ನೀವು ಒಬ್ರೇ ಅಲ್ಲ ಸೆಲೆಬ್ರಿಟಿಗಳೂ ಬಾಕ್ಸ್ ವಾಪಸ್ ಕೇಳ್ತಾರೆ!

ಕಾಮಿಡಿಯನ್ ಕಪಿಲ್ ಶರ್ಮಾ ಶೋನಲ್ಲಿ ಸೆಲೆಬ್ರಿಟಿಗಳ ಅನೇಕ ಸಿಕ್ರೆಟ್ ಹೊರಗೆ ಬರುತ್ತೆ. ರಾಣಿ ಮುಖರ್ಜಿ, ಸೈಫ್ ಅಲಿ ಖಾನ್ ಕೂಡ ಕೆಲ ಸಂಗತಿಯನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ. ಅದ್ರಲ್ಲಿ ಗಮನ ಸೆಳೆದಿದ್ದು ಬಾಕ್ಸ್ ಲವ್. 
 

Rani Mukherjee Also Has Box Love In Her House. Housewives Ask Relatives To Return The Box roo

ಹಾರ್ಲೆಕ್ಸ್ ಡಬ್ಬಾ ಇರಲಿ, ಬೋಸ್ಟ್ ಡಬ್ಬಾ ಇರಲಿ, ಕೆಲವರು ಹೋಮಿಯೋಪತಿ ಮಾತ್ರೆ ಹಾಕೋ ಸಣ್ಣ ಡಬ್ಬದಿಂದ ಹಿಡಿದು ಐಸ್ ಕ್ರೀಂನ ಬಾಕ್ಸ್ ವರೆಗೆ ಎಲ್ಲವನ್ನೂ ಎತ್ತಿಟ್ಟು ಕೊಂಡಿರ್ತಾರೆ. ಮಹಿಳೆಯರಿಗೆ ಸೀರೆ ಮೇಲಿರುವಷ್ಟೇ ಪ್ರೀತಿ ಬಾಕ್ಸ್ ಮೇಲಿರುತ್ತೆ. ಡಬ್ಬದ ಮುಚ್ಚಳ ಸರಿಯಾಗಿ ಕೂರ್ತಿದೆ ಅಂದ್ರೆ ಮನೆಯಲ್ಲೊಂದು ಜಾಗ ಈ ಡಬ್ಬಕ್ಕೆ ಮೀಸಲು ಎಂದೇ ಅರ್ಥ. ಎಷ್ಟು ಚೆಂದ ಇದೆ ಈ ಡಬ್ಬ, ಏನಾದ್ರೂ ಹಾಕಿಟ್ಟುಕೊಳ್ಳಬಹುದು, ಎಸಿಬೇಡಿ ಅಂತಾ ಐಸ್ ಕ್ರೀಂ ಶಾಪ್ ನಿಂದ ಮನೆಗೆ ತರೋರಿದ್ದಾರೆ.

ಒಂದಿಷ್ಟು ಬಾಕ್ಸ್ (Box) ಒಟ್ಟುಹಾಕಿ ಕೊಳ್ಳುವ ಮಹಿಳೆಯರು ಪಟ್ಟಣಕ್ಕೆ ಮಕ್ಕಳು ಹೊರಟಾಗ ಅದ್ರಲ್ಲಿ ಕಾಳು, ಬೇಳೆ, ಉಪ್ಪಿನಕಾಯಿ ಅಂತಾ ತುಂಬಿ ಕಳಸ್ತಾರೆ. ವಾಪಸ್ ಬರುವಾಗ ಮರೀದೆ ಇದನ್ನು ತೆಗೆದುಕೊಂಡು ಬಾ ಅಂತಾ ಮೊದಲೇ ಹೇಳೋದಲ್ಲದೆ ಅವರ ಮನೆ (House) ಗೆ ಹೋದಾಗ ಇದು ನನ್ನ ಡಬ್ಬಿ ಅಂತಾ ಬ್ಯಾಗ್ ಗೆ ಹಾಕಿಕೊಳ್ತಾರೆ. ಬರೀ ಇಷ್ಟೇ ಅಲ್ಲ, ಮನೆಗೆ ಬಂದ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ತಿಂಡಿ, ಕೇಕ್ ಅಂತಾ ಹಾಕಿದ ಡಬ್ಬ ಕೊಡೊವಾಗ್ಲೂ ಒಂದು ವಾರ್ನಿಂಗ್ (Warning) ಹೋಗಿರುತ್ತೆ. ನಾಳೆ ಡಬ್ಬ ವಾಪಸ್ ಕೊಟ್ರೆ ಸಾಕು, ಅರ್ಜೆಂಟ್ ಇಲ್ಲ ಅಂತ. ಅಪರೂಪಕ್ಕೆ, ಸಾವಿರದಲ್ಲಿ ಒಂದೋ ಎರಡೋ ಬಾರಿ, ಡಬ್ಬ ಹಳೆದಾಗಿದ್ರೆ ಇಲ್ಲ ಡಬ್ಬ ಸರಿಯಿಲ್ಲ ಎಂದಾಗಿದ್ರೆ ಮಾತ್ರ ಡಬ್ಬ ವಾಪಸ್ ಕೊಡಬೇಡಿ ನೀವೇ ಇಟ್ಟುಕೊಳ್ಳಿ ಅಂತಾರೆ. ಇದು ಅವರ ಉದಾರತೆ ಅಂದ್ರೆ ತಪ್ಪಾಗೋದಿಲ್ಲ.

ಪಡ್ಡೆಗಳ ಹೃದಯ ಗೆದ್ದ ನೋರಾ ಫತೇಹಿ ಫಿಟ್ನೆಸ್ ಸೀಕ್ರೆಟ್ ಏನು?

ಮಹಿಳೆಯರ ಡಬ್ಬದ ಪ್ರೀತಿಯನ್ನು ಹೆಮ್ಮೆಯಿಂದ ಹೇಳಿಕೊಳ್ತಾರೆ. ಇವತ್ತು ಕೊಟ್ಟ ಡಬ್ಬ ವಾಪಸ್ ಬಂದಿಲ್ಲ ಅಂದರೆ ನಾಳೆ ಯಾವ ಡಬ್ಬದಲ್ಲಿ ಹಾಕಿಕೊಡೋದು? ಅದಕ್ಕೆ ವಾಪಸ್ ಕೊಡಿ ಎನ್ನುತ್ತೇವೆ ಎಂಬುದು ಮಹಿಳೆಯರ ವಾದ. ಮಧ್ಯಮ ವರ್ಗದ ಜನರು ಹೀಗೆ ಮಾಡ್ತಾರೆ ಅನ್ನೋದು ನಮಗೆಲ್ಲ ಗೊತ್ತು. ಸ್ಟಾರ್ಸ್ ಮನೆಯಲ್ಲೂ ಇದು ಆಗುತ್ತೆ ಅಂದ್ರೆ ನೀವು ನಂಬುತ್ತೀರಾ? 

ನಂಬ್ಲೇಬೇಕು. ಯಾಕೆಂದ್ರೆ ಬಾಲಿವುಡ್ ಸ್ಟಾರ್ ರಾಣಿ ಮುಖರ್ಜಿ ಹಾಗೂ ಅರ್ಚನಾ ಇದನ್ನು ಒಪ್ಪಿಕೊಂಡಿದ್ದಾರೆ. ಕಪಿಲ್ ಶರ್ಮಾ ಶೋಗೆ ಬಂದಿದ್ದ ರಾಣಿ ಮುಖರ್ಜಿ ಡಬ್ಬದ ವಿಷ್ಯ ಮಾತನಾಡಿದ್ದಾರೆ. ಮನೆಗೆ ಬಂದ ಗೆಸ್ಟ್ ಗೆ ನಾವು ಮಾಡಿದ ತಿಂಡಿ ಇಷ್ಟವಾದ್ರೆ ಅದನ್ನು ಡಬ್ಬದಲ್ಲಿ ಹಾಕಿ ಕಳಸ್ತೇವೆ. ಮರುದಿನ ಫೋನ್ ಮಾಡಿ ತಿಂಡಿ ಹೇಗಿತ್ತು ಅಂತಾ ಕೇಳೋ ಬದಲು ಡಬ್ಬ ವಾಪಸ್ ಕಳಸಿ ಅಂತಾ ಕೇಳ್ತೇವೆ ಎಂದು ರಾಣಿ ಮುಖರ್ಜಿ ಹೇಳಿದ್ದಾರೆ. ಇದಕ್ಕೆ ಅರ್ಚನಾ ಕೂಡ ದನಿಗೂಡಿಸಿದ್ದಾರೆ. ಹೌಸ್ ವೈಫ್ ಗೆ ಡಬ್ಬದ ಮೇಲೆ ವಿಶೇಷ ಪ್ರೀತಿ ಇರುತ್ತೆ. ಏನೇ ತಿಂಡಿ ತೆಗೆದುಕೊಂಡು ಹೋಗಿ, ಆದ್ರೆ ಡಬ್ಬ ವಾಪಸ್ ಕೊಡಿ ಎನ್ನುತ್ತಾರೆ ರಾಣಿ ಮುಖರ್ಜಿ.

ನಿಮ್ಮ ಬುದ್ಧಿಶಕ್ತಿ ಬಳಸಿ ಈ ನಾರಿಗೆ ಮನೆ ಕೀ ಹುಡುಕಲು ಸಹಕರಿಸಿ!

ಇನ್ನು ಅರ್ಚನಾ ಮನೆಯಲ್ಲೂ ಇದೇ ಆಗೋದಂತೆ. ಅತ್ತೆ ಆಹಾರ ಕಳುಹಿಸಿದ ಮೇಲೆ 50 ಬಾರಿ ಫೋನ್ ಮಾಡೋದು ಏಕೆ ಅಂತಾ ಅರ್ಚನಾ ಅವರ ಅತ್ತೆಗೆ ಕೇಳಿದ್ದರಂತೆ. ನಾನು ಮತ್ತೊಮ್ಮೆ ಆಹಾರ ಕಳುಹಿಸಬೇಕೆಂದ್ರೆ ನನ್ನ ಬಳಿ ಡಬ್ಬ ಇರ್ಬೇಕಲ್ವಾ ಅಂತಾ ಅತ್ತೆ ಮರುಪ್ರಶ್ನೆ ಹಾಕಿದ್ದರಂತೆ. ತಕ್ಷಣ ಅರ್ಚನಾ, ತಮ್ಮ ಬಳಿ ಇರೋ ಎಕ್ಸ್ಟ್ರಾ ಡಬ್ಬವನ್ನೂ ಅವರಿಗೆ ಕಳುಹಿಸಿದ್ದರಂತೆ. ಕಪಿಲ್ ಶೋನಲ್ಲಿ ರಾಣಿ ಜೊತೆ ಸೈಫ್ ಅಲಿ ಖಾನ್ ಕೂಡ ಕಾಣಿಸಿಕೊಂಡಿದ್ರು. ಈ ವೇಳೆ ಡ್ರ್ಯಾಗನ್ ಫ್ರೂಟ್ಸ್ ಸೇರಿದಂತೆ ಕೆಲ ಹಣ್ಣುಗಳ ಬೆಲೆ ಹಾಗೂ ಅದ್ರ ಹಿಂದಿ ಹೆಸರನ್ನು ಹೇಳಲಾಯ್ತು.  

Latest Videos
Follow Us:
Download App:
  • android
  • ios