ಸ್ಯಾಮೊಟರಿ ಪ್ಯಾಡ್ ಅತ್ಯಗತ್ಯದ ವಸ್ತುವಾಗಿದ್ದರೂ ಅದರ ಬೆಲೆ ಮಾತ್ರ ದುಬಾರಿ. ಬಹಳಷ್ಟು ಹಳ್ಳಿಗಳಲ್ಲ, ಹಿಂದುಳಿದ ಪ್ರದೇಶದಗಳ ಮಹಿಳೆಯರಿಗೆ ಇಂದಿಗೂ ಸ್ಯಾನಿಟರಿ ಪ್ಯಾಡ್‌ಗಳು ಲಭ್ಯವಾಗುತ್ತಿಲ್ಲ. ಇದೀಗ ಪಿರಿಯಡ್ಸ್ ಸಮಯದ ಎಲ್ಲ ಉತ್ಪನ್ನಗಳನ್ನು ಉಚಿತವಾಗಿ ನೀಡುವ ಕಾನೂನು ಹೊರ ತಂದಿದೆ ಸ್ಕಾಟ್ಲೆಂಡ್.

ಸತತ ನಾಲ್ಕು ವರ್ಷಗಳ ಅಭಿಯಾನದ ನಂತರ ಸ್ಕಾಟ್ಲೆಂಡ್ ಜಗತ್ತಿನಲ್ಲಿಯೇ ಉಚಿತ ಸ್ಯಾನಿಟರಿ ಪ್ಯಾಡ್ ನೀಡುವ ಮೊದಲ ರಾಷ್ಟ್ರವಾಗಿ ಮೂಡಿ ಬಂದಿದೆ. ಇನ್ನು ಈ ರಾಷ್ಟ್ರದಲ್ಲಿ ಎಲ್ಲ ಮುಟ್ಟಿನ ಸಂದರ್ಭ ಬಳಸುವ ವಸ್ತುಗಳು ಉಚಿತವಾಗಿ ಲಭ್ಯವಾಗಲಿದೆ.

ಅಪಘಾತದಲ್ಲಿ ಅರ್ಧ ದೇಹವೇ ಹೋಯ್ತು, ಬದುಕುವ ಛಲ ಬಿಡಲಿಲ್ಲ, ಗರ್ಲ್‌ಫ್ರೆಂಡ್ ಕೈಬಿಡಲಿಲ್ಲ..!

ದಿ ಪರಿಯಡ್ಸ್ ಪ್ರಾಡಕ್ಟ್(ಫ್ರೀ ಪ್ರೊವಿಷನ್)(ಸ್ಕಾಟ್ಲೆಂಡ್)ಕಾಯ್ದೆ ಜಾರಿಯಾಗಿದೆ. ಇದೀಗ ಮುಟ್ಟಿನ ಸಂದರ್ಭ ಬೇಕಾಗುವ ಅಗತ್ಯ ವಸ್ತುಗಳು ಅಗತ್ಯವಿರುವವರಿಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಸ್ಥಳೀಯ ಆಡಳಿತಗಳು ನೋಡಿಕೊಳ್ಳಲಿವೆ. 2018ರಿಂದಲೂ ಉಚಿತ ಸ್ಯಾನಿಟರಿ ಪ್ಯಾಡ್ ನೀಡುತ್ತಾ ಬಂದ ನಾರ್ತ್ ಆಯರ್‌ಶೈರ್‌ನಂತ ಮಂಡಳಿಗಳಂತೆ ಕೆಲಸ ಮಾಡಲಿದೆ.

ಉಚಿತ ಸ್ಯಾನಿಟರಿ ಪ್ಯಾಡ್ ಒದಗಿಸುವ ಅಭಿಯಾನಕ್ಕೆ ಸ್ಕಾಟ್ಲೆಂಡ್‌ನಲ್ಲಿ ತಳಮಟ್ಟದಲ್ಲಿಯೂ ಬೆಂಬಲ ಸಿಕ್ಕಿತ್ತು. ಸ್ಕಾಟಿಶ್ ಕಾರ್ಮಿಕರ ಆರೋಗ್ಯ ವಕ್ತಾರೆ ಮೊನಿಕಾ ಲೆನನ್ ಇದು ಸ್ಕಾಟ್ಲೆಂಡ್‌ಗೆ ಹೆಮ್ಮೆಯ ದಿನ ಎಂದು ಸಂತಸಪಟ್ಟಿದ್ದಾರೆ.

ಕ್ಯಾಬಿನೆಟ್‌ ಸದಸ್ಯರ ಘೋಷಿಸಿದ ಅಮೆರಿಕ ಭಾವಿ ಅಧ್ಯಕ್ಷ ಬೈಡನ್‌: ಬ್ಲಿಂಕನ್ ವಿದೇಶಾಂಗ ಸಚಿವ!

ಇದು ಮುಟ್ಟಾಗುವ ಮಹಿಳೆಯರು, ಬಾಲಕಿಯರ ಬದುಕಿನಲ್ಲಿ ದೊಡ್ಡ ಬದಲಾವಣೆ ತರಲಿದೆ. ಈಗಾಗಲೇ ಸಮುದಾಯ ಹಂತದಲ್ಲಿ ಈ ಬಗ್ಗೆ ಹೆಚ್ಚಿನ ಅಭಿವೃದ್ಧಿ ಇದೆ. ಮುಟ್ಟಿನ ದಿನಗಳ ಘಟನೆಯನ್ನು ತಂದುಕೊಂಡಲು ಈ ಕಾಯ್ದೆ ನೆರವಾಗಲಿದೆ ಎಂದಿದ್ದಾರೆ.

ಸಾರ್ವಜನಿಕ ಬದುಕಿನಲ್ಲಿ ಮುಟ್ಟಿನ ಬಗ್ಗೆ ಚರ್ಚಿಸುವ ರೀತಿ ಬದಲಾಗಿದೆ. ಕೆಲವು ವರ್ಷದ ಹಿಂದೆ ಮುಟ್ಟಿನ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿರಲಿಲ್ಲ. ಇದೀಗ ಮುನ್ನೆಲೆಗೆ ಬಂದಿದೆ.

ಅನಿಯಮಿತ ಮುಟ್ಟಿನ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದಿವು

ಕೊರೋನಾ ವೈರಸ್‌ನಿಂದಾಗಿ ಜನ ಕಷ್ಟಪಡುತ್ತಿದ್ದಾಗ ಮಹಿಳೆಯರು ತಮ್ಮ ತಿಂಗಳ ಮುಟ್ಟಿನ ಸಂದರ್ಭ ಸ್ಯಾನಿಟರಿ ಪ್ಯಾಡ್ ಖರೀದಿಸಲು ಕಷ್ಟಪಡುತ್ತಿದ್ದರು. ಸ್ಯಾನಿಟರಿ ಪ್ಯಾಡ್‌ಗಳ ಅಲಭ್ಯತೆ ಸ್ವಚ್ಛತೆ, ಮಹಿಳೆಯ ಆರೋಗ್ಯ,ದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ಭಾರತದಲ್ಲಿ ಜನೌಷಧಿ ಕೇಂದ್ರಗಳ ಮೂಲಕ ಮಹಿಳೆಯರಿಗೆ ಕಡಿಮೆ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲಾಗುತ್ತಿದೆ. ಈ ಮೂಲಕ ಮುಟ್ಟಿನ ಅಗತ್ಯ ವಸ್ತುಗಳನ್ನು ಪಡೆಯಲು ಕಷ್ಟಪಡುವ ಜನರಿಗೂ ಇದು ಲಭ್ಯವಾಗುವಂತೆ ಮಾಡಲಾಗುತ್ತಿದೆ.