ಸಾಲದ ಹೊರೆ ಇತ್ತು. ದುಡ್ಡು ಬೇಕಿತ್ತು. ಆದ್ರೂ ಪಾನ್ ಮಾಸಾಲಾ ಆ್ಯಡ್ ರಿಜೆಕ್ಟ್ ಮಾಡಿದ್ರಂತೆ ಸ್ಮೃತಿ ಇರಾನಿ!
ಸಾಲ ಕಡಿಮೆಯಾದ್ರೆ ಸಾಕು ಎನ್ನುವ ನಾವು ಎಲ್ಲಿಂದ ಹಣ ಬಂದ್ರೂ ಅದನ್ನು ನಿರಾಕರಿಸೋದಿಲ್ಲ. ಆದ್ರೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೊದಲಿನಿಂದಲೂ ಶಿಸ್ತಿನ ಜೀವನ ನಡೆಸಿದವರು. ಯುವಜನರಿಗೆ ಮಾದರಿಯಾದವರು. ಲಕ್ಷಾಂತರ ರೂಪಾಯಿ ಕೈಗೆ ಬರುತ್ತೆ ಎಂಬುದು ಗೊತ್ತಿದ್ರೂ ಮುಖ್ಯ ಕಾರಣಕ್ಕೆ ಜಾಹೀರಾತು ಕೈಬಿಟ್ರು.
ಈಗಿನ ದಿನಗಳಲ್ಲಿ ಹಣ ಮುಖ್ಯವಾಗಿದೆ. ಅನೇಕರ ಸೆಲೆಬ್ರಿಟಿಗಳು ಜಾಹೀರಾತು ನೀಡೋದನ್ನು ನೀವು ನೋಡ್ಬಹುದು. ಕೆಲ ಜಾಹೀರಾತುಗಳು ಜನರ ದಾರಿ ತಪ್ಪಿಸುವಂತಿರುತ್ತವೆ. ಎಷ್ಟೇ ಕಷ್ಟದಲ್ಲೂ ಜನರಿಗೆ ಒಳ್ಳೆಯದನ್ನು ಮಾಡಲು ಬಯಸಿದ ಕಲಾವಿದರು ನಮ್ಮಲ್ಲಿ ಸಾಕಷ್ಟಿದ್ದಾರೆ. ಅದ್ರಲ್ಲಿ ಸ್ಮೃತಿ ಇರಾನಿ ಕೂಡ ಒಬ್ಬರು.
ಕೇಂದ್ರ ಸಚಿವೆ (Union Minister) ಸ್ಮೃತಿ ಇರಾನಿ ಅವರು ಪ್ರಸಿದ್ಧ ಕಿರುತೆರೆ ನಟಿ ಎಂಬುದು ಎಲ್ಲರಿಗೂ ತಿಳಿದ ವಿಷ್ಯ. ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಎಂಬ ಧಾರಾವಾಹಿ ಮೂಲಕ ಮನೆ ಮನೆಯಲ್ಲಿ ಪ್ರಸಿದ್ಧಿ ಪಡೆದಿದ್ದರು ಸ್ಮೃತಿ ಇರಾನಿ (Smriti Irani). ಈ ಧಾರಾವಾಹಿಯಲ್ಲಿ ಅವರ ನಟನೆಗೆ ಬಹಳ ಮನ್ನಣೆ ಸಿಕ್ಕಿತ್ತು. ತಮ್ಮ ನಟನೆ ಮತ್ತು ಅತ್ಯುತ್ತಮ ಪಾತ್ರದಿಂದ ಜನಮಾನಸದಲ್ಲಿ ಸ್ಥಾನ ಪಡೆದಿದ್ದರು. ಈಗ್ಲೂ ಜನರು ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿಯನ್ನು ನೆನೆಪು ಮಾಡಿಕೊಳ್ತಾರೆ. ಈಗ ಸ್ಮೃತಿ ಕೇಂದ್ರ ಸಚಿವರಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಜವಾಬ್ದಾರಿಯನ್ನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ. ಇದೇ ವೇಳೆ ತಮ್ಮ ನಟನೆಯ ದಿನಗಳ ಬಗ್ಗೆ ಸ್ಮೃತಿ ಇರಾನಿ ಮಾತನಾಡಿದ್ದಾರೆ. ಆಗ ನಾನು ಸಾಲದಲ್ಲಿದ್ದೆ ಆದ್ರೂ ಒಂದು ಜಾಹೀರಾತನ್ನು ನಿರಾಕರಿಸಿದ್ದೆ ಎಂದಿದ್ದಾರೆ.
ಕಿಚನ್‌ನಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ ಗೃಹಿಣಿ, ಸೆರಗು ಮುಚ್ಕೊಳಮ್ಮಾ ಎಂದ ನೆಟ್ಟಿಗರು
ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿದ ಸ್ಮೃತಿ ಈ ವಿಷ್ಯಗಳನ್ನು ಹಂಚಿಕೊಂಡಿದ್ದಾರೆ. ಸ್ಮೃತಿ ಇರಾನಿ ಬಾಯಲ್ಲಿಯೇ ಕೇಳೋದಾದ್ರೆ, ನಾನು ಈಗಷ್ಟೇ ಮದುವೆಯಾಗಿದ್ದೆ. ನನ್ನ ಬ್ಯಾಂಕ್ ಖಾತೆಯಲ್ಲಿ 20 ರಿಂದ 30 ಸಾವಿರ ರೂಪಾಯಿ ಇರಲಿಲ್ಲ. ಆ ಸಮಯದಲ್ಲಿ ನಾನು ಮನೆ ಖರೀದಿಸಲು ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದ ಕಾರಣ ಸಾಲದ ಹೊರೆ ನನ್ನ ಮೇಲಿತ್ತು ಎಂದು ಸ್ಮೃತಿ ಹೇಳಿದ್ದಾರೆ.
ಸ್ಮೃತಿಗೆ ಬಂದಿತ್ತು ಭರ್ಜರಿ ಆಫರ್ ನ ಜಾಹೀರಾತು : ಮನೆ ಖರೀದಿಸಲು ಬ್ಯಾಂಕ್‌ನಲ್ಲಿ 25 ರಿಂದ 27 ಲಕ್ಷ ರೂಪಾಯಿ ಸಾಲ ಮಾಡಿದ್ದರು ಸ್ಮೃತಿ. ಈ ಸಾಲ ತೀರಿಸಲು ತುಂಬಾ ಕಷ್ಟವಾಗ್ತಿತ್ತು. ಈ ಮಧ್ಯೆ ಅವರಿಗೆ ಪಾನ್ ಮಸಾಲಾ ಜಾಹೀರಾತು ನೀಡುವಂತೆ ಒಂದು ಆಫರ್ ಬಂದಿತ್ತು. ಆದ್ರೆ ಈ ಪ್ರಸ್ತಾಪವನ್ನು ಸ್ಮೃತಿ ಇರಾನಿ ತಿರಸ್ಕರಿಸಿದ್ದರು. ಒಂದು ದಿನ ನನ್ನ ಕಾರ್ಯಕ್ರಮದ ಸೆಟ್‌ಗೆ ಬಂದ ಯಾರೋ ಒಬ್ಬರು, ಪಾನ್ ಮಸಾಲಾ ಜಾಹೀರಾತನ್ನು ನೀಡಿದ್ದರು. ಇದಕ್ಕೆ ಭರ್ಜರಿ ಹಣದ ಆಫರ್ ಮಾಡಿದ್ದರು. ನನ್ನ ಬ್ಯಾಂಕಿನಲ್ಲಿ ಇರುವ ಹಣದ 10 ಪಟ್ಟು ಹಣವನ್ನು ಅವರು ಜಾಹೀರಾತಿಗೆ ನೀಡುವುದಾಗಿ ಆಫರ್ ನೀಡಿದ್ದರು. ಅದು ನನಗೆ ಈಗ್ಲೂ ನೆನಪಿದೆ ಎಂದು ಸ್ಮೃತಿ ಹೇಳ್ತಾರೆ. ಆದ್ರೆ ನಾನು ಆ ಜಾಹೀರಾತು ಪ್ರಸ್ತಾಪವನ್ನು ತಿರಸ್ಕರಿಸಿದೆ. ನಾನು ಜಾಹೀರಾತು ತಿರಸ್ಕರಿಸಿದ್ದನ್ನು ನೋಡಿದ ಜನರು, ನನಗೆ ಹುಚ್ಚು ಎಂದಿದ್ದರು. ಹಣದ ಅವಶ್ಯಕತೆಯಿರುವ ಈ ಸಮಯದಲ್ಲಿ ಆಫರ್ ಕೈಬಿಟ್ಟಿದ್ದು ಏಕೆ ಎಂಬ ಪ್ರಶ್ನೆ ಅವರನ್ನು ಕಾಡಿತ್ತು ಎಂದು ಸ್ಮೃತಿ ಹೇಳಿದ್ದಾರೆ.
ಇಂಥಾ ಗಂಡನ ಜೊತೆ ಜೀವನ ಮಾಡುವುದು ತುಂಬಾ ಕಷ್ಟ; ಸುಧಾಮೂರ್ತಿ ಹೀಗೆ ಹೇಳಿದ್ಯಾಕೆ?
ಪಾನ್ ಮಸಾಲಾ ಜಾಹೀರಾತು ತಿರಸ್ಕರಿಸಿದ್ದೇಕೆ? : ಸಂದರ್ಶನದಲ್ಲಿ ಸ್ಮೃತಿ ಇರಾನಿ, ಪಾನ್ ಮಸಾಲಾ ಜಾಹೀರಾತನ್ನು ತಿರಸ್ಕರಿಸಿದ್ದು ಏಕೆ ಎಂಬುದನ್ನು ಕೂಡ ಹೇಳಿದ್ದಾರೆ. ಧಾರವಾಹಿಯನ್ನು ಮನೆ ಮನೆಯಲ್ಲಿ ನೋಡ್ತಿರುತ್ತಾರೆ. ಅನೇಕ ಕುಟುಂಬಗಳು ನನ್ನನ್ನು ತೆರೆ ಮೇಲೆ ನೋಡುತ್ತಿರುತ್ತವೆ. ಯುವ ಪೀಳಿಗೆಯ ಜನರು ನನ್ನನ್ನು ನೋಡ್ತಿದ್ದರು. ನಾನು ಅವರ ಕುಟುಂಬದ ಭಾಗವಾಗಿದ್ದೆ. ನಾನೇ ಪಾನ್ ಮಸಾಲಾ ತಿನ್ನಿ ಅಂತಾ ಜಾಹೀರಾತು ನೀಡಿದ್ರೆ ಅದು ತಪ್ಪು ಸಂದೇಶ ರವಾನೆ ಮಾಡಿದಂತೆ ಆಗುತ್ತದೆ ಎಂದು ಜಾಹೀರಾತು ತಿರಸ್ಕರಿಸಿದೆ ಎನ್ನುತ್ತಾರೆ ಸ್ಮೃತಿ ಇರಾನಿ.