Asianet Suvarna News Asianet Suvarna News

ಲೈಫ್ ಹೀಗೂ ಬದಲಾಗುತ್ತೆ, ಒಂದು ಕಾಲದಲ್ಲಿ ಆಗರ್ಭ ಶ್ರೀಮಂತೆ..ಈಗ ಮನೆಕೆಲಸದಾಕೆ!

ಓಡಾಡೋಕೆನೋ ಕಾರು ಸರಿ..ತುಂಬಾ ಸುಸ್ತಾದಾಗ ಸ್ಪಲ್ಪ ಹೊತ್ತು ಮಲಗ್ಬೋದು. ಆದ್ರೆ ಇಲ್ಲೊಬ್ಬ ಮಹಿಳೆ ಬರೋಬ್ಬರಿ ನಾಲ್ಕು ವರ್ಷದಿಂದ ಕಾರಿನಲ್ಲೇ ವಾಸಿಸುತ್ತಿದ್ದಾರೆ. ಸದ್ಯ ಈಕೆಗೆ ನೆರವು ಸಹ ಲಭಿಸಿದೆ.

Indian woman in Dubai living in a Honda City for 4 years finally receives financial help Vin
Author
First Published Apr 28, 2023, 10:05 AM IST

ಕಾರು ಎಂದರೆ ಪ್ರಯಾಣಕ್ಕೆ ಅನುಕೂಲವಾಗಿರುವ ವಾಹನ. ಆದ್ರೆ ಇಲ್ಲೊಬ್ಬ ಮಹಿಳೆಗೆ ಕಾರೇ ಮನೆಯಾಗಿದೆ. ಬರೋಬ್ಬರಿ ನಾಲ್ಕು ವರ್ಷಗಳಿಂದ ಈಕೆ ಕಾರನ್ನೇ ಮನೆಯಾಗಿಸಿಕೊಂಡಿದ್ದಾರೆ. ದುಬೈನಲ್ಲಿ ನೆಲೆಸಿರುವ ಭಾರತೀಯ ಮಹಿಳೆ ಪ್ರಿಯಾ ಕಾರಿನಲ್ಲಿ ಜೀವನ ಸಾಗಿಸುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ತನ್ನ ಹೋಂಡಾ ಸಿಟಿ ಸೆಡಾನ್‌ನಲ್ಲಿ ಎರಡು ನಾಯಿಗಳೊಂದಿಗೆ ವಾಸಿಸುತ್ತಿದ್ದರು. ಸದ್ಯ ಅವರಿಗೆ ನೆರವು ಲಭಿಸಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಪ್ರಿಯಾ, ಆರಂಭದಲ್ಲಿ ಶ್ರೀಮಂತರಾಗಿದ್ದವರು ಆರ್ಥಿಕ ನಷ್ಟವನ್ನು ಅನುಭವಿಸಿದರು ಮತ್ತು ಜೀವನವು ಕಷ್ಟಕರವಾಗಿ ಪರಿಣಮಿಸಿತು.

ಪ್ರಿಯಾ ಸುಮಾರು 40 ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದಾರೆ. ತಂದೆ ತಾಯಿಯೊಂದಿಗೆ ಖುಷಿಯಿಂದ ಜೀವನ (Life) ನಡೆಸುತ್ತಿದ್ದರು. ಆದರೆ ಪ್ರಿಯಾಳ ತಂದೆ ತೀರಿಕೊಂಡರು. ಮಾತ್ರವಲ್ಲ ತಾಯಿ ಹಾಸಿಗೆ ಹಿಡಿದರು. ಅವರ ಚಿಕಿತ್ಸೆಗೆ (Treatment) ಸಾಕಷ್ಟು ಹಣ ಖರ್ಚಾಯಿತು. ಕೆಲ ದಿನಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ  ತಾಯಿಯೂ ಮೃತಪಟ್ಟಿದ್ದರು. ತನ್ನ ತಾಯಿಯ ಮರಣದ ನಂತರ, ಪ್ರಿಯಾ ವ್ಯಾಪಾರದಲ್ಲಿ ಸಂಪೂರ್ಣ ನಷ್ಟವನ್ನು ಅನುಭವಿಸಿದಳು. ಕೊನೆಗೆ ಮನೆ ಬಾಡಿಗೆ (Rent) ಕಟ್ಟಲು ಹಣವಿಲ್ಲದೆ ಪ್ರಿಯಾ ಮನೆ ಬಿಟ್ಟು ಹೋಗಬೇಕಾಯಿತು. ನಂತರ ಅವರು ತಮ್ಮ ಕಾರು ಮತ್ತು ಎರಡು ನಾಯಿಗಳೊಂದಿಗೆ ಕಾರಿನಲ್ಲೇ ವಾಸಿಸಲು ಆರಂಭಿಸಿದದರು. 

ನಾಲಿಗೆ ಕತ್ತರಿಸಿದ ನಂತರವೂ ಸರಾಗವಾಗಿ ಮಾತನಾಡಿದ ಮಹಿಳೆ, ದಂಗಾದ ವೈದ್ಯರು!

ತಾಯಿಯ ಕೊನೆಯ ಆಸೆ ಈಡೇರಿಸುವ ಪ್ರಯತ್ನ
ಮನೆಯಿಂದ ಹೊರಡುವಾಗ, ಅವರು ತಾಯಿಯ ಚಿತಾಭಸ್ಮವನ್ನು ಮಾತ್ರ ತಂದಿದ್ದರು. ಏಕೆಂದರೆ ಅದು ಅವರ ತಾಯಿಯ ಕೊನೆಯ ಆಸೆಯಾಗಿತ್ತು (Last wish). ಪ್ರಿಯಾಳ ತಾಯಿ ತನ್ನ ಚಿತಾಭಸ್ಮವನ್ನು ಭಾರತದ ನದಿಯೊಂದರಲ್ಲಿ ವಿಸರ್ಜಿಸಬೇಕೆಂದು ಅಂದುಕೊಂಡಿದ್ದರು. ಆದರೆ ಪ್ರಯಾಣ ದರ, ದೇಶ ನಿರ್ಬಂಧ, ಅವರ ಮೇಲಿರುವ ಹಲವು ಪ್ರಕರಣಗಳಿಂದಾಗಿ ದೇಶ ಬಿಡಲು ಸಾಧ್ಯವಾಗುತ್ತಿಲ್ಲ. ಕೊನೆಯಲ್ಲಿ, ತಾಯಿಯ ಕನಸು ಕನಸಾಗಿ ಉಳಿಯುತ್ತದೆ ಎಂಬ ಭಯ ಅವರನ್ನು ಕಾಡುತ್ತಿದೆ.

ಮೂರು ಡಿಗ್ರಿಯಿದ್ರೂ ಕೆಲ್ಸವಿಲ್ಲ, 
ಮೂರು ಡಿಗ್ರಿ ಪಡೆದಿರುವ ಪ್ರಿಯಾ ಕೆಲಸವನ್ನು ಗಿಟ್ಟಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಕೆಲಸ ಸಿಗದ ಕಾರಣ ತಾನು ವಾಸವಿರುವ ಪ್ರದೇಶದಲ್ಲಿ ಮನೆ ಕೆಲಸ ಮಾಡುತ್ತಿದ್ದಾರೆ. ತಮ್ಮ ನಾಯಿಗಳನ್ನು ಸ್ನೇಹಿತನ ಮನೆಯಲ್ಲಿ ಬಿಟ್ಟು, ಪ್ರಿಯಾ ಹತ್ತಿರದ ಕನ್ವೆನ್ಷನ್ ಸೆಂಟರ್‌ನಲ್ಲಿ ಕೆಲಸಕ್ಕೆ ಹೋಗುತ್ತಾರೆ.

3 ವರ್ಷಗಳಿಂದ ಬಟ್ಟೆ ಖರೀದಿಸಿಲ್ಲ
ಕಾರಿನಲ್ಲಿ ಪೆಟ್ರೋಲ್, ಡೀಸೆಲ್ ತುಂಬಿ ನಾಲ್ಕು ತಿಂಗಳು ಕಳೆದಿವೆ. ಇಂಧನ ಉಳಿಸಲು ಕಾರಿನಲ್ಲಿ ಎಸಿ ಬಳಸುತ್ತಿಲ್ಲ. ತಮಗೆ ಬೇಕಾದ ಬಟ್ಟೆಗಳನ್ನು ಖರೀದಿಸಿ ಮೂರು ವರ್ಷಗಳೇ ಕಳೆದಿವೆ. ಇಂತಹ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಪ್ರಿಯಾ ಬೇರೆಡೆಗೆ ತೆರಳಲು ಸಾಧ್ಯವಾಗುತ್ತಿಲ್ಲ.

Trending Video : ಹರ್ಯಾಣಿ ಹಾಡಿಗೆ ಅಜ್ಜಿಯ ಜಬರ್ದಸ್ ಡಾನ್ಸ್! ನೆಟ್ಟಿಗರು ಕಣ್ ಕಣ್ ಬಿಟ್ಟು ನೋಡ್ತಿದ್ದಾರೆ!

ಗಳಿಕೆ ಕೇವಲ 11 ಸಾವಿರ
ತನ್ನ ದುಡಿಮೆಯಿಂದ ಕೇವಲ 11,000 ರೂ.ಗಳನ್ನು ಗಳಿಸಿ, ತನ್ನ ಸಹೋದರನ ಚಿಕಿತ್ಸೆಗೆ ಹಣವನ್ನು ಕಳುಹಿಸುತ್ತಿದ್ದಾನೆ. ವೀಸಾ ಅವಧಿಯೂ ಮುಗಿದಿದ್ದು, ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಕಾರಣ ಹೆಚ್ಚಿನ ಸಂಬಳಕ್ಕೆ ಬೇಡಿಕೆ ಇಡುವಂತಿಲ್ಲ. ಹೀಗೆ ಹೆಜ್ಜೆಹೆಜ್ಜೆಗೂ ಒದ್ದಾಡುತ್ತಿರುವ ಪ್ರಿಯಾ ನಾಲ್ಕು ವರ್ಷಗಳಿಂದ ನಿಲ್ಲಿಸಿದ್ದ ಕಾರಿನಲ್ಲೇ ಜೀವನ ಸಾಗಿಸುತ್ತಿದ್ದಾರೆ.

ನೆರವು ನೀಡಿದ ದುಬೈ ಮೂಲದ ಭಾರತೀಯ ಉದ್ಯಮಿ
ಯೂಟ್ಯೂಬ್ ಚಾನೆಲ್‌ವೊಂದು ಪ್ರಿಯಾಳ ಜೀವನದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿತ್ತು. ಆ ನಂತರ, ಅನೇಕ ಜನರಿಗೆ ಪ್ರಿಯಾ ಅವರ ಪರಿಸ್ಥಿತಿಯ ಬಗ್ಗೆ ಅರಿವಾಯಿತು. ದುಬೈ ಮೂಲದ ಭಾರತೀಯ ಉದ್ಯಮಿ ಜಸ್ಬೀರ್ ಬಸ್ಸಿ ಪ್ರಿಯಾಗೆ ನೆರವಾದರು. ಮೊದಲೇ ಹೇಳಿದಂತೆ, ಪ್ರಿಯಾ ಅವರ ವೀಸಾ ಅವಧಿ ಮುಗಿದಿತ್ತು ಮತ್ತು ಕಾನೂನು ಕಾರಣಗಳಿಗಾಗಿ ದೇಶವನ್ನು ತೊರೆಯಲು ಸಾಧ್ಯವಾಗುತ್ತಿರಲ್ಲಿಲ್ಲ. ನಾಲ್ಕು ವರ್ಷಗಳ ಕಾಲ ದುಬೈನಲ್ಲಿ ಅಕ್ರಮವಾಗಿ ನೆಲೆಸಿದ್ದಕ್ಕಾಗಿ ಪ್ರಿಯಾ ಒಟ್ಟು 26 ಲಕ್ಷ ರೂ. ದಂಡ ಪಾವತಿಸಬೇಕಾಗಿದೆ.

ಪಂಜಾಬ್‌ನ ಉದ್ಯಮಿ ಮತ್ತು ದುಬೈನ ಕಾರ್ ಫೇರ್ ಗ್ರೂಪ್‌ನ ಎಂಡಿ ಜಸ್ಬೀರ್ ಬಸ್ಸಿ,  ಪ್ರಿಯಾ ಅವರ ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡರು. ಪ್ರಿಯಾ ಅವರ ಪರಿಸ್ಥಿತಿಗಳ ಬಗ್ಗೆ ಹೆಚ್ಚು ತಿಳಿದುಕೊಂಡ ನಂತರ, ಜಸ್ಬೀರ್ ಬಸ್ಸಿ ಅವಳನ್ನು ಕಂಪನಿಯ ಕಚೇರಿಗೆ ಆಹ್ವಾನಿಸಿದರು, ಅಲ್ಲಿ ಅವರು ಪ್ರಿಯಾಳ ಎಲ್ಲಾ ಹಣಕಾಸಿನ ಹೊಣೆಗಾರಿಕೆಗಳನ್ನು ಸರಿದೂಗಿಸಲು ಚೆಕ್ ಅನ್ನು ನೀಡಿದರು. ಸಹಾಯಕ್ಕಾಗಿ ಪ್ರಿಯಾ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios