Asianet Suvarna News Asianet Suvarna News

ಉದ್ಯಮಿ ಮುಖೇಶ್ ಅಂಬಾನಿ ರೋಮ್ಯಾಂಟಿಕಾ? ಗಂಡನ ಬಗ್ಗೆ ನೀತಾ ಅಂಬಾನಿ ಏನ್ ಹೇಳಿದ್ರು ನೋಡಿ?

 ನೀತಾ ಅಂಬಾನಿಯವರ ಹಳೆ ಸಂದರ್ಶನದ ತುಣುಕೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನೆ ಹಾಗೂ ಕುಟುಂಬದ ಬಾಸ್ ಯಾರು, ಮನೆಯಲ್ಲಿ ಯಾವ ವಿಚಾರವನ್ನು ಯಾರು ನಿರ್ಧಾರ ಮಾಡ್ತಾರೆ ಎಂಬ ವಿಚಾರವೂ ಸೇರಿದಂತೆ ಹಲವು ಪ್ರಶ್ನೆಗಳಿಗೆ ನೀತಾ ಚುಟುಕಾಗಿ ಉತ್ತರಿಸಿದ್ದು, ಆ ವೀಡಿಯೋ ತುಣುಕು ಈಗ ವೈರಲ್ ಆಗುತ್ತಿದೆ

Is billionaire mukesh ambani romantic what wife nita ambani said on this akb
Author
First Published Aug 22, 2024, 12:19 PM IST | Last Updated Aug 22, 2024, 12:21 PM IST

ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಅವರು ಬಿಲಿಯನೇರ್‌ ಪತ್ನಿ ಎಂಬ ಹೆಗ್ಗಳಿಕೆಯ ಹೊರತಾಗಿ ತಮ್ಮದೇ ಸ್ವಂತ ವ್ಯಕ್ತಿತ್ವ, ಉದ್ಯಮಶೀಲ ಗುಣ, ಬುದ್ಧಿವಂತಿಕೆ, ಬ್ಯೂಟಿಯಿಂದ ಬಹುತೇಕರನ್ನು ಜಗತ್ತಿನ ಅನೇಕರ ಮೇಲೆ ಪ್ರಭಾವ ಬೀರಿದವರು. ಮೂರು ಮುದ್ದು ಮಕ್ಕಳು, ಮೊಮ್ಮಕ್ಕಳನ್ನು ಹೊಂದಿರುವ ಕೂಡು ಕುಟುಂಬ ಅವರದ್ದು, ಇತ್ತೀಚೆಗೆ ನೀತಾ ಅಂಬಾನಿ ಹಾಗೂ ಮುಕೇಶ್‌ ಅಂಬಾನಿ ತಮ್ಮ ಕೊನೆಯ ಪುತ್ರ ಅನಂತ ಅಂಬಾನಿ ಅವರ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡುವ ಮೂಲಕ ಅದಕ್ಕೆ ಜಗತ್ತಿನ್ನೆಲ್ಲೆಡೆಯ ಗಣ್ಯಾತಿಗಣ್ಯರನ್ನು ಕರೆಯುವ ಮೂಲಕ ಜನಸಾಮಾನ್ಯರಿಂದ ಹಿಡಿದು ವಿಶ್ವಮಟ್ಟದಲ್ಲಿ ನಾಯಕರವರೆಗೆ ಅನೇಕರ ಹುಬ್ಬೇರುವಂತೆ ಮಾಡಿದವರು. 

ಹೀಗಿರುವಾಗ ಈ ಮಿಲಿಯನೇರ್‌ ಕುಟುಂಬದ ಬಗ್ಗೆ ಜನಸಾಮಾನ್ಯರಿಗೆ ಎಂದಿನಂತೆ ತುಸು ಹೆಚ್ಚೇ ಎಂಬ ಕುತೂಹಲವಿದೆ. ಅವರ ವೈಯಕ್ತಿಕ ಬದುಕು, ಅವರ ಜೀವನಶೈಲಿ, ಸಂಬಂಧ, ಅವರ ಡ್ರೆಸ್ಸಿಂಗ್ ಸ್ಟೈಲ್ ಅವರ ಅತೀ ದುಬಾರಿ ಆಭರಣಗಳು, ಆಸ್ತಿಗಳು, ಮನೆ ವೇಷಭೂಷಣ, ಅದ್ದೂರಿ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳಲು ಬಹುತೇಕ ಸಾಮಾನ್ಯರು ಆಸಕ್ತರಾಗಿರುತ್ತಾರೆ. ಹೀಗಿರುವಾಗ ಈ ಸುಂದರ ಯಶಸ್ವಿ ಕುಟುಂಬವನ್ನು ರೂಮ್ ಮಾಡ್ತಿರೋದು ಯಾರು ಎಂಬ ಕುತೂಹಲ ಅನೇಕರದ್ದು, ಈ ಕುತೂಹಲಕ್ಕೆ ನೀತಾ ಅಂಬಾನಿಯವರ ಹಳೆಯ ಸಂದರ್ಶನವೊಂದರಲ್ಲಿ ಉತ್ತರವಿದೆ. ನೀತಾ ಅಂಬಾನಿಯವರ ಹಳೆ ಸಂದರ್ಶನದ ತುಣುಕೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನೆ ಹಾಗೂ ಕುಟುಂಬದ ಬಾಸ್ ಯಾರು, ಮನೆಯಲ್ಲಿ ಯಾವ ವಿಚಾರವನ್ನು ಯಾರು ನಿರ್ಧಾರ ಮಾಡ್ತಾರೆ ಎಂಬ ವಿಚಾರವೂ ಸೇರಿದಂತೆ ಹಲವು ಪ್ರಶ್ನೆಗಳಿಗೆ ನೀತಾ ಚುಟುಕಾಗಿ ಉತ್ತರಿಸಿದ್ದು, ಆ ವೀಡಿಯೋ ತುಣುಕು ಈಗ ವೈರಲ್ ಆಗುತ್ತಿದೆ. ಹಾಗಿದ್ರೆ ಆ ವೀಡಿಯೋದಲ್ಲಿ ಏನಿದೆ ನೋಡೋಣ ಬನ್ನಿ. 

Nita Ambani: ನೀತಾ ಅಂಬಾನಿಯ ಶ್ರೀಮಂತಿಕೆಗೆ ಕಾರಣವೇ ಈ ರಹಸ್ಯ ಮಂತ್ರ! ನೀವೂ ಪಠಿಸಿ ಯಶಸ್ಸು ಗಳಿಸಿ

ಅಂದಹಾಗೆ ನೀತಾ ಅಂಬಾನಿ ಅವರ ಈ ಸಂದರ್ಶನವನ್ನು ಬಾಲಿವುಡ್‌ನ ಪ್ರಸಿದ್ಧ ಡಿಸೈನರ್ ಅಬು ಜಾನಿ ಹಾಗೂ ಸಂದೀಪ್ ಕೌಶಲ್ ಮಾಡಿದ್ದಾರೆ. ಅವರು ನೀತಾಗೆ ಕೇಳಿದ ಪ್ರಶ್ನೆಗಳು ಹಾಗೂ ಅದಕ್ಕೆ ನೀತಾ ಏನು ಉತ್ತರಿಸಿದರು ಎಂಬ ಡಿಟೇಲ್ಸ್ ಇಲ್ಲಿದೆ. 

ಸೋ ನೀತಾ ಅವರೇ ನಮ್ಮ ಪ್ರಕಾರ ನೀವು ಸ್ಪಷ್ಟವಾಗಿ ಒಬ್ಬರು ಬಾಸ್ ಲೇಡಿ ಎಂದು ಸಂದರ್ಶಕರು ಮೊದಲಿಗೆ ಹೇಳಿದ್ದು, ಇದಕ್ಕೆ ನೀತಾ ಅಡ್ಡಾಡ ತಲೆ ಅಲ್ಲಾಡಿಸುತ್ತಾರೆ. 

ಸಂದರ್ಶಕ: ಯಾರು ಜಗಳವನ್ನು ಮೊದಲು ಆರಂಭಿಸುತ್ತಾರೆ?
ನೀತಾ: ನಾನು

ಸಂದರ್ಶಕ: ಯಾರು ಮೊದಲು ಶಾಂತಗೊಳ್ಳುತ್ತಾರೆ?
ನೀತಾ: ನಾನು

ಸಂದರ್ಶಕ: ಯಾರು ಮನೆಯ ಇಂಟಿರಿಯರ್ ಡೆಕೋರೇಟರ್?
ನೀತಾ: ನಾನು

ಸಂದರ್ಶಕ: ಯಾರು ಗೆಸ್ಟ್‌ಗಳ ಲಿಸ್ಟ್ ಬಗ್ಗೆ ನಿರ್ಧಾರ ಮಾಡ್ತಾರೆ?
ನೀತಾ: ಮುಕೇಶ್‌ ನಿರ್ಧಾರ ಮಾಡ್ತಾರೆ

ಯಾರು ಬೇಗ ಸಿಟ್ಟಾಗುತ್ತಾರೆ?
ನೀತಾ: ಯಾರು ಕೂಡ ಇಲ್ಲ

ಸಂದರ್ಶಕ: ನಿಮ್ಮಿಬ್ಬರಲ್ಲಿ ಯಾರು ಅತೀಹೆಚ್ಚು ರೋಮ್ಯಾಂಟಿಕ್?
ನೀತಾ ಉತ್ತರ ಮುಕೇಶ್‌

ಸಂದರ್ಶಕ: ಮನೆಯಲ್ಲಿ ಕೊನೆಯದ್ದಾಗಿ ಯಾರ ಮಾತು ನಡೆಯುತ್ತದೆ?

ಇದಕ್ಕೆ ನೀತಾ ಅಂಬಾನಿ ಅವರು ಮುಕೇಶ್‌ ಎಂದು ಉತ್ತರಿಸಿದ್ದು, ಇದಕ್ಕೆ ಸಂದರ್ಶಕರು ನೋ ನಾವಿದ್ದನ್ನು ನಂಬುವುದಿಲ್ಲ ಎಂದು ನಗುತ್ತಾ ಹೇಳಿದ್ದಾರೆ.  ಅಲ್ಲದೇ ಮನೆಯಲ್ಲಿ ನೀವೇ ಕೆಲ ವಿಚಾರಗಳ ಬಗ್ಗೆ ಕೊನೆಯ ನಿರ್ಧಾರ ತೆಗೆದುಕೊಳ್ಳುತ್ತೀರಿ ಇದಂತು ಸತ್ಯ ಎಂದು ಅಬು ಜಾನಿ ಹಾಗೂ ಸಂದೀಪ್ ಕೌಶಲ್ ನೀತಾ ಅವರಿಗೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನೀತಾ ಅಂಬಾನಿ ಬೇಕಾದರೆ ನಮ್ಮ ಮಕ್ಕಳನ್ನು ಈ ಬಗ್ಗೆ ನೀವು ಕೇಳಬಹುದು ಮುಕೇಶ್‌ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಉತ್ತರಿಸಿದ್ದಾರೆ. ಈ ಸಂದರ್ಶನದ ತುಣುಕು ಈಗ ಸಖತ್ ವೈರಲ್ ಆಗ್ತಿದ್ದು, ಅನೇಕರು ನೀತಾ ಉತ್ತರ ಕೇಳಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

2024ರ ಸಾಲಿನಲ್ಲಿ ಮುಕೇಶ್ ಅಂಬಾನಿ ಪಡೆದ ಸ್ಯಾಲರಿ ಎಷ್ಟು, ಇದು ಅಚ್ಚರಿಯಾದರೂ ಸತ್ಯ!

ಇಲ್ಲಿದೆ ನೋಡಿ ನೀತಾ ಅಂಬಾನಿ ಸಂದರ್ಶನದ ತುಣುಕು

 

 

Latest Videos
Follow Us:
Download App:
  • android
  • ios