ವಿಧವೆ ತಾಯಿ ಅಥವಾ ಒಂಟಿಯಾಗಿ ಮಹಿಳೆಯೊಬ್ಬಳು ಮಕ್ಕಳನ್ನು ಅದರಲ್ಲೂ ಹೆಣ್ಣು ಮಗುವನ್ನು ಸಾಕುವುದು ಸುಲಭದ ಕೆಲಸವಲ್ಲ. ಹೆಣ್ಣೊಬ್ಬಳು ಒಂಟಿಯಾಗಿದ್ದಾಳೆ ಎಂದರೆ ಸಹಾಯದ ನೆಪದಲ್ಲಿ ಹತ್ತಿರ ಬರಲು ಬಯಸುವವರು ಸಾವಿರಾರು ಜನ ಹೀಗಿರುವಾಗ ವಿಧವೆ ತಾಯೊಬ್ಬಳು ಮಗಳ ರಕ್ಷಣೆಗಾಗಿ ವೇಷವನ್ನೇ ಬದಲಿಸಿ ಬದುಕಿದ್ದಾಳೆ.
ವಿಧವೆ ತಾಯಿ ಅಥವಾ ಒಂಟಿಯಾಗಿ ಮಹಿಳೆಯೊಬ್ಬಳು ಮಕ್ಕಳನ್ನು ಅದರಲ್ಲೂ ಹೆಣ್ಣು ಮಗುವನ್ನು ಸಾಕುವುದು ಸುಲಭದ ಕೆಲಸವಲ್ಲ. ಗಂಡನಿಲ್ಲವೆಂಬ ಕೊರಗು ಒಂದು ಕಡೆಯಾದರೆ ಕೆಟ್ಟ ನೋಟಗಳ ಹೊಡೆತ ಇನ್ನೊಂದು ಕಡೆ. ಹೆಣ್ಣೊಬ್ಬಳು ಒಂಟಿಯಾಗಿದ್ದಾಳೆ ಎಂದರೆ ಸಹಾಯದ ನೆಪದಲ್ಲಿ ಹತ್ತಿರ ಬರಲು ಬಯಸುವವರು ಸಾವಿರಾರು ಜನ. ಇಂತಹ ಸಮಾಜದ ನಡುವೆ ಹೆಣ್ಣೊಬ್ಬಳು ತನ್ನ ಹೆಣ್ಣು ಮಗುವನ್ನು ಬೆಳೆಸುವುದು ಬಲೂ ಕಷ್ಟದ ಕೆಲಸ ಹೀಗಿರುವಾಗ ಇಲ್ಲೊಂದು ಕಡೆ ಮಹಿಳೆಯೊಬ್ಬಳು ಗಂಡನ ಸಾವಿನ ನಂತರ ಅಕ್ಷರಶಃ ಗಂಡಿನಂತೆಯೇ ಬದುಕಿದ್ದಾರೆ. ಅವರ ಯಶೋಗಾಥೆ ಇಲ್ಲಿದೆ. ಹೆಣ್ಣು ಮಗಳೊಬ್ಬಳ ತಾಯಿಯಾಗಿ ಅವರು ಗಂಡಸಿನಂತೆ ಬದುಕಿದ್ದು, ಅವರ ಕತೆ ಸಮಾಜದಲ್ಲಿರುವ ಅನೇಕರಿಗೆ ಮಾದರಿ. ಇಲ್ಲಿದೆ ಅವರ ಡಿಟೇಲ್ ಸ್ಟೋರಿ.
ಅವರ ಹೆಸರು ಪೆಚ್ಚಿಯಮ್ಮಾಳ್, ತಮಿಳುನಾಡಿನ ತೂತುಕುಡಿ ಜಿಲ್ಲೆಯ ನಿವಾಸಿ, ಎಳೆಯ ಪ್ರಾಯದಲ್ಲೇ ಗಂಡನನ್ನು ಕಳೆದುಕೊಂಡ ಪೆಚ್ಚಿಯಮ್ಮಾಳ್‌ಗೆ ಆ ದಾಂಪತ್ಯದಲ್ಲಿ ಒಬ್ಬಳು ಹೆಣ್ಣು ಮಗಳು ಹುಟ್ಟಿದ್ದಳು. ಸಮಾಜದ ಕೆಟ್ಟ ಕಟುಕ ದೃಷ್ಟಿಯ ಅರಿವಿದ್ದ ಪೆಚ್ಚಿಯಮ್ಮಾಳ್ ಅವರು ಹೀಗಾಗಿಯೇ ಗಂಡನ ಸಾವಿನ ನಂತರ ತನ್ನ ಹೆಣ್ಣು ಮಗುವಿನ ರಕ್ಷಣೆಗಾಗಿ ಗಂಡಿನ ವೇಷ ಧರಿಸಿ ಬದುಕಿದರು.
ಇದನ್ನೂ ಓದಿ: ಮೀನುಗಾರ ಬಲೆಗೆ ಸಿಲುಕಿ ಕೇರಳ ತೀರಕ್ಕೆ ಬಂದ ಭಾರಿ ಗಾತ್ರದ ಶಾರ್ಕ್: ವಾಪಸ್ ಸಮುದ್ರಕ್ಕೆ ಬಿಟ್ಟ ಕಡಲ ಮಕ್ಕಳು..
ಆರಂಭದಲ್ಲಿ ಗಂಡನ ಸಾವಿನ ನಂತರ ಒಂಟಿಯಾಗಿದ್ದ ದುರ್ಬಲಳಾಗಿ ಉಳಿದ ಪೆಚ್ಚಿಯಮ್ಮಾಳ್ ತನ್ನನ್ನು ಪುಟ್ಟ ಮಗಳಿದ್ದ ತನ್ನ ಕುಟುಂಬವನ್ನು ಸಾಕುವುದಕ್ಕೆ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದಳು. ಆದರೆ ಹೀಗೆ ಕೆಲಸ ಮಾಡಲು ಆರಂಭಿಸಿದ ಆಕೆಗೆ ಸಾಮಾಜಿಕ ಅಭದ್ರತೆ, ನಿರಂತರ ಕಿರುಕುಳದ ಅನುಭವವಾಯ್ತು. ಹೀಗಾಗಿ ಆಕೆ ಸಾಮಾಜಿಕ ಭದ್ರತೆ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮಗಳ ಸುರಕ್ಷತೆಯ ಬಗ್ಗೆಯೂ ಚಿಂತಿಸಿ ಪುರುಷ ಪ್ರಧಾನ ಸಮಾಜದಲ್ಲಿ ಪುರುಷನಂತೆ ವೇಷ ಧರಿಸಲು ನಿರ್ಧರಿಸಿದಳು. ತನ್ನನ್ನು ತಾನು ಮುತ್ತು ಎಂದು ಕರೆದುಕೊಂಡಳು.
ತನ್ನ ವೇಷ ಹೆಸರು ಎರಡನ್ನು ಬದಲಿಸಿ ಮುತ್ತು ಮಾಸ್ಟರ್ ಆಗಿ ಬದುಕಲು ಆರಂಭಿಸಿದ ಮುತ್ತು ತನ್ನ ಸೀರೆ ರವಿಕೆಯ ಕಿತ್ತೆಸೆದು ಗಂಡಸರಂತೆ ಲುಂಗಿ ಪಂಚೆಯ ಮೇಲೆ ಶರ್ಟ್ ಧರಿಸಲು ಆರಂಭಿಸಿದಳು. ಹೀಗೆ ವೇಷ ಬದಲಿಸಿ ಮುತ್ತು ಆದ ಪೆಚ್ಚಿಯಮ್ಮಾಳ್ ಪುರುಷರೇ ಪ್ರಧಾನವಾಗಿರುವಂತಹ ಕಟ್ಟಡಗಳಿಗೇ ಪೇಂಟಿಂಗ್ ಮಾಡುವುದು, ಚಹಾ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುವುದು ಮುಂತಾದ ಕೆಲಸವನ್ನು ಮಾಡುವುದಕ್ಕೆ ಶುರು ಮಾಡಿದಳು. ಇದು ಅವರಿಗೆ ಹೆಚ್ಚು ಭದ್ರತೆಯ ಜೊತೆಗೆ ಗೌರವವನ್ನು ನೀಡಿತು. ಪೆಚ್ಚಿಯಮ್ಮಾಳ್ ಅವರಿಗೆ ಗಂಡಿನ ವೇಷ ಸಂಪೂರ್ಣವಾಗಿ ಎಷ್ಟು ಆವರಿಸಿಕೊಂಡಿತ್ತು ಎಂದರೆ ಅವರು ಸಾರ್ವಜನಿಕ ಸ್ಥಳದಲ್ಲಿ ಪುರುಷರ ಶೌಚಾಲಯವನ್ನೇ ಆಯ್ಕೆ ಮಾಡುತ್ತಿದ್ದರು.
ಇದನ್ನೂ ಓದಿ: ಟ್ರಂಪ್ ನಿರ್ಧಾರಕ್ಕೆ 20 ರಾಜ್ಯಗಳ ಸೆಡ್ಡು: ಅಮೆರಿಕದಲ್ಲೇ ಶುರುವಾಯ್ತು ಸಮರ!
ಮುತ್ತು ಮಾಸ್ಟರ್ ಹೆಸರಿನಲ್ಲಿ ಅವರು ಬೇರೆ ಬೇರೆ ರೀತಿಯ ಪುರುಷರು ಮಾಡುವ ಕೆಲಸ ಮಾಡಿದರು. ಇದರಿಂದ ಆದಾಯವೂ ಅವರಿಗೆ ಚೆನ್ನಾಗಿಯೇ ಬಂತು. ಜೊತೆಗೆ ಇವರ ಈ ವೇಷ ಇವರ ಹೆಣ್ಣು ಮಗಳನ್ನು ಕೂಡ ಸಮಾಜದ ಕೆಟ್ಟ ದೃಷ್ಟಿ ಹಾಗೂ ಶೋಷಣೆಯಿಂದ ಪಾರು ಮಾಡಿತು. ಕೇವಲ ಕುಟುಂಬ ಸದಸ್ಯರು ಹಾಗೂ ಅವರ ಮಗಳಿಗೆ ಮಾತ್ರ ಆಕೆಯೊಬ್ಬಳು ಹೆಣ್ಣು ಎಂಬುದು ತಿಳಿದಿತ್ತು. ಸಮುದಾಯವೂ ಆಕೆಯ ಮೇಲೆ ಯಾವುದೇ ಅನುಮಾನವಿಲ್ಲದೇ ಆಕೆಯನ್ನು ಓರ್ವ ಗಂಡಿನಂತೆ ಸ್ವೀಕರಿಸಿತು ಹಾಗೂ ಯಾವುದೇ ಒಂಟಿ ಹೆಣ್ಣೆಂಬ ಶೋಷಿಸುವ ಕೈಗಳು ಆಕೆಯ ಸಮೀಪವೂ ಸುಳಿದಾಡಲಿಲ್ಲ.
ಮಗಳ ಮದುವೆಯ ನಂತರವೂ ಪೆಚ್ಚಿಯಮ್ಮಾಲ್ ಅವರು ಮುತ್ತುವಿನಂತೆ ಬದುಕುವುದಕ್ಕೆ ಆರಂಭಿಸಿದರು. ಹೀಗೆ ವರ್ಷಗಳಲ್ಲಿ ಅವರ ಈ ವೇಷವೂ ಭದ್ರತೆಯ ಜೊತೆಗೆ ಶಕ್ತಿ ಹಾಗೂ ಸಾಮರ್ಥ್ಯವನ್ನು ಪೆಚ್ಚಿಯಮ್ಮಾಳ್‌ಗೆ ತಂದು ಕೊಟ್ಟಿತ್ತು.


