ಪೂರಕ ಆಕ್ಸಿಜನ್ ಇಲ್ಲದೆ ಮೌಂಟ್ ಎವರೆಸ್ಟ್ ಏರಿ ಸಾಧನೆ ಮಾಡಿದ ಪಿಯಾಲಿ ಬಾಸಕ್!
ಪಿಯಾಲಿ ಬಾಸಕ್ ಅವರು ಪೂರಕ ಆಮ್ಲಜನಕವಿಲ್ಲದೆ ಶಿಖರವನ್ನು ಏರಲು ಪ್ರಯತ್ನಿಸಿದ್ದಾರೆ. ಇದು "ಅತ್ಯಂತ ಅಪಾಯಕಾರಿ" ಎಂದು ಅನೇಕ ಆರೋಹಿಗಳು ಮತ್ತು ತಜ್ಞರು ಭಾವಿಸಿದ್ದರು. ಹಾಗಿದ್ದರೂ, ಪಿಯಾಲಿ ಅವರಿಗೆ 8,450 ಮೀಟರ್‌ಗಳನ್ನು ದಾಟಿದ ನಂತರ ಬಾಹ್ಯ ಆಮ್ಲಜನಕದ ಬೆಂಬಲವನ್ನು ಒದಗಿಸಬೇಕಾಗಿತ್ತು. ಆದರೆ, ಹಣಕಾಸು ಸಮಸ್ಯೆಯಲ್ಲಿರುವ ಪಿಯಾಲಿ ಬಾಸಕ್, ತಮ್ಮ ಪರ್ವತಾರೋಹಣದಲ್ಲಿ ಇನ್ನೂ 12 ಲಕ್ಷ ಬಾಕಿ ಇರಿಸಿಕೊಂಡಿದ್ದಾರೆ. ಈ ಹಣವನ್ನು ಪಾವತಿ ಮಾಡಿದಲ್ಲಿ ಮಾತ್ರವೇ ಎವರೆಸ್ಟ್ ಏರಿದ ಸಾಧನೆಯ ಪ್ರಮಾಣಪತ್ರ ಸಿಗಲಿದೆ.
ಕೋಲ್ಕತ್ತ (ಮೇ.24): ಚಂದನನಗರದ (Chandannagar) ಹುಡುಗಿ ಪಿಯಾಲಿ ಬಾಸಕ್ (Piyali Basak), ವಿಶ್ವದ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ (Mount Everest) ಏರುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಾಲಿಯೊಬ್ಬರು ಇದೇ ಮೊದಲ ಬಾರಿಗೆ ಎವರೆಸ್ಟ್ ಏರಿದ ದಾಖಲೆ ಇವರಿಗೆ ಸೇರಿದ್ದು ಮಾತ್ರವಲ್ಲದೆ, ಇದೇ ಮೊದಲ ಬಾರಿಗೆ ಕೃತಕ ಆಮ್ಲಜನಕದ (supplementary Oxygen ) ಸಹಾಯವಿಲ್ಲದೆ ಪಿಯಾಲಿ ಬಾಸಕ್ ಎವರೆಸ್ಟ್ ಅನ್ನು ಎರಿದ್ದಾರೆ ಎನ್ನುವುದು ವಿಶೇಷ. ಭಾನುವಾರ ಬೆಳಗ್ಗೆ 8.30ರ ಸುಮಾರಿಗೆ ಪಿಯಾಲಿ ಎವೆರೆಸ್ಟ್ ನ ತುದಿಯನ್ನು ತಲುಪಿದ್ದಾರೆ.
ಪೂರಕ ಆಮ್ಲಜನಕ ಅಥವಾ ಸಪ್ಲಿಮೆಂಟರಿ ಆಕ್ಸಿಜನ್ ಇಲ್ಲದೆ ಮೌಂಟ್ ಎವರೆಸ್ಟ್ ಏರುವ ಸಾಹಸವನ್ನು ಕೆಲವರು ಮಾತ್ರವೇ ಅಂದಾಜು ಮಾಡಿದ್ದರು. ಆದರೆ, ಪಿಯಾಲಿ ಬಾಸಕ್ ಈ ಸಾಧನೆ ಮಾಡುವ ಮೂಲಕ ಗಮನಸೆಳೆದಿದ್ದಾರೆ. ವಿಶ್ವದ ಅನೇಕ ಪರ್ವತಾರೋಹಿಗಳು ಹಾಗೂ ತಜ್ಞರು, ಕೃತಕ ಆಕ್ಸಿಜನ್ ಇಲ್ಲದೆ ಮೌಂಟ್ ಎವರೆಸ್ಟ್ ಏರುವುದನ್ನು ಅತ್ಯಂತ ಅಪಾಯಕಾರಿ ಎಂದೇ ಭಾವಿಸುತ್ತಾರೆ. ಹಾಗಿದ್ದರೂ, ಪಿಯಾಲಿ, 8,450 ಮೀಟರ್‌ಗಳನ್ನು ದಾಟಿದ ನಂತರ ಬಾಹ್ಯ ಆಮ್ಲಜನಕದ ಬೆಂಬಲವನ್ನು ಒದಗಿಸಬೇಕಾಗಿತ್ತು.
ಕ್ಯಾಂಪ್ 2 ತಲುಪಿರುವ ಪಿಯಾಲಿ ಬಾಸಕ್ ಈಗ ಲ್ಹೋಟ್ಸೆ ಶಿಖರದ ಕಡೆಗೆ ಹೋಗುತ್ತಿದ್ದಾಳೆ. ಆದರೆ, ಹಣಕಾಸು ಸಮಸ್ಯೆಯಲ್ಲಿರುವ ಪಿಯಾಲಿ ಬಾಸಕ್, ತಮ್ಮ ಪರ್ವತಾರೋಹಣದಲ್ಲಿ ಇನ್ನೂ 12 ಲಕ್ಷ ಬಾಕಿ ಇರಿಸಿಕೊಂಡಿದ್ದಾರೆ. ಈ ಹಣವನ್ನು ಪಾವತಿ ಮಾಡಿದಲ್ಲಿ ಮಾತ್ರವೇ ಎವರೆಸ್ಟ್ ಏರಿದ ಸಾಧನೆಯ ಪ್ರಮಾಣಪತ್ರ ಸಿಗಲಿದೆ.
ಪರ್ವತಾರೋಹಣದ ವ್ಯವಸ್ಥೆಗಳನ್ನು ಮಾಡುವ ಸಂಸ್ಥೆಯಾದ ಪಯೋನಿಯರ್ ಅಡ್ವೆಂಚರ್‌ನ ಅಧ್ಯಕ್ಷ ಪಸಾಂಗ್ ತೆಂಜೆ ಶೆರ್ಪಾ ಅವರು ಭಾನುವಾರ ಬೆಳಿಗ್ಗೆ 10:30 ಕ್ಕೆ ಶಿಖರವನ್ನು ತಲುಪಿದ್ದಾರೆ ಎಂದು ತಿಳಿಸಿದ್ದಾರೆ. 8,450 ಮೀಟರ್‌ಗಳ ನಂತರ ಬಸಾಕ್‌ನ ಆರೋಗ್ಯವು ಹದಗೆಟ್ಟಿತ್ತು ಈ ಹಂತದಲ್ಲಿ ಅವರಿಗೆ ಬಾಹ್ಯ ಆಮ್ಲಜನಕದ ಬೆಂಬಲವನ್ನು ಒದಗಿಸಲಾಗಿದೆ ಎಂದು ಪಸಾಂಗ್ ತೆಂಜೆ ಶೆರ್ಪಾ ಹೇಳಿದರು. ಶಿಖರದಿಂದ ಶಿಬಿರದ ಕಡೆಗೆ ಇಳಿಯುವ ವೇಳೆ ಹವಾಮಾನವು ಕೆಟ್ಟದಾಗಿತ್ತು. ಪಿಯಾಲಿ ಭಾನುವಾರದಂದು ಸುಮಾರು 6 ಗಂಟೆಗೆ (ಸ್ಥಳೀಯ ಸಮಯ) ಶಿಬಿರವನ್ನು 4 ತಲುಪಿದ್ದಾರೆ.
ಪಿಯಾಲಿ ಬಾಸಕ್ ಸೋಮವಾರದ ವೇಳೆಗೆ 2ನೇ ಶಿಬಿರಕ್ಕೆ ಬರುತ್ತಾರೆ ಮತ್ತು ಆರೋಗ್ಯ ಸುಧಾರಿಸಿದಲ್ಲಿ ಮೌಂಟ್ ಲೊಟ್ಸೆ ಕಡೆಗೆ ಹೋಗುತ್ತಾರೆ ಎಂದು ಪಸಾಂಗ್ ತೇಂಜೆ ಶೆರ್ಪಾ ಹೇಳಿದ್ದಾರೆ. ಪಿಯಾಲಿ ಬಾಸಕ್ ಶುಕ್ರವಾರ ಸಂಜೆ ಶಿಖರವನ್ನು ಏರಲು ಪ್ರಯತ್ನಿಸಿದ್ದರು ಎಂದು ವರದಿಯಾಗಿತ್ತು. ಆದರೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಭಾನುವಾರದಂದು ಕೊನೆಯ ಬಾರಿಗೆ ಪ್ರಯತ್ನ ಮಾಡುವುದಾಗಿ ತಿಳಿಸಿ ಅದರಲ್ಲಿ ಯಶಸ್ವಿಯಾಗಿದ್ದಾರೆ.
11 ದಿನದಲ್ಲಿ ಮೌಂಟ್ ಎವರೆಸ್ಟ್ ಏರಿದ 10 ವರ್ಷದ ಬಾಲಕಿ
2016 ರಲ್ಲಿ ಮೌಂಟ್ ಎವರೆಸ್ಟ್ ಏರಿದ ಪರ್ವತಾರೋಹಿ ಸತ್ಯರೂಪ್ ಸಿದ್ಧಾಂತ ಅವರು "ಪೂರಕ ಆಮ್ಲಜನಕವಿಲ್ಲದೆ 8,000 ಮೀಟರ್ ಮೇಲೆ ಏರುವುದು ತುಂಬಾ ಅಪಾಯಕಾರಿ" ಎಂದು ಹೇಳಿದರು. ಆರೋಹಿಗಳು ಎವರೆಸ್ಟ್ ಶಿಖರದಲ್ಲಿ ಸ್ವಲ್ಪ ಸಮಯದವರೆಗೆ ಸರದಿಯಲ್ಲಿ ಕಾಯಬೇಕಾಗುತ್ತದೆ. ಈ ವೇಳೆ ದೇಹವು ತಣ್ಣಗಾಗಲು ಪ್ರಾರಂಭಿಸುತ್ತದೆ ಮತ್ತು ಆ ಸಮಯದಲ್ಲಿ ಆರೋಹಿಗಳು ಹೆಚ್ಚು ಆಮ್ಲಜನಕವನ್ನು ಬಳಸುತ್ತಾರೆ ಎಂದು ಸಿದ್ಧಾಂತ ಹೇಳಿದ್ದಾರೆ. ಇದರ ನಡುವೆ, 2016 ರಲ್ಲಿ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮತ್ತೊಬ್ಬ ಪರ್ವತಾರೋಹಿ ದೇಬ್ರಾಜ್ ದತ್ತಾ, "ಆಕ್ಸಿಜನ್ ಇಲ್ಲದೆ ಎವರೆಸ್ಟ್ ಶಿಖರವನ್ನು ಏರುವುದು ಸ್ವತಃ ಒಂದು ಕೆಚ್ಚೆದೆಯ ಸಾಧನೆಯಾಗಿದೆ" ಎಂದು ಹೇಳಿದರು.
ತನ್ನದೇ ದಾಖಲೆ ಮುರಿದ ನೇಪಾಳಿ ಶೆರ್ಪಾ: 26ನೇ ಬಾರಿ ಎವರೆಸ್ಟ್ ಏರಿದ ಕಾಮಿರಿಟಾ
ಯಾರೀಕೆ ಪಿಯಾಲಿ ಬಾಸಕ್: ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಪಿಯಾಲಿ, ಬಾಲ್ಯದಿಂದಲೇ ಮೌಂಟ್ ಎವರೆಸ್ಟ್ ಏರುವ ಕನಸು ಕಂಡಿದ್ದರು. ಕಳೆದ ಅಕ್ಟೋಬರ್ ನಲ್ಲಿ ನೇಪಾಳದಲ್ಲಿ ಮೌಂಟ್ ಧುಲ್ ಗುರಿಯನ್ನು ಏರುವ ಮೂಲಕ ಪಿಯಾಲಿ ಗಮನಸೆಳೆದಿದ್ದರು. ಆ ಬಳಿಕ ಮಾನ್ಸುಲಾ ಪರ್ವತದ ಶಿಖರವನ್ನೂ ತಲುಪಿದ್ದರು. 2019ರಲ್ಲಿ ಮೌಂಟ್ ಎವರೆಸ್ಟ್ ಏರುವಲ್ಲಿ ವಿಫಲವಾಗಿದ್ದ ಪಿಯಾಲಿ ಬಾಸಕ್, ಇದರಲ್ಲಿ ಸೋಲು ಕಂಡಿದ್ದರು.