ಒಂದು ಚಿತ್ರದಲ್ಲಿರುವ ಸಮಸ್ಯೆ ಅಥವಾ ಅಗತ್ಯ ವಸ್ತು ಎಲ್ಲಿದೆ ಅಂತಾ ಹುಡುಕೋದು ಬುದ್ಧಿವಂತಿಕೆ. ಎಲ್ಲರಿಗೂ ಇದನ್ನು ಹುಡುಕೋಕೆ ಸಾಧ್ಯವಾಗೋದಿಲ್ಲ. ಕೆಲವರು ಥಟ್ ಅಂತ ಉತ್ತರ ಹೇಳಿದ್ರೆ ಮತ್ತೆ ಕೆಲವರು ತಡಬಡಿಸ್ತಾರೆ.
ಆಪ್ಟಿಕಲ್ ಇಲ್ಯೂಜನ್ ಒಂದು ರೀತಿಯ ಕಣ್ಣಿನ ಭ್ರಮೆ ಆಗಿದೆ. ಮನರಂಜನೆ ನೀಡುವ ಹಾಗೂ ಮೋಜಿನ ಆಟ ಇದಾಗಿದ್ದು, ಇದು ನಮ್ಮ ಬುದ್ದಿವಂತಿಕೆಯನ್ನು ಸುಧಾರಿಸುವ ಕೆಲಸ ಮಾಡುತ್ತದೆ. ನೀವು ಆಗಾಗ ಇಂಥ ಆಟವನ್ನು ಆಡ್ತಿದ್ದರೆ ನಿಮ್ಮ ಐಕ್ಯೂ ಮಟ್ಟ ಸುಧಾರಿಸುತ್ತದೆ. ಚಿಕ್ಕವರು, ದೊಡ್ಡವರೆನ್ನದೆ ಎಲ್ಲರೂ ಈ ಆಟವನ್ನು ಸುಲಭವಾಗಿ ಆಡಬಹುದು. ಇದನ್ನು ಒಳ್ಳೆ ಟೈಂ ಪಾಸ್ ಅಂದ್ರೆ ತಪ್ಪಾಗೋದಿಲ್ಲ. ನಾವಿಂದು ಆಪ್ಟಿಕಲ್ ಇಲ್ಯೂಜನ್ ನ ಒಂದು ಚಿತ್ರವನ್ನು ನಿಮಗೆ ನೀಡ್ತೇವೆ. ನೀವು ಅದ್ರಲ್ಲಿರುವ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿ. ಈ ಮೂಲಕ ಮನೆ ಕೀ ಕಳೆದುಕೊಂಡ ಮಹಿಳೆಗೆ ಕೀ ಹುಡುಗಿಕೊಡುವ ಪ್ರಯತ್ನ ನಡೆಸಿ.
ಇಲ್ಲಿ ನೀಡಲಾಗಿರುವ ಚಿತ್ರ (Picture) ದಲ್ಲಿ ಏನಿದೆ ಗೊತ್ತಾ? : ಮೊದಲು ನೀವು ಮೇಲೆ ನೀಡಲಾಗಿರುವ ಚಿತ್ರವನ್ನು ಗಮನಿಸಿ. ಈ ವರ್ಣರಂಜಿತ ಚಿತ್ರದಲ್ಲಿ, ನೀವು ಸಮಸ್ಯೆಯಲ್ಲಿರುವ ಮಹಿಳೆಯನ್ನು ನೋಡಬಹುದು. ಅವಳ ಕೈಯಲ್ಲಿ ನೇರಳೆ ಬಣ್ಣದ ಕೈಚೀಲವಿದೆ. ಅದರಲ್ಲಿ ಅವಳು ಏನನ್ನೋ ಹುಡುಕುತ್ತಿದ್ದಾಳೆ. ಅಸಲಿಗೆ ಆಕೆ ಮನೆಯ ಮುಖ್ಯ ಬಾಗಿಲಿನ ಕೀ (key) ಯನ್ನು ಎಲ್ಲೋ ಇಟ್ಟುಕೊಂಡು ಈಗ ಒಳಗೆ ಹೋಗಲು ಬೇರೆ ದಾರಿಯಿಲ್ಲ ಕೀ ಹುಡುಕುತ್ತಿದ್ದಾಳೆ. ಇದು ಆಕೆಗೆ ಮಾತ್ರವಲ್ಲ ಅನೇಕ ಬಾರಿ ನಮಗೂ ಆಗೋದಿದೆ. ಕೆಲವರು ಕೈನಲ್ಲೇ ಮೊಬೈಲ್ (Mobile) ಹಿಡಿದುಕೊಂಡು ಇಡೀ ಮನೆ ಹುಡುಕ್ತಾರೆ. ಮತ್ತೆ ಕೆಲವರು ಕೀ ಬ್ಯಾಗ್ ನಲ್ಲಿಟ್ಟು, ಮತ್ತೆಲ್ಲ ಕಡೆ ಕೀ ಹುಡುಗಿ ಕುಳಿತುಕೊಳ್ತಾರೆ. ಈಕೆ ಸ್ಥಿತಿ ಕೂಡ ಹೀಗೆ ಆಗಿದೆ. ಮನೆ ಕೀ ಇಟ್ಟಿದ್ದು ಎಲ್ಲಿ ಎಂಬುದು ಆಕೆಗೆ ಗೊತ್ತಾಗ್ತಾನೇ ಇಲ್ಲ. ಆ ಮಹಿಳೆಗೆ ನೀವು ಕೀ ಹುಡುಕಿಕೊಟ್ರೆ ಆಕೆ ಮನೆಯ ಒಳಗೆ ಹೋಗಲು ಸಹಾಯವಾಗುತ್ತದೆ. ನೀವು ಬ್ಯಾಗ್ ನಲ್ಲಿ ಕೈ ಹಾಕಿ ಕೀ ಹುಡುಕಲು ಸಾಧ್ಯವಿಲ್ಲ. ಆದ್ರೆ ಮನೆ ಸುತ್ತಮುತ್ತ ಹೂ ಗಿಡ, ಬಾಗಿಲು ಸೇರಿದಂತೆ ಅನೇಕ ವಸ್ತುಗಳಿವೆ. ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡುವ ಮೂಲಕ ನೀವು ಕೀ ಎಲ್ಲಿದೆ ಎಂಬುದನ್ನು ಪತ್ತೆ ಮಾಡ್ಬಹುದು.
ಉಡುಗೊರೆಯಾಗಿ ಸಿಕ್ಕ ವಸ್ತುವಿಗೂ ಚೆಕ್ ಮೂಲಕ ಹಣ ಕಳುಹಿಸಿ ಕೊಟ್ಟಿದ್ದರು ಕಲಾಂ!
ನೀವು ದೊಡ್ಡ ಕಣ್ಣು ಬಿಟ್ಟುಕೊಂಡು ಕೀ ಹುಡುಕಬೇಕಾಗುತ್ತದೆ. ಕೇವಲ ಮೂರು ಸೆಕೆಂಡುಗಳಲ್ಲಿ ಕೀ ಹುಡುಕುವವರಿದ್ದಾರೆ. ಮತ್ತೆ ಕೆಲವರು ಎಷ್ಟೇ ಪ್ರಯತ್ನಿಸಿದ್ರೂ ಕೀ ಕಾಣಿಸೋದಿಲ್ಲ. ನೀವು ಇದ್ರಲ್ಲಿ ಯಾರು ಎಂಬುದನ್ನು ಈಗ್ಲೇ ಹೇಳಿ. ಯಾಕೆಂದ್ರೆ ಮುಂದೆ ನಾವು ಕೀ ಎಲ್ಲಿದೆ ಎನ್ನುವುದನ್ನು ಹೇಳ್ತೇವೆ.
ಕೀ ಎಲ್ಲಿದೆ ಗೊತ್ತಾ? : ಈವರೆಗೂ ಕೀ ಕಾಣಿಸ್ತಿಲ್ಲ ಎನ್ನುವವರು ಟೆನ್ಷನ್ ತೆಗೆದುಕೊಳ್ಳೋದು ಬೇಡ. ನಿಮಗೆ ನಾವು ಸಹಾಯ ಮಾಡುತ್ತೇವೆ. ಮೊದಲನೆಯದಾಗಿ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ. ಮನೆಯ ಬಾಗಿಲ ಮೇಲೆ ನೀಲಿ ದೀಪ ನಿಮಗೆ ಕಾಣಿಸ್ತಿದ್ಯಾ?. ಮೊದಲ ನೀಲಿ ದೀಪವನ್ನ, ಎರಡನೇ ನೀಲಿ ದೀಪದಲ್ಲಿ ನಿಮಗೆ ಕೀ ಕಾಣಿಸುತ್ತೆ. ಒಂದ್ವೇಳೆ ಇನ್ನೂ ಕಾಣಿಸಿಲ್ಲವೆಂದ್ರೆ ಮತ್ತೊಮ್ಮೆ ಫೋಟೋವನ್ನು ಝೂಮ್ ಮಾಡಿ ನೋಡಿ.
ಆಧ್ಯಾತ್ಮವ ಅರಸಿ ಕೈ ತುಂಬಾ ಸಂಬಳ ನೀಡೋ ಐಟಿ ಜಾಬ್ ಬಿಟ್ಟು ಅರ್ಚಕ ವೃತ್ತಿಗಿಳಿದ ಟೆಕ್ಕಿ
ಆಪ್ಟಿಕಲ್ ಇಲ್ಯೂಷನ್ಸ್ (Optical Illusion) : ಆಪ್ಟಿಕಲ್ ಇಲ್ಯೂಷನ್, ಚಿತ್ರಗಳಲ್ಲಿ ಗುಪ್ತ ವಸ್ತುಗಳನ್ನು ಹುಡುಕಲು ನಿಮಗೆ ಸವಾಲು ಹಾಕುತ್ತದೆ. ಗುಪ್ತ ವಿಷಯಗಳು ನಿಮ್ಮ ಮನಸ್ಸನ್ನು ಗೊಂದಲಕ್ಕೀಡುಮಾಡುವುದು ಮಾತ್ರವಲ್ಲದೆ ನಿಮ್ಮ ಮನಸ್ಸನ್ನು ಪರೀಕ್ಷಿಸುತ್ತವೆ. ಒಂದು ಚಿತ್ರವನ್ನು ನೋಡಿದ ನಂತ್ರ ನಮ್ಮ ಕಣ್ಣುಗಳು ನಮ್ಮ ಮೆದುಳಿಗೆ ಮಾಹಿತಿಯನ್ನು ಕಳುಹಿಸಿದಾಗ ಆಪ್ಟಿಕಲ್ ಇಲ್ಯೂಷನ್ಸ್ ಸಂಭವಿಸುತ್ತವೆ. ಅದು ವಾಸ್ತವಕ್ಕೆ ಹೊಂದಿಕೆಯಾಗುವಂತಿರೋದಿಲ್ಲ. ಮೊದಲ ಆಪ್ಟಿಕಲ್ ಇಲ್ಯೂಷನ್ಸ್ ಕ್ರಿಸ್ತಪೂರ್ವ 450 ರಲ್ಲಿ ಎಪಿಚಾರ್ಮಸ್ ಮತ್ತು ಪ್ರೊಟಾಗೋರಸ್ ಆಪ್ಟಿಕಲ್ ಇಲ್ಯೂಷನ್ಸ್ ರೂಪಿಸಿದ್ದರು. 
