ಜಿಮ್ನಲ್ಲಿ ಎಷ್ಟೇ ಬೆವರಿಳಿಸಿದ್ರು ಬೈಸೆಪ್ಸ್ ಬಿಲ್ಡ್ ಆಗ್ತಿಲ್ವಾ? ಇಲ್ಲಿದೆ ನೋಡಿ ರೀಸನ್!
ಈಗಿನ ಯುವಜನತೆ ಜಿಮ್ ಗೆ ಹೋಗೋದೇ, ಬೈಸೆಪ್ಸ್ ಬಿಲ್ಡ್ ಮಾಡೋಕೆ. ಜನರು ಹೆಚ್ಚು ಬೈಸೆಪ್ ಗಳನ್ನು ರೂಪಿಸಲು ಗಂಟೆಗಳ ಕಾಲ ಬೆವರಿಳಿಸುತ್ತಾರೆ. ಆದರೆ ಕೆಲವರಲ್ಲಿ ಎಷ್ಟು ಬೆವರಿಳಿಸಿದ್ರೂ ಯಾವ ರಿಸಲ್ಟ್ ಕೂಡ ಕಾಣಲ್ಲ. ಯಾಕಂದ್ರೆ, ಬೈಸೆಪ್ಸ್ ವ್ಯಾಯಾಮಗಳ ತಪ್ಪುಗಳು ನಿಮ್ಮ ಎಲ್ಲಾ ಕಠಿಣ ಪರಿಶ್ರಮವನ್ನು ಹಾಳುಮಾಡುತ್ತಿರುತ್ತವೆ. ಇಲ್ಲಿ ಅಂತಹ ಕೆಲವು ತಪ್ಪುಗಳನ್ನು ಹೇಳಲಾಗಿದೆ, ಇದನ್ನು ಬೈಸೆಪ್ಸ್ ವರ್ಕೌಟ್ ಸಮಯದಲ್ಲಿ ಜನರು ಮಾಡುತ್ತಾರೆ. ಇದರೊಂದಿಗೆ, ಬೈಸೆಪ್ಸ್ ಹೆಚ್ಚು ಬಿಲ್ಡ್ ಮಾಡೋ ಕೆಲವು ವ್ಯಾಯಾಮಗಳು ಇಲ್ಲಿವೆ ನೋಡಿ.
ನೀವು ಕೂಡ ಜಿಮ್ ಹೋಗಿ ಬೆವರಿಳಿಸ್ತಾ ಇದೀರಾ? ಅದೆಷ್ಟು ಬೆವರಿಳಿಸಿದ್ರೂ ಬೈಸೆಪ್ಸ್ (Biceps)ಮಾತ್ರ ಯಾಕೆ ಬಿಲ್ಡ್ ಆಗ್ತಿಲ್ಲಾ ಅಂತಾ ಯೋಚ್ನೆ ಮಾಡ್ತಿದ್ದೀರಾ? ಯೋಚ್ನೆ ಮಾಡ್ಲೇ ಬೇಕು. ಯಾಕಂದ್ರೆ ನೀವು ತಪ್ಪು ಮಾಡ್ತಾ ಇದ್ದೀರ… ಹೌದು, ಜಿಮ್ ನಲ್ಲಿ ನೀವು ಮಾಡೋ ಸಣ್ಣ ತಪ್ಪಿನಿಂದ ನಿಮಗೆ ಬೈಸೆಪ್ಸ್ ಪಡೆಯಲು ಕಷ್ಟವಾಗುತ್ತಿರಬಹುದು. ಹಾಗಿದ್ರೆ ಬನ್ನಿ ನೀವು ಮಾಡುತ್ತಿರುವ ತಪ್ಪು ಯಾವುವು ಅನ್ನೋದನ್ನು ನೋಡೋಣ.
ಮೊದಲ ತಪ್ಪು - ಭಾರವಾದ ತೂಕ(Weight) ಹೆಚ್ಚು ಎತ್ತುವುದು
ಹೆಚ್ಚಿನ ಜನರು ತಾವು ಹೆಚ್ಚು ಭಾರವಾದ ತೂಕ ಎತ್ತಿದಾಗ, ಬೈಸೆಪ್ಸ್ ಬೇಗನೆ ದೊಡ್ಡದಾಗುತ್ತೆ ಎಂದು ಭಾವಿಸುತ್ತಾರೆ. ಆದರೆ ಇದು ಒಂದು ದೊಡ್ಡ ತಪ್ಪು, ಇದು ನಿಮ್ಮ ಬೈಸೆಪ್ಸ್ ನ ಬೆಳವಣಿಗೆಯನ್ನು ನಿಲ್ಲಿಸುತ್ತೆ. ಹಾಗಾಗಿ ನೀವು ಹೆಚ್ಚು ಭಾರ ಎತ್ತೋ ಮೊದಲು ಯೋಚನೆ ಮಾಡಬೇಕಾದ್ದು ಮುಖ್ಯ.
ಬೈಸೆಪ್ಸ್ ವರ್ಕೌಟ್ ನಲ್ಲಿ(Workout) ನೀವು ಹೆಚ್ಚು ಭಾರ ಎತ್ತಿದಾಗ, ನಿಮ್ಮ ಫಾರ್ಮ್ ಹದಗೆಡುತ್ತೆ. ಈ ಕಾರಣದಿಂದಾಗಿ, ವ್ಯಾಯಾಮದ ಪರಿಣಾಮವು ಬೈಸೆಪ್ಸ್ ಸ್ನಾಯುಗಳ ಬದಲಿಗೆ ಬೇರೆಡೆಗೆ ಸ್ಥಳಾಂತರಗೊಳ್ಳಲು ಪ್ರಾರಂಭಿಸುತ್ತೆ .ಹಾಗಾಗಿ ನೀವು ಎಷ್ಟೇ ಟ್ರೈ ಮಾಡಿದ್ರು ರಿಸಲ್ಟ್ ಸಿಗೋದಿಲ್ಲ.
ಈ ತಪ್ಪನ್ನು ಸರಿಪಡಿಸೋದು ಹೇಗೆ?
ಮೊದಲಿಗೆ, ಪ್ರತಿಯೊಂದು ಬೈಸೆಪ್ಸ್ ವ್ಯಾಯಾಮದ ಸರಿಯಾದ ರೂಪವನ್ನು ಕಲಿಯಿರಿ. ಇದರ ನಂತರ, ಕ್ರಮೇಣ ಅದರ ತೂಕವನ್ನು ಹೆಚ್ಚಿಸಿ. ತೂಕಕ್ಕಿಂತ ಹೆಚ್ಚಾಗಿ ನಿಮ್ಮ ಫಾರ್ಮ್ ಮೇಲೆ ಗಮನ ಹರಿಸಿ. ಎಲ್ಲಾ ಸರಿಯಾಗಿ ಇರಬೇಕು ಅನ್ನೋದಾದ್ರೆ ನೀವು ಟ್ರೈನರ್(Trainer) ಸಹಾಯ ಪಡೆದುಕೊಳ್ಳಲೇಬೇಕು.
ಎರಡನೇ ತಪ್ಪು - ಕೇವಲ ಬೈಸೆಪ್ಸ್ ವ್ಯಾಯಾಮಗಳನ್ನು ಮಾಡುವುದು
ಹೌದು ಬೈಸೆಪ್ಸ್ ವ್ಯಾಯಾಮಗಳನ್ನು ಮಾಡೋದರಿಂದ ಬೈಸೆಪ್ಸ್ ಮಸಲ್ಸ್ ನಂತೆ(Muscles) ಕಾಣೋದಿಲ್ಲ. ಯಾಕಂದ್ರೆ, ಬೈಸೆಪ್ಸ್ ವ್ಯಾಯಾಮವು ಬೈಸೆಪ್ಸ್ ಹೆಡ್ ಅನ್ನು ಮಾತ್ರ ಹೆಚ್ಚಿಸುತ್ತೆ. ಆದರೆ, ಟ್ರೈಸೆಪ್ಸ್ ಸ್ನಾಯುಗಳು ಬೈಸೆಪ್ಸ್ ದೊಡ್ಡದಾಗಿ ಕಾಣುವಂತೆ ಮಾಡುವಲ್ಲಿ ಸಮಾನ ಪಾತ್ರವನ್ನು ಹೊಂದಿವೆ.
ಈ ತಪ್ಪನ್ನು ಸರಿಪಡಿಸೋದು ಹೇಗೆ?
ಬೈಸೆಪ್ಸ್ ದೊಡ್ಡದಾಗಿಸಲು ವ್ಯಾಯಾಮಗಳಲ್ಲಿ ಟ್ರೈಸೆಪ್ಸ್ ವ್ಯಾಯಾಮಗಳನ್ನು ಸಹ ಸೇರಿಸಿ. ಕೆಲವು ಟ್ರೈಸೆಪ್ಸ್ ವ್ಯಾಯಾಮಗಳು ಉತ್ತಮ ಫಲಿತಾಂಶ ನೀಡುತ್ತವೆ. ಅವು ಯಾವುವೆಂದರೆ ಡೈಮಂಡ್ ಪುಶ್-ಅಪ್(Push up), ಕಿಕ್ ಬ್ಯಾಕ್, ಟ್ರೈಸೆಪ್ಸ್ ಎಕ್ಸ್ ಟೆನ್ಷನ್, ಟ್ರೈಸೆಪ್ಸ್ ಪುಶ್-ಡೌನ್ ಗಳು.
ಮೂರನೇ ತಪ್ಪು - ಫಾಸ್ಟ್(Fast) ಆಗಿ ವ್ಯಾಯಾಮ ಮಾಡೋದು
ಅವಸರದಲ್ಲಿ ವ್ಯಾಯಾಮ ಮಾಡೋದರಿಂದ ಬೈಸೆಪ್ಸ್ ನ ಬೆಳವಣಿಗೆಯನ್ನು ವಿಳಂಬಗೊಳಿಸುತ್ತೆ. ಜನರು ತ್ವರಿತವಾಗಿ ಮೂವ್ ಆಗೋ ಮೂಲಕ ಸಾಧ್ಯವಾದಷ್ಟು ಬೈಸೆಪ್ಸ್ ವ್ಯಾಯಾಮಗಳನ್ನು ಮಾಡಲು ಬಯಸುತ್ತಾರೆ. ಆದರೆ, ಬೈಸೆಪ್ಸ್ ಬೆಳೆಯದಿರಲು ಇದು ಒಂದು ದೊಡ್ಡ ಕಾರಣವಾಗಿದೆ. ಯಾಕಂದ್ರೆ, ಸ್ನಾಯು ದೊಡ್ಡದಾಗಲು ಹೆಚ್ಚಿನ ವ್ಯಾಯಾಮದ ಅಗತ್ಯವಿಲ್ಲ, ಅವುಗಳಿಗೆ ದೀರ್ಘಕಾಲದವರೆಗೆ ಒತ್ತಡದ ಅಗತ್ಯವಿದೆ.
ಈ ತಪ್ಪನ್ನು ಸರಿಪಡಿಸೋದು ಹೇಗೆ?
ಬೈಸೆಪ್ಸ್ ನ ಚಲನೆಯನ್ನು ನಿಧಾನವಾಗಿ ವ್ಯಾಯಾಮ ಮಾಡಿ. ಇದು ಸ್ನಾಯುಗಳ ಮೇಲೆ ದೀರ್ಘಕಾಲದವರೆಗೆ ಒತ್ತಡವನ್ನು(Stress) ಉಂಟುಮಾಡುತ್ತೆ. ನೀವು ಚಲನೆಯ ಉತ್ತುಂಗದಲ್ಲಿರುವಾಗ, ಕೆಲವು ಸೆಕೆಂಡುಗಳ ಕಾಲ ತೂಕವನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸಿ. ಈ ತಪ್ಪುಗಳನ್ನು ತೆಗೆದುಹಾಕುವ ಮೂಲಕ, ನಿಮ್ಮ ಬೈಸೆಪ್ಸ್ ಬಹಳ ಬೇಗನೆ ಬೆಳೆಯುತ್ತೆ.
ದೊಡ್ಡ ಬೈಸೆಪ್ಸ್ ಪಡೆಯಲು ಅತ್ಯುತ್ತಮ ವ್ಯಾಯಾಮಗಳು ಹೀಗಿವೆ
ಬಾರ್ ಬೆಲ್ ಕರ್ಲ್ಸ್
ಹಮ್ಮೇರ್ ಕರ್ಲ್
ಪ್ರೀಟ್ಚರ್ ಕರ್ಲ್
ಇನ್ಕ್ಲಿನ್ಡ್ ಡಂಬಲ್ ಕರ್ಲ್
ಇವುಗಳನ್ನು ಟ್ರೈ ಮಾಡಿ ನಿಮ್ಮ ಬೈಸೆಪ್ಸ್ ಹೆಚ್ಚು ಬಿಲ್ಡ್ ಮಾಡಿ. ಜೊತೆಗೆ ಸ್ಟೈಲಿಶ್ ಲುಕ್ (Stylish look)ಪಡೆಯಲು ಸಹ ಸಹಾಯ ಮಾಡುತ್ತೆ.