ಸುಡಾನ್‌ನಲ್ಲಿ ಸಿಲುಕಿದ ಭಾರತೀಯರ ರಕ್ಷಣಾ ಕಾರ್ಯಾಚರಣೆ, ಐಎಎಫ್‌ನ ಏಕೈಕ C-17 ಮಹಿಳಾ ಪೈಲಟ್ ಭಾಗಿ

ಗಲಭೆಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಆಪರೇಶನ್ ಕಾವೇರಿ ಆರಂಭಿಸಲಾಗಿದೆ. ಹೆಮ್ಮೆಯ ವಿಚಾರವೆಂದರೆ ಭಾರತೀಯ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ವಿಮಾನದ ಮೊದಲ ಮತ್ತು ಏಕೈಕ ಮಹಿಳಾ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಹರ್ ರಾಜ್ ಕೌರ್ ಬೋಪರಾಯ್ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.

Indias only woman C-17 Globemaster pilot is part of Operation Kaveri rescuing Indians from Sudan Vin

ಸುಡಾನ್‌ನಲ್ಲಿ ಅಧಿಕಾರಕ್ಕಾಗಿ ಅರೆಸೇನಾಪಡೆ ಹಾಗೂ ಸೂಡಾನ್‌ ಸಶಸ್ತ್ರಪಡೆಗಳ ನಡುವೆ ಯುದ್ಧ ನಡೆಯುತ್ತಿದೆ. ಇದರಿಂದ ಸೂಡಾನ್‌ನಲ್ಲಿ ನಾಗರೀಕರು ಅಪಾಯದಲ್ಲಿದ್ದಾರೆ. ಸೂಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಇದೀಗ ಆಪರೇಶನ್ ಕಾವೇರಿ ಕಾರ್ಯಾಚರಣೆ ಆರಂಭಿಸಲಾಗಿದೆ. ಆಪರೇಶನ್ ಕಾವೇರಿ ಮೂಲಕ ಸೂಡಾನ್‌ನಲ್ಲಿ ಅಪಾಯದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಪ್ರಯತ್ನ ಮಹತ್ವದ ಘಟ್ಟದಲ್ಲಿದೆ. ಈಗಾಗಲೇ ಸೂಡಾನ್ ಬಂದರು ತಲುಪಿರುವ ಭಾರತೀಯರನ್ನು ಹಡಗು ಹಾಗೂ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. 500 ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ತಯಾರಿ ಮಾಡಲಾಗಿದೆ.

ಭಾರತೀಯ ವಾಯುಪಡೆಯ C-17 ಗ್ಲೋಬ್‌ಮಾಸ್ಟರ್ ವಿಮಾನದ ಮೊದಲ ಮತ್ತು ಏಕೈಕ ಮಹಿಳಾ ಪೈಲಟ್ ಫ್ಲೈಟ್ ಲೆಫ್ಟಿನೆಂಟ್ ಹರ್ ರಾಜ್ ಕೌರ್ ಬೋಪರಾಯ್ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿರುವುದು ಹೆಮ್ಮೆಯ ವಿಚಾರ. ಫ್ಲೈಟ್ ಲೆಫ್ಟಿನೆಂಟ್ ಬೋಪರಾಯ್ ಅವರನ್ನು 2019ರಲ್ಲಿ ಪಡೆಗೆ ನಿಯೋಜಿಸಲಾಯಿತು. IAF ಗೆ ಸೇರುವ ಮೊದಲು, ಅವರು ಡೆಲಾಯ್ಟ್ ಜೊತೆಗಿದ್ದರು. ಈಕೆ ಪಂಜಾಬ್‌ನ ಪಟಿಯಾಲ ಮೂಲದವರು.

ಇನ್ನೆಂದೂ ಸೂಡಾನ್‌ಗೆ ಹೋಗಲ್ಲ: ಭಾರತದಲ್ಲೇ ಬದುಕುವೆ ಎಂದ ತವರಿಗೆ ಮರಳಿದ ವ್ಯಕ್ತಿ

ಹಲವಾರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಮಹಿಳಾ ಪೈಲಟ್ ಜನರನ್ನು ರಕ್ಷಿಸಿ ಕರೆತರುತ್ತಿರುವ ಫೋಟೋ ವೈರಲ್ ಆಗಿದೆ. ಚಿತ್ರದಲ್ಲಿ ಅಲ್ಲಿ ಅಧಿಕಾರಿಯು ಮಹಿಳೆಗೆ ವಿಮಾನವನ್ನು ಹತ್ತಲು ಸಹಾಯ ಮಾಡುತ್ತಿರುವುದನ್ನು ಕಾಣಬಹುದು. C-17 Globemaster ಭಾರತೀಯ ವಾಯುಪಡೆಯ ಹೆವಿ-ಲಿಫ್ಟ್ ವಿಮಾನವಾಗಿದೆ. ಕಾರ್ಯಾಚರಣೆಯ ಭಾಗವಾಗಿ IAF ಎರಡು C-130J ಸೂಪರ್ ಹರ್ಕ್ಯುಲಸ್ ಮತ್ತು ಒಂದು C-17 ಗ್ಲೋಬ್‌ಮಾಸ್ಟರ್ III ಅನ್ನು ನಿಯೋಜಿಸಿದೆ.

ಇಲ್ಲಿಯವರೆಗೆ, ಎರಡು C-130J ಒಟ್ಟು 520 ಭಾರತೀಯರನ್ನು ಸುಡಾನ್‌ನಿಂದ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಸ್ಥಳಾಂತರಿಸಿದೆ. C-17 ವಿಮಾನವು ಗುರುವಾರ 246 ಸ್ಥಳಾಂತರಿಸುವವರನ್ನು ಜೆಡ್ಡಾದಿಂದ ಮುಂಬೈಗೆ ಕರೆತಂದಿದೆ. ಬುಧವಾರ, ಮೊದಲ ಬ್ಯಾಚ್ 360 ಭಾರತೀಯರನ್ನು ಚಾರ್ಟರ್ಡ್ ವಿಮಾನದಲ್ಲಿ ಹೊತ್ತೊಯ್ದು ದೆಹಲಿಗೆ ಕರೆತರಲಾಯಿತು.

ಹಿಂಸಾಪೀಡಿತ ಸುಡಾನ್‌ನಲ್ಲಿ 31 ಜನ ಕನ್ನಡಿಗ ಹಕ್ಕಿಪಿಕ್ಕಿಗಳು ಅತಂತ್ರ

ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು. 'ಫ್ಲೈಟ್‌ ಲೆಫ್ಟಿನೆಂಟ್ ಹರ್ ರಾಜ್ ಕೌರ್ ಬೋಪರಾಯ್ ಅವರು C-17 ಪೈಲಟ್ ಆಗಿದ್ದಾರೆ. ಆಪರೇಷನ್ ಕಾವೇರಿಯ ಭಾಗವಾಗಿದ್ದಾರೆ. ಫ್ಲೈಟ್ ಲೆಫ್ಟಿನೆಂಟ್ ಬೋಪರಾಯ್ ಅವರು C-17 ಅನ್ನು ಹಾರಿಸಿದ IAF ನ ಮೊದಲ ಮತ್ತು ಏಕೈಕ ಮಹಿಳಾ ಅಧಿಕಾರಿಯಾಗಿದ್ದಾರೆ. ಅವರು ವಿಮಾನದ ಸ್ಕ್ವಾಡ್ರನ್‌ನಲ್ಲಿರುವ ಏಕೈಕ ಮಹಿಳಾ ಅಧಿಕಾರಿ' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ..

ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಭಾರತದ ವಿದೇಶಾಂಗ ಕಾರ್ಯದರ್ಶಿ, ಬಿಕ್ಕಟ್ಟಿನ ಪೀಡಿತ ದೇಶದಿಂದ 1100 ಭಾರತೀಯರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು. ಒಟ್ಟು 495 ಭಾರತೀಯರು ಪ್ರಸ್ತುತ ತೊಂದರೆಯಲ್ಲಿ ಸಿಲುಕಿದ್ದಾರೆ. ಇನ್ನೂ 320 ಮಂದಿ ಪೋರ್ಟ್ ಸುಡಾನ್‌ನಲ್ಲಿದ್ದಾರೆ. ಇಲ್ಲಿಯವರೆಗೆ ನಡೆದ ಹಿಂಸಾಚಾರದಲ್ಲಿ ಕೇರಳದ ಒಬ್ಬ ಭಾರತೀಯ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios