Asianet Suvarna News Asianet Suvarna News

ಮನೆಗೆ ಬಂದ ಅರ್ಜುನ್ ರಾಂಪಾಲ್‌ನನ್ನು ಶಾರುಖ್ ಖಾನ್ ಬಾತ್ರೂಮ್‌ನಲ್ಲಿ ಕೂಡಿ ಹಾಕಿದ್ದೇಕೆ?

ಶಾರುಖ್‌ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಓ ಶಾಂತಿ ಓಂ ಸಿನಿಮಾ ಬಾಲಿವುಡ್‌ನ ಸೂಪರ್‌ ಹಿಟ್ ಸಿನಿಮಾಗಳಲ್ಲಿ ಒಂದು ಆದರೆ ಆ ಸಿನಿಮಾದ ವಿಲನ್ ಪಾತ್ರಕ್ಕೆ ನಟನನ್ನು ಒಪ್ಪಿಸಲು ಶಾರುಖ್ ಖಾನ್ ಹಾಗೂ ನಿರ್ದೇಶಕಿ ಫರ್ಹಾ ಖಾನ್ ಪಟ್ಟ ಕಷ್ಟ ಅಷ್ಟಿಷ್ಟಲ್ಲವಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ನಿರ್ದೇಶಕಿ ಫರ್ಹಾ ಖಾನ್ ತೆರೆದಿಟ್ಟಿದ್ದು, ಕೇಳುಗರಲ್ಲಿ ನಗು ಮೂಡಿಸುತ್ತಿದೆ. 

why Shah Rukh Khan, Farah Khan locked Arjun Rampal at Bathroom akb
Author
First Published Sep 10, 2024, 3:26 PM IST | Last Updated Sep 10, 2024, 3:48 PM IST

ಶಾರುಖ್‌ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಓ ಶಾಂತಿ ಓಂ ಸಿನಿಮಾ ಬಾಲಿವುಡ್‌ನ ಸೂಪರ್‌ ಹಿಟ್ ಸಿನಿಮಾಗಳಲ್ಲಿ ಒಂದು ಆದರೆ ಆ ಸಿನಿಮಾದ ವಿಲನ್ ಪಾತ್ರಕ್ಕೆ ನಟನನ್ನು ಒಪ್ಪಿಸಲು ಶಾರುಖ್ ಖಾನ್ ಹಾಗೂ ನಿರ್ದೇಶಕಿ ಫರ್ಹಾ ಖಾನ್ ಪಟ್ಟ ಕಷ್ಟ ಅಷ್ಟಿಷ್ಟಲ್ಲವಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸ್ವಾರಸ್ಯಕರ ಘಟನೆಯೊಂದನ್ನು ನಿರ್ದೇಶಕಿ ಫರ್ಹಾ ಖಾನ್ ತೆರೆದಿಟ್ಟಿದ್ದು, ಕೇಳುಗರಲ್ಲಿ ನಗು ಮೂಡಿಸುತ್ತಿದೆ. 

ಫರ್ಹಾ ಖಾನ್ ನಿರ್ದೇಶನದ ಈ ಓಂ ಶಾಂತಿ ಓಂ ಸಿನಿಮಾದ ಖಳ ನಾಯಕನ ಪಾತ್ರ ಮಾಡುವುದಕ್ಕೆ ಯಾವೊಬ್ಬ ನಟರೂ ಕೂಡ ಒಪ್ಪುತ್ತಿರಲಿಲ್ಲವಂತೆ ಬಹುತೇಕ ನಟರು ಈ ರೋಲನ್ನು ರಿಜೆಕ್ಟ್‌ ಮಾಡಿದ್ರಂತೆ. ಹೀಗಾಗಿ ಫರ್ಹಾ ಖಾನ್ ಹಾಗೂ ನಟ ಶಾರುಖ್ ಖಾನ್ ಅವರು ಅಂದು ಹೊಸ ವರ್ಷದ ರಾತ್ರಿ ಶಾರುಖ್ ಮನೆಯಲ್ಲಿ ಆಯೋಜಿಸಿದ್ದ ನ್ಯೂ ಇಯರ್ ಪಾರ್ಟಿಯಲ್ಲಿ  ಪ್ಲಾನೊಂದನ್ನು ಹೆಣೆದಿದ್ದಾರೆ. ಪಾರ್ಟಿಗೆ ಬಂದ ಬಾಲಿವುಡ್ ನಟ ಅರ್ಜುನ್ ಅರ್ಜುನ್ ರಾಂಪಾಲ್ ಕೂಡ ಈ ಪಾತ್ರವನ್ನು ಮೊದಲಿಗೆ ರಿಜೆಕ್ಟ್ ಮಾಡಿದ್ದಾರೆ. ಹೀಗಾಗಿ ಶಾರುಖ್ ಖಾನ್‌ ಮನೆಯ ಬಾತ್‌ರೂಮ್‌ನಲ್ಲಿ ಅರ್ಜುನ್ ರಾಂಪಾಲ್‌ನನ್ನು ಕೂಡಿ ಹಾಕಿದ ನಿರ್ದೇಶಕಿ ಫರ್ಹಾ ಖಾನ್ ಹಾಗೂ ಶಾರುಖ್ ಖಾನ್ ಆತನಿಗೆ ಅಲ್ಲೇ ಕತೆ ಹೇಳಲು ಶುರು ಮಾಡಿದ್ದಾರೆ. ಇದಾದ ನಂತರ ಆ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿ ಅರ್ಜುನ್ ರಾಂಪಾಲ್ ಅವರ ಭಾಗ್ಯದ ಬಾಗಿಲು ತೆರೆದಿದ್ದು ಈಗ ಇತಿಹಾಸ.

ಶಾರುಖ್ ಖಾನ್ ಮಂಗಳಮುಖಿಯಾಗಿ ನಟಿಸಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಈ ಸಿನಿಮಾ ಬಗ್ಗೆ ನಿಮಗೆ ಗೊತ್ತಾ?

ಈ ಹಿಂದಿನ ಸಂದರ್ಶನವೊಂದರಲ್ಲಿ ಸ್ವತಃ ಅರ್ಜುನ್ ರಾಂಪಾಲ್ ಕೂಡ ಈ ಬಗ್ಗೆ ಹೇಳಿಕೊಂಡಿದ್ದಾರೆ. ಶಾರುಖ್ ಖಾನ್ ನಟನೆಯ ಈ ಸಿನಿಮಾ ನನ್ನ ಸಿನಿಮಾ ಬದುಕಿನಲ್ಲಿ ದೊಡ್ಡ ತಿರುವು ನೀಡಿತ್ತು. ಚಲನಚಿತ್ರ ನಿರ್ಮಾಪಕರು ನನ್ನನ್ನು ಗುರುತಿಸುವಂತೆ ಮಾಡಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ ಆರಂಭದಲ್ಲಿ ಅವರು ಕೂಡ ಈ ವಿಲನ್ ರೋಲನ್ನು ರಿಜೆಕ್ಟ್ ಮಾಡಿದ್ದರು. ಈಗ ಫರ್ಹಾ ಅವರು ಕೋಮಲ್ ನಾಥ್ ಜೊತೆಗಿನ ಸಂದರ್ಶನದಲ್ಲಿ ಹಲವು ನಟರು ಆ ಪಾತ್ರವನ್ನು ರಿಜೆಕ್ಟ್ ಮಾಡಿದ ನಂತರ ಹೇಗೆ ಅರ್ಜುನ್‌ ರಾಂಪಾಲ್ ಅವರನ್ನು ಆ ಸಿನಿಮಾದ ವಿಲನ್ ಪಾತ್ರಕ್ಕೆ ಒಪ್ಪಿಸಲಾಯ್ತು ಎಂಬುದನ್ನು ಹೇಳಿಕೊಂಡಿದ್ದಾರೆ.

ವಿವೇಕ್ ಒಬೇರಾಯ್ ಹೆಸರು ಹೇಳದೆಯೇ ಸಾಥಿಯಾ ನಟ ಕೂಡ ಈ ಸಿನಿಮಾವನ್ನು ಕೊನೆಯ ಕ್ಷಣದಲ್ಲಿ ರಿಜೆಕ್ಟ್ ಮಾಡಿದರು ಎಂದ ಫರ್ಹಾ, ಹೀಗೆ ಹಲವು ನಟರು ಆ ಪಾತ್ರವನ್ನು ನಿರಾಕರಿಸಿದ ಮೇಲೆ ಕೊನೆ ಕ್ಷಣದಲ್ಲಿ ನಾವು ಅರ್ಜುನ್‌ ರಾಂಪಾಲ್‌ನನ್ನು ನೇಮಿಸಿದೆವು. ನಾನು  ಹಾಗೂ ಶಾರುಖ್‌ ಇಬ್ಬರು ದೀಪಿಕಾ ಪಾತ್ರಧಾರಿಯ ಲವರ್‌ ತುಂಬಾ ಚಂದದ ಹುಡುಗ ಆಗಿರಬೇಕು ಎಂದು ಯೋಚನೆ ಮಾಡಿದ್ದೆವು. ಹೀಗಾಗಿ ಆ ಪಾತ್ರವನ್ನು ಪ್ರಕಾಶ್ ರಾಜ್ ಮಾಡುವುದು ಸರಿ ಇರುವುದಿಲ್ಲ, ಏಕೆಂದರೆ ಅವರು ಹೀರೋ ರೀತಿ ಕಾಣಿಸುವುದಿಲ್ಲ. ಆದರೆ ಇತ್ತ ನಾವು ಜನವರಿ 6ರಿಂದ ಶೂಟಿಂಗ್ ಮಾಡಲೇಬೇಕಿತ್ತು. ಹೀಗಾಗಿ ನಮಗೆ ಈ ಪಾತ್ರದಲ್ಲಿ ನಟಿಸುವುದಕ್ಕೆ ಯಾರು ಸಿಗಲಿಲ್ಲ ಇತ್ತ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆಯ ಪಾತ್ರ ಫೇಮಸ್ ನಟಿಯ ಪಾತ್ರವಾಗಿತ್ತು. 

ಹೀಗಾಗಿ ಈ ಪಾತ್ರಕ್ಕಾಗಿ ಅರ್ಜುನ್ ರಾಂಪಾಲ್‌ ಅವರನ್ನು ಫಿಕ್ಸ್‌ ಮಾಡಿದ ರೀತಿಯನ್ನು ಫರ್ಹಾ ವಿವರಿಸಿದ್ದಾರೆ. ಅಂದು ಡಿಸೆಂಬರ್ 31ರ ರಾತ್ರಿ ಶಾರುಖ್ ಖಾನ್ ಮನೆಯಲ್ಲಿ ಹೊಸ ವರ್ಷದ ಪಾರ್ಟಿ ನಡೆಯುತ್ತಿತ್ತು. ಅಲ್ಲಿ ನಾವು ಅರ್ಜುನ್‌ನ್ನು ನೋಡಿ ಅವನನ್ನೇ ಹಿಡಿದುಕೊಂಡೆವು. ನಾನು ಹಾಗೂ ಶಾರುಖ್ ಖಾನ್ ಇಬ್ಬರು ಸೇರಿ ಆತನನ್ನು ಬಾತ್‌ರೂಮ್‌ನಲ್ಲಿ ಲಾಕ್ ಮಾಡಿದೆವು. ಆದರೆ ಕತೆ ಕೇಳಿದ ಆತ ನೋ ಎಂದು ಹೇಳಿದ. ಆ ಪಾತ್ರ ತುಂಬಾ ಕ್ರೌರ್ಯದಿಂದ ಕೂಡಿದೆ ಎಂಬ ಕಾರಣಕ್ಕೆ ಆತ ಬೇಡ ಅಂದ. ಇದಾದ ನಂತರ ಶಾರುಖ್ ಖಾನ್ ಅವನನ್ನು ಮತ್ತೆ ಕರೆದರು ಹಾಗೂ ಆ ಪಾತ್ರ ಮಾಡುವಂತೆ ಒಪ್ಪಿಸಿದ್ದಾರೆ ಎಂದು ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ಫರ್ಹಾ.

ಗೌರಿ ವಾರ್ನ್​ ಮಾಡಿದ್ರೂ ಎಲ್ಲರೆದುರು ಪ್ರಿಯಾಂಕಾಳ ಬಟ್ಟೆ ಬಿಚ್ಚಿ ಕಿಸ್​ ಕೊಟ್ಟ ಶಾರುಖ್! ವಿಡಿಯೋ ವೈರಲ್​

ಅಲ್ಲದೇ ಕೊನೆ ಕ್ಷಣದಲ್ಲಿ ಅರ್ಜುನ್ ರಾಂಪಾಲ್ ಅವರ ಆಯ್ಕೆಯಾಯ್ತು ಎಂಬುದನ್ನು ಒಪ್ಪಿಕೊಂಡ ಫರ್ಹಾ ಅವರು ಸಿನಿಮಾ ಶೂಟಿಂಗ್‌ಗೆ ಎರಡು ದಿನಗಳಿರುವಾಗ ಅವರಿಗೆ ಕಾಸ್ಟ್ಯೂಮ್ ಫಿಟ್ಟಿಂಗ್ ಮಾಡಲಾಯ್ತ ಎಂದಿದ್ದಾರೆ. ಈ ಓಂ ಶಾಂತಿ ಓಂ ಸಿನಿಮಾವೂ ದೀಪಿಕಾ ಪಡುಕೋಣೆ ಅವರ ಬಾಲಿವುಡ್ ಚೊಚ್ಚಲ ಸಿನಿಮಾವಾಗಿದ್ದು, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಬ್ಯಾನರ್ ಕೆಳಗೆ ಇದನ್ನು ಗೌರಿ ಖಾನ್ ನಿರ್ಮಾಣ ಮಾಡಿದ್ದರು. 2007ರಲ್ಲಿಇದು ಅತೀಹೆಚ್ಚು ಗಳಿಕೆಯ ಸಿನಿಮವಾಗಿ ಹೆಸರು ಪಡೆಯಿತು. 

Latest Videos
Follow Us:
Download App:
  • android
  • ios