ಸುಧಾಮೂರ್ತಿ ಮಗಳ ಸಿಂಪ್ಲಿಸಿಟಿ; ಬ್ರಿಟನ್ ಪ್ರಧಾನಿ ಪತ್ನಿ ಧರಿಸಿರೋ ಕುರ್ತಾ ಬೆಲೆ ಇಷ್ಟ್ ಕಡಿಮೆನಾ?
ತಾಯಿಯಂತೆ ಮಗಳು, ನೂಲಿನಂತೆ ಸೀರೆ ಅಂತಾರೆ. ಅದು ನಿಜ ಅನ್ನೋದು ಇಲ್ಲೊಂದು ತಾಯಿ ಮಗಳು ಸಾಬೀತುಪಡಿಸಿದ್ದಾರೆ. ಸರಳತೆಯ ಸಾಕಾರಮೂರ್ತಿಯಂತೆ ಬದುಕುತ್ತಿರುವವರು ಸುಧಾಮೂರ್ತಿ. ಈಗ ಅವರ ಮಗಳು ಅಕ್ಷತಾ ಮೂರ್ತಿ ಸಹ ತಾಯಿಯಂತೆ ಸರಳ ಜೀವನಶೈಲಿಯನ್ನು ಅನುಸರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಯುನೈಟೆಡ್ ಕಿಂಗ್‌ಡಂ ಪ್ರಧಾನ ಮಂತ್ರಿ ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಇತ್ತೀಚೆಗೆ G20 ಶೃಂಗಸಭೆಗಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬ್ರಿಟನ್ ಪ್ರಧಾನಿ ದಂಪತಿಯ ಸರಳ ಗುಣಕ್ಕೆ ಎಲ್ಲರೂ ಮಾರು ಹೋಗಿದ್ದರು. ಅದರಲ್ಲೂ ಅಕ್ಷತಾ ಮೂರ್ತಿಯವರ ಸಿಂಪಲ್ ಲುಕ್ ಎಲ್ಲರ ಗಮನ ಸೆಳೆಯಿತು.
ಪ್ರಧಾನ ಮಂತ್ರಿ ಮತ್ತು ಅವರ ಪತ್ನಿಯಂದಿರು ಸಾಮಾನ್ಯವಾಗಿ ಸಾವಿರಗಟ್ಟಲೆ, ಲಕ್ಷಗಟ್ಟಲೆ ವ್ಯಯಿಸಿದ ಡಿಸೈನರ್ ಬಟ್ಟೆಗಳನ್ನು ಧರಿಸುತ್ತಾರೆ. ಅದರಲ್ಲೂ G20 ಶೃಂಗಸಭೆಯಲ್ಲಿ ಬಹುತೇಕ ಎಲ್ಲಾ ನಾಯಕರು ಡಿಸೈನರ್ಸ್ ತಯಾರಿಸಿದ ಕಾಸ್ಟ್ಲೀ ಬಟ್ಟೆಗಳಲ್ಲಿ ಆಗಮಿಸಿದ್ದರು.
ಆದ್ರೆ ಯುನೈಟೆಡ್ ಕಿಂಗ್‌ಡಂ ಪ್ರಧಾನ ಮಂತ್ರಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಕೇವಲ 1490 ರೂ. ಬೆಲೆಯ ಸಲ್ವಾರ್ ಸೆಟ್ ಧರಿಸಿದ್ದಾರೆ. ಫ್ಯಾಬ್ ಇಂಡಿಯಾ ಬ್ರ್ಯಾಡೆಂಡ್ ಬಟ್ಟೆ ಖರೀದಿಸಲು ಬಳಸೋ ಬ್ರ್ಯಾಂಡ್. ಅಕ್ಷತಾ ಮೂರ್ತಿ ಈ ಬ್ರ್ಯಾಂಡ್ ಡಿಸೈನ್ ಮಾಡಿದ ಸಿಂಪಲ್ ಸಲ್ವಾರ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಅಕ್ಷತಾ ಮೂರ್ತಿ ಮತ್ತು ಬ್ರಿಟನ್ ಪ್ರಧಾನಿ ನವದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದರು. ಪೂಜೆ ಮತ್ತು ಇತರ ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸಿದರು. ಅಕ್ಷತಾ ಮೆಜೆಂತಾ-ಪಿಂಕ್ ಮತ್ತು ಹಸಿರು ಸಲ್ವಾರ್ ಸೂಟ್‌ನಲ್ಲಿ ತನ್ನ ನೋಟವನ್ನು ಸರಳವಾಗಿರಿಸಿಕೊಂಡಿದ್ದರು.
ಗ್ರೀನ್ ಕುರ್ತಾ ಹೂವಿನ ಮೋಟಿಫ್‌ಗಳನ್ನು ಒಳಗೊಂಡಿತ್ತು ಮತ್ತು ಕೆನ್ನೇರಳೆ-ಗುಲಾಬಿ ದುಪ್ಪಟ್ಟಾ ಮತ್ತು ಪಲಾಝೋ ಪ್ಯಾಂಟ್‌ಗಳೊಂದಿಗೆ ಸರಳವಾಗಿ ಸುಂದರವಾಗಿ ಕಾಣುತ್ತಿದ್ದರು
ಅಕ್ಷತಾ ಭಾರತಕ್ಕೆ ಆಗಮಿಸಿದ ಮೊದಲ ದಿನ, ವೈಲ್ಡ್ ಐರಿಸ್ ಸೆಟ್ ಎಂದು ಕರೆಯಲ್ಪಡುವ ಡ್ರಾನ್ ಎಂಬ ಭಾರತೀಯ ಬ್ರಾಂಡ್‌ನಿಂದ ಕಿತ್ತಳೆ ಬಣ್ಣದ ಕೋ-ಆರ್ಡ್ ಸೆಟ್ ಅನ್ನು ಧರಿಸಿದ್ದರು. ಡ್ರಾನ್ ಎಂಬುದು ಭಾರತದಲ್ಲಿ ಆಧಾರಿತವಾದ ಸಿದ್ಧ ಉಡುಪುಗಳ ಸ್ವತಂತ್ರ ಫ್ಯಾಷನ್ ಬ್ರ್ಯಾಂಡ್ ಆಗಿದೆ.
ತನ್ನ ಇಂಡೋ-ವೆಸ್ಟರ್ನ್ ಉಡುಪಿನೊಂದಿಗೆ ಮಿಂಚಿದ ನಂತರ, ಬ್ರಿಟನ್ ಪ್ರಥಮ ಮಹಿಳೆ ಅಕ್ಷತಾ, ರಾ ಮ್ಯಾಂಗೋ ಲೇಬಲ್‌ನಿಂದ ಸಂಪೂರ್ಣ ಮೃದುವಾದ ಗುಲಾಬಿ ರೇಷ್ಮೆ ಸೀರೆಯಲ್ಲಿ ಭಾರತಕ್ಕೆ ವಿದಾಯ ಹೇಳಿದರು. ಇದು ಸುಸ್ಥಿರ ಫ್ಯಾಷನ್ ಮತ್ತು ಭಾರತೀಯ ಕೈಮಗ್ಗಗಳ ಮೇಲೆ ಕೇಂದ್ರೀಕರಿಸುವ ಮತ್ತೊಂದು ಸ್ವದೇಶಿ ಬ್ರಾಂಡ್ ಆಗಿದೆ.
ಸ್ವತಃ ಅಕ್ಷತಾ ಕೂಡ ಫ್ಯಾಷನ್ ಡಿಸೈನರ್ ಎಂಬುದು ಗಮನಾರ್ಹ ಸಂಗತಿಯಾಗಿದೆ. ಮಾತ್ರವಲ್ಲ, ಬ್ರಿಟನ್‌ನಲ್ಲೇ ಅತ್ಯಂತ ಉತ್ತಮ ಪೋಷಾಕು ತೊಡುವವರ(ಬೆಸ್ಟ್ ಡ್ರೆಸ್ಡ್-2023) ಪಟ್ಟಿಯಲ್ಲಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಸ್ಥಾನ ಪಡೆದಿದ್ದಾರೆ. ಜನಪ್ರಿಯ ನಿಯತಕಾಲಿಕೆಯೊಂದು ಇದನ್ನು ಬಿಡುಗಡೆ ಮಾಡಿತ್ತು.
ರಿಷಿ ಸುನಕ್-ಅಕ್ಷತಾ ಮೂರ್ತಿ ಇಬ್ಬರೂ ಕೂಡ ಭಾರತೀಯ ಮೂಲದವರು. ಅದರಲ್ಲೂ ಅಕ್ಷತಾ ಮೂರ್ತಿ ಕರ್ನಾಟಕದವರು. ಇನ್ಪೋಸೀಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಮಗಳು ಎಂಬುದು ಎಲ್ಲರಿಗೂ ಗೊತ್ತು. ರಿಷಿ ಸುನಕ್ ಅವರ ಅಜ್ಜ ಮತ್ತು ಅಜ್ಜಿ ಕೂಡ ಭಾರತೀಯ ಮೂಲದವರಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.