ಅಮ್ಮ ಮಗಳು ಇಬ್ಬರೂ ಗಗನಸಖಿಯರೇ: ವಿಶೇಷ ಕ್ಷಣಕ್ಕೆ ಸಾಕ್ಷಿಯಾದ ಇಂಡಿಗೋ

ಇಂಡಿಗೋ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿರುವ ಯುವತಿಯೊಬ್ಬರು ತಮ್ಮ ಅಮ್ಮನಿಗೆ ವಿಶೇಷವಾದ ಅನೌನ್ಸ್‌ಮೆಂಟ್ ಮೂಲಕ  ಅಮ್ಮನ ದಿನದ ಶುಭಾಶಯ ಕೋರಿದರು. ಈ ವೇಳೆ ಭಾವುಕಳಾದ ಅಮ್ಮ ವಿಮಾನದಲ್ಲೇ ಕಣ್ಣೀರಿಟ್ಟಿದ್ದು, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

Mother and daughter are both Air hostess Indigo Airlines witnesses a special moment akb

ಕೆಲ ದಿನಗಳ ಹಿಂದಷ್ಟೇ ವಿಶ್ವ ತಾಯಂದಿರ ದಿನ ಕಳೆದು ಹೋಯ್ತು. ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ , ವಾಟ್ಸಾಪ್‌ ಡಿಪಿಗಳಲ್ಲಿ, ತಾವು ತಮ್ಮ ತಾಯಿಯ ಜೊತೆಗಿರುವ ಫೋಟೋಗಳನ್ನು ಹಾಕುವ ಮೂಲಕ ತಮ್ಮದೇ ರೀತಿಯಲ್ಲಿ ತಾಯಂದಿರ ದಿನವನ್ನು ಸಂಭ್ರಮಿಸಿದರು.  ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಮ್ಮನ ಜೊತೆಗೆ ಕಳೆದ ಕ್ಷಣಗಳ ಮೆಲುಕು ಹಾಕಿ ಭಾವುಕರಾದರು. ಕೆಲವರು ಅಮ್ಮನ ಬಗ್ಗೆ ಉದ್ದುದ್ದ ಬರೆದುಕೊಂಡರು, ಕೆಲವರು ಚುಟುಕಾಗಿ ಮುಗಿಸಿದರು. ಹಾಗೆಯೇ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿರುವ ಯುವತಿಯೊಬ್ಬರು ತಮ್ಮ ಅಮ್ಮನಿಗೆ ವಿಶೇಷವಾದ ಅನೌನ್ಸ್‌ಮೆಂಟ್ ಮೂಲಕ  ಅಮ್ಮನ ದಿನದ ಶುಭಾಶಯ ಕೋರಿದರು. ಈ ವೇಳೆ ಭಾವುಕಳಾದ ಅಮ್ಮ ವಿಮಾನದಲ್ಲೇ ಕಣ್ಣೀರಿಟ್ಟಿದ್ದು, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಅಮ್ಮ ಎಂದರೆ ಅಗಾಧ, ಅಮ್ಮ ಎಂದರೆ ಆಕಾಶ, ಅಮ್ಮ ಎಂದರೆ ಪದಗಳಿಗೆ ನಿಲುಕದ ಭಾವ, ಅಮ್ಮ ಎಂದರೆ ಪ್ರೀತಿ ಅಮ್ಮ ಎಂದರೆ ಮಮತೆ ಹೀಗೆ.... ಜನ್ಮ ನೀಡುವುದಕ್ಕೂ ಮೊದಲಿನಿಂದಲೂ ನಮ್ಮನ್ನು ಪ್ರೀತಿಸಲು ಶುರು ಮಾಡುವ ಅಮ್ಮನ ಬಗ್ಗೆಅನೇಕರು ಅನೇಕ ರೀತಿಯಲ್ಲಿ ವರ್ಣಿಸಿದ್ದಾರೆ.  ಅಪ್ಪನಿಲ್ಲದ ಮನೆಯಲ್ಲಿ  ಅಮ್ಮ ಅಪ್ಪನೂ ಆಗಿ ಎಲ್ಲಾ ಜವಾಬ್ದಾರಿಯನ್ನು ಏಕಾಂಗಿಯಾಗಿ ವಹಿಸಿಕೊಂಡು ಮಕ್ಕಳ ಪಾಲನೆ ಪೋಷಣೆ ಮಾಡಿದ ಅನೇಕ  ಉದಾಹರಣೆಗಳಿವೆ.  ಹೀಗಾಗಿ ಅಮ್ಮ ಎಂದರೆ ಹೀಗೆಯೇ ಎಂದು ಯಾರಿಗೂ  ವರ್ಣಿಸಲಾಗದು. ಅಮ್ಮ ಅನೇಕ ಮಕ್ಕಳ ಪಾಲಿನ ಬೆನ್ನೆಲುಬು, ಅಗಾಧ ಶಕ್ತಿ. ಹಾಗೆಯೇ ಇಲ್ಲೊಬ್ಬರು ಗಗನಸಖಿ ಅಮ್ಮ ತಮ್ಮ ಮಗಳನ್ನು ಗಗನಸಖಿ ಮಾಡಿದ್ದು, ಅಮ್ಮ ಮಗಳಿಬ್ಬರು ಒಂದೇ ಸಂಸ್ಥೆಯಲ್ಲಿ ಒಂದೇ ವಿಮಾನದಲ್ಲಿ  ಕಾರ್ಯ ನಿರ್ವಹಿಸುವ ಅವಕಾಶ ಒದಗಿ ಬಂದಿದೆ. 

ಏರ್‌ಪೋರ್ಟ್‌ನಲ್ಲಿ ಅಪ್ಪನ ಸಾವು: ಕೋರ್ಟ್‌ ಮೆಟ್ಟಿಲೇರಿದ ಮಗಳಿಗೆ 12 ಲಕ್ಷ ಪರಿಹಾರ

ಇಂಡಿಗೋದಲ್ಲಿ ಕೆಲಸ ಮಾಡುತ್ತಿರುವ ಅಮ್ಮನಿಗೆ ಅದೇ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ ಮಗಳು ಅಮ್ಮಂದಿರ ದಿನಕ್ಕೆ ಭಾವುಕವಾಗಿ ಶುಭಾಶಯ ಕೋರಿದ್ದಾಳೆ. ವಿಮಾನದಲ್ಲಿದ್ದ ಪ್ರಯಾಣಿಕರಿಗೆ ತನ್ನಮ್ಮನ ಪರಿಚಯಿಸಿದ ಗಗನಸಖಿ, ತನ್ನ ಅಮ್ಮ ತನಗೆ ಹೇಗೆ ಸ್ಪೂರ್ತಿಯ ಮೂಲವಾಗಿದ್ದಾರೆ ಎಂಬುದನ್ನು ವಿವರಿಸಿದ್ದಾಳೆ. ಅಲ್ಲದೇ ತಾನು ತನ್ನ ಅಮ್ಮನನ್ನು ವಿಮಾನದಲ್ಲಿ ಸಮವಸ್ತ್ರದಲ್ಲಿ ನೋಡಿದ್ದು ಇದೇ ಮೊದಲ ಬಾರಿಗೆ ಎಂದು ಅವರು ಹೇಳಿಕೊಂಡಿದ್ದಾರೆ. 

ಇಂಡಿಗೋ ಕ್ಯಾಬಿನ್ ಸಿಬ್ಬಂದಿ (Indigo cabin crew) ನಬೀರಾ ಇರಾಮ್ ಶಮ್ಸಿ ಅವರು ತಮ್ಮ ತಾಯಿ ಇರಾಮ್ ಶಮ್ಸಿಗಾಗಿ ಈ ವಿಶೇಷ ಘೋಷಣೆ ಮಾಡಿದ್ದು, ಈ ವಿಡಿಯೋವನ್ನು ಇಂಡಿಗೋ ಏರ್‌ಲೈನ್ಸ್ ತನ್ನ ಇನ್ಸ್ಟಾಗ್ರಾಮ್‌ ಪೇಜ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿ  ವಿಶ್ವ ತಾಯಂದಿರ ದಿನದ ಶುಭಾಶಯ ಕೋರಿದೆ. ಭೂಮಿ ಮೇಲೆ ಹಾಗೂ ಆಕಾಶದಲ್ಲಿ ಹೀಗೆ ಸದಾ ನನ್ನ ಬೆನ್ನ ಹಿಂದಿರುವ ಅಮ್ಮನಿಗೆ ಮಹಿಳಾ ದಿನದ ಶುಭಾಶಯಗಳು ಎಂದು ಅದು ಬರೆದುಕೊಂಡಿದೆ. 

37 ಸಾವಿರ ಅಡಿ ಎತ್ತರದಲ್ಲಿ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರ ಡಾನ್ಸ್‌: ವೈರಲ್ ವಿಡಿಯೋ

ವಿಡಿಯೋದಲ್ಲಿ ಮೊದಲಿಗೆ ಗಗನಸಖಿ (Air hostess) ನಬಿರಾ ಇರಾಮ್ ಶಮ್ಸಿ (Nabirah Iram Shamsi) ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರನ್ನು ಆತ್ಮೀಯವಾಗಿ ಸ್ವಾಗತಿಸಿ ತನ್ನನ್ನು ಪರಿಚಯಿಸಿಕೊಳ್ಳುವುದನ್ನು ಕಾಣಬಹುದು. ನಂತರ ಆಕೆ ಅದೇ ಕ್ಷಣದಲ್ಲಿ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿರುವ ತನ್ನ ಪ್ರೀತಿಯ ತಾಯಿ ಇರಾಮ್ ಶಮ್ಸಿಯನ್ನು(Iram Shamsi) ಕೂಡ ಪ್ರಯಾಣಿಕರಿಗೆ ವಿಶೇಷವಾದ ಅನೌನ್ಸ್‌ಮೆಂಟ್ ಮೂಲಕ ಪರಿಚಯಿಸುತ್ತಾಳೆ. 

ನನ್ನ ತಾಯಿಯನ್ನು ಸಮವಸ್ತ್ರದಲ್ಲಿ ನೋಡುತ್ತಿರುವುದು ಇದೇ ಮೊದಲು. ನನಗಾಗುತ್ತಿರುವವ ಸಂತಸವನ್ನು ವಿವರಿಸಲು ಸಾಧ್ಯವಿಲ್ಲ.  ಆರು ವರ್ಷಗಳ ಕಾಲ ಕ್ಯಾಬಿನ್ ಸಿಬ್ಬಂದಿಯಾಗಿ ತನ್ನ ತಾಯಿಯ ಸಮರ್ಪಿತ ಸೇವೆಯನ್ನು ಹೇಗೆ ವೀಕ್ಷಿಸಿದ್ದೇನೆ ಎಂಬುದನ್ನು ಹೇಳುವ ಆಕೆ ತನ್ನ ಮಾತು ಮುಗಿಸುತ್ತಿದ್ದಂತೆ ಅವಳಮ್ಮ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು ಕೆನ್ನೆಗೆ ಮುತ್ತಿಕ್ಕಿ ಭಾವುಕಳಾಗಿದ್ದಾಳೆ. 

ಇವರ ಈ ಭಾವುಕ ಕ್ಷಣದಲ್ಲಿ ವಿಮಾನದ ಪ್ರಯಾಣಿಕರು ಕೂಡ ಭಾಗಿಯಾಗಿದ್ದು, ಚಪ್ಪಾಳೆ  ತಟ್ಟಿ ಪ್ರೋತ್ಸಾಹಿಸಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಅನೇಕರು ತಾಯಿ ಮಗಳ ಈ  ಅಪರೂಪದ ಕ್ಷಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. 

 
 
 
 
 
 
 
 
 
 
 
 
 
 
 

A post shared by IndiGo (@indigo.6e)

 

Latest Videos
Follow Us:
Download App:
  • android
  • ios