Kitchen Hacks : ಶುಂಠಿ – ಬೆಳ್ಳುಳ್ಳಿ ಹಾಳಾಗದಂತೆ ಇಡಲು ಇಲ್ಲಿದೆ ಐಡಿಯಾ

ಮಸಾಲೆಗೆ ಅನಿವಾರ್ಯ ಅಂತಾ ಒಂದಿಷ್ಟು ಶುಂಠಿ – ಬೆಳ್ಳುಳ್ಳಿ ತಂದಿರ್ತೇವೆ. ಆದ್ರೆ ನಾಲ್ಕೈದು ದಿನಕ್ಕೆ ಶುಂಠಿ ಬಾಡಿ ಹೋಗಿದ್ರೆ ಬೆಳ್ಳುಳ್ಳಿ ಮೊಳಕೆ ಬಂದಿರುತ್ತದೆ. ಸುಮ್ನೆ ಇಷ್ಟೊಂದು ದುಡ್ಡು ಕೊಟ್ವಿ, ನಾಲ್ಕು ದಿನ ಬರಲಿಲ್ಲ ಎನ್ನುತ್ತೇವೆ. ಈ ಶುಂಠಿ – ಬೆಳ್ಳುಳ್ಳಿಯನ್ನು ದೀರ್ಘಕಾದವರೆಗೆ ಸಂಗ್ರಹಿಸಲು  ಇಲ್ಲಿದೆ ಟಿಪ್ಸ್ 
 

Kitchen Hacks Tips

ಶುಂಠಿ (Ginger) – ಬೆಳ್ಳುಳ್ಳಿ (Garlic) ಯ ಬಳಕೆಯು ಭಾರತೀಯ ಅಡುಗೆಮನೆ (Kitchen) ಗಳಲ್ಲಿ ಸಾಮಾನ್ಯವಾಗಿದೆ. ಶುಂಠಿ - ಬೆಳ್ಳುಳ್ಳಿಯನ್ನು ಬಹುತೇಕ ಎಲ್ಲ ಮಸಾಲೆ (Spice) ಪದಾರ್ಥಗಳಿಗೂ ನಾವು ಬಳಸ್ತೇವೆ. ಶುಂಠಿ ಮತ್ತು ಬೆಳ್ಳುಳ್ಳಿ ಎರಡೂ ಆರೋಗ್ಯ (Health) ಕ್ಕೆ ಪ್ರಯೋಜನಕಾರಿ. ಅವುಗಳನ್ನು ಸೇವಿಸುವುದರಿಂದ ಅನೇಕ ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ. ಔಷಧಿ (Medicine) ಯಾಗಿ ಕೆಲಸ ಮಾಡುವ ಶುಂಠಿ – ಬೆಳ್ಳುಳ್ಳಿ ಆಹಾರ (Food) ದ ರುಚಿಯನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಮಹಿಳೆ (Woman) ಯರು ಅದರ ಬಳಕೆಯನ್ನು ಹೆಚ್ಚು ಮಾಡ್ತಾರೆ. ಒಂದೇ ಬಾರಿ ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಲು ಸಾಧ್ಯವಿಲ್ಲ. ಯಾಕೆಂದ್ರೆ ಮನೆಯಲ್ಲಿ ಅದನ್ನು ಅನೇಕ ದಿನಗಳ ಕಾಲ ಕೆಡದಂತೆ ಇಡುವುದು ಕಷ್ಟ. ಬೆಳ್ಳುಳ್ಳಿ ಹಾಗೂ ಶುಂಠಿ ಒಣಗಿ ಹಾಳಾಗುತ್ತದೆ.  ಹಾಗಾಗಿ ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡಿದ್ರೆ ಒಳ್ಳೆಯದು. ಒಂದ್ವೇಳೆ ಹೆಚ್ಚು ಖರೀದಿ ಮಾಡಿಯಾಗಿದೆ, ಅದನ್ನು ಸರಿಯಾಗಿ ಜೋಪಾನ ಮಾಡೋದು ಹೇಗೆ ಎಂಬ ಪ್ರಶ್ನೆ ಬಂದ್ರೆ  ಅದಕ್ಕೆ ಉತ್ತರ ಇಲ್ಲಿದೆ. ಇಂದು ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಕೆಡದಂತೆ ಇಡೋದು ಹೇಗೆ ಎಂಬುದನ್ನು ನಾವು ಹೇಳ್ತೇವೆ. 

ಶುಂಠಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಸಲಹೆಗಳು :  
ಸಿಪ್ಪೆ ತೆಗೆದ ಶುಂಠಿಯನ್ನು ಏರ್ ಟೈಟ್ ಬ್ಯಾಗ್ ನಲ್ಲಿಟ್ಟು ಫ್ರಿಡ್ಜ್ ನಲ್ಲಿಡಿ. ಗಾಳಿಯಾಡದ ಚೀಲದಲ್ಲಿ ಶುಂಠಿ ಇಡೋದ್ರಿಂದ ತೇವಾಂಶ ಮತ್ತು ಆಮ್ಲಜನಕವು ಶುಂಠಿಯನ್ನು ತಲುಪುವುದಿಲ್ಲ ಮತ್ತು ಶುಂಠಿ ಕೆಡುವುದಿಲ್ಲ. ಬೇಸಿಗೆಯಲ್ಲಿ ಶುಂಠಿ ಶಿಲೀಂಧ್ರವನ್ನು ಪಡೆಯುತ್ತದೆ. ಶುಂಠಿಯನ್ನು ಗಾಳಿಯಾಡದ ಚೀಲದಲ್ಲಿ ಇರಿಸಿ ಅದನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದರೆ, ಶುಂಠಿಯನ್ನು ಎರಡು ತಿಂಗಳವರೆಗೆ ತಾಜಾ ಆಗಿಡಬಹುದು. 
ಈಗಾಗಲೇ ಕತ್ತರಿಸಿದ ಅಥವಾ ಸಿಪ್ಪೆ ಸುಲಿದ ಶುಂಠಿಯನ್ನು ನೀವು ಸಂಗ್ರಹಿಸಲು ಬಯಸಿದ್ರೆ ಅದಕ್ಕೆ ಪ್ಲಾಸ್ಟಿಕ್ ಬಳಸಬೇಕು. ಸಿಪ್ಪೆ ಸುಲಿದ ಶುಂಠಿಯನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಫ್ರಿಡ್ಜ್ ನಲ್ಲಿಡಿ. ಕತ್ತರಿಸಿದ ಮತ್ತು ಸಿಪ್ಪೆ ಸುಲಿದ ಶುಂಠಿಯನ್ನು ಒಂದು ವಾರದವರೆಗೆ ಸಂಗ್ರಹಿಸಬಹುದು.     
ಇದಲ್ಲದೆ ನೀವು ಏರ್ ಟೈಟ್ ಬಾಕ್ಸ್ ನಲ್ಲಿ ಕೂಡ ಶುಂಠಿಯನ್ನು ಇಡಬಹುದು. ಏರ್ ಟೈಟ್ ಬಾಕ್ಸ್ ನಲ್ಲಿ ಶುಂಠಿ ಹಾಕಿ ಅದನ್ನು ಫ್ರಿಜ್ ನಲ್ಲಿಟ್ಟರೆ ಅದು ತಾಜಾ ಆಗಿರುತ್ತದೆ.

ಪೂರಕ ಆಕ್ಸಿಜನ್ ಇಲ್ಲದೆ ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡಿದ ಪಿಯಾಲಿ ಬಾಸಕ್!

ಬೆಳ್ಳುಳ್ಳಿ ಸಂಗ್ರಹಿಸಲು ಸಲಹೆಗಳು : 
ಬೆಳ್ಳುಳ್ಳಿಯನ್ನು 6 ತಿಂಗಳವರೆಗೆ ಆರಾಮವಾಗಿ ಸಂಗ್ರಹಿಸಬಹುದು. ಇದಕ್ಕಾಗಿ, ಬೆಳ್ಳುಳ್ಳಿಯನ್ನು ಖರೀದಿಸುವಾಗ ಅವು ಮೊಳಕೆಯೊಡೆದಿದೆಯೇ ಎಂಬುದನ್ನು ಚೆಕ್ ಮಾಡಿ. ಮೊಳಕೆಯೊಡೆದ ಬೆಳ್ಳುಳ್ಳಿಯನ್ನು ಖರೀದಿ ಮಾಡ್ಬೇಡಿ.  ಬೆಳ್ಳುಳ್ಳಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು, ಅವುಗಳನ್ನು ಬೆಳಕಿನಿಂದ ದೂರದಲ್ಲಿ ಇರಿಸಿ.  ಬೆಳ್ಳುಳ್ಳಿಯನ್ನು ಚೀಲಗಳಲ್ಲಿ ಅಥವಾ ಪಾತ್ರೆಗಳಲ್ಲಿ ಪ್ಯಾಕ್ ಮಾಡ್ಬೇಡಿ.  

Real Story: ಅಪರಿಚಿತನೊಂದಿಗೆ ಕಳೆದಿದ್ದು ಒಂದೇ ರಾತ್ರಿ, ತಪ್ಪಿನಿಂದ ಇಡೀ ಜೀವನವೇ ಕತ್ತಲು

ಬೆಳ್ಳುಳ್ಳಿ ಮೊಗ್ಗುಗಳನ್ನು ಸಿಪ್ಪೆ ಸುಲಿದಿದ್ದಲ್ಲಿ ಅಥವಾ ಅದನ್ನು ಕತ್ತರಿಸಿದ್ದು, ಅದನ್ನು ಬಳಸಲು ಬಯಸದಿದ್ದರೆ, ಅದನ್ನು ಎಸೆಯುವ ಬದಲು, ಅದನ್ನು ಸಂಗ್ರಹಿಸಿ. ಅದನ್ನು ಹಾಳಾಗದಂತೆ ಕೆಲ ಕಾಲ ಸಂಗ್ರಹಿಸಬಹುದು. ಅದಕ್ಕೆ ನೀವು ಗಾಳಿಯಾಡದ ಬಿಗಿಯಾದ ಪಾತ್ರೆಯಲ್ಲಿ ತುಂಬಿಸಿ ಮತ್ತು ಫ್ರಿಜ್ ನಲ್ಲಿ ಇರಿಸಿ. ಈ ಬೆಳ್ಳುಳ್ಳಿಯನ್ನು ಎರಡರಿಂದ ಮೂರು ವಾರಗಳವರೆಗೆ ಬಳಸಬಹುದು. ಆದ್ರೆ ಕತ್ತರಿಸಿದ ಬೆಳ್ಳುಳ್ಳಿಯನ್ನು ನೀವು ದೀರ್ಘಕಾಲದ ನಂತ್ರ ಬಳಸಿದ್ರೆ ಅದ್ರ ವಾಸನೆ ಹೊರಟು ಹೋಗಿರುತ್ತದೆ. ಹಾಗೆಯೇ ಅದು ರುಚಿ ಕಳೆದುಕೊಂಡಿರುತ್ತದೆ. 
ಜನರು ಬೆಳ್ಳುಳ್ಳಿಯನ್ನು ಫ್ರಿಡ್ಜ್ ನಲ್ಲಿ ಇಡುವುದಿಲ್ಲ. ಆದರೆ ಬೆಳ್ಳುಳ್ಳಿಯನ್ನು ಸರಿಯಾದ ರೀತಿಯಲ್ಲಿ ಫ್ರೆಶ್ ಆಗಿ ಇಡಲು ಫ್ರಿಡ್ಜ್ ನಲ್ಲಿ ಇಡಬಹುದು. ಫ್ರಿಜ್ ನಲ್ಲಿ ಬೆಳ್ಳುಳ್ಳಿ ಇಡಲು ಬಯಸಿದ್ದರೆ ನೀವು ಬೆಳ್ಳುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಮತ್ತು ಪ್ಯಾಕ್ ಮಾಡಿ ಇಡಿ.

Latest Videos
Follow Us:
Download App:
  • android
  • ios