Asianet Suvarna News Asianet Suvarna News

Sonali Kulkarni: ಈಗಿನ ಹೆಣ್ಣು ಮಕ್ಕಳು ಸೋಮಾರಿಗಳೆಂದ ನಟಿ ವಿರುದ್ಧ ನೆಟ್ಟಿಗರ ಆಕ್ರೋಶ

ಇಂದಿನ ಹೆಣ್ಣುಮಕ್ಕಳ ಕುರಿತು ನಟಿ ಸೋನಾಲಿ ಕುಲಕರ್ಣಿ ಆಡಿದ ಮಾತುಗಳು ಮಹಿಳೆಯರಲ್ಲಿ ಕಿಡಿ ಹೊತ್ತಿಸಿದೆ. ಸಾಮಾಜಿಕ ಜಾತಲಾಣದಲ್ಲಿ ನಟಿಯ ನಡೆಗೆ ಭಾರಿ ಟೀಕೆ ವ್ಯಕ್ತವಾಗಿದೆ. ಅಷ್ಟಕ್ಕೂ ನಟಿ ಹೇಳಿದ್ದೇನು?
 

Sonali Kulkarni receives criticism for calling modern Indian women lazy
Author
First Published Mar 18, 2023, 4:49 PM IST

ಇಂದಿನ ಹುಡುಗಿಯರಿಗೆ ವೆಲ್​ ಸೆಟಲ್ಡ್​ ಗಂಡನೇ ಬೇಕು. ಲಕ್ಷ ಲಕ್ಷ ದುಡಿಯಬೇಕು, ಫಾರಿನ್​ನಲ್ಲಿ ಹನಿಮೂನ್​ (Honeymoon) ಮಾಡಬೇಕು...  ಇಂಥ ಆರೋಪಗಳು ಕೇಳಿಬರುವುದು ಹೊಸ ವಿಷಯವೇನಲ್ಲ. ತಾವು ಚೆನ್ನಾಗಿ ದುಡಿಯಬೇಕು, ತಮ್ಮ ಸ್ವಂತ ಖರ್ಚಿನಲ್ಲಿಯೇ ಅಗತ್ಯತೆಗಳನ್ನು ಪೂರೈಸಬೇಕು ಎಂಬ ವಿಷಯದ ಕಡೆಗೆ ಹೆಚ್ಚಿನ ಹೆಣ್ಣುಮಕ್ಕಳು ಗಮನ ಹರಿಸುವುದಿಲ್ಲ, ಬದಲಿಗೆ ಅವರಿಗೆ ಎಲ್ಲವನ್ನೂ ಪೂರೈಸುವ ಹುಡುಗ ಮದುವೆಯಾಗಲು ಬೇಕು ಎನ್ನುತ್ತಾರೆ ಎಂಬುದಾಗಿ ಹೆಣ್ಣುಮಕ್ಕಳ ಮೇಲೆ ಭಾರಿ ಆರೋಪಗಳಿವೆ. ಇದೇ ಆರೋಪವೀಗ ದಿಲ್ ಚಾಹ್ತಾ ಹೈ (Dil Chahata Hai) ನಟಿ ಸೋನಾಲಿ ಕುಲಕರ್ಣಿಯವರೂ (Sonali Kulkarni) ಮಾಡಿದ್ದು, ಇವರ ಮಾತಿಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕಾರ್ಯಕ್ರಮವೊಂದರಲ್ಲಿ  ಸೋನಾಲಿ ಕುಲಕರ್ಣಿ  ಭೂಪೇಂದ್ರ ಸಿಂಗ್ ರಾಥೋಡ್​ ಅವರ ಜೊತೆ ನಡೆಸಿದ ಸಂದರ್ಶನದಲ್ಲಿ,  ಆಧುನಿಕ ಭಾರತೀಯ ಯುವತಿಯರು  ಚೆನ್ನಾಗಿ ಗಳಿಸುವ ಪತಿಗಾಗಿ  ಆಶಯ ವ್ಯಕ್ತಪಡಿಸುವ  ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

ಭಾರತೀಯ ಆಧುನಿಕ ಮಹಿಳೆಯರು  'ಸೋಮಾರಿ'ಗಳು ಮತ್ತು ಆರ್ಥಿಕವಾಗಿ ಸದೃಢರಾಗಿರುವ ಸಂಗಾತಿಯನ್ನು  ಬಯಸಲು ಹವಣಿಸುವುದಾಗಿ  ಅಭಿಪ್ರಾಯ ವ್ಯಕ್ತಪಡಿಸಿದರು. 'ಭಾರತದಲ್ಲಿ ಬಹಳಷ್ಟು ಮಹಿಳೆಯರು ಕೇವಲ ಸೋಮಾರಿಗಳು' ಎಂದು ಅವರು ಹೇಳಿದರು. ಅವರಿಗೆ ತಮ್ಮ ಬಾಯ್​ಫ್ರೆಂಡ್​ (Boy Friend) ಅಥವಾ ಪತಿಯಾಗುವವ ಎಷ್ಟು ಚೆನ್ನಾಗಿ ಸಂಪಾದಿಸುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ಅವರಿಗೆ ಸ್ವಂತ ಮನೆ ಇರಬೇಕು, ಕಾಲಕಾಲಕ್ಕೆ ಇನ್​ಕ್ರಿಮೆಂಟ್​ ಆಗುತ್ತಿರಬೇಕು. ಇವಿಷ್ಟನ್ನೇ ಬಯಸುವ ಇಂದಿನ ಯುವತಿಯರು,  ತಮ್ಮ ನಿಲುವನ್ನು ತಾವೇ ಮರೆತುಬಿಡುತ್ತಾರೆ. ಅವರು ಏನು ಮಾಡುತ್ತಾರೆಂದು ಇವರಿಗೆ ತಿಳಿದಿಲ್ಲ' ಎಂದರು.  'ತಮಗೂ ಸಂಪಾದಿಸುವ ಸಾಮರ್ಥ್ಯ ಇದೆ ಎಂಬುದನ್ನು ಮೊದಲು ಹೆಣ್ಣುಮಕ್ಕಳು ಮನಗಾಣಬೇಕು. ಮನೆಯ ಖರ್ಚುವೆಚ್ಚಗಳನ್ನು ಇಬ್ಬರೂ ಸೇರಿ ಶೇರ್​ ಮಾಡಿಕೊಳ್ಳುವ ಮನೋಭಾವ ಹೊಂದಿರಬೇಕು. ಮನೆಗೆ  ಹೊಸ ಫ್ರಿಡ್ಜ್ ಅಥವಾ ಇನ್ನಾವುದೇ ವಸ್ತುಗಳು ಬೇಕು ಎಂದರೆ ಇಬ್ಬರೂ ಸಮಪಾಲು ಹಾಕಿಕೊಂಡು ತರಬೇಕು, ಅದನ್ನು ಬಿಟ್ಟು ಎಲ್ಲವನ್ನೂ ಗಂಡನೇ  ಮಾಡಬೇಕು ಎಂದರೆ ಹೇಗೆ' ಎಂದು ಪ್ರಶ್ನಿಸಿದರು.

ಯಾವ ರೀತಿ ಹೂಸು ಇಷ್ಟ ಎಂದು ತಿಳಿಸಿದ ನಟಿ Shruti Haasan!

ಪುರುಷರ ಪರವಾಗಿ ಮಾತನಾಡಿದ ನಟಿ,  ಚಿಕ್ಕ ವಯಸ್ಸಿನಲ್ಲಿಯೇ ಗಂಡುಮಕ್ಕಳು  ಕೆಲಸ ಮಾಡಲು ಪ್ರಾರಂಭಿಸುವ ಸ್ಥಿತಿ ನಿರ್ಮಾಣವಾಗಿದೆ. ಮದುವೆಯಾಗುವ ಹೆಣ್ಣುಮಕ್ಕಳ ಆಸೆ ಹೆಚ್ಚಾಗಿರುವ ಕಾರಣ, ಚಿಕ್ಕ ವಯಸ್ಸಿನಲ್ಲಿಯೇ  ಕಷ್ಟಪಡುತ್ತಿದ್ದಾರೆ.  ಖರ್ಚುಗಳನ್ನು ನೋಡಿಕೊಳ್ಳಲು ಮತ್ತು ಅವರ ಕುಟುಂಬವನ್ನು ಬೆಂಬಲಿಸಲು ಪ್ರಾರಂಭಿಸುತ್ತಾರೆ. ಗಂಡು ಮಕ್ಕಳು 18 ವರ್ಷಕ್ಕೆ ಕಾಲಿಟ್ಟ ತಕ್ಷಣ ಅವರ ಮೇಲಿನ ಒತ್ತಡ ಹೆಚ್ಚಾಗುತ್ತದೆ. ನೀವು ಗಳಿಸಬೇಕು, ಗಳಿಸಬೇಕು ಎನ್ನುವ ಮಾತೇ  ಅವರಿಗೆ ಎದುರಾಗುತ್ತದೆ ಎಂಬ ನಟಿ,  ನನ್ನ ಸಹೋದರರು ಮತ್ತು ನನ್ನ ಪತಿಗಾಗಿ ತುಂಬಾ ನೋವು ಎನ್ನಿಸುತ್ತಿದೆ ಎಂದಿದ್ದಾರೆ. ತಮ್ಮ ಪತಿ ಕೂಡ  20 ವರ್ಷದವರಾಗಿದ್ದಾಗ ಹೇಗ ಅನಿವಾರ್ಯವಾಗಿ ದುಡಿಯಲು ಪ್ರಾರಂಭಿಸಬೇಕಾಯಿತು ಎಂದು ಅವರು ಹೇಳಿದರು.
 
ಈ ವಿಡಿಯೋ ವೈರಲ್​ (Viral) ಆಗುತ್ತಿದ್ದಂತೆಯೇ ಪುರುಷರು ನಟಿಯ ಧೈರ್ಯ ಮತ್ತು ಮುಕ್ತ ಮನಸ್ಸನ್ನು ಶ್ಲಾಘಿಸಿ ಕಮೆಂಟ್​ಗಳ ಸುರಿಮಳೆ ಮಾಡುತ್ತಿದರೆ, ಮಹಿಳೆಯರು ಮಾತ್ರ ಕಿಡಿಕಿಡಿಯಾಗಿದ್ದಾರೆ. ನಟಿ ಹಲವು ಮಹಿಳೆಯರಿಂದ ಭಾರಿ ಪ್ರತಿರೋಧ ಎದುರಿಸುತ್ತಿದ್ದಾರೆ.  ನೀವು ಹೇಳಿರುವ ಹೆಣ್ಣುಮಕ್ಕಳು ಇಲ್ಲವೆಂದಲ್ಲ, ಅಂಥವರ ಸಂಖ್ಯೆ ಕಡಿಮೆ ಇದೆ. ಆದರೆ ನೀವು ಎಲ್ಲರನ್ನೂ ಸಾಮಾನ್ಯೀಕರಿಸಿ ಹೇಳಿರುವುದು ಸರಿಯಲ್ಲ. ಇಂದು ಹೆಣ್ಣುಮಕ್ಕಳೇ ಇಡೀ ಸಂಸಾರದ ನೊಗವನ್ನು ಹೊತ್ತು ಸಾಗುತ್ತಿದ್ದರೆ, ಇಂಥ ಕುಟುಂಬಗಳು (Family) ನಿಮಗೆ ಎಷ್ಟು ಬೇಕು ಹೇಳಿ? ಅಲ್ಲೊಂದು ಇಲ್ಲೊಂದು ಉದಾಹರಣೆಗಳನ್ನು ಇಟ್ಟುಕೊಂಡು ಇಡೀ ಮಹಿಳಾ ಸಮುದಾಯವನ್ನೇ ನೀವು ಟೀಕಿಸಿರುವುದು ಸರಿಯಲ್ಲ ಎಂದಿದ್ದಾರೆ ಹಲವರು. 

Jaggesh Birthday: 'ವಯಸ್ಸು ಕೈ ಜಾರಿದೆ, ಕೈ ಹಿಡಿಯಲು ಒಂದು ವಧು ಬೇಕಿದೆ'

 

Follow Us:
Download App:
  • android
  • ios