ಅಪಘಾತದಲ್ಲಿ ಅರ್ಧ ದೇಹವೇ ಹೋಯ್ತು, ಬದುಕುವ ಛಲ ಬಿಡಲಿಲ್ಲ, ಗರ್ಲ್‌ಫ್ರೆಂಡ್ ಕೈಬಿಡಲಿಲ್ಲ..!
ಹಿಂದಿನ ದಿನದ ತನಕ ಎಲ್ಲರಂತೆ ಓಡಾಡಿಕೊಂಡಿದ್ದ ವ್ಯಕ್ತಿ ಮರುದಿನವೇ ಕಾಲು, ಕೈಗಳನ್ನು ಕಳೆದುಕೊಂಡು ಬದುಕುವುದೆಷ್ಟು ಕಷ್ಟ ಅಲ್ವಾ..? ಇದಕ್ಕೆ ದೇಹದ ಆರೋಗ್ಯಕ್ಕಿಂತ ಮನಸಿನ ಧೈರ್ಯ ಬೇಕು. 19ರ ವಯಸ್ಸಿನಲ್ಲೇ ಇಂತಹದೊಂದು ಧೈರ್ಯ ಮಾಡಿ, ಸಾವಿನ ವಿರುದ್ಧ ಬದುಕನ್ನು ಆರಿಸಿದ್ದಾನೆ ಈ ಯುವಕ
ಹದಿಹರೆಯದ ಸಂಬಂಧಗಳು ಎಷ್ಟು ಟೆಂಪರರಿ ಎಂಬುದು ಎಲ್ಲರಿಗೂ ಗೊತ್ತು. ಕೆಲವೊಂದು ಜೋಡಿಯ ಪ್ರೀತಿ ಮಾತ್ರ ಗಟ್ಟಿಯಾಗಿರುತ್ತದೆ. ಬದುಕೋದೇ ಬೇಡ ಎನ್ನುವಷ್ಟು ಕುಗ್ಗಿದರೂ ಮತ್ತೆ ಎದ್ದು ಬಂದ ಯುವಕನೀತ. ಈತನಿಗೆ ಸಾಥ್ ಕೊಟ್ಟಿದ್ದು ಈತನ ಗರ್ಲ್‌ಫ್ರೆಂಡ್
ಲಾರೆನ್ ಚರೆಸ್ ಎಂಬ 19ರ ಯುವಕ ಗರ್ಲ್‌ಫ್ರೆಂಡ್, ಯೂತ್, ಫ್ರೆಂಡ್ಸ್ ಎಂದು ಜಾಲಿಯಾಗಿ ಯವ್ವನ ಆಸ್ವಾದಿಸುತ್ತಿದ್ದ ಯುವಕ.
ಆದರೆ ಹಠಾತ್ತನೆ ನಡೆದ ಅಪಘಾತ ಆತನ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ ತಂದಿತ್ತು.
ಅಪಘಾತದಲ್ಲಿ ಯುವಕನಿಗೆ ಗಂಭೀರ ಗಾಯವಾಗಿತ್ತು. ಮೇಲಿನ ಭಾಗಕ್ಕೆ ಯಾವುದೇ ಗಾಯಗಳಾಗಿರಲಿಲ್ಲ. ಆದರೆ ಬದುಕಲು ದೇಹದ ಕೆಳ ಭಾಗಕ್ಕೆ ಕತ್ತರಿ ಬಿತ್ತು.
ನನ್ನ ಕಾಲುಗಳಿಲ್ಲದಿದ್ರೂ ಓಕೆ, ನಾನು ಬದುಕುತ್ತೇನೆ ಎಂಬುದಾಗಿತ್ತು ಈ ಯುವಕನ ಆಯ್ಕೆ
ಜೀವ ಉಳಿಸಿಕೊಳ್ಳಲು ನಿರ್ಧಾರ ತೆಗೆದುಕೊಂಡ ಯುವಕ ಕೆಳಗಿನ ಭಾಗವಿಲ್ಲದೇ ಬದುಕಿನ ದಾರಿ ಕಂಡು ಕೊಳ್ಳಲು ಮುಂದಾದ. ಆತನ ಪ್ರೇಯಸಿ ಸಬಿಯಾ(21) ತನ್ನ ಗೆಳೆಯ ಬದುಕೋದೆ ಇಲ್ಲ ಎಂದುಕೊಂಡಿದ್ದಳು
ಅಪಘಾತವಾಗುವಾಗ 18 ತಿಂಗಳಿಂದಲೂ ಜೊತೆಗಿದ್ದ ಅವರು ಈ ವರ್ಷ ಆರಂಭದಲ್ಲಿ ಎಂಗೇಜ್ಮೆಂಟ್ ಕೂಡಾ ಮಾಡಿಕೊಂಡರು.
ಒಂದು ಕೈ ಇಲ್ಲ. ಸೊಂಟದ ಕೆಳಭಾಗ ಪೂರ್ತಿ ಇಲ್ಲ. ಆದರೂ 19 ವರ್ಷದ ಲಾರೆನ್ ಶೌರೇಸ್ ಎಂಬ ಯುವಕ ಆರೋಗ್ಯವಾಗಿದ್ದಾನೆ.
ನನ್ನ ಮುಂದೆ ದೇಹ ಕತ್ತರಿಸುವ ಅಥವಾ ಉಳಿಸುವ ಆಯ್ಕೆ ಇರಲಿಲ್ಲ, ಸಾಯುವ ಅಥವಾ ಬದುಕುವ ಆಯ್ಕೆ ಇತ್ತು, ನಾನು ಬದುಕನ್ನು ಆರಿಸಿಕೊಂಡೆ ಎನ್ನುತ್ತಾನೆ ಈತ.
ಹಲವಾರು ಆಪರೇಷನ್ಸ್, ಚಿಕಿತ್ಸೆ ಬಳಿಕ ಇದೀಗ ಈ ಯುವಕ ಆಸ್ಪತ್ರೆಯಿಂದ ಹೊರ ಬಂದಿದ್ದಾನೆ. ನೈತಿಕ ಬೆಂಬಲ ನೀಡಲು ಗರ್ಲ್ ಫ್ರೆಂಡ್ ಜೊತೆಗಿದ್ದಾಳೆ. ಸದ್ಯಕ್ಕೆ ಏನೂ ಕೆಲಸವಿಲ್ಲ. ವೀಡಿಯೋ ಲೈವ್ ಸ್ಟ್ರೀಮಿಂಗ್ ಕೆಲಸ ಮಾಡುವ ಕನಸಿದೆ. ಅವನಿಗೆ ಒಳ್ಳೇದು ಆಗಲಿ ಎಂಬುವುದೇ ನಮ್ಮೆಲ್ಲರ ಹಾರೈಕೆ.