Asianet Suvarna News Asianet Suvarna News

Trending Video : ಹರ್ಯಾಣಿ ಹಾಡಿಗೆ ಅಜ್ಜಿಯ ಜಬರ್ದಸ್ ಡಾನ್ಸ್! ನೆಟ್ಟಿಗರು ಕಣ್ ಕಣ್ ಬಿಟ್ಟು ನೋಡ್ತಿದ್ದಾರೆ!

ಡಾನ್ಸ್ ಮಾಡೋಕೆ ವಯಸ್ಸು ಮುಖ್ಯವಲ್ಲ. ಕೈನಲ್ಲಿ ಶಕ್ತಿ, ಮನಸ್ಸಲ್ಲಿ ಆಸಕ್ತಿ ಇದ್ರೆ ಸಾಕು. ಈ ಅಜ್ಜಿ ಇದನ್ನು ಸಾಭೀತು ಮಾಡಿದ್ದಾರೆ. ಆಕೆ ಮಾಡಿರುವ ಡಾನ್ಸ್ ಈಗ ಸಾಮಾಜಿಕ ಜಾಲತಾಣ ಬಳಕೆದಾರರು ಹುಬ್ಬೇರಿಸುವಂತೆ ಮಾಡಿದೆ.
 

Grandmother Energetic Dance On Haryanvi Song Will Make You Laugh See Viral Video
Author
First Published Apr 13, 2023, 1:18 PM IST

ಡಾನ್ಸ್ ಮಾಡೋಕೆ ಹಾಡು ಯಾವುದಾದ್ರೆ ಏನು? ಕುಣಿಯೋ ಮನಸ್ಸಿದ್ರೆ ವಯಸ್ಸು ಕೂಡ ಮ್ಯಾಟರ್ ಆಗಲ್ಲ. ಈಗಿನ ದಿನಗಳಲ್ಲಿ ಯುವಕ – ಯುವತಿಯರಿಗಿಂತ ಹಿರಿಯ ನಾಗರಿಕರು ಹೆಚ್ಚು ಆಕ್ಟಿವ್ ಆಗಿದ್ದಾರೆ. ಕೆಲಸ, ಮನೆ ಅಂತಾ ಬ್ಯುಸಿಯಾಗುವ ವಯಸ್ಕರಿಗೆ ಡಾನ್ಸ್ ಮಾಡೋದಿರಲಿ ನಡೆದ್ರೂ ಕಾಲು ನೋವು, ಸೊಂಟ ನೋವು ಕಾಡುತ್ತೆ. ಆಗಿನ ಆಹಾರವೇ ಹಾಗಿತ್ತೋ ಅಥವಾ ಈಗಿನ ಜನರ ಮನಸ್ಥಿತಿ ದುರ್ಬಲವಾಗಿದ್ಯೋ ಗೊತ್ತಿಲ್ಲ. ಈಗಿನವರಿಗಿಂತ ವೃದ್ಧರು ಗಟ್ಟಿಮುಟ್ಟಾಗಿರೋದಂತೂ ನೂರಕ್ಕೆ ನೂರು ಸತ್ಯ.

ಸಾಮಾಜಿಕ ಜಾಲತಾಣದಲ್ಲಿ ವೃದ್ಧರ ಅನೇಕ ಡಾನ್ಸ್ (Dance) ವೈರಲ್ ಆಗ್ತಿರುತ್ತವೆ. ಕೆಲ ಡಾನ್ಸ್ ರೋಮ್ಯಾಂಟಿಕ್ (Romantic) ಆಗಿದ್ರೆ ಮತ್ತೆ ಕೆಲ ಡಾನ್ಸ್ ನೋಡಿ ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಡುತ್ತಾರೆ. ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅಜ್ಜಿ ಡಾನ್ಸ್ ಕೂಡ ಭರ್ಜರಿಯಾಗಿದೆ. ಅಜ್ಜಿ (Grandmother ) ಡಾನ್ಸ್ ನೋಡಿ ನೀವೂ ಭೇಷ್ ಎನ್ನದೆ ಇರಲಾರಿರಿ. ಯಾಕೆಂದ್ರೆ ಅಜ್ಜಿ ಮಾಡಿರೋದು ಮಾಮೂಲಿ ಸೊಂಟ ಬಳಕಿಸುವ ಅಥವಾ ಹೊಕ್ಕಳು ಕಾಣಸ್ತಾ ಅಲ್ಲಿ – ಇಲ್ಲಿ ಮೈ ಕುಣಿಸಿರುವ ಡಾನ್ಸ್ ಅಲ್ಲ. 

ಬೆವರು ಸೇರಿಸಿ ತಯಾರಿಸೋ ಮಾದಕ ಪರ್ಫ್ಯೂಮ್‌, ಖರೀದಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!

60ನೇ ವಯಸ್ಸಿನ ಅಜ್ಜಿಗೆ 20ರ ಎನರ್ಜಿ (Energy) : ಯಸ್. ಈ ಮಾತನ್ನು ನೀವು ಅಜ್ಜಿ ಡಾನ್ಸ್ ನೋಡಿದ್ಮೇಲೆ ಸತ್ಯ ಅಂತಾ ಒಪ್ಪಿಕೊಳ್ತಿರ. @GaurangBhardwa ಹೆಸರಿನ ಟ್ವಿಟರ್ (Twitter) ಖಾತೆಯಲ್ಲಿ ಈ ವಿಡಿಯೋ (Video) ಹಂಚಿಕೊಳ್ಳಲಾಗಿದೆ. 15 ಸೆಕೆಂಡಿನ ಈ ವಿಡಿಯೋ ನೋಡಿದ್ಮೇಲೆ ನಮ್ಮ ಕಣ್ಣನ್ನು ನಾವೇ ನಂಬೋದು ಕಷ್ಟವಾಗುತ್ತದೆ. ಯಾಕೆಂದ್ರೆ ಅಜ್ಜಿ ಅಷ್ಟು ಫಾಸ್ಟ್ ಡಾನ್ಸ್ ಮಾಡಿದ್ದಾರೆ.

Relationship Tips: ಪತಿ ಹಿಂಗೆಲ್ಲ ಮಾಡಿದ್ರೆ ಪ್ರೀತಿಸೋದು ಹೆಂಗೆ?

ಯಾವುದೇ ಕಾರ್ಯಕ್ರಮವಿರಲಿ, ಕೊನೆಯಲ್ಲಿ ಕುಲದಲ್ಲಿ ಕೀಳ್ ಯಾವುದೋ ಹುಚ್ಚಪ್ಪ ಹಾಡು ನಮಗೆ ಬೇಕು. ಅದೇ ರೀತಿ ಉತ್ತರ ಭಾರತದ ಕಡೆ ಜನರು ಹರ್ಯಾಣಿ ಹಾಡನ್ನು ಇಷ್ಟಪಡ್ತಾರೆ. ಆಧುನಿಕ ಕಾಲದಲ್ಲೂ ಹರ್ಯಾಣಿ ಹಾಡುಗಳು ಮೋಡಿ ಮಾಡಿವೆ. ಹರಿಯಾಣದ ವಿಶಿಷ್ಟ ದೇಸಿ ಶೈಲಿ ಜನರಿಗೆ ಇಷ್ಟವಾಗುತ್ತದೆ. ಪಾರ್ಟಿಯಲ್ಲಿ ಹರ್ಯಾಣಿ ಹಾಡು ಪ್ಲೇ ಆಗ್ದೆ ಹೋದ್ರೆ ಅದು ಪಾರ್ಟಿ ಎನ್ನಿಸಿಕೊಳ್ಳೋದಿಲ್ಲ. ಈ ಅಜ್ಜಿಗೂ ಹರ್ಯಾಣಿ ಹಾಡು ಇಷ್ಟವಾದಂತಿದೆ. ಹಾಗಾಗಿಯೇ ಖುಷಿ ಖುಷಿಯಾಗಿ ಡಾನ್ಸ್ ಮಾಡಿದ್ದಾರೆ. ವಿಡಿಯೋ ಪೋಸ್ಟ್ ಮಾಡಿರುವ @GaurangBhardwa, ನೋವಿನ ಬಗ್ಗೆ ದೂರು ನೀಡುವ 20 ವರ್ಷದ ನಗರದ ಹುಡುಗಿ ಮತ್ತು 60 ವರ್ಷದ ಹಳ್ಳಿ ಅಜ್ಜಿ.. ಎಂದು  ಶೀರ್ಷಿಕೆ ಹಾಕಿದ್ದಾರೆ. 

ಸಲ್ವಾರ್ ಕಮೀಜ್ ತೊಟ್ಟು, ತಲೆಗೆ ಬಟ್ಟೆ ಕಟ್ಟಿಕೊಂಡ ಅಜ್ಜಿಯನ್ನು ನೀವು ವಿಡಿಯೋದಲ್ಲಿ ನೋಡಬಹುದು. ಅಜ್ಜಿ ನೆಲದ ಮೇಲೆ ಕುಳಿತು ಎರಡೂ ಕಾಲಿನ ಹೆಬ್ಬೆರಳನ್ನು ಕೈನಲ್ಲಿ ಹಿಡಿದು ಸುತ್ತು ಹಾಕ್ತಿದ್ದಾರೆ.   ಅವರ ಸುತ್ತ ನಿಂತ ಮಹಿಳೆಯರು ಮತ್ತು ಮಕ್ಕಳು ಅಜ್ಜಿ ಡಾನ್ಸ್ ನೋಡಿ ನಗ್ತಾ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದಾರೆ. ಅಜ್ಜಿ ಒಂದು ಸುತ್ತು ಸುತ್ತಿ ನಿಲ್ಲೋದಿಲ್ಲ. ತನ್ನ ಎರಡೂ ಕೈಗಳಿಂದ ಪಾದಗಳನ್ನು ಹಿಡಿದುಕೊಂಡು ಸತತವಾಗಿ ಒಂಬತ್ತು ಬಾರಿ ತಿರುಗುತ್ತಾರೆ. ಅವರು ತಿರುಗುವ ವೇಗ ನೋಡಿದ್ರೆ ಅಚ್ಚರಿಯಾಗುತ್ತೆ. 

ಇಲ್ಲಿಯವರೆಗೆ 13 ಸಾವಿರಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಅನೇಕರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೆಲವರು ಅಜ್ಜಿಯ ಶಕ್ತಿ ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಕೆಲವರು ಅವರ ಡಾನ್ಸ್ ನೋಡಿ ಖುಷಿ ವ್ಯಕ್ತಪಡಿಸಿದ್ದಾರೆ. ನಗುವಿನ ಎಮೋಜಿಗಳು ಕಮೆಂಟ್ ನಲ್ಲಿ ಕಾಣಬಹುದು. ಅವಳನ್ನು ನೋಡಿದ್ರೆ 60 ವರ್ಷಕ್ಕಿಂತ ಹೆಚ್ಚು ವಯಸ್ಸಾದಂತೆ ಕಾಣ್ತಿದ್ದಾಳೆ, ವಾವ್ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.  
 

Follow Us:
Download App:
  • android
  • ios