ಈತ ಮೂರು ತಿಂಗಳ ಹಿಂದಷ್ಟೇ ಹೊಸ ಕೆಟಿಎಂ ಬೈಕ್ ಖರೀದಿಸಿದ್ದ 18 ವರ್ಷದ ಪ್ರಿನ್ಸ್ ಪಟೇಲ್ ಎಂಬ ಯುವಕ ಭೀಕರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ಅತಿ ವೇಗವಾಗಿ ಬೈಕ್ ಚಲಾಯಿಸಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತನ ಪ್ರಾಣಪಕ್ಷಿ ಹಾರಿಹೋಗಿದೆ.
ಇತ್ತೀಚೆಗೆ ವಾಹನಗಳಲ್ಲಿ ಸ್ಟಂಟ್ ಮಾಡೋದು ಅನೇಕರಿಗೆ ಫ್ಯಾಷನ್ ಆಗಿದೆ. ಜೀವದ ಬೆಲೆ ತಿಳಿಯದೇ ಸ್ಟಂಟ್ ಮಾಡಿ ಅಮೂಲ್ಯ ಜೀವವನ್ನು ಬಲಿ ಕೊಡುತ್ತಿದ್ದಾರೆ. ಅದರಲ್ಲೂ ಸೋಶಿಯಲ್ ಮೀಡಿಯಾ ವೀಡಿಯೋಗಳಿಗಾಗಿ ಸ್ಟಂಟ್ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ. ಅದೇ ರೀತಿ ಇಲ್ಲೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ವ್ಲಾಗ್ ಮಾಡ್ತಿದ್ದ ಯುವಕನೋರ್ವ ತಾನು ಬೈಕ್ ಖರೀದಿಸಿ ಮೂರು ತಿಂಗಳಾಗುವುದಕ್ಕೂ ಮೊದಲೇ ವೇಗದ ಚಾಲನೆಯಿಂದಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಗುಜರಾತ್‌ನ ಸೂರತ್‌ನಲ್ಲಿ ಈ ಭೀಕರ ರಸ್ತೆ ಅಪಘಾತ ನಡೆದಿದೆ.
'ಪಿಕೆಆರ್ ಬ್ಲಾಗರ್' ಎಂದೇ ಕರೆಯಲ್ಪಡುತ್ತಿದ್ದ 18 ವರ್ಷದ ವ್ಲಾಗರ್ ಪ್ರಿನ್ಸ್ ಪಟೇಲ್ ಸಾವನ್ನಪ್ಪಿದ ತರುಣ. ಈತ ಕೇವಲ 3 ತಿಂಗಳ ಹಿಂದಷ್ಟೇ ಅಂದರೆ ಸೆಪ್ಟೆಂಬರ್‌ನಲ್ಲಿ ಕೆಟಿಎಂ ಡ್ಯೂಕ್ ಬೈಕ್ ಖರೀದಿಸಿದ್ದ. ಈ ಬೈಕ್‌ನ್ನು ಬಳಸಿಕೊಂಡು ಈತ ಹಲವು ರೀಲ್ಸ್‌ಗಳನ್ನು ಮಾಡಿದ್ದ ಆದರೆ ಇದೇ ಬೈಕ್‌ನಿಂದ ಈಗ ಆತನ ಜೀವ ಹೋಗಿದೆ. ಅತೀ ವೇಗವಾಗಿ ಬಂದು ಆತ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು, ಈ ಭೀಕರ ಅಪಘಾತ ಎಷ್ಟು ತೀವ್ರವಾಗಿತ್ತೆಂದರೆ ಆತನ ತಲೆಯೇ ಕತ್ತರಿಸಲ್ಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: HR88B8888 ನಂಬರ್ ಪ್ಲೇಟ್‌ಗೆ 1.17 ಕೋಟಿ ಹರಾಜು ಕೂಗಿ ಹಣ ಪಾವತಿಸಲು ವಿಫಲ
ಆತ ಬೈಕ್ ಚಲಾಯಿಸುತ್ತಿರುವುದು ಸ್ಥಳೀಯ ಸಿಸಿ ಕ್ಯಾಮರಾಗಳಲ್ಲಿ ರೆಕಾರ್ಡ್ ಆಗಿದ್ದು ಬೈಕ್ ಅಂದಾಜು 140 ಕೆಎಂಪಿಹೆಚ್ ವೇಗದಲ್ಲಿ ಚಲಿಸುತ್ತಿತ್ತು ಎಂದು ಪೊಲೀಸರು ಅಂದಾಜಿಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲಿ ಅದೇ ವೇಗದಲ್ಲಿ ಪ್ರಿನ್ಸ್ ಪಟೇಲ್, ಗ್ರೇಟ್ ಲೈನರ್ ಸೇತುವೆಯಿಂದ ಕೆಳಗಿಳಿಯುತ್ತಿರುವುದು ಸೆರೆಯಾಗಿದೆ. ವೀಡಿಯೊದಲ್ಲಿ ಅವರು ಬೈಕ್ ಮೇಲೆ ನಿಯಂತ್ರಣ ಕಳೆದುಕೊಂಡು, ಬೆಕ್‌ನಿಂದ ಕೆಳಗೆ ಬಿದ್ದು, ಹಲವರು ಬಾರಿ ಉರುಳುವುದನ್ನು ಕಾಣಬಹುದು. ಹಾಗೆಯೇ ಅವರ ಬೈಕ್ ರೋಡ್ ಡಿವೈಡರ್‌ನ ಉದ್ದಕ್ಕು ಎಳೆದುಕೊಂಡು ಹೋಗಿ ಸುನಾರು ನೂರಾರು ಮೀಟರ್ ದೂರದಲ್ಲಿ ನಿಂತಿದೆ. ಅಪಘಾತದ ಸಮಯದಲ್ಲಿ ಅವರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತ ಪ್ರಿನ್ಸ್ ಪಟೇಲ್ ತಾಯಿ ಆಶ್ರಯ ತಾಣದಲ್ಲಿ ವಾಸ ಮಾಡ್ತಿದ್ದು, ಹಾಲು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು.
ಪ್ರಿನ್ಸ್ ಪಟೇಲ್ ಯಾರು?
ಪ್ರಿನ್ಸ್ ಪಟೇಲ್ ಅವರು ತಮ್ಮ ಮೋಟಾರ್ ಸೈಕಲ್ ರೀಲ್‌ಗಳು ಮತ್ತು ವೇಗದ ವಾಹನ ಸವಾರಿ ವೀಡಿಯೊಗಳಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹದಿಹರೆಯದ ಯುವಕರನ್ನು ಸೆಳೆದಿದ್ದರು. ಇನ್ಸ್ಟಾಗ್ರಾಮ್ ತುಂಬೆಲ್ಲಾ ಆತ ಸೆಪ್ಟೆಂಬರ್‌ನಲ್ಲಿ ಖರೀದಿಸಿದ ಕೆಟಿಂ ಬೈಕ್‌ಗಳ ವೀಡಿಯೋವೇ ತುಂಬಿದ್ದು, ಆತನಿಗೆ ಆ ಬೈಕ್ ಬಗ್ಗೆ ಎಂಥಾ ಕ್ರೇಜ್ ಇತ್ತು ಎಂಬುದಕ್ಕೆ ಆ ವೀಡಿಯೋಗಳೇ ಸಾಕ್ಷಿಯಾಗಿವೆ. ತನ್ನ KTM ಡ್ಯೂಕ್ 390ಬೈಕ್‌ಗೆ ಲೈಲಾ ಎಂದು ಹೆಸರಿಟ್ಟಿದ್ದ ಆತ ಆಗಾಗ ಅದರೊಂದಿಗೆ ವೀಡಿಯೋ ಹಾಕುತ್ತಿದ್ದ. ಅಪಘಾತಕ್ಕೆ ಕೇವಲ ನಾಲ್ಕು ದಿನಗಳ ಮೊದಲು ತಾನು ಆ ಬೈಕ್‌ಗೆ ಮಜ್ನು(ಬೈಕ್ ಲೈಲಾ ಈತ ಮಜ್ನು) ಎಂದು ಹೇಳುತ್ತಿರುವ ವೀಡಿಯೊವನ್ನು ಅಪ್‌ಲೋಡ್ ಮಾಡಿದರು, ಸ್ವರ್ಗಕೆ ಹೋದರೂ ತಮ್ಮ ಬೈಕ್‌ನಮೇಲಿನ ಪ್ರೀತಿ ಹೀಗೆ ಇರುತ್ತದೆ ಎಂದು ಹೇಳಿಕೊಂಡಿದ್ದು, ಲೈಲಾ ಮಜ್ನು ಸಿನಿಮಾದ ಹಾಡಿನೊಂದಿಗೆ ಈ ವೀಡಿಯೋ ಕೊನೆಗೊಂಡಿತ್ತು.
ಇದನ್ನೂ ಓದಿ: ಸ್ನೇಹಿತರ ದೊಡ್ಡತನದಿಂದ ಬಡ ಯುವಕ ಮರೆಯಲಾರದ ಕ್ಷಣವಾಗಿ ಬದಲಾಯ್ತು ಮದುವೆ


