Asianet Suvarna News Asianet Suvarna News

ಐಶ್ವರ್ಯಾ ರೈಯಂತೆ ಮಗಳಿಗಾಗಿ ದಾದಿ ನೇಮಿಸದೇ ತಾವೇ ನೋಡ್ಕೋತಾರಂತೆ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಮತ್ತೊಬ್ಬ ಬಾಲಿವುಡ್ ನಟಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರಂತೆ ಪೇರೇಂಟಿಗ್ ರೂಲ್ಸ್‌ ಫಾಲೋ ಮಾಡಲಿದ್ದಾರೆ ಎಂದು ವರದಿಯಾಗಿದೆ.  ಅದರಂತೆ ಅವರು ತಮ್ಮ ಮಗುವನ್ನು ನೋಡಿಕೊಳ್ಳಲು ದಾದಿಯನ್ನು ಕೆಲಸಕ್ಕಿಟ್ಟುಕೊಳ್ಳುವ ಬದಲು ಅವರೇ ತಮ್ಮ ಮಗಳನ್ನು ನೋಡಿಕೊಳ್ಳಲಿದ್ದಾರಂತೆ.

newly mother Deepika Padukone Follows Aishwarya Rais Parenting Tips akb
Author
First Published Sep 14, 2024, 3:46 PM IST | Last Updated Sep 14, 2024, 3:46 PM IST

ಗಣೇಶ ಚತುರ್ಥಿಯ ಮರುದಿನವೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಹೆಣ್ಣು ಮಗುವಿನ ಫೋಷಕರಾಗಿರುವುದು ಎಲ್ಲರಿಗೂ ಗೊತ್ತು. ಹೆಚ್‌ಎನ್‌ ರಿಯಲಯನ್ಸ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ದೀಪಿಕಾ ಪಡುಕೋಣೆಯವರನ್ನು ನೋಡಲು ಬಾಲಿವುಡ್ ನಟ ಶಾರುಖ್ ಖಾನ್, ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ ಸೇರಿದಂತೆ ಅನೇಕರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈಗ ಈ ಜೋಡಿ ತಮ್ಮ ಮನೆಯ ಪುಟ್ಟ ಲಕ್ಷ್ಮಿಯನ್ನು ಮನೆಗೆ ಕರೆತರಲು ಎಲ್ಲ ಸಿದ್ಧತೆ ನಡೆಸಿದ್ದಾರೆ. ಈಗ ತಮ್ಮ ಚೊಚ್ಚಲ ಕಂದನನ್ನು ನೋಡಿಕೊಳ್ಳಲು ದೀಪಿಕಾ ಪಡುಕೋಣೆ ಮತ್ತೊಬ್ಬ ಬಾಲಿವುಡ್ ನಟಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರಂತೆ ಪೇರೇಂಟಿಗ್ ಟಿಪ್ಸ್ (ಮಕ್ಕಳ ನೋಡಿಕೊಳ್ಳುವ ರೀತಿ)  ಫಾಲೋ ಮಾಡಲಿದ್ದಾರೆ ಎಂದು ವರದಿಯಾಗಿದೆ.  ಅದರಂತೆ ಅವರು ತಮ್ಮ ಮಗುವನ್ನು ನೋಡಿಕೊಳ್ಳಲು ದಾದಿಯನ್ನು ಕೆಲಸಕ್ಕಿಟ್ಟುಕೊಳ್ಳುವ ಬದಲು ಅವರೇ ತಮ್ಮ ಮಗಳನ್ನು ನೋಡಿಕೊಳ್ಳಲಿದ್ದಾರಂತೆ.

ಈ ಹಿಂದೆ, ರಣವೀರ್ ಸಿಂಗ್ ಅವರು ರಣಬೀರ್ ಕಪೂರ್‌ ಅವರ ಪೇರೆಂಟಿಗ್ ಸ್ಟೈಲ್‌ ಅನ್ನು ಫಾಲೋ ಮಾಡಬಹುದು ಏಕೆಂದರೆ ಅವರು ರಣಬೀರ್‌ ಪೇರೆಂಟಿಗ್ ಸ್ಟೈಲನ್ನು ಇಷ್ಟಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಆದರೆ ಪತ್ನಿ ದೀಪಿಕಾ ಪಡುಕೋಣೆ ನಟಿಯರಾದ ಆಲಿಯಾ ಭಟ್, ಅನುಷ್ಕಾ ಶರ್ಮಾ ಹಾಗೂ ಐಶ್ವರ್ಯಾ ರೈ ಅವರ ಪೇರೆಂಟಿಂಗ್ ಸ್ಟೈಲ್‌ನ್ನು ಅನುಸರಿಸಲಿದ್ದಾರೆ ಎಂದು ವರದಿಯಾಗಿದೆ. ಬಾಲಿವುಡ್ ಲೈಫ್ ವರದಿಯ ಪ್ರಕಾರ, ದೀಪಿಕಾ ಪಡುಕೋಣೆ ತಮ್ಮ ಮಗಳನ್ನು ಪೋಷಿಸುವ ವಿಚಾರದಲ್ಲಿ ಬಹುತೇಕ ಐಶ್ವರ್ಯಾ ರೈ ಅವರ ಪೇರೆಂಟಿಂಗ್ ಸ್ಟೈಲ್‌ನ್ನು ಅನುಸರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಐಶ್ವರ್ಯಾ ರೈ ಅವರು ಮಗಳು ಆರಾಧ್ಯಳನ್ನು ನೋಡಿಕೊಳ್ಳಲು ದಾದಿಯನ್ನು ನೇಮಿಸಿರಲಿಲ್ಲ, ತನ್ನ ಮಗಳಿಗಾಗಿ ತನ್ನೆಲ್ಲಾ ಸಮಯ ಮೀಸಲಿರಿಸಿ ತಾವೇ ಕಾಳಜಿ ವಹಿಸಿದರು. ಇದಕ್ಕೆ ಐಶ್ವರ್ಯಾ ಅತ್ತೆ ಜಯಾ ಬಚ್ಚನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ರೀತಿ ಈಗ ದೀಪಿಕಾ ಕೂಡ  ತನ್ನ ಮಗಳನ್ನು ಇದೇ ರೀತಿ ತಾವೇ ನೋಡಿಕೊಂಡು ಐಶ್ವರ್ಯಾ ರೈ ಅವರ ಹಾದಿಯನ್ನೇ ಅನುಸರಿಸಬಹುದು ಎಂದು ವರದಿಯಾಗಿದೆ.

ಹುಟ್ಟುತ್ತಲೇ ಕೋಟ್ಯಾಧಿಪತಿಯಾದ ದೀಪಿಕಾ ಪುತ್ರಿ ಭೇಟಿಯಾಗಿ ಕ್ಷೇಮ ವಿಚಾರಿಸಿದ ಮುಕೇಶ್ ಅಂಬಾನಿ

ಬರೀ ಐಶ್ವರ್ಯಾ ರೈ ಮಾತ್ರವಲ್ಲದೇ ಆಲಿಯಾ ಭಟ್ ಹಾಗೂ ಅನುಷ್ಕಾ ಶರ್ಮಾ ಅವರ ಪೇರೆಂಟಿಗ್ ಸ್ಟೈಲನ್ನು ಕೂಡ ದೀಪಿಕಾ ಫಾಲೋ  ಮಾಡಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಅನುಷ್ಕಾ ಅವರಂತೆಯೇ ದೀಪಿಕಾ-ರಣ್ವೀರ್ ಸಿಂಗ್ ಕೂಡ ತಮ್ಮ ಮಗಳನ್ನು ಮಾಧ್ಯಮಗಳ ಕ್ಯಾಮರಾ ಕಣ್ಣುಗಳಿಂದ ಸದ್ಯದ ಮಟ್ಟಿಗೆ ದೂರ ಇಡಲು ಬಯಸಿದ್ದಾರೆ. ಈ ವಿಚಾರದಲ್ಲಿ ಆಲಿಯಾ ಆಲಿಯಾ ಅವರನ್ನು ಅನುಸರಿಸಲು ಮುಂದಾಗಿರುವ ದೀಪಿಕಾ ಮಗಳು ಸ್ವಲ್ಪ ದೊಡ್ಡವಳಾದ ನಂತರ ಆಕೆಯನ್ನು ಜಗತ್ತಿಗೆ ಪರಿಚಯಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಅನಂತ್ ಅಂಬಾನಿ ಮದುವೆಯಲ್ಲಿ ಸಿಕ್ಕ ಗರ್ಭಿಣಿ ದೀಪಿಕಾ ಪಡುಕೋಣೆಯನ್ನು ಐಶ್ವರ್ಯಾ ತಬ್ಬಿಕೊಂಡು ಶುಭಹಾರೈಸಿದ್ದರು. ಸೆಪ್ಟೆಂಬರ್ 8 ರಂದು ದೀಪಿಕಾ ಹಾಗೂ ರಣ್ವೀರ್ ಸಿಂಗ್ ಹೆಣ್ಣು ಮಗುವಿನ ಫೋಷಕರಾದಾಗ ಆಲಿಯಾ ಭಟ್, ಅನುಷ್ಕಾ ಶರ್ಮಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಶುಭ ಹಾರೈಸಿದ್ದರು. 

ಮನೆಗೆ ಬಂದ ಅರ್ಜುನ್ ರಾಂಪಾಲ್‌ನನ್ನು ಶಾರುಖ್ ಖಾನ್ ಬಾತ್ರೂಮ್‌ನಲ್ಲಿ ಕೂಡಿ ಹಾಕಿದ್ದೇಕೆ?

ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರು ಫೆಬ್ರವರಿ 2024ರಲ್ಲಿ ಪ್ರಗ್ನೆನ್ಸಿ ವಿಚಾರವನ್ನು ಘೋಷಣೆ ಮಾಡಿದ್ದರು. ಸೆಪ್ಟೆಂಬರ್‌ನಲ್ಲಿ ತಮ್ಮ ಮನೆಗೆ ಖುಷಿಯ ಮೂಟೆಯೊಂದು ಬರುವುದೆಂದು ಈ ಜೋಡಿ ಹೇಳಿಕೊಂಡಿದ್ದರು. ಅದರಂತೆ ಸೆಪ್ಟೆಂಬರ್ 8 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 6 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ದೀಪಿಕಾ ಹಾಗೂ ರಣ್ವೀರ್ ಸಿಂಗ್ 2018ರ ನವಂಬರ್‌ 14 ರಂದು  ಇಟಲಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಬಾಲಿವುಡ್‌ನ ಫೇವರೇಟ್ ಜೋಡಿಯಾಗಿರುವ ಇವರ ಲವ್‌ ಸ್ಟೋರಿ ಸಂಜಯ್ ಲೀಲಾ ಬನ್ಸಾಲಿ ಅವರ ರೋಮ್ಯಾಂಟಿಕ್ ಡ್ರಾಮಾ ಗೋಲಿಯೋಂಕಿ ರಾಸಲೀಲಾದ ಸೆಟ್‌ನಿಂದ ಶುರುವಾಗಿತ್ತು. ಈ ಸಿನಿಮಾವೂ ಅವರಿಗೆ ಆನ್ ಸ್ಕ್ರೀನ್ ಸೂಪರ್‌ ಜೋಡಿ ಎಂಬ ಪ್ರಸಿದ್ಧಿ ತಂದುಕೊಟ್ಟಿದ್ದಲ್ಲದೇ ಬನ್ಸಾಲಿಯವರ ಇತರ ಬ್ಲಾಕ್‌ಬಸ್ಟರ್‌ ಸಿನಿಮಾಗಳಾದ ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್‌ನಲ್ಲಿಯೂ ಒಟ್ಟಿಗೆ ನಟಿಸುವ ಅವಕಾಶ ನೀಡಿತ್ತು.

Latest Videos
Follow Us:
Download App:
  • android
  • ios