ಬೆಂಗಳೂರಿನಲ್ಲಿ ಯುವತಿಯೊಬ್ಬಳು ಹಬ್ಬದ ಬಸ್ ದರ ಏರಿಕೆಯನ್ನು ವಿರೋಧಿಸಿ ತನ್ನ ತಂದೆಯನ್ನೇ ಮೂಟೆಯಲ್ಲಿ ಕಟ್ಟಿ ಕೊರಿಯರ್ ಮಾಡಲು ಯತ್ನಿಸಿದ್ದಾಳೆ. ಕೊರಿಯರ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಇದೊಂದು 'ಪ್ರಾಂಕ್' ಎಂದು ಹೇಳಿದ ಕುಟುಂಬಸ್ಥರಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ವೈಯಾಲಿಕಾವಲ್​ ಪೊಲೀಸ್ ಠಾಣೆಗೆ ಯುವತಿಯೊಬ್ಬಳು ಅಪ್ಪನನ್ನೇ ಮೂಟೆಯಲ್ಲಿ ಹೊತ್ತು ತಂದು ಪಾರ್ಸೆಲ್​ ಮಾಡಲು ಬಂದಿರುವ ಭಯಾನಕ ಘಟನೆ ಇಂದು ನಡೆದಿದೆ. ಕೆಲವರ ಜೊತೆ ಸೇರಿ ಯುವತಿ, ಕೊರಿಯರ್ ಆಫಿಸ್​ಗೆ ಬಂದಿದ್ದಾರೆ. ಮಂಗಳೂರಿಗೆ ಕೊರಿಯರ್‌ ಮಾಡುವಂತೆ ಅಲ್ಲಿನ ಸಿಬ್ಬಂದಿಗೆ ಹೇಳಿದ್ದಾಳೆ. ಆ ಮೂಟೆ ಅಲ್ಲಾಡುತ್ತಿದ್ದುದು ನೋಡಿ ಸಿಬ್ಬಂದಿಗೆ ಡೌಟ್​ ಬಂದು ಏನು ಇದೆ ಎಂದಾಗ ಅವರು ಯಾರೂ ಮಾತನಾಡಲಿಲ್ಲ. ಕೊನೆಗೆ ಚೀಲವನ್ನು ಅದರೊಳಗೆ ವ್ಯಕ್ತಿಯೊಬ್ಬರು ಇರುವುದು ತಿಳಿದಿದೆ. ಅದನ್ನ ನೋಡಿ ಕೊರಿಯರ್‌ ಶಾಪ್‌ ಸಿಬ್ಬಂದಿ ಹೌಹಾರಿ ಹೋಗಿದ್ದು ಪೊಲೀಸ್​ ಠಾಣೆಗೆ ದೂರು ದಾಖಲು ಮಾಡಿದ್ದಾರೆ.

ಪ್ರಾಂಕ್​ ಅಂತೆ!

ಕೊನೆಗೆ ವಿಚಾರಿಸಿದಾಗ, ಯುವತಿ ಇದು ಪ್ರಾಂಕ್​ ಅಷ್ಟೇ. ಯುಗಾದಿ, ರಂಜಾನ್​ ಹಬ್ಬದ ನಿಮಿತ್ತ ಬಸ್​ ರೇಟ್​ ವಿಪರೀತ ಹೆಚ್ಚು ಮಾಡಿದ್ದಾರೆ. ಸೀಟೂ ಸಿಗುತ್ತಿಲ್ಲ. ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಹೀಗೆ ಪ್ರಾಂಕ್​ ಮಾಡಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೊಂಡಿದ್ದಾರೆ. ನನಗೆ ಈ ರೀತಿ ಮಾಡುವುದು ಅಪರಾಧ ಎನ್ನುವುದು ತಿಳಿಯಲಿಲ್ಲ. ಪ್ರಾಂಕ್​ಗಾಗಿ ಮಾಡಿರುವುದು ಎಂದಿದ್ದಾಳೆ ಯುವತಿ. ಸದ್ಯ ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಉಸಿರುಗಟ್ಟುವ ಸ್ಥಿತಿ

ಆ ಯುವತಿಯ ಅಪ್ಪ ಕೂಡ ಇದಕ್ಕೆ ಪ್ರೋತ್ಸಾಹ ಕೊಟ್ಟರಾ ಎನ್ನುವ ಸಂದೇಹವೂ ಕಾಡುತ್ತಿದೆ. ಏಕೆಂದರೆ ಆ ಮೂಟೆ ಕಟ್ಟಲಾಗಿತ್ತು. ಚೀಲದಿಂದ ಹೊರಕ್ಕೆ ಬರಲು ವಯಸ್ಸಾದ ಅವರು ಸಿಕ್ಕಾಪಟ್ಟೆ ತೊಂದರೆ ಪಡುತ್ತಿದ್ದರು. ಅವರಿಗೆ ಉಸಿರಾಟದ ಸಮಸ್ಯೆ ಆಗಿತ್ತು ಎನ್ನುವುದು ತಿಳಿಯುತ್ತದೆ. ಅವರ ಸ್ಥಿತಿ ನೋಡಲು ಆಗದೇ ಕೋರಿಯರ್​ ಸಿಬ್ಬಂದಿ ಕುಡಿಯಲು ನೀರು ಕೊಟ್ಟಿದ್ದಾರೆ. ಈ ನಡುವೆ ಗಲಾಟೆ ಕೂಡ ನಡೆದಿದೆ ಎನ್ನಲಾಗಿದೆ. ಇಷ್ಟೆಲ್ಲಾ ಆದ ಮೇಲೆ ಆ ಯುವತಿ ಈ ಚೀಲವನ್ನ ಪಾರ್ಸೆಲ್‌ ಮಾಡಿ, ನಾವು ಹಣ ಕೊಡುತ್ತೇವೆ ಎಂದಿದ್ದಾಳೆ ಎನ್ನಲಾಗಿದೆ. ಕೊನೆಗೆ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದಾಗ ಅವರೆಲ್ಲಾ ಹೆದರಿ ಕೊಂಡಿದ್ದು, ಇದು ಪ್ರಾಂಕ್​ ಎಂದಿದ್ದಾರೆ.

ಗಂಡನೂ ಸಾಥ್​!

ಅಲ್ಲಿಂದ ಹೋದ ಮೇಲೆ ಪೊಲೀಸರು ಬಿಡದೇ ಅವರನ್ನು ಕರೆಸಿದ್ದಾರೆ. ಎಲ್ಲರನ್ನೂ ವಿಚಾರಣೆ ಮಾಡಿದಾಗ, ಒಂದು ಸಂದೇಶ ಕೊಡಲು ಹೀಗೆ ಪ್ರಾಂಕ್​ ಮಾಡಿರುವುದಾಗಿ ಏಳಿದ್ದಾರೆ. ಪೊಲೀಸರು ಕುಟುಂಬಸ್ಥರ ಬಳಿ ಕ್ಷಮಾಪಣೆ ಬರೆಸಿಕೊಂಡಿದ್ದಾರೆ. ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ. ಯುವತಿ, ಆಕೆಯ ಗಂಡ, ಅವಳ ಅತ್ತೆ ಮತ್ತು ಭಾವ ಸೇರಿ ಈ ಪ್ಲ್ಯಾನ್‌ ಮಾಡಿದ್ದರು ಎನ್ನುವುದು ಗೊತ್ತಾಗಿದೆ.