Real Story: ಅಪರಿಚಿತನೊಂದಿಗೆ ಕಳೆದಿದ್ದು ಒಂದೇ ರಾತ್ರಿ, ತಪ್ಪಿನಿಂದ ಇಡೀ ಜೀವನವೇ ಕತ್ತಲು
ಪ್ರತಿಯೊಂದು ವಿಷ್ಯದಲ್ಲೂ ಎಚ್ಚರಿಕೆ ಹೆಜ್ಜೆಯಿಡ್ಬೇಕು. ತಪ್ಪಾದ್ಮೇಲೆ ಪಶ್ಚಾತ್ತಾಪ ಪಡುವ ಬದಲು ತಪ್ಪಾಗದಂತೆ ಎಚ್ಚರವಹಿಸ್ಬೇಕು. ತಿಳಿದೋ ತಿಳಿಯದೆಯೋ ಮಾಡಿದ ಕೆಲ ತಪ್ಪುಗಳು ಜೀವನ ಪರ್ಯಂತ ನಮ್ಮನ್ನು ಕಾಡುತ್ತವೆ. ಹೆಚ್ ಐವಿ ಪೀಡಿತ ಹುಡುಗಿ ಬಾಳಲ್ಲೂ ಅದೇ ನಡೆದಿದೆ.
ನಾವಂದುಕೊಂಡಂತೆ ಜೀವನ (Life) ದಲ್ಲಿ ಎಲ್ಲವೂ ನಡೆಯಬೇಕೆಂದೇನಿಲ್ಲ. ಬಹುತೇಕ ಬಾರಿ ನಾವು ಬಯಸಿದ್ದು ಒಂದಾದ್ರೆ ಸಿಗೋದು ಮತ್ತಿನ್ನೇನೋ ಆಗಿರುತ್ತದೆ. ಎಂದೂ ಕಲ್ಪಿಸಿಕೊಳ್ಳದ ದೊಡ್ಡ ಬಂಡೆಯೊಂದು ತಲೆ ಮೇಲೆ ಬಂದು ಕುಳಿತಿರುತ್ತದೆ. ಆದ್ರೆ ಅದಕ್ಕೆ ದುಃಖಿಸದೆ ಮುಂದೆ ಸಾಗುವುದು ಬುದ್ದಿವಂತರ ಲಕ್ಷಣ. ಇದಕ್ಕೆ ಈ ಹುಡುಗಿ (Girl) ಉತ್ತಮ ನಿದರ್ಶನ ಎನ್ನಬಹುದು. ಹೆಚ್ ಐವಿ (HIV) ಯಂತಹ ಭಯಾನಕ ಖಾಯಿಲೆ ಬಂದ್ರೂ ತನ್ನ ಹಣೆ ಬರಹಕ್ಕೆ ಬೇಸತ್ತುಕೊಳ್ಳದೆ, ಅದಕ್ಕೆ ಕಾರಣರಾದವರನ್ನು ದೂರದೆ ಜೀವನ ನಡೆಸ್ತಿದ್ದಾಳೆ.
ಸಂಬಂಧ ತಂತು ಕುತ್ತು : ತಿಳಿಯದೇ ಮಾಡಿದ ತಪ್ಪಿಗೆ ಮಹಿಳೆ ಈಗ ಶಿಕ್ಷೆ ಅನುಭವಿಸುತ್ತಿದ್ದಾಳೆ. ಘಟನೆ ನಡೆದಿದ್ದು 2003ರಲ್ಲಿ. ಆಗ ಯುವತಿ ವಯಸ್ಸು 19 ವರ್ಷ. ಆಸ್ಟ್ರೇಲಿಯಾದ ಪರ್ಥ್ ನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡ್ತಿದ್ದಳಂತೆ. ಈ ವೇಳೆ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ವ್ಯಕ್ತಿಯೊಬ್ಬನ ಪರಿಚಯವಾಗಿದೆ. ತುಂಬಾ ಸುಂದರವಾಗಿದ್ದ ವ್ಯಕ್ತಿಗೆ ಯುವತಿ ಆಕರ್ಷಿತಳಾಗಿದ್ದಾಳೆ. ಇಬ್ಬರ ಚಾಟಿಂಗ್, ಡೇಟಿಂಗ್ ವರೆಗೆ ಬಂದಿದೆ. ಒಂದು ದಿನ ಇಬ್ಬರೂ ಮುಖಾಮುಖಿಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಯುವತಿ ತನ್ನ ಮನೆಗೆ ಅಪರಿಚಿತ ವ್ಯಕ್ತಿಯನ್ನು ಕರೆದಿದ್ದಾಳೆ. ಇಬ್ಬರ ಮಧ್ಯೆ ಮಾತು, ಮುತ್ತಿಗೆ ತಿರುಗಿದೆ. ಇಬ್ಬರ ಮಧ್ಯೆ ಶಾರೀರಿಕ ಸಂಬಂಧ ಕೂಡ ಬೆಳೆದಿದೆ. ಆದ್ರೆ ಸಂಬಂಧ ಬೆಳೆಸುವ ಮೊದಲು ಯುವತಿ ಪ್ರಶ್ನೆಯೊಂದನ್ನು ಕೇಳಿದ್ದಳಂತೆ. ನಿನಗೆ ಹೆಚ್ ಐವಿ ಇದ್ಯಾ ಎಂದು ಪ್ರಶ್ನೆ ಮಾಡಿದ್ದಳಂತೆ. ಆದ್ರೆ ಆಗ ಆತ ಮಹಾನ್ ತಪ್ಪು ಎಸಗಿದ್ದ. ಕೆಳಗೆ ನೋಡ್ತಾ ತಲೆಯಾಡಿಸಿದ್ದನಂತೆ. ಆತನನ್ನು ಸಂಪೂರ್ಣವಾಗಿ ನಂಬಿದ ಹುಡುಗಿ ಸಂಬಂಧ ಬೆಳೆಸಿದ್ದಾಳೆ.
ಇದನ್ನೂ ಓದಿ: ನಾನು ಅವನಲ್ಲ..ಅವಳು ಎಂದಾಗ ಎಲ್ಲರೂ ಗೇಲಿ ಮಾಡಿದರು, ಈಗ ಆಕೆ ಹೆಸರಾಂತ ಡಾಕ್ಟರ್ !
ಕೆಲವೇ ದಿನದಲ್ಲಿ ಶುರುವಾಯ್ತು ಅನಾರೋಗ್ಯ : ಈ ಘಟನೆ ನಡೆದು ಕೆಲವೇ ದಿನಗಳಲ್ಲಿ ಯುವತಿಗೆ ವಿಪರೀತ ಜ್ವರ ಬಂದಿತ್ತಂತೆ. ವೈದ್ಯರ ಬಳಿ ಹೋದ ಯುವತಿ ಪರೀಕ್ಷೆ ಮಾಡಿಸಿಕೊಂಡಿದ್ದಳಂತೆ. ಯಾವ್ದಕ್ಕೂ ಇರಲಿ ಎಂಬ ಕಾರಣಕ್ಕೆ ಹೆಚ್ ಐವಿ ಪರೀಕ್ಷೆ ಕೂಡ ಮಾಡಿಸಿದ್ದಳಂತೆ. ಮೊದಲ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ವರದಿ ಎರಡನೇ ಸಮಯದಲ್ಲಿ ಪಾಸಿಟಿವ್ ಬಂದಿತ್ತು. ಆದ್ರೆ ಆಕೆ ಫ್ರೆಂಡ್ ವರದಿ ನೆಗೆಟಿವ್ ಬಂದಿತ್ತು.
ಹೆಚ್ ಐವಿ ಇದೆ ಎಂದು ವೈದ್ಯರು ಮಾಹಿತಿ ನೀಡ್ತಿದ್ದಂತೆ ಒಮ್ಮೆ ಸ್ಥಬ್ತವಾಗಿದ್ದ ಯುವತಿ ನಂತ್ರ ಧೈರ್ಯ ತಂದುಕೊಂಡಿದ್ದಳು.
ಮತ್ತೆ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಹುಡುಕಾಟ : ಹೆಚ್ ಐವಿ ಎಲ್ಲಿಂದ ಬಂತು ಎಂಬ ಪ್ರಶ್ನೆ ಯುವತಿಯನ್ನು ಸದಾ ಕಾಡ್ತಿತ್ತು. ಈ ಮಧ್ಯೆ ಹೆಚ್ ಐವಿ ಪೀಡಿತರ ಡೇಟಿಂಗ್ ಅಪ್ಲಿಕೇಷನ್ ಗೆ ಲಾಗಿನ್ ಆದ ಹುಡುಗಿ ಕಣ್ಣಿಗೆ ಒಬ್ಬನ ಪ್ರೊಫೈಲ್ ಬಿದ್ದಿದೆ. ಅದರಲ್ಲಿದ್ದ ಫೋಟೋ ನೋಡಿ ಹುಡುಗಿ ದಂಗಾದ್ಲು. ಹಿಂದೆ ಹೆಚ್ ಐವಿ ಇಲ್ಲವೆನ್ನುತ್ತ ತನ್ನ ಜೊತೆ ಸಂಬಂಧ ಬೆಳೆಸಿದ ಅಪರಿಚಿತ ವ್ಯಕ್ತಿ ಮೋಸ ಮಾಡಿದ್ದಾನೆ ಎಂಬುದು ಯುವತಿಗೆ ಗೊತ್ತಾಯ್ತು. ಹಿಂದೆ ಆತ ಆಡಿದ ಮಾತೆಲ್ಲ ನೆನಪಿಗೆ ಬಂತು. ಆದ್ರೂ ಆತನ ಜೊತೆ ಚಾಟಿಂಗ್ ಮುಂದುವರೆಸಿದ್ದಳು. ಆದ್ರೆ ಆತನಿಗೆ ನನ್ನ ಪರಿಚಯ ಸ್ವಲ್ಪವೂ ಇರಲಿಲ್ಲ. ನನ್ನೆಲ್ಲ ಪ್ರಶ್ನೆಗೆ ಆತ ಉತ್ತರ ನೀಡಿದ್ದ. 15 ವರ್ಷಗಳ ಹಿಂದೆಯೇ ಹೆಚ್ ಐವಿ ಶುರುವಾಗಿತ್ತು ಎಂದಿದ್ದ ಎನ್ನುತ್ತಾಳೆ ಯುವತಿ.
ಇದನ್ನೂ ಓದಿ: ಬಾಣಂತನ ಮುಗಿದ ಎಷ್ಟು ದಿನಗಳ ಬಳಿಕ ಲೈಂಗಿಕ ಜೀವನಕ್ಕೆ ಮರಳಬಹುದು?
ಕ್ಷಮಿಸಿ ಸುಮ್ಮನಾದ ಯುವತಿ : ತನಗೆ ಮೋಸ ಮಾಡಿ ಸಂಬಂಧ ಬೆಳೆಸಿ,ದೊಡ್ಡ ಖಾಯಿಲೆಗೆ ಕಾರಣವಾದ ವ್ಯಕ್ತಿಯನ್ನು ಕ್ಷಮಿಸುವ ನಿರ್ಧಾರ ತೆಗೆದುಕೊಂಡಿದ್ದಾಳೆ ಯುವತಿ. ಹಣೆಯಲ್ಲಿ ಬರೆದಿದ್ದು ಆಗ್ಬೇಕು. ಅದಕ್ಕೆ ನಾನೂ ಹೊಣೆ. ಹಾಗಾಗಿ ನಾನು ಅವನನ್ನು ಕ್ಷಮಿಸಿದ್ದೇನೆ ಎನ್ನುತ್ತಾಳೆ. ಆತ ಬದಲಾಗಿದ್ದಾನೆ, ಆತನ ಮುಖದಲ್ಲಿ ಪಶ್ಚಾತ್ತಾಪ, ನೋವಿತ್ತು ಎನ್ನುತ್ತಾಳೆ ಮಹಿಳೆ.