First Woman Muslim MLA of Odisha: ಒಡಿಶಾದ ಮೊದಲ ಮುಸ್ಲಿಂ ಶಾಸಕಿ ಓದಿದ್ದು ಎಂಜಿನೀಯರಿಂಗ್!
ಸದ್ಯ ಒಡಿಶಾ ವಿಧಾನಸಭೆ ಚುನಾವಣೆ ಚರ್ಚೆಯಲ್ಲಿದೆ. ಲೋಕಸಭೆ ಚುನಾವಣೆ ನಂತ್ರ ಒಡಿಶಾದಲ್ಲಿ ಬಿಜೆಪಿ ಬಹುಮತ ಸಾಧಿಸಿದೆ. ಆದ್ರೆ ಈ ಎಲ್ಲದರ ಮಧ್ಯೆ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ಮುಸ್ಲಿಂ ಮಹಿಳೆಯೊಬ್ಬರು ಇತಿಹಾಸ ರಚಿಸಿದ್ದಾರೆ.
ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. 147 ಸ್ಥಾನಗಳಲ್ಲಿ 78 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಗಳಿಸಿತು. ಆದ್ರೆ ಕಾಂಗ್ರೆಸ್ ಪರ ಸ್ಪರ್ಧಿಸಿ ಗೆದ್ದಿರುವ ಶಾಸಕಿ ಸೋಫಿಯಾ ಫಿರ್ದೌಸ್ ಎಲ್ಲರ ಗಮನ ಸೆಳೆದಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕ ಸೋಫಿಯಾ ಫಿರ್ದೌಸ್ ತಮ್ಮನ್ನು ಕಟಕ್‌ನ ಮಗಳು ಎಂದು ಬಣ್ಣಿಸಿದ್ದಾರೆ. ಸೋನಿಫಾ ಫಿರ್ದೌಸ್ ಬರೀ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದ್ದು ಮಾತ್ರವಲ್ಲ, ಈ ಗೆಲುವಿನೊಂದಿಗೆ ಸೋಫಿಯಾ ಫಿರ್ದೌಸ್ ಹೆಸರು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಒಡಿಶಾ ವಿಧಾನಸಭೆಗೆ ಆಗಮಿಸಿದ ಮೊದಲ ಮುಸ್ಲಿಂ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಫಿಯಾ ಬಿಜೆಪಿಯ ಪೂರ್ಣಚಂದ್ರ ಮಹಾಪಾತ್ರ ಅವರನ್ನು 8001 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಸೋಫಿಯಾ ಫಿರ್ದೌಸ್ (Sofia Firdaus) ಯಾರು? : 32ನೇ ವಯಸ್ಸಿನಲ್ಲಿಯೇ ಶಾಸಕಿ (MLA) ಯಾದವರು ಸೋಫಿಯಾ ಫಿರ್ದೌಸ್. ಅವರು ರಾಜಕೀಯ (Politics) ಕುಟುಂಬದಿಂದ ಬಂದವರು. ಅವರು ಹಿರಿಯ ಕಾಂಗ್ರೆಸ್ ನಾಯಕ ಮೊಹಮ್ಮದ್ ಮುಖೀಮ್ ಅವರ ಪುತ್ರಿ. ಕಾಂಗ್ರೆಸ್ ಪಕ್ಷವು 2024 ರ ವಿಧಾನಸಭಾ ಚುನಾವಣೆಯಲ್ಲಿ ಮೊಹಮ್ಮದ್ ಮುಖೀಮ್ ಬದಲಿಗೆ ಅವರ ಪುತ್ರಿ ಸೋಫಿಯಾ ಫಿರ್ದೌಸ್‌ಗೆ ಟಿಕೆಟ್ ನೀಡಿತ್ತು. ಪಕ್ಷದ ನಂಬಿಕೆಯನ್ನು ಸೋಫಿಯಾ ಫಿರ್ದೌಸ್ ಉಳಿಸಿದ್ದಾರೆ.
ಇನ್ನೂ 40 ಆಗಿಲ್ಲ, ಆಗ್ಲೇ ಬಿಳಿ ಕೂದ್ಲು ಶುರುವಾಯ್ತಾ? ಇದು ಇಲ್ಗೇ ನಿಲ್ಬೇಕಂದ್ರೆ ಈ ಆಹಾರ ತಿನ್ನಿ..
ಸೋಫಿಯಾ ಫಿರ್ದೌಸ್ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ (Kalinga Institute of Industrial Technology) ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಸೋಫಿಯಾ 2022 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರಿನಿಂದ (Indian Institute of Management-Bengaluru) ಎಕ್ಸಿಕ್ಯುಟಿವ್ ಜನರಲ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂನಲ್ಲಿ ಡಿಪ್ಲೊಮಾ ಮುಗಿಸಿದ್ದಾರೆ. ತಮ್ಮನ್ನು ತಾವು ಉದ್ಯಮಿ ಎಂದು ಕರೆದುಕೊಳ್ಳುವ ಸೋಫಿಯಾ, ಈಗ ಶಾಸಕಿಯಾದ್ರೂ ಹಿಂದೆ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಅವರು 2023 ರಲ್ಲಿ ಸೋಫಿಯಾ ಫಿರ್ದೌಸ್ ಅವರು ಭುವನೇಶ್ವರದಲ್ಲಿರುವ ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಸಂಸ್ಥೆಯ ಪೂರ್ವ ವಲಯದ ಮಹಿಳಾ ವಿಭಾಗದ ಸಂಯೋಜಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಇಷ್ಟೇ ಅಲ್ಲ, ಸೋಫಿಯಾ ಫಿರ್ದೌಸ್ ಅವರು ಇಂಡಿಯಾ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನ ಭುವನೇಶ್ವರ್ ಅಧ್ಯಾಯದ ಸಹ-ಅಧ್ಯಕ್ಷರಾಗಿದ್ದಾರೆ. ಸೋಫಿಯಾ ಫಿರ್ದೌಸ್ ಪತಿ ಹೆಸರು ಶೇಖ್ ಮೆರಾಜ್ ಉಲ್ ಹಕ್. ಅವರು ಉದ್ಯಮಿ.
ಸೋಫಿಯಾ ಫಿರ್ದೌಸ್ ಬಾರಾಬತಿ-ಕಟಕ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಗೆಲುವಿನ ನಂತರ ಪ್ರತಿಕ್ರಿಯಿಸಿದ ಸೋಫಿಯಾ ಫಿರ್ದೌಸ್, ನಾನು ನನ್ನ ನಗರ ಕಟಕ್‌ನ ಮಗಳು ಎಂದು ಹೆಮ್ಮೆಪಡುತ್ತೇನೆ. ಕಟಕ್‌ನ ಜನರು ತಮ್ಮ ಮಗಳನ್ನು ನಂಬಿ ನನಗೆ ಮತ ಹಾಕಿದ್ದಾರೆ. ನಾನು ನನ್ನ ಕಟಕ್‌ಗಾಗಿ ಕೆಲಸ ಮಾಡಲು ಬಯಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಾಮಾಜಿಕ ಸೇವೆಗಳಲ್ಲಿ ಮೊದಲಿನಿಂದಲೂ ಆಸಕ್ತಿ ಹೊಂದಿದ್ದರು ಸೋಫಿಯಾ ಫಿರ್ದೌಸ್. 2023ರಿಂದ ಅವರು ರಾಜಕೀಯದಲ್ಲಿ ಸಕ್ರಿಯವಾಗಿದ್ದರು.
ಸೋಫಿಯಾ ಫಿರ್ದೌಸ್ ಬರೀ ತಮ್ಮ ಗೆಲುವಿನ ಕಾರಣಕ್ಕೆ ಮಾತ್ರ ಚರ್ಚೆಯಲ್ಲಿಲ್ಲ. ಅವರ ಫ್ಯಾಷನ್, ಸೌಂದರ್ಯದ ವಿಷ್ಯದಲ್ಲೂ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೋಫಿಯಾ ಸಕ್ರಿಯವಾಗಿದ್ದಾರೆ. ಅವರ ಫೋಟೋಗಳನ್ನು ನೋಡಿದ್ರೆ ಅವರು ರಾಜಕಾರಣಿ ಎನ್ನಲು ಸಾಧ್ಯವೇ ಇಲ್ಲ. ಬಾಲಿವುಡ್ ನಟಿಯರನ್ನು (Bollywood Actress) ಮೀರಿಸುವ ಸೌಂದರ್ಯವನ್ನು ಸೋಫಿಯಾ ಫಿರ್ದೌಸ್ ಹೊಂದಿದ್ದಾರೆ.
ನಮಿತಾಗೆ ಮಹಾ ಮೋಸ, ನಟ ಧನುಷ್ ಜೊತೆ ರೊಮಾನ್ಸ್ ಇರ್ಲಿಲ್ಲ; ರೊಚ್ಚಿಗೆದ್ದ ನಟಿ ಮಾಡಿದ್ದೇನು?
ವಿಶೇಷವೆಂದ್ರೆ ಒಡಿಶಾದ ಮೊದಲ ಮಹಿಳಾ ಮುಖ್ಯಮಂತ್ರಿ (First Woman Chief Minister) ನಂದನಿ ಸತ್ಪತಿ ಸ್ಪರ್ಧಿಸಿದ್ದ ಕ್ಷೇತ್ರದಿಂದ ಸ್ವರ್ಧಿಸಿ ಸೋಫಿಯಾ ಶಾಸಕಿಯಾಗಿದ್ದಾರೆ. ನಂದಿನಿ ಸತ್ಪತಿ 1972ರಲ್ಲಿ ಇದೇ ಬಾರಾಬತಿ ಕಟಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿಯಾಗಿದ್ದರು.