Asianet Suvarna News Asianet Suvarna News

ಕ್ಯಾಬಿನೆಟ್‌ ಸದಸ್ಯರ ಘೋಷಿಸಿದ ಅಮೆರಿಕ ಭಾವಿ ಅಧ್ಯಕ್ಷ ಬೈಡನ್‌: ಬ್ಲಿಂಕನ್ ವಿದೇಶಾಂಗ ಸಚಿವ!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿನ ಹೊರತಾಗಿಯೂ ಅಧಿಕಾರ ಹಸ್ತಾಂತರಕ್ಕೆ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಿಂದೇಟು| ಇತ್ತ ಕ್ಯಾಬಿನೆಟ್‌ ಸೇರ್ಪಡೆಯಾಗಲಿರುವ ಪ್ರಮುಖರ ಹೆಸರುಗಳನ್ನು ಘೋಷಿಸಿದ ಬೈಡೆನ್

Joe Biden to unveil first Cabinet picks on Tuesday envisions scaled down inauguration pod
Author
Bangalore, First Published Nov 24, 2020, 8:10 AM IST

ವಾಷಿಂಗ್ಟನ್‌(ನ.24): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿನ ಹೊರತಾಗಿಯೂ ಅಧಿಕಾರ ಹಸ್ತಾಂತರಕ್ಕೆ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಿಂದೇಟು ಹಾಕುತ್ತಿರುವ ಬೆನ್ನಲ್ಲೇ, ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮ ಕ್ಯಾಬಿನೆಟ್‌ ಸೇರ್ಪಡೆಯಾಗಲಿರುವ ಪ್ರಮುಖರ ಹೆಸರುಗಳನ್ನು ಘೋಷಣೆ ಮಾಡಿದ್ದಾರೆ.

ಅಧ್ಯಕ್ಷರಾದ ಮೇಲೆ ಚೀನಾ ಮೇಲೆ ಬೈಡೆನ್‌ ಯುದ್ಧ ಘೋಷಣೆ ಸಂಭವ!

ಅದರಲ್ಲಿ ವಿದೇಶಾಂಗ ನೀತಿಗಳ ಸಲಹೆಗಾರರಾಗಿ ದೀರ್ಘಕಾಲೀನವಾಗಿ ಸೇವೆ ಸಲ್ಲಿಸಿದ ಅನುಭವಿ ಆ್ಯಂಟೋನಿ ಬ್ಲಿಂಕನ್‌ ಅವರಿಗೆ ವಿದೇಶಾಂಗ ಖಾತೆ, ಅಮೆರಿಕದ ಮಾಜಿ ರಾಯಭಾರಿ ಜಾನ್‌ ಕೆರ್ರಿ ಅವರಿಗೆ ತಮ್ಮ ವಿಶೇಷ ಹವಾಮಾನ ರಾಯಭಾರಿ ಸ್ಥಾನ, ಕ್ಯೂಬಾ ಮೂಲದ ವಕೀಲ ಅಲೆಜಾಂಡ್ರೋ ಮಯೊರ್ಕಾಸ್‌ ಹೋಮ್‌ಲ್ಯಾಂಡ್‌ ಭದ್ರತೆ ಇಲಾಖೆಯ ಮುಖ್ಯಸ್ಥರಾಗಿ, ಸಿಐಎನ ಮಾಜಿ ಉಪ ನಿರ್ದೇಶಕಿ ಆ್ಯವ್ರಿಲ್‌ ಹೇನ್ಸ್‌ ಅವರು ರಾಷ್ಟ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ತನ್ಮೂಲಕ ಅಮೆರಿಕದ ಮಹಿಳೆಯೊಬ್ಬರು ಈ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಆ್ಯವ್ರಿಲ್‌ ಭಾಜನರಾದರು.

ಕೊರೋನಾ G20 ಸಮ್ಮಿಟ್‌ಗೆ ಚಕ್ಕರ್ ಹಾಕಿ ಗಾಲ್ಫ್‌ ಆಡಿದ ಟ್ರಂಪ್!

ಇನ್ನು ಸುದೀರ್ಘ ಅವಧಿಗೆ ರಾಯಾಭಾರಿ ಆಗಿದ್ದ ಲಿಂಡಾ ಥಾಮಸ್‌-ಗ್ರೀನ್‌ಫೀಲ್ಡ್‌ ಅವರನ್ನು ವಿಶ್ವಸಂಸ್ಥೆಗೆ ತಮ್ಮ ರಾಯಭಾರಿಯಾಗಿ ತಮ್ಮ ಕ್ಯಾಬಿನೆಟ್‌ ಸೇರಿಕೊಳ್ಳಲಿದ್ದಾರೆ ಎಂದು ಬೈಡನ್‌ ಘೋಷಿಸಿದರು.

Follow Us:
Download App:
  • android
  • ios