Asianet Suvarna News Asianet Suvarna News

ಕಡುಬಡತನದಲ್ಲಿ ಬೆಳೆದು 16 ಬಾರಿ ಮೂಳೆ ಮುರಿತ, 8 ಬಾರಿ ಸರ್ಜರಿಗೆ ಒಳಗಾದಾಕೆ ಈಗ ಐಎಎಸ್‌ ಆಫೀಸರ್‌!

ಕೆಲವೊಬ್ಬರು ಕಠಿಣವಾದ ಐಎಎಸ್‌ ಎಕ್ಸಾಂ ಪಾಸ್ ಮಾಡಿಕೊಂಡು ಹಲವರಿಗೆ ಸ್ಫೂರ್ತಿಯಾಗುತ್ತಾರೆ. ಅದೇ ರೀತಿಯ ಸ್ಪೂರ್ತಿದಾಯಕ ಮಹಿಳೆ ಉಮ್ಮುಲ್ ಖೇರ್. 16 ಬಾರಿ ಮೂಳೆ ಮುರಿತಕ್ಕೆ ಒಳಗಾಗಿ, 8 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರೂ IAS ಪರೀಕ್ಷೆ ಗೆದ್ದು ಬಂದಾಕೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

IAS Officer Ummul Kher,who suffered 16 fractures, underwent 8 surgeries, cracked UPSC exam Vin
Author
First Published Jan 7, 2024, 2:32 PM IST

ಭಾರತದಲ್ಲಿ UPSC ಎಕ್ಸಾಂ ಪಾಸ್ ಆಗುವುದು ಆದರೆ ಕಠಿಣವಾದ ಕೆಲಸವಾಗಿದೆ. ಕೆಲವೊಬ್ಬರು ಈ ಪರೀಕ್ಷೆ ಪಾಸಾಗಲು ವರ್ಷಗಟ್ಟಲೆ ಪರಿಶ್ರಮ ಪಡುತ್ತಾರೆ. ಅದಕ್ಕಾಗಿ ತಯಾರಿ ಮಾಡಲು ವರ್ಷಗಳನ್ನು ಕಳೆಯುತ್ತಾರೆ. ಆದರೆ ದುರದೃಷ್ಟವಶಾತ್, ಹಲವರು ಈ ಎಕ್ಸಾಂ ಪಾಸ್ ಆಗುವಲ್ಲಿ ವಿಫಲರಾಗುತ್ತಾರೆ. ಆದರೆ ಕೆಲವೊಬ್ಬರು ಬಡತನದಲ್ಲಿಯೂ ಈ ಕಠಿಣವಾದ ಎಕ್ಸಾಂ ಪಾಸ್ ಮಾಡಿಕೊಂಡು ಹಲವರಿಗೆ ಸ್ಫೂರ್ತಿಯಾಗುತ್ತಾರೆ. ಅದೇ ರೀತಿಯ ಸ್ಪೂರ್ತಿದಾಯಕ ಮಹಿಳೆ ಉಮ್ಮುಲ್ ಖೇರ್. 16 ಬಾರಿ ಮೂಳೆ ಮುರಿತಕ್ಕೆ ಒಳಗಾಗಿ, 8 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರೂ IAS ಪರೀಕ್ಷೆ ಗೆದ್ದು ಬಂದಾಕೆ.

ಉಮ್ಮುಲ್ ಖೇರ್ ರಾಜಸ್ಥಾನದಲ್ಲಿ ಜನಿಸಿದರು. ಆದರೆ ಆಕೆ ಮಗುವಾಗಿದ್ದಾಗ, ಅವರ ತಂದೆ ದೆಹಲಿಗೆ ತೆರಳಿದರು. ನಂತರ ಉಮ್ಮುಲ್ ದೆಹಲಿಯ ತ್ರಿಲೋಕಪುರಿ ಕೊಳೆಗೇರಿಯಲ್ಲಿ ವಾಸಿಸಲು ಆರಂಭಿಸಿದರು. ಆಕೆಯ ತಂದೆ ಅಂಗಡಿಯಲ್ಲಿ ಬಟ್ಟೆ ಮಾರುತ್ತಿದ್ದರು. ಉಮ್ಮಲ್‌ ಕಷ್ಟಪಟ್ಟು ಅಧ್ಯಯನ ಮಾಡಿದರು. ಹಲವಾರು ಕಷ್ಟಗಳಿದ್ದರೂ ಅವರು ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂಬ ಭರವಸೆಯನ್ನು ಕೈ ಬಿಡಲ್ಲಿಲ್ಲ. ತಾವು ಎದುರಿಸುತ್ತಿದ್ದ ಮೂಳೆ ರೋಗದ ವಿರುದ್ಧ ಹೋರಾಡಿದರು. 

ಬ್ಯೂಟಿ ವಿತ್‌ ಬ್ರೈನ್ ಎಂದೇ ಕರೆಸಿಕೊಳ್ಳೋ ಐಎಎಸ್ ಆಫೀಸರ್ ಟೀನಾ ಡಾಬಿ ಲೈಫ್‌ಸ್ಟೈಲ್‌ ಇಷ್ಟೊಂದು ಲಕ್ಸುರಿನಾ?

ಮೂಳೆ ಅಸ್ವಸ್ಥತೆ ಬಳಲುತ್ತಿದ್ದ ಉಮ್ಮುಲ್ ಖೇರ್
ಉಮ್ಮುಲ್ ದುರ್ಬಲವಾದ ಮೂಳೆ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅಸ್ವಸ್ಥತೆಯ ಕಾರಣದಿಂದಾಗಿ. ಮೂಳೆ ಆಗಾಗ ದುರ್ಬಲಗೊಂಡು ಮುರಿಯುತ್ತಿತ್ತು. ಈ ರೋಗದಿಂದಾಗಿ ಅವರು ತಮ್ಮ ಜೀವಿತಾವಧಿಯಲ್ಲಿ 16 ಮುರಿತಗಳು ಮತ್ತು 8 ಶಸ್ತ್ರಚಿಕಿತ್ಸೆಗಳನ್ನು ಮಾಡಿಕೊಳ್ಳಬೇಕಾಯಿತು. ಆದರೂ ಉಮ್ಮಲ್ ಐಎಎಸ್‌ ಅಧಿಕಾರಿಯಾಗಬೇಕೆಂಬ ಕನಸನ್ನು ಬಿಟ್ಟುಕೊಡಲ್ಲಿಲ್ಲ. ಖೇರ್ ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯಿಂದಾಗಿ ಯುಪಿಎಸ್‌ಸಿಗೆ ಓದಲು ತುಂಬಾ ಕಷ್ಟಕರವಾಗಿತ್ತು. ಇದರ ಪರಿಣಾಮವಾಗಿ ಉಮ್ಮುಲ್ ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಥಿಗಳಿಗೆ ಟ್ಯೂಷನ್  ಕಲಿಸಲು ಪ್ರಾರಂಭಿಸಿದರು. ಟ್ಯೂಷನ್ ಶುಲ್ಕ ವಿಧಿಸಿ ಗಳಿಸಿದ ಹಣವನ್ನು ತನ್ನ ಶೈಕ್ಷಣಿಕ ವೆಚ್ಚಗಳನ್ನು ಭರಿಸಲು ಬಳಸಿದರು.

NGOದ ನೆರವಿನೊಂದಿಗೆ 10ನೇ ತರಗತಿಯ ವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿದರು. ಆದರೆ ಆ ನಂತರ ವಿದ್ಯಾಭ್ಯಾಸವನ್ನು ಮುಂದುವರಿಸುವುದು ಆಕೆಯ ಮನೆಯವರಿಗೆ ಇಷ್ಟವಿರಲಿಲ್ಲ. ಆದರೆ ಆಕೆ ಅಧ್ಯಯನವನ್ನು ನಿಲ್ಲಿಸಲು ಬಯಸಲಿಲ್ಲ. ಮನೆಯಿಂದ ಓಡಿಹೋಗಿ ಕೊಳೆಗೇರಿಯಲ್ಲಿ ನೆಲೆಸಿದಳು. ಶಿಕ್ಷಣದ ವೆಚ್ಚವನ್ನು ಪಾವತಿಸಲು ಟ್ಯೂಷನ್ ತೆಗೆದುಕೊಳ್ಳಲು ಆರಂಭಿಸಿದರು. 12ನೇ ತರಗತಿಯಲ್ಲಿ 91 ಶೇಕಡಾ ಅಂಕಗಳನ್ನು ಗಳಿಸಿದಳು ಮತ್ತು ನಂತರ ಗಾರ್ಗಿ ಕಾಲೇಜಿನಲ್ಲಿ ಪದವಿ ಪಡೆದರು.

ಮಿಸ್ ಇಂಡಿಯಾ ಕನಸು ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆದ ಮಾಡೆಲ್

ಕಡುಬಡತನದಲ್ಲಿ ಶಿಕ್ಷಣ ಪೂರ್ತಿಗೊಳಿಸಿದ ಯುವತಿ
ದೆಹಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ, ಉಮ್ಮುಲ್ JNU ನ ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್‌ನಲ್ಲಿ ತನ್ನ MA ಅನ್ನು ಪೂರ್ಣಗೊಳಿಸಿದರು.ಅದೇ ಸಂಸ್ಥೆಯಲ್ಲಿ MPhil/PhD ಕಾರ್ಯಕ್ರಮಕ್ಕೆ ಅಂಗೀಕರಿಸಲ್ಪಟ್ಟರು. ಈ ಸಮಯದಲ್ಲಿ UPSC ಗಾಗಿ ತಯಾರಿ ಆರಂಭಿಸಿದರು. ಹಲವು ವರ್ಷಗಳ ಪರಿಶ್ರಮದ ನಂತರ UPSCಯಲ್ಲಿ 420ನೇ ರ್ಯಾಂಕ್‌ ಪಡೆದರು ಮತ್ತು 2017ರಲ್ಲಿ IAS ಅಧಿಕಾರಿಯಾದರು. ಉಮ್ಮುಲ್‌ನಂತೆಯೇ ಇರುವ ಸಾವಿರಾರು ಜನರು ಇಂದು ಆಕೆಯ ಹೋರಾಟದ ಕಥೆಯಿಂದ ಸ್ಫೂರ್ತಿ ಪಡೆದಿದ್ದಾರೆ.

Follow Us:
Download App:
  • android
  • ios