ಕಿಚನ್‌ನಲ್ಲಿ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ ಗೃಹಿಣಿ, ಸೆರಗು ಮುಚ್ಕೊಳಮ್ಮಾ ಎಂದ ನೆಟ್ಟಿಗರು
ಇತ್ತೀಚಿಗೆ ಎಲ್ಲರೂ ಇನ್‌ಸ್ಟಾಗ್ರಾಂ ರೀಲ್ಸ್ ಅಡಿಕ್ಟ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲೆಂದೇ ಇಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾರೆ. ಹಾಗೆಯೇ ಸದ್ಯ ಗೃಹಿಣಿಯೊಬ್ಬಳು ಅಡುಗೆಮನೆಯೊಳಗೆ ಸೀರೆಯುಟ್ಟುಕೊಂಡು ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿರೋ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈಗ ಏನಿದ್ರೂ ಸೋಷಿಯಲ್ ಮೀಡಿಯಾಗಳ ಕಾಲಘಟ್ಟ. ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂಗಳ ಹಾವಳಿ. ಅದರಲ್ಲೂ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗೋಕೆ ಜನ್ರು ನಾನಾ ರೀತಿಯ ವಿಡಿಯೋ ಮಾಡ್ತಾನೆ ಇರ್ತಾರೆ. ಮಹಿಳೆ, ಫ್ಯಾಶನ್, ಬ್ಯೂಟಿ, ಟ್ರಾವೆಲ್, ರಿಲೇಶನ್‌ಶಿಪ್ ಹೀಗೆ ನಾನಾ ವಿಚಾರಗಳ ಬಗ್ಗೆ ಮಾಡೋ ರೀಲ್ಸ್ ವೈರಲ್ ಆಗುತ್ತವೆ. ಹೀಗೆ ವೈರಲ್ ಆಗಲೆಂದೇ ವಿಡಿಯೋ ಮಾಡುವವರು ಇದ್ದಾರೆ. ಕಾಲೇಜ್ ಸ್ಟೂಡೆಂಟ್ಸ್, ಉದ್ಯೋಗಿಗಳು, ಮಕ್ಕಳು, ಹೌಸ್‌ವೈವ್ಸ್ ಎಲ್ಲರೂ ಹೀಗೆ ವಯಸ್ಸಿನ ವ್ಯತ್ಯಾಸವಿಲ್ಲದೆ ಈ ರೀತಿ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.
ಇಂಥಾ ವಿಡಿಯೋ ಮಾಡಲು ನಿರ್ಧಿಷ್ಟ ಪರಿಸರವೂ ಬೇಕೆಂದಿಲ್ಲ. ಮನೆಯೊಳಗೆ, ಮನೆಯ ಹೊರಗಡೆ, ಕಾಲೇಜ್‌ನಲ್ಲಿ, ಆಫೀಸ್‌ನಲ್ಲಿ, ಬದ್‌ನಲ್ಲಿ, ಮೆಟ್ರೋದಲ್ಲಿ ಹೀಗೆ ಎಲ್ಲಿ ಬೇಕಾದರಲ್ಲಿ ವೀಡಿಯೋ ಮಾಡಿ ಪೋಸ್ಟ್ ಮಾಡಬಹುದಾಗಿದೆ. ಅದರಲ್ಲೂ ಡ್ಯಾನ್ಸ್ ಮಾಡಿ ರೀಲ್ಸ್‌ಗಳನ್ನು ಪೋಸ್ಟ್ ಮಾಡುವುದು ಹೆಚ್ಚು. ಇಂಥಾ ಪೋಸ್ಟ್‌ಗಳು ಬೇಗನೇ ವೈರಲ್ ಆಗಿಬಿಡುತ್ತವೆ. ಪ್ರಪಂಚದ ಮೂಲೆ ಮೂಲೆಯ ವ್ಯಕ್ತಿಗಳನ್ನು ಆಕರ್ಷಿಸುತ್ತಿದೆ. ನೃತ್ಯವು ವ್ಯಕ್ತಿಗಳನ್ನು ಸಶಕ್ತಗೊಳಿಸುವ ಆಳವಾದ ಸಾಮರ್ಥ್ಯವನ್ನು ಹೊಂದಿದೆ.
ಮುಜೆ ಬುಡ್ಡಾ ಮಿಲ್‌ಗಯಾ ಅಂತ ಕುಣಿದ ಅಂಟಿ : ನೆಟ್ಟಿಗರ ಕಾಮೆಂಟ್ ಓದ್ಲೇಬೇಡಿ
ಅಡುಗೆ ಮನೆಯಲ್ಲಿ ಸೀರೆಯುಟ್ಟು ಬೋಲ್ಡ್ ಆಗಿ ಡ್ಯಾನ್ಸ್ ಮಾಡಿದ ಮಹಿಳೆ
ಡಿಜಿಟಲ್ ಯುಗದಲ್ಲಿ, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ವ್ಯಾಪಕ ಜನಪ್ರಿಯತೆಯ ಮೂಲಕ ನೃತ್ಯದ ಪ್ರಭಾವವನ್ನು ಹೆಚ್ಚಿಸಲಾಗಿದೆ. ಉತ್ಸಾಹಿ ವ್ಯಕ್ತಿಗಳು ತಮ್ಮ ನೃತ್ಯ ವೀಡಿಯೊಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಅವಕಾಶವನ್ನು ಪಡೆದುಕೊಳ್ಳುತ್ತಾರೆ, ಇದು ಅಸಂಖ್ಯಾತ ವೀಕ್ಷಕರ (Viewers) ಕಲ್ಪನೆಯನ್ನು ಸೆರೆಹಿಡಿಯುವ ವೈರಲ್ ಸಂವೇದನೆಗಳ ಸೃಷ್ಟಿಗೆ ಕಾರಣವಾಗುತ್ತದೆ. ಹಾಗೆಯೇ ಸದ್ಯ ಗೃಹಿಣಿಯೊಬ್ಬಳು (Homemaker) ಅಡುಗೆಮನೆಯೊಳಗೆ (Dance) ಸೀರೆಯುಟ್ಟುಕೊಂಡು ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿರೋ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. 'ಕ್ಯಾ ಮುಜೆ ಪ್ಯಾರ್ ಹೈ'ಯ ಹಾಡಿಗೆ ಮಹಿಳೆ ಡ್ಯಾನ್ಸ್ ಮಾಡಿದ್ದಾಳೆ.
ಗಾಯತ್ರಿ ವರ್ಮಾ ಎಂಬವರು ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ, ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 76,000 ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವರು ಗೃಹಿಣಿಯ ಡ್ಯಾನ್ಸ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅಡುಗೆ ಕೋಣೆಯಲ್ಲಿ ಇಂಥಾ ಅಶ್ಲೀಲ ನೃತ್ಯ ಮಾಡಿದ್ದಾಗಿ ಮಹಿಳೆಯನ್ನು ಟೀಕಿಸಿದ್ದಾರೆ. ಒಬ್ಬ ಬಳಕೆದಾರ, 'ಮದುವೆಯಾದ ಮಹಿಳೆಯರು ಯಾಕೆ ಹೀಗೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.
ಸೀರೆಯುಟ್ಟು, ಹೀಲ್ಸ್ ಹಾಕಿದ್ರೂ..ಯುವತಿ ಏನ್ ಸಖತ್ತಾಗಿ ಡ್ಯಾನ್ಸ್ ಮಾಡಿದ್ಲು ನೋಡಿ!
ಗೃಹಿಣಿ ಮಾಡುವ ಕೆಲಸ ಇದಲ್ಲ ಎಂದ ನೆಟ್ಟಿಗರು
ಮತ್ತೊಬ್ಬರು, 'ಈಗಿನ ಗೃಹಿಣಿಯರು ಸ್ಪಲ್ಪ ಲೈಕ್ಸ್, ಕಾಮೆಂಟ್ ಎಂಥಾ ಅಶ್ಲೀಲತೆಯನ್ನೂ ಮಾಡಲು ಸಿದ್ಧರಾಗಿದ್ದಾರೆ' ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, 'ಡ್ಯಾನ್ಸ್ ಎಂದರೆ ಮೈಯೆಲ್ಲಾ ತೋರಿಸಬೇಕು ಎಂದು ಅರ್ಥವಲ್ಲ' ಎಂದು ಹೇಳಿದ್ದಾರೆ.ಅದೇನೇ ಇದ್ದರೂ, ವಿಭಿನ್ನ ಅಭಿಪ್ರಾಯಗಳ ನಡುವೆ, ವೀಡಿಯೊದಲ್ಲಿ ಪ್ರದರ್ಶಿಸಲಾದ ನೃತ್ಯದ ಸೌಂದರ್ಯವನ್ನು ಮನಃಪೂರ್ವಕವಾಗಿ ಇಷ್ಟಪಟ್ಟು ಸಂಭ್ರಮಿಸಿದವರೂ ಇದ್ದಾರೆ. ಒಬ್ಬ ಬಳಕೆದಾರನು, 'ವಾವ್, ಅಂತಹ ಅದ್ಭುತ ನೃತ್ಯ! ನಾನು ಅದನ್ನು ಇಷ್ಟಪಟ್ಟೆ' ಎಂದಿದ್ದಾರೆ. ಮತ್ತೆ ಕೆಲವರು, ಕಿಚನ್ ಇರೋದು ಅಡುಗೆ ಮಾಡೋಕೆ ಇಂಥಾ ಅಶ್ಲೀಲ ನೃತ್ಯ ಮಾಡುವುದ್ದಕ್ಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.