Asianet Suvarna News Asianet Suvarna News

Viral Video: ನಡೆಯಲಾಗದ ತಾಯಿಯನ್ನು ಮಗುವಂತೆ ಎತ್ತಿಕೊಂಡು ಸುತ್ತಾಡಲು ಕರೆದೊಯ್ದ ಮಗ

ಅಮ್ಮ ಅಂದ್ರೆ ಎಲ್ಲರ ಜೀವನದಲ್ಲಿಯೂ ತುಂಬಾನೇ ಸ್ಪೆಷಲ್‌. ಅಮ್ಮ ಯಾವಾಗಲೂ ಖುಷಿಯಾಗಿರಬೇಕೆಂದೇ ಎಲ್ಲಾ ಮಕ್ಕಳು ಅಂದುಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬ ಮಗ ತನ್ನ ವಯಸ್ಸಾದ ತಾಯಿಯನ್ನು ಎತ್ತಿಕೊಂಡು ಸುತ್ತಾಡಿಸಿದ್ದಾನೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.

Kerala man meets his mother after 5 years. Viral video shows how he took her on a Road trip Vin
Author
First Published May 27, 2023, 3:22 PM IST

ಕೊರೋನಾ ಹರಡುವ ಸಮಯದಲ್ಲಿ ದೇಶ-ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದ ಕಾರಣ ಬಹಳಷ್ಟು ಜನರು ತಮ್ಮ ತಾಯ್ನಾಡಿಗೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಬಹಳ ಸಮಯದ ವರೆಗೆ ಕುಟುಂಬ ಮತ್ತು ಸ್ನೇಹಿತರಿಂದ ದೂರ ಉಳಿಯಬೇಕಾಯಿತು. ಕೆಲವು ವರ್ಷಗಳ ಬಳಿಕ ಹಿಂತಿರುಗಿ ಬಂದವರು ತಮ್ಮ ಕುಟುಂಬ ಸದಸ್ಯದವರನ್ನು ಕಂಡು ಭಾವುಕರಾದರು. ಹೀಗೆ ಐದು ವರ್ಷಗಳ ನಂತರ ಸ್ವಿಟ್ಜರ್ಲೆಂಡ್‌ನಿಂದ ಹಿಂದಿರುಗಿದ ರೋಜನ್ ಪರಂಬಿಲ್ ಎಂಬ ಕೇರಳದ ವ್ಯಕ್ತಿ ತನ್ನ ತಾಯಿಯನ್ನು ನೋಡಿ ಬೇಸರಗೊಂಡರು. ವಯಸ್ಸಾದ ವ್ಯಕ್ತಿ, ತನ್ನ ತಾಯಿಯನ್ನು ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಿದರು. 

ತಾಯಿಯನ್ನು ಸ್ನಾನ ಮಾಡಿಸಿ ಸಿದ್ಧಗೊಳಿಸಿದರು. ನಂತರ, ಅವರನ್ನು ತಮ್ಮ ಭುಜದ ಮೇಲೆ ಎತ್ತಿ ಸ್ವಲ್ಪ ಕಾರಿನಲ್ಲಿ ಕರೆದೊಯ್ದರು. ಈ ಸಂದರ್ಭದಲ್ಲಿ ತಾಯಿ ತುಂಬಾ ಖುಷಿ (Happy)ಯಾಗಿರುವುನ್ನು ನೋಡಬಹುದು. ಹ್ಯೂಮನ್ಸ್ ಆಫ್ ಕೇರಳದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಅಮ್ಮ ಮಗಳು ಇಬ್ಬರೂ ಗಗನಸಖಿಯರೇ: ವಿಶೇಷ ಕ್ಷಣಕ್ಕೆ ಸಾಕ್ಷಿಯಾದ ಇಂಡಿಗೋ

ವಯಸ್ಸಾದ ತಾಯಿಯನ್ನು ಸುತ್ತಾಡಲು ಕರೆದೊಯ್ದ ಮಗ
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ವ್ಯಕ್ತಿ ತನ್ನ ವಯಸ್ಸಾದ ತಾಯಿಯನ್ನು ತನ್ನ ಭುಜದ ಮೇಲೆ ಎತ್ತಿಕೊಂಡು ಕಾರಿನಲ್ಲಿ ಕುಳ್ಳಿರಿಸಿದ್ದಾನೆ. ನಂತರ ಇಬ್ಬರೂ ಕಾರಿನಲ್ಲಿ ತೆರಳುತ್ತಾರೆ. ಪ್ರವಾಸದ ವೇಳೆ ತಾಯಿ-ಮಗ (Mother-son) ಇಬ್ಬರೂ ಚಿತ್ರಗಳನ್ನು ಕ್ಲಿಕ್ಕಿಸಿರುವುದನ್ನು ನೋಡಬಹುದು. ವ್ಯಕ್ತಿ ಹಲವು ವರ್ಷಗಳ ಹಿಂದೆ ತಮ್ಮ ತಾಯಿಯನ್ನು ಸ್ವಿಟ್ಸರ್‌ಲ್ಯಾಂಡ್‌ಗೆ ಕರೆದೊಯ್ದರು. ಆದ್ರೆ ಈಗ ಆಕೆಯ ಆರೋಗ್ಯ ಹದಗೆಟ್ಟಿರುವ ಕಾರಣ ವಿದೇಶ ಪ್ರವಾಸ ಸಾಧ್ಯವಾಗುವುದಿಲ್ಲ. ಹೀಗಾಗಿ ವ್ಯಕ್ತಿ ಮನೆಯ ಸಮೀಪವೇ ತನ್ನ ತಾಯಿಯನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ'. 

'ವರ್ಷಗಳ ಹಿಂದೆ, ನಾನು ಅಮ್ಮನನ್ನು ಸ್ವಿಟ್ಜರ್ಲೆಂಡ್‌ಗೆ ಕರೆದೊಯ್ದು ಎಲ್ಲಾ ಕಡೆ ಸುತ್ತಾಡಿಸಿದೆ. ಅವಳು ಹೊಸ ಸ್ಥಳ (Place)ಗಳನ್ನು ನೋಡಿ ಸಂತೋಷಪಟ್ಟಳು. ಆದರೆ ಕೋವಿಡ್‌ನಿಂದಾಗಿ ಸುಮಾರು 5 ವರ್ಷಗಳ ನಂತರ ನಾನು ಭಾರತಕ್ಕೆ ಬರಲು ಸಾಧ್ಯವಾಗಲ್ಲಿಲ್ಲ. ಮರಳಿ ಬಂದಾಗ ತಾಯಿಯ ಸ್ಥಿತಿಯನ್ನು ನೋಡಿ ನನ್ನ ಹೃದಯ ಛಿದ್ರವಾಯಿತು. ಅವಳಿಗೆ ತುಂಬಾ ವಯಸ್ಸಾಗಿತ್ತು. ಎಂದಿಗಿಂತಲೂ ಹೆಚ್ಚು ಬಿಳಿ ಕೂದಲುಗಳಾಗಿದ್ದವು ಮತ್ತು ದುರ್ಬಲವಾಗಿದ್ದಳು. ಅವಳಿಗೆ ಸರಿಯಾಗಿ ನಿಲ್ಲಲು ಅಥವಾ ನಡೆಯಲು ಸಾಧ್ಯವಾಗುತ್ತಿರಲ್ಲಿಲ್ಲ. ಅವಳು ವರ್ಷಗಳಿಂದ ಚರ್ಚ್‌ಗೆ ಹೋಗಿಲ್ಲ ಎಂದು ನನಗೆ ಹೇಳಿದಳು. ಹೀಗಾಗಿ ನಾನು ಅವಳನ್ನು ಮನೆಯಿಂದ ಹೊರಗೆ ಕರೆದೊಯ್ಯಲು ನಿರ್ಧರಿಸಿದೆ' ಎಂದು ಶ್ರೀ ಪರಂಬಿಲ್ ಬರೆದಿದ್ದಾರೆ.

ಒಬ್ಬೊಬ್ಬರಾಗಿ ಬಂದು ಅಮ್ಮನ ಮುದ್ದಾಡಿದ ಹುಲಿಮರಿಗಳು: ವೈರಲ್ ವೀಡಿಯೋ

ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
'ನಾನು ಸ್ವಿಟ್ಜರ್ಲೆಂಡ್‌ನ ವೃದ್ಧಾಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ. ಆದುದರಿಂದ, ಆ ಅನುಭವದೊಂದಿಗೆ, ನಾನು ಅವಳನ್ನು ಸ್ನಾನ ಮಾಡಿಸಿ, ನನ್ನ ಸಹೋದರಿಯರನ್ನು ಅವಳಿಗೆ ಬಟ್ಟೆ ತೊಡಿಸುವಂತೆ ಮಾಡಿದೆ ಮತ್ತು ಅವಳನ್ನು ನನ್ನ ಕಾರಿನಲ್ಲಿ ಕರೆದೊಯ್ಯಲು ನಿರ್ಧರಿಸಿದೆ. ಇದು ಉತ್ತಮ ಉಪಾಯವಲ್ಲ ಎಂದು ಎಲ್ಲರೂ ಹೇಳಿದರು. ಆದರೂ ನಾನು ಅವಳನ್ನು ನನ್ನ ಹೆಗಲ ಮೇಲೆ ಎತ್ತಿ ಕಾರಿನಲ್ಲಿ ಕೂರಿಸಿದೆವು ಮತ್ತು ನಾವು ಸುಮಾರು 20 ಕಿಮೀ ದೂರದ ಅವಳ ಊರಾದ ಅತಿರುಂಪುಳಕ್ಕೆ ಹೋದೆವು. ಅವಳು ಅನೇಕ ಸ್ಥಳಗಳನ್ನು ನೆನಪಿಸಿಕೊಳ್ಳಲಾಗಲಿಲ್ಲ, ಆದರೆ ಅದು ಅವಳನ್ನು ಸಂತೋಷಪಡಿಸಿತು. ಪ್ರಪಂಚದ ವಿವಿಧ ಸ್ಥಳಗಳಲ್ಲಿ ವಾಸಿಸುತ್ತಿರುವ ನನ್ನ ಒಡಹುಟ್ಟಿದವರಿಗೆ ಕಳುಹಿಸಲು ನಾನು ವೀಡಿಯೊಗಳನ್ನು ತೆಗೆದುಕೊಂಡೆ. ಅವರೆಲ್ಲರೂ ಅಮ್ಮನ ಬಗ್ಗೆ ಚಿಂತಿತರಾಗಿದ್ದರು ಆದರೆ ಅಮ್ಮ ಮನೆಯಿಂದ ಹೊರಗಡೆ ಓಡಾಡಿದ್ದನ್ನು ನೋಡಿ ಸಂತೋಷಪಟ್ಟರು. ಪ್ರಯಾಣದ ನಂತರ ಅಮ್ಮ ದಣಿದಿದ್ದಳು. ಆದರೆ ಆಕೆಯ ಮುಖದಲ್ಲಿ ಮನೆಯಿಂದ ಹೊರಗಡೆ ಓಡಾಡಿದ ಖುಷಿಯಿತ್ತು' ಎಂದು ಪರಂಬಿಲ್ ತಿಳಿಸಿದರು.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಹಲವರು ಮಗನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ತಾಯಿ ಆಶೀರ್ವದಿಸಲ್ಪಟ್ಟಿದ್ದಾಳೆ, ಎಂಥಾ ಅದ್ಭುತ ಮಗನನ್ನು ಪಡೆದಿದ್ದಾಳೆ' ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. 'ಅಮ್ಮ, ಜೀವನದ ಒಂದು ಅದ್ಭುತ. ಅವರೊಂದಿಗೆ ಇರುವ ಜೀವನದ ಪ್ರತಿ ಕ್ಷಣವನ್ನು ಸಹ ಖುಷಿಯಿಂದ ಇರಬೇಕು. ನಂತರ ನೆನಪುಗಳು ಮಾತ್ರ ಉಳಿಯುತ್ತವೆ. ನೀವು ಅವರನ್ನು ಕರೆದೊಯ್ದಿರುವುದು ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

Follow Us:
Download App:
  • android
  • ios