Asianet Suvarna News Asianet Suvarna News

ಯಾವ ರೀತಿ ಹೂಸು ಇಷ್ಟ ಎಂದು ತಿಳಿಸಿದ ನಟಿ Shruti Haasan!

ಸಿಲ್ಲಿ ಪ್ರಶ್ನೆ ಕೇಳಿ ಎಂದು ನಟಿ ಶ್ರುತಿ ಹಾಸನ್​ ಫ್ಯಾನ್ಸ್​ಗೆ ಕೇಳಿದ್ದಕ್ಕೆ ಚಿತ್ರ ವಿಚಿತ್ರ ಪ್ರಶ್ನೆಗಳು ಅವರಿಗೆ ಎದುರಾಗಿದ್ದವು. ಅವುಗಳಲ್ಲಿ ಒಂದು ಹೂಸು ಬಿಡುವುದು. ಏನಿದು ಪ್ರಶ್ನೋತ್ತರ?

Shruti Haasan answers silly questions on farts
Author
First Published Mar 17, 2023, 9:14 PM IST

ಕಮಲ್ ಹಾಸನ್ ಪುತ್ರಿಯಾಗಿರುವ ಶ್ರುತಿ (Shruthi Hassan), ಕಾಲಿವುಡ್, ಬಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತೆಲುಗು ಚಿತ್ರಗಳಾದ ವೀರ ಸಿಂಹ ರೆಡ್ಡಿ ಮತ್ತು ವಾಲ್ಟೇರ್ ವೀರಯ್ಯನ ಯಶಸ್ಸಿನೊಂದಿಗೆ ಸದ್ಯ ಬೀಗುತ್ತಿದ್ದಾರೆ. ಕಳೆದ ತಿಂಗಳು ಪ್ರೇಮಿಗಳ ದಿನದಂದು ಶ್ರುತಿ ಹಾಸನ್  ತಮ್ಮ ಪ್ರೇಮಿ  ಶಂತನು ಹಜಾರಿಕಾ ಅವರೊಂದಿಗೆ ಫೋಟೋ ಶೇರ್​ ಮಾಡಿ ಸುದ್ದಿಯಾಗಿದ್ದರು. ಸುದ್ದಿಯಾಗಿರುವುದಕ್ಕೆ ಕಾರಣ ಏನೆಂದರೆ, ವರು ತಮ್ಮ ಸ್ನೇಹಿತ  ಶಂತನು ಹಜಾರಿಕಾ (Shanthanu Hajarika) ಜೊತೆ  ಬ್ರೇಕ್ ಅಪ್ ಆಗಿದ್ದರು ಎಂಬ ಸುದ್ದಿಯೂ ಕೆಲ ತಿಂಗಳಿನಿಂದ ಹರಿದಾಡುತ್ತಿತ್ತು.   ಮುಂಬೈನಲ್ಲಿ ಪ್ರತ್ಯೇಕ ಫ್ಲಾಟ್ ತೆಗೆದುಕೊಂಡು ಇಬ್ಬರೂ ಜೊತೆಯಲ್ಲಿದ್ದಾರೆ ಎಂಬುದು ಬಿ-ಟೌನ್​ನಲ್ಲಿ ಗುಟ್ಟಾಗಿ ಉಳಿದಿಲ್ಲ. ಆದರೆ ಇದರ ನಡುವೆಯೇ ಬ್ರೇಕ್​ ಅಪ್​ ಶಾಕಿಂಗ್​ ನ್ಯೂಸ್​ (Shocking news) ಕೂಡ ಬಂದಿತ್ತು.  ಅದಕ್ಕೆ ಪುಷ್ಟಿ ನೀಡಿದ್ದ ಶ್ರುತಿ ಅವರ ಸಾಮಾಜಿಕ ಜಾಲತಾಣದ ಪೋಸ್ಟ್​. 'ನಾನು ನನ್ನೊಂದಿಗೆ ಚೆನ್ನಾಗಿದ್ದೇನೆ. ನನ್ನೊಂದಿಗೆ ನಾನು ಎಂಜಾಯ್ ಮಾಡಬಹುದು. ನನ್ನ ಸಮಯದ ಮೌಲ್ಯ ನನಗೆ ತಿಳಿದಿದೆ. ನಾನು ನನ್ನ ಜೀವನವನ್ನು ಪ್ರೀತಿಸುತ್ತೇನೆ ಎಂದು ನಾನು ಅರಿತುಕೊಂಡಿದ್ದೇನೆ' ಎಂದು ಶ್ರುತಿ ಬರೆದುಕೊಂಡು ಎಲ್ಲರ ಬಾಯಿ ಮುಚ್ಚಿಸಿದ್ದರು.
 
ಈ ಬೋಲ್ಡ್​ ನಟಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದು ಯಾವುದಕ್ಕೆ ಎಂದು ತಿಳಿದರೆ ಕೇಳಿದವರು ಬಿದ್ದೂ ಬಿದ್ದೂ ನಗುವುದರಲ್ಲಿ ಸಂದೇಹವೇ ಇಲ್ಲ. ತಮ್ಮ Instagram ಹ್ಯಾಂಡಲ್​ನಲ್ಲಿ ಸಕ್ರಿಯರಾಗಿರುವ ನಟಿ, ತಮ್ಮ ಅಭಿಮಾನಿಗಳ ಜೊತೆ ಆಗಾಗ್ಗೆ  'ಸಿಲ್ಲಿ' ಚಾಟ್ ಮಾಡುತ್ತಲೇ ಇರುತ್ತಾರೆ. ಫ್ಯಾನ್ಸ್​ ಕೇಳೋ ಪ್ರಶ್ನೆಗಳಲ್ಲಿ ಹೆಚ್ಚಿನವು ತರ್ಲೆ ಪ್ರಶ್ನೆಗಳಾಗಿರುತ್ತವೆ. ಅವುಗಳಿಗೂ ಬೋಲ್ಡ್​ ಆಗಿಯೇ ಶ್ರುತಿ ಉತ್ತರ ಕೊಡುತ್ತಾರೆ. ಅದರಲ್ಲಿ ಒಂದು ಈಗ ವೈರಲ್​ ಆಗಿದೆ. ಅದೇನೆಂದರೆ, ಈಚೆಗೆ ನಟಿ ಅಭಿಮಾನಿಗಳಿಗಾಗಿ ವಿಶೇಷ ಪ್ರಶ್ನೋತ್ತರ ಸೆಷನ್  ಪ್ರಾರಂಭಿಸಿದ್ದರು. ಅದರಲ್ಲಿ ಸಿಲ್ಲಿ ಪ್ರಶ್ನೆ ಕೇಳಿ ಎಂದಿದ್ದರು. ಇನ್ನು ಫ್ಯಾನ್ಸ್ ಬಿಟ್ಟಾರೆಯೇ? ಒಂದಕ್ಕಿಂತ ಒಂದು ತರ್ಲೆ ಪ್ರಶ್ನೆ ಕೇಳಿದ್ದಾರೆ.

Valentines day spl: ಗಾಳಿಸುದ್ದಿಗೆ ಬ್ರೇಕ್​- ಬಾಯ್​ಫ್ರೆಂಡ್​ ಜೊತೆ ಶ್ರುತಿ ಹಾಸನ್​ ಫೋಟೋ ಕ್ಲಿಕ್​​

 ಅಭಿಮಾನಿಯೊಬ್ಬರು ನಾನು ನಿನ್ನೊಂದಿಗೆ ಡೇಟ್ (Dating) ಮಾಡಲು ಬಯಸುತ್ತೇನೆ. ಇದು ಸಾಧ್ಯವೇ? ಎಂದು ಒಬ್ಬ ಕೇಳಿದ್ದಕ್ಕೆ, ನಟಿ  ನೇರವಾಗಿ ಇಲ್ಲ ಎಂದು ಉತ್ತರಿಸಿದಳು. ಆದರೆ ಇನ್ನೊಬ್ಬ ಮಾತ್ರ ನಿಮಗೆ ಯಾವ ರೀತಿಯಲ್ಲಿ ಹೂಸು ಬಿಡುವುದು ಇಷ್ಟ ಎಂದು ಕೇಳಿದ್ದಾನೆ. ಅದಕ್ಕೆ ಸ್ವಲ್ಪವೂ ಮುಜುಗರ ಪಟ್ಟುಕೊಳ್ಳದ ನಟಿ,  ನನಗೆ ಕೀರಲು ಧ್ವನಿಯಲ್ಲಿ ಸ್ಕ್ವೀಕಿಯಾಗಿ ಹೂಸು (Fart) ಬಿಡುವುದು ಇಷ್ಟ, ಯಾಕೆಂದರೆ ಅದು ಫನ್ನಿಯಾಗಿರುತ್ತದೆ ಎಂದು ಹೇಳಿದ್ದಾರೆ ನಟಿ. ಅದೇ ರೀತಿ ಇನ್ನೊಬ್ಬರು ನಿಮ್ಮ ಹೃದಯದ ಬಣ್ಣ ಕಪ್ಪಾಗಿದೆಯಾ ಎಂದು ಕೇಳಿದ್ದಾರೆ. ಮೊದಲು ಎಸ್ ಎಂದ ನಟಿ ನಂತರ ಬಹುಶಃ ಪಿಂಕ್ ಇರಬಹುದೇನೋ ಎಂದಿದ್ದಾರೆ.

ಇನ್ನೋರ್ವ ಅಭಿಮಾನಿ, ‘ವಿಸ್ಕಿ, ಬಿಯರ್, ಕಾಕ್ಟೇಲ್​, ವೋಡ್ಕಾ ಇವುಗಳಲ್ಲಿ ನಿಮ್ಮಿಷ್ಟದ ಪಾನೀಯ ಯಾವುದು’ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಶ್ರುತಿ ಹಾಸನ್ ಉತ್ತರಿಸಿದ್ದಾರೆ. ‘ನಾನು 6 ವರ್ಷಗಳಿಂದ ಮದ್ಯ ಸೇವನೆ ಮಾಡುತ್ತಿಲ್ಲ. ಹಾಗಾಗಿ ನಾನು ಆಲ್ಕೋಹಾಲ್ ಮುಟ್ಟುವುದಿಲ್ಲ. ಇವುಗಳಲ್ಲಿ ಯಾವುದೂ ನನ್ನ ಮೆಚ್ಚಿನ ಪಾನೀಯ ಅಲ್ಲ. ನಾನು ಕೆಲವೊಮ್ಮೆ ಆಲ್ಕೊಹಾಲ್​ ಇಲ್ಲದ ಬಿಯರ್ ಕುಡಿಯುತ್ತೇನೆ’ ಎಂದು ಅವರು ಹೇಳಿದ್ದಾರೆ.

Aryan Khan ಡ್ರಗ್ಸ್​ ಕೇಸಲ್ಲಿ ಸಿಲುಕಿದ್ದಾಗ ಅಪ್ಪ ಶಾರುಖ್​ನಿಭಾಯಿಸಿದ್ದು ಹೇಗೆ?

ಅಂದಹಾಗೆ, ಶ್ರುತಿ ಅವರು, ಸದ್ಯ ‘ಸಲಾರ್​’ (Salar) ಸಿನಿಮಾ ಶೂಟಿಂಗ್​ ಈಚೆಗೆ ಮುಗಿದಿದೆ.  ಪ್ರಶಾಂತ್ ನೀಲ್ ನಿರ್ದೇಶನದ, ಪ್ರಭಾಸ್ ನಟನೆಯ ಈ ಸಿನಿಮಾಗೆ ಶ್ರುತಿ ಹಾಸನ್ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಭಾಗದ ಶೂಟಿಂಗ್​ನ ಪೂರ್ಣಗೊಳಿಸಿರುವ ಬಗ್ಗೆ ಶ್ರುತಿ ಹಾಸನ್ ಇತ್ತೀಚೆಗೆ ಮಾಹಿತಿ ನೀಡಿದ್ದರು. ‘ನನ್ನ ಭಾಗದ ಸಲಾರ್ ಶೂಟಿಂಗ್ ಪೂರ್ಣಗೊಂಡಿದೆ. ನನ್ನನ್ನು ಆದ್ಯ ಮಾಡಿದ್ದಕ್ಕೆ ಪ್ರಶಾಂತ್ ನಿಮಗೆ ಧನ್ಯವಾದ. ನೀವು ಅಸಾಧಾರಣ ವ್ಯಕ್ತಿ. ಡಾರ್ಲಿಂಗ್ ರೀತಿ ಇದ್ದಿದ್ದಕ್ಕೆ ಪ್ರಭಾಸ್ ನಿಮಗೂ ಥ್ಯಾಂಕ್ಸ್. ಭುವನ್ ನಿಮಗೂ ಥ್ಯಾಂಕ್ಸ್. ಹೊಂಬಾಳೆ ಫಿಲ್ಮ್ಸ್ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಕೊನೆಯಲ್ಲಿ ಇದು ಕುಟುಂಬದಂತೆ ಭಾಸವಾಗಿದೆ’ ಎಂದು ಶ್ರುತಿ ಬರೆದುಕೊಂಡಿದ್ದರು. ಈಗ ಚಿತ್ರೀಕರಣ ಮುಗಿದಿದ್ದು, ರಿಲ್ಯಾಕ್ಸ್​ ಮೂಡ್​ನಲ್ಲಿ ಇದ್ದಾರೆ. 
 

Follow Us:
Download App:
  • android
  • ios