ಜಿಮ್‌ಗೆ ಹೋಗುವಾಗ ಮೇಕಪ್ ಮಾಡ್ಕೋತೀರಾ ? ಇಷ್ಟೆಲ್ಲಾ ತೊಂದ್ರೆಯಾಗ್ಬೋದು
ಮನೆಯಿಂದ ಹೊರಗೆ ಕಾಲಿಡ್ಬೇಕಾದ್ರೆ ಮೇಕಪ್ ಬೇಕೇ ಬೇಕು ಅನ್ನೋರು ಜಿಮ್‌ಗೆ ಹೋಗುವಾಗ ಮೇಕಪ್ ಮಾಡದೇ ಬಿಟ್ಬಿಡ್ತಾರಾ ? ಆದ್ರೆ ಶಾಪಿಂಗ್, ಮೂವಿಗೆ ಹೋಗುವಾಗ ಮೇಕಪ್ ಮಾಡ್ಕೊಳ್ಳೋದು ಸರಿ. ಆದ್ರೆ ಜಿಮ್‌ಗೆ ಹೋಗುವಾಗ ಸೌಂದರ್ಯ ಸಾಧನಗಳನ್ನು ಬಳಸೋದು ಚರ್ಮದ ಆರೋಗ್ಯದ ದೃಷ್ಟಿಯಿಂದ ತುಂಬಾ ಕೆಟ್ಟದ್ದು ಅನ್ನೋದು ನಿಮ್ಗೆ ಗೊತ್ತಿದ್ಯಾ ?
ಒತ್ತಡದ ಜೀವನಶೈಲಿಯಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಂದಾಗಿ ಜಿಮ್‌ಗೆ ಹೋಗುವುದು ಪ್ರತಿಯೊಬ್ಬರ ದಿನಚರಿಯ ಭಾಗವಾಗಿವೆ. ಜಿಮ್‌ಗೆ ಹೋಗಲೆಂದದೇ ಸ್ಪೆಷಲ್ ಡ್ರೆಸ್, ಶೂಗಳನ್ನು ತೆಗೆದುಕೊಳ್ಳುತ್ತಾರೆ. ಜಿಮ್‌ಗೆ ಹೋಗಿ ತೂಕ ಕಳೆದುಕೊಳ್ಳುವುದು ಮಾತ್ರವಲ್ಲ, ಜಿಮ್‌ನಲ್ಲಿ ಕಳೆಯುವ ಸಂಪೂರ್ಣ ಸಮಯವನ್ನು ಉತ್ತಮವಾಗಿ ಮತ್ತು ತಾಜಾವಾಗಿ ಕಾಣಲು ಬಯಸುತ್ತಾರೆ. ಹೀಗಾಗಿಯೇ ಹೆಚ್ಚಿನ ಮಹಿಳೆಯರು ಜಿಮ್‌ಗೆ ಮೇಕ್ಅಪ್ ಹಾಕುವ ಸಾಮಾನ್ಯ ತಪ್ಪನ್ನು ಮಾಡುತ್ತಾರೆ. ಆದರೆ ಇದು ಚರ್ಮದ ಆರೋಗ್ಯದ ದೃಷ್ಟಿಯಿಂದ ತುಂಬಾ ಕೆಟ್ಟದ್ದು. ಜಿಮ್‌ಗೆ ಹೋಗುವ ಮೊದಲು ಮೇಕಪ್ ಧರಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳು ಒಂದೆರಡಲ್ಲ. ಈ ಬಗ್ಗೆ ಚರ್ಮ ತಜ್ಞ ಡಾ.ಕಿರಣ್ ಸೇಥಿ ಮಾಹಿತಿ ನೀಡಿದ್ದಾರೆ.
ಬೆವರು ಮತ್ತು ಮೇಕ್ಅಪ್
ಬೆವರು ದೇಹದಲ್ಲಿರುವ ಕಲ್ಮಶವನ್ನು ಹೊರ ಹಾಕುತ್ತದೆ. ಹೀಗಾಗಿ ಬೆವರು (Sweat) ಚರ್ಮಕ್ಕೆ ತುಂಬಾ ಒಳ್ಳೆಯದು. ಆದರೆ ಮೇಕಪ್‌ನೊಂದಿಗೆ ಅಲ್ಲ. ಜಿಮ್ ಸೆಷನ್‌ನ ಸಮಯಕ್ಕಿಂತ ಮೊದಲು ನಾವೆಲ್ಲರೂ ನಮ್ಮ ಚರ್ಮಕ್ಕೆ ಮೇಕ್ಅಪ್ ಪದರಗಳನ್ನು ಸೇರಿಸುವುದನ್ನು ನಿಲ್ಲಿಸಬೇಕು. ಯಾಕೆಂದರೆ ವ್ಯಾಯಾಮ ಮಾಡುವಾಗ ದೇಹ(Body)ದಿಂದ ಬೆವರು ಹೊರಬರುತ್ತದೆ. ಇದು ಮೇಕಪ್ ಜೊತೆ ಮಿಕ್ಸ್ ಆಗುವುದು ಯಾವುದೇ ರೀತಿಯಲ್ಲಿ ಒಳ್ಳೆಯದಲ್ಲ. ವ್ಯಾಯಾಮವು (Exercise) ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ಬಿಡಲು ನಿಮ್ಮ ಚರ್ಮವನ್ನು ತಾಜಾವಾಗಿರಿಸಿಕೊಳ್ಳುವುದು ಯಾವಾಗಲೂ ಉತ್ತಮವಾಗಿದೆ.
ವ್ಯಾಯಾಮ ಮಾಡ್ಬೇಕು ನಿಜ, ಅದಕ್ಕೆ ತಕ್ಕ ಫುಡ್ ತಿಂದ್ರೆ ಮತ್ತೂ ಒಳ್ಳೇದು!
1. ಮೇಕಪ್ ನಿಮ್ಮ ಚರ್ಮದಲ್ಲಿ ಸಿಕ್ಕಿಹಾಕಿಕೊಳ್ಳಬಹುದು
ವ್ಯಾಯಾಮ ಮಾಡುವಾಗ ಬೆವರು ನಿಮ್ಮ ಚರ್ಮದ ಮೇಲೆ ಸಿಕ್ಕಿಹಾಕಿಕೊಳ್ಳಬಹುದು. ನಂತರ, ಬೆವರು ಬಿಡುಗಡೆ ಮಾಡಲು ನಿಮ್ಮ ರಂಧ್ರಗಳು ದೊಡ್ಡದಾಗುವುದರಿಂದ, ಆ ಕಣಗಳು ರಂಧ್ರಗಳನ್ನು ಪ್ರವೇಶಿಸಬಹುದು, ಇದು ಮುಖದಲ್ಲಿ ಹೆಚ್ಚು ಮೊಡವೆಗಳು (Pimple) ಮತ್ತು ಕಪ್ಪು ಚುಕ್ಕೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ನಿಮ್ಮ ದೈನಂದಿನ ಜಿಮ್ ಸಮಯದ ಮೊದಲು ಫೌಂಡೇಶನ್, ಬಿಬಿ ಕ್ರೀಮ್‌ಗಳು, ಐಲೈನರ್ ಮೊದಲಾದ ಯಾವುದೇ ಮೇಕಪ್ ಐಟಂ ಬಳಸುವುದನ್ನು ತಪ್ಪಿಸಿ.
2. ಶಾಖ ಮತ್ತು ಬೆವರಿನ ಜೊತೆಗೆ ಮೇಕಪ್ ಉತ್ತಮ ಮಿಶ್ರಣವಲ್ಲ
ನೀವು ವ್ಯಾಪಕವಾದ ತಾಲೀಮು ಮಾಡಿದಾಗ, ನಿಮ್ಮ ದೇಹವು ಬಿಸಿಯಾಗುತ್ತದೆ ಮತ್ತು ನಿಮ್ಮ ಬೆವರು ಗ್ರಂಥಿಗಳು ಹೆಚ್ಚು ಬೆವರು ಉತ್ಪಾದಿಸುತ್ತವೆ. ಆ ಕ್ಷಣದಲ್ಲಿ ನಿಮ್ಮ ರಂಧ್ರಗಳ ಮೇಲೆ ಯಾವುದೇ ಮೇಕ್ಅಪ್ ಇದ್ದರೆ ಅದು ಆರೋಗ್ಯಕ್ಕೆ ಕೆಟ್ಟದ್ದನ್ನು ಉಂಟು ಮಾಡುತ್ತದೆ. ಇದು ವಿವಿಧ ಚರ್ಮದ ಸಮಸ್ಯೆಗಳು ಮತ್ತು ಚುಕ್ಕೆಗಳಿಗೆ ಕಾರಣವಾಗಬಹುದು. ಆದ್ದರಿಂದ, ನೀವು ಸೌಮ್ಯವಾದ ಕ್ಲೆನ್ಸರ್‌ನಿಂದ ನಿಮ್ಮ ಮುಖವನ್ನು (Face) ಸ್ವಚ್ಛಗೊಳಿಸಿ, ನಂತರ ಟೋನರ್ ಬಳಸಿ. ತೈಲ ಮುಕ್ತ ಲೋಷನ್ ಅನ್ನು ಬಳಸುತ್ತೀರೆಂದು ಖಚಿತಪಡಿಸಿಕೊಳ್ಳಿ.
ಜಿಮ್ನಲ್ಲಿ ಎಷ್ಟೇ ಬೆವರಿಳಿಸಿದ್ರು ಬೈಸೆಪ್ಸ್ ಬಿಲ್ಡ್ ಆಗ್ತಿಲ್ವಾ? ಇಲ್ಲಿದೆ ನೋಡಿ ರೀಸನ್!
3. ಮೊಡವೆಗಳಿಗೆ ಕಾರಣವಾಗಬಹುದು
ಮೇಕ್ಅಪ್ ಲೇಯರ್ ತೆರೆದ ರಂಧ್ರಗಳನ್ನು ಮುಚ್ಚಬಹುದು ಮತ್ತು ಕಿರಿಕಿರಿ ಮೊಡವೆಗಳಿಗೆ ಕಾರಣವಾಗಬಹುದು. ಎಲ್ಲಾ ಮೇಕ್ಅಪ್, ಕೊಳಕು ಮತ್ತು ಬೆವರು ಆ ರಂಧ್ರಗಳಿಗೆ ಮರಳುತ್ತದೆ. ಇದು ತೊಂದರೆಗೀಡಾದ ಜಿಟ್‌ಗಳಿಗೆ ಕಾರಣವಾಗುತ್ತದೆ. ಮೇಕಪ್ ಬ್ಯಾಕ್ಟೀರಿಯಾಕ್ಕೆ ಅಂಟಿಕೊಳ್ಳಲು ಸುಲಭವಾಗುತ್ತದೆ.
4. ಬ್ಲ್ಯಾಕ್ ಹೆಡ್ಸ್ ಉಂಟಾಗಬಹುದು
ಜಿಮ್‌ಗಳು ಬ್ಯಾಕ್ಟೀರಿಯಾದ ಮೂಲವಾಗಿದೆ. ಹೀಗಾಗಿ ಮೊಡವೆಗಳ ಜೊತೆಗೆ, ನಿಮ್ಮ ತೆರೆದ ರಂಧ್ರಗಳು ಕಪ್ಪು ಚುಕ್ಕೆಗಳ (Black mark) ಬೆಳವಣಿಗೆಗೆ ಕಾರಣವಾಗಬಹುದು. ಹೀಗಾಗಿ ಜಿಮ್‌ಗೆ ತೆರಳುವಾಗ ಮೇಕಪ್ ಮಾಡುವ ಮುನ್ನ ಇನ್ನೊಮ್ಮೆ ಯೋಚಿಸಿ.
ಜಿಮ್‌ಗೆ ಮೇಕ್ಅಪ್ ಧರಿಸುವುದು ಹೇಗೆ ?
ಜಿಮ್‌ಗೆ ಹೋಗುವ ಉದ್ದೇಶವೇ ವ್ಯಾಯಾಮವಾಗಿರುವ ಕಾರಣ ನೀವು ಯಾವುದೇ ಮೇಕಪ್ ಧರಿಸದೆ ಅಲ್ಲಿಗೆ ಹೋಗುವುದು ಒಳ್ಳೆಯದು. ಆದರೆ ನೀವು ತೀರಾ ಪೇಲವ ಮುಖ ಹೊತ್ತುಕೊಂಡು ವ್ಯಾಯಾಮ ಮಾಡಲು ಇಷ್ಟಪಡುವುದಿಲ್ಲವಾದರೆ ಸಿಂಪಲ್ ಮೇಕಪ್ ಮಾಡಿಕೊಳ್ಳಬಹುದು. ಸೌಮ್ಯವಾದ ಐಲೈನರ್ ಮತ್ತು ಲಿಪ್ ಬಾಮ್ ಧರಿಸಲು ಆಯ್ಕೆ ಮಾಡಬಹುದು.