ನಿಮಗೆ ಆಸೆಯಾದ್ರೆ ನಮ್ಮ ಬಳಿ ಬನ್ನಿ ಆದ್ರೆ... ಕಾಮುಕರಿಗೆ ವೇಶ್ಯೆಯೊಬ್ಬಳ ಮನಕಲುಕುವ ಮನವಿ
ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ.ಈ ಘಟನೆಯ ಬಗ್ಗೆ ದೇಶದ ಪ್ರಮುಖ ರೆಡ್‌ಲೈಟ್ ಏರಿಯಾಗಳಲ್ಲಿ ಒಂದಾಗಿರುವ ಕೋಲ್ಕತ್ತಾದ ಸೋನಂಗಾಚಿಯ ಲೈಂಗಿಕ ಕಾರ್ಯಕರ್ತೆಯೊಬ್ಬರು ಪ್ರತಿಕ್ರಿಯಿಸಿದ್ದು, ಅವರ ಮಾತುಗಳು ಅನೇಕರನ್ನು ಭಾವುಕಗೊಳಿಸಿವೆ.
ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದು, ಘಟನೆ ಖಂಡಿಸಿ ವೈದ್ಯರುಗಳ ಪ್ರತಿಭಟನೆ 10ನೇ ದಿನಕ್ಕೆ ಕಾಲಿರಿಸಿದೆ. ಅನೇಕ ಸಿನಿಮಾ ತಾರೆಯರು, ರಾಜಕಾರಣಿಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾರೆ. ಆದರೆ ಈ ಘಟನೆಯ ಬಗ್ಗೆ ದೇಶದ ಪ್ರಮುಖ ರೆಡ್‌ಲೈಟ್ ಏರಿಯಾಗಳಲ್ಲಿ ಒಂದಾಗಿರುವ ಕೋಲ್ಕತ್ತಾದ ಸೋನಂಗಾಚಿಯ ಲೈಂಗಿಕ ಕಾರ್ಯಕರ್ತೆಯೊಬ್ಬರು ಪ್ರತಿಕ್ರಿಯಿಸಿದ್ದು, ಅವರ ಮಾತುಗಳು ಅನೇಕರನ್ನು ಭಾವುಕಗೊಳಿಸಿವೆ.
ಸಾಮಾನ್ಯವಾಗಿ ವೈಶ್ಯೆಯರು ಅಥವಾ ಲೈಂಗಿಕ ಕಾರ್ಯಕರ್ತೆಯರನ್ನು ದೇಹ ಮಾರಿಕೊಂಡು ಬದುಕುವವರು ಎಂದು ಸಮಾಜದಲ್ಲಿ ಬಹಳ ತುಚ್ಛವಾಗಿ ನೋಡಲಾಗುತ್ತದೆ. ಆದರೆ ಈ ಲೈಂಗಿಕ ಕಾರ್ಯಕರ್ತೆಯೊಬ್ಬರು ಮಾಡಿದ ಮನವಿ ಆಕೆಯ ಹೃದಯವೈಶಾಲ್ಯತೆಯನ್ನು ತೋರಿಸುವುದರ ಜೊತೆಗೆ ಅನೇಕರನ್ನು ಭಾವುಕರನ್ನಾಗಿಸಿದ್ದಾರೆ. ಹಾಗಾದರೆ ಆಕೆ ಏನು ಹೇಳಿದ್ರು ಮುಂದೆ ಓದಿ..
ಗಂಡಸರಿಗೆ ಲೈಂಗಿಕ ಕಾರ್ಯಕರ್ತೆಯರ ಮನವಿ:
ನಿಮಗೆ ಮಹಿಳೆಯರ ಬಗ್ಗೆ ಲೈಂಗಿಕ ಕಾಮನೆ ಅತೀಯಾಗಿ ಇದ್ದರೆ ನಮ್ಮ ಬಳಿ ಬನ್ನಿ, ಆದರೆ ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿರುವ ಮಹಿಳೆಯರ ಮೇಲೆ ದಯವಿಟ್ಟು ಅತ್ಯಾಚಾರ ಮಾಡಬೇಡಿ. ಅವರ ಮೇಲೆ ಅತ್ಯಾಚಾರ ಮಾಡುವ ಮೂಲಕ ಅವರ ಬದುಕನ್ನು ನಾಶ ಮಾಡಬೇಡಿ. ಇಲ್ಲಿ ನಾವು ಅತೀ ವಿಶಾಲವಾದ ರೆಡ್‌ಲೈಟ್ ಏರಿಯಾವನ್ನು ಹೊಂದಿದ್ದೇವೆ. ನೀವು ಇಲ್ಲಿಗೆ ಬರಬಹುದು. ಇಲ್ಲಿ ಲೈಂಗಿಕ ವೃತ್ತಿ ಮಾಡುವ ಅನೇಕ ಹುಡುಗಿಯರು, ಹೆಣ್ಣು ಮಕ್ಕಳು ಇದ್ದಾರೆ. ಅವರು 20 ರಿಂದ 50 ರೂಪಾಯಿಗೂ ಕೆಲಸ ಮಾಡುತ್ತಾರೆ. ಆದರೆ ದಯವಿಟ್ಟು ಬೇರೆ ಹೆಣ್ಣು ಮಕ್ಕಳನ್ನು ನಿಮ್ಮ ಕಾಮತೃಷೆಗೆ ಗುರಿಯಾಗಿಸಬೇಡಿ. ಬೇರೆ ಕೆಲಸಗಳನ್ನು ಮಾಡಿಕೊಂಡು ಸಮಾಜದಲ್ಲಿ ಮರ್ಯಾದೆಯಿಂದ ದುಡಿದು ಬದುಕುತ್ತಿರು ಹೆಣ್ಣು ಮಕ್ಕಳ ಮೇಲೆ ನಿಮ್ಮ ಕಾಮತೃಷೆಯನ್ನು ತೀರಿಸಬೇಡಿ. ನಾವು ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕಿದೆ ಎಂದು ಲೈಂಗಿಕ ಕಾರ್ಯಕರ್ತೆಯೊಬ್ಬರು ತುಂಬಾ ಸಮಾಜದ ಹೃದಯವನ್ನು ತಟ್ಟುವಂತೆ ಮಾತನಾಡಿದ್ದಾರೆ.
ಕೋಲ್ಕತ್ತಾ ವೈದ್ಯೆಯ ಕೊಂದವ ಆರ್‌ಜಿ ಕರ್ ಆಸ್ಪತ್ರೆಯ ಬಾಸ್ ಸಂದೀಪ್ ಘೋಷ್ ಶಿಷ್ಯ!
ಅವರ ಈ ಪ್ರಬುದ್ಧ ಮಾತುಗಳ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಅನೇಕರು ಆಕೆಯ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಗೌರವ ಸೂಚಿಸಿದ್ದು, ಆಕೆ ಸಮಾಜದ ನಿಜವಾದ ಹೀರೋ ಎಂದು ಬಣ್ಣಿಸಿದ್ದಾರೆ. ಸಮಾಜದಲ್ಲಿರುವ ಅತ್ಯಾಚಾರ ಮನಸ್ಥಿತಿಯ ವ್ಯಕ್ತಿಗಳು ಆಕೆಯಿಂದ ಮಾನವೀಯತೆಯ ಪಾಠ ಕಲಿಯಬೇಕಿದೆ ಎಂದು ಅನೇಕರು ಆಕೆಯ ಮಾತಿಗೆ ಪ್ರತಿಕ್ರಿಯಿಸಿದ್ದಾರೆ. ಹೆಚ್ಚಿನ ಸ್ತ್ರೀಕಾಮಿಗಳು, ಕರುಣೆ, ಪಶ್ಚಾತಾಪವನ್ನೇ ಹೊಂದಿರುವುದಿಲ್ಲ ಎಂದು ಮತ್ತೊಬ್ಬರು ಈ ವೀಡಿಯೋಗೆ ಪ್ರತಿಕ್ರಿಯಿಸಿದ್ದಾರೆ.
ಇದು ಕಾಮಕ್ಕೆ ಸಂಬಂಧಿಸಿದ ವಿಚಾರವಲ್ಲ, ಇದು ಕ್ರೌರ್ಯದ ಪರಮಾವಧಿ, ಇದನ್ನು ಲೈಂಗಿಕ ಕಾರ್ಯಕರ್ತೆಯಾದವಳು ಕೂಡ ಸಹಿಸಲಾಗದು. ಈ ರೀತಿಯ ಕ್ರೌರ್ಯ ಲೈಂಗಿಕ ಕಾರ್ಯಕರ್ತೆಯ ಮೇಲೂ ಮಾಡುವಂತಿಲ್ಲ, ಏಕೆಂದರೆ ಆಕೆಯೂ ಮನುಷ್ಯಳೇ ಎಂದು ಮತ್ತೊಬ್ಬರು ಕೋಲ್ಕತಾ ರೇಪ್ ಕೇಸ್ ಉಲ್ಲೇಖಿಸಿ ಲೈಂಗಿಕ ಕಾರ್ಯಕರ್ತೆಯ ಮಾತಿಗೆ ಪ್ರತಿಕ್ರಿಯಿಸಿದ್ದಾರೆ. ರೆಡ್‌ಲೈಟ್ ಏರಿಯಾದ ಮಹಿಳೆಯರು ಕೂಡ ಈ ಕ್ರೌರ್ಯ ಮೆರೆಯುವ, ಮಹಿಳೆಯರ ಮೇಲೆ ದೌರ್ಜನ್ಯವೆಸಗುವ ಕಾಮುಕರಿಗಿಂತ ಸಾವಿರ ಪಾಲು ವಾಸಿ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಉದ್ಯಮಿ ಮುಖೇಶ್ ಅಂಬಾನಿ ರೋಮ್ಯಾಂಟಿಕಾ? ಗಂಡನ ಬಗ್ಗೆ ನೀತಾ ಅಂಬಾನಿ ಏನ್ ಹೇಳಿದ್ರು ನೋಡಿ?
ವೃತ್ತಿ ಯಾವುದೇ ಇರಲಿ ದೇಹಕ್ಕಿಂತ ಆತ್ಮಶುದ್ಧಿ ತುಂಬಾ ಅಗತ್ಯ ಎಂಬುದನ್ನು ಈ ಮಹಿಳೆ ಸಾಬೀತುಪಡಿಸಿದ್ದಾರೆ. ಆದರೆ ದೇಶದ ಪ್ರಮುಖ ರೆಡ್‌ಲೈಟ್ ಏರಿಯವನ್ನು ಹೊಂದಿರುವ ಕೋಲ್ಕತ್ತಾದಲ್ಲೇ ಇಂತಹ ಅಮಾನವೀಯ ದುರಂತವೊಂದು ನಡೆದಿರುವುದು ಮಾತ್ರ ತೀವ್ರ ನಾಚಿಕೆಗೇಡಿನ ವಿಚಾರವಾಗಿದೆ.