಾಡದೆ ಹೇಗಿರಲಿ?

ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಾನೂನಿನ ಹೆಸರಿನಲ್ಲಿ ಲಕ್ಷಾಂತರ ಮಹಿಳೆಯರ ಯಾತನೆಗೆ ಕಾರಣವಾಗಿರುವ ವಿಚಾರದ ಬಗ್ಗೆ ನಾನು ಮಾತನಾಡಬೇಕು. ಸರಕಾರ ಇತ್ತೀಚೆಗೆ, ಆರು ವಾರಗಳ ಬಳಿಕ ಅಬಾರ್ಷನ್‌ ಮಾಡಿಸುವಂತಿಲ್ಲ- ಅದು ಯಾವುದೇ ಕಾರಣ ಇರಲಿ- ಅತ್ಯಾಚಾರಕ್ಕೆ ತುತ್ತಾಗಿ ಗರ್ಭ ನಿಂತಿದ್ದರೂ ಸರಿ- ಎಂದು ಸರಕಾರ ಕಾನೂನು ಮಾಡಿದೆ. 

2 ನೇ ಅಲೆಗಿಂತ 3 ನೇ ಅಲೆ ಹೆಚ್ಚು ಬಾಧಿಸುತ್ತಾ.? ವೈರಾಣು ತಜ್ಞ ರವಿ ಉತ್ತರವಿದು ...

ನನಗೆ ಕನಸಿದೆ, ಭರವಸೆಯಿದೆ, ಜೀವನದಲ್ಲಿ ನಾನಾ ಆಶೆಗಳಿವೆ. ನನ್ನಂಥ ಪ್ರತಿಯೊಬ್ಬ ಹುಡುಗಿಗೂ ಇರುತ್ತದೆ. ನಾವು ನಮ್ಮ ಜೀವಮಾನವಿಡೀ ನಮ್ಮ ಭವಿಷ್ಯ ರೂಪಿಸಿಕೊಳ್ಳುವುದಕ್ಕಾಗಿ ದುಡಿಯುತ್ತೇವೆ. ಆದರೆ ನಮ್ಮ ಒಪ್ಪಿಗೆ ಇಲ್ಲದೆ, ನಮ್ಮನ್ನು ಒಂದು ಮಾತೂ ಕೇಳದೆ, ನಮ್ಮ ಭವಿಷ್ಯದ ಮೇಲಿನ ನಮ್ಮ ಹಿಡಿತವನ್ನೇ ಕಸಿದುಕೊಳ್ಳಲಾಗಿದೆ. ನನಗಿರುವ ಆತಂಕವೆಂದರೆ, ಒಂದು ವೇಳೆ ನನ್ನ ಮೇಲೆ ಅತ್ಯಾಚಾರ ನಡೆದರೆ, ಆಗ ನಾನು ಸೇವಿಸುವ ಗರ್ಭನಿರೋಧಕ ವಿಧಾನಗಳು ವಿಫಲವಾದರೆ, ಆಗ ನನ್ನ ಭವಿಷ್ಯದ ಎಲ್ಲ ಭರವಸೆಗಳು ನುಚ್ಚುನೂರಾಗಲಿವೆ. ಇದೊಂದು ಅಮಾನವೀಯ ಕ್ರಮ. ಇದು ನಮ್ಮ ಕರುಳು ಕಿವಿಚುವಂಥ ಸಂಗತಿ. ಇದು ಮುಂದೆ ಸೃಷ್ಟಿಸಲಿರುವ ಸಮಸ್ಯೆಗಳು ಅಸಂಖ್ಯ. 

ಇದು ಸರಕಾರ ನಮ್ಮ ತಾಯಂದಿರ ಮೇಲೆ, ನಿಮ್ಮ ಸಹೋದರಿಯರ ಮೇಲೆ, ನಿಮ್ಮ ಹೆಣ್ಣು ಮಕ್ಕಳ ಮೇಲೆ ಸಾರಿರುವ ಯುದ್ಧ. ನಾವು ಈಗ ಸುಮ್ಮನೆ ಇರಕೂಡದು.
ಸ್ಮಿತ್‌ಳ ಈ ಭಾಷಣದ ಬಗ್ಗೆ ಶಾಲಾ ಆಡಳಿತ ಮಂಡಳಿಗಾಗಲೀ, ಅವಳ ಶಿಕ್ಷಕರಿಗಾಗಲೀ, ಅವಳ ಗೆಳತಿಯರಿಗಾಗಲೀ ಗೊತ್ತೇ ಇರಲಿಲ್ಲ. ಕೇವಲ ಆಕೆಯ ತಾಯಿ- ತಂದೆಗೆ ಮಾತ್ರ ಇದು ಗೊತ್ತಿತ್ತು. ಅವರು ಸ್ಮಿತ್‌ಳ ಯೋಜನೆಗೆ ಭಾರಿ ಬೆಂಬಲವಾಗಿ ನಿಂತಿದ್ದರು. ವಿಚಿತ್ರವೆಂದರೆ ಈಕೆಯ ಭಾಷಣಕ್ಕೆ ಸಹಪಾಠಿಗಳಿಂದ, ಕಾಲೇಜಿನಿಂದ ಭಾರಿ ಬೆಂಬಲ ವ್ಯಕ್ತವಾಯಿತು. ಈಗ ಈಕೆಯ ಭಾಷಣ ಯೂಟ್ಯೂಬ್, ಟ್ವಿಟರ್, ಫೇಸ್‌ಬುಕ್‌ ಮುಂತಾದ ಎಲ್ಲಾ ಕಡೆ ವೈರಲ್‌ ಆಗಿದೆ.
 
ಮತ್ತೆ ಲಸಿಕೆ ಬೇಡ: ವ್ಯಾಕ್ಸಿನ್ ಪಡೆದವರಿಗೆ ಗುಡ್‌ ನ್ಯೂಸ್‌ ಕೊಟ್ಟ ವರದಿ! ...