UPSC ಪಾಸ್ ಮಾಡೋಕೆ 6 ತಿಂಗಳು ರೂಂನಲ್ಲಿ ಲಾಕ್ ಆಗಿದ್ದಾಕೆ ಈಗ IAS ಆಫೀಸರ್ ..!

2018 ರಲ್ಲಿ ಮೂರನೇ ಪ್ರಯತ್ನದಲ್ಲಿ ನಿಧಿ ಸಿವಾಚ್ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿದರು. 83 ನೇ ರ್ಯಾಂಕ್ ಗಳಿಸಿದ್ದರಿಂದ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಅವರಿಗೆ ಸಿಕ್ಕಿತ್ತು

IAS officer Nidhi Siwach who locked herself in a room for 6 months to crack UPSC exam

ಯುಪಿಎಸ್ಸಿ ಪರೀಕ್ಷೆಯು ದೇಶದ ಕಠಿಣ ಪರೀಕ್ಷೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ಪರೀಕ್ಷೆಯನ್ನು ಪಾಸ್ ಮಾಡಿದವರನ್ನು ಐಎಎಫ್ ಅಧಿಕಾರಿಗಳಾಗಿ ನೇಮಿಸಲಾಗುತ್ತದೆ.

ಮಹತ್ವಾಕಾಂಕ್ಷಿ ಐಎಎಸ್ ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಲು ತಮ್ಮ ಕೈಮೀರಿ ಪ್ರಯತ್ನ ಮಾಡುತ್ತಾರೆ. ಆದರೂ ಅವರಲ್ಲಿ ಕೆಲವರು ತಮ್ಮ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.

ರೈತನ ಐವರು ಪುತ್ರಿಯರೂ ರಾಜಸ್ಥಾನ ಆಡಳಿತ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣ!

ಐಎಎಸ್ ಅಧಿಕಾರಿ ನಿಧಿ ಸಿವಾಚ್ ಅವರು ಸಕ್ಸಸ್ ಆದ ಅಭ್ಯರ್ಥಿಗಳಲ್ಲಿ ಒಬ್ಬರು. ಅವರು 6 ತಿಂಗಳ ಕಾಲ ಒಂದು ಕೋಣೆಯಲ್ಲಿ ಬೀಗ ಹಾಕಿಕೊಂಡು ಕುಳಿತು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿದರು. ಈ 6 ತಿಂಗಳು ಅಧ್ಯಯನ ಬಿಟ್ಟು ಬೇರೇನೂ ಮಾಡಲಿಲ್ಲ.

2018 ರಲ್ಲಿ ಮೂರನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿ 83 ನೇ ರ್ಯಾಂಕ್ ಗಳಿಸಿದ್ದರಿಂದ ನಿಧಿ ಸಿವಾಚ್ ಅವರ ಶ್ರಮಕ್ಕೆ ಫಲ ಸಿಕ್ಕಿತು. ನಂತರ ನಿಧಿಯನ್ನು ಐಎಎಸ್ ಹುದ್ದೆಗೆ ಆಯ್ಕೆ ಮಾಡಲಾಯಿತು.

ಪ್ರಾಣ ಪಣಕ್ಕಿಟ್ಟು, ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ನಿಧಿ ಸಿವಾಚ್ ಹರಿಯಾಣದ ಗುರುಗ್ರಾಮ್ ಮೂಲದವರು. ತನ್ನ 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆಗಳಲ್ಲಿ ಕ್ರಮವಾಗಿ 95% ಮತ್ತು 90% ಅಂಕಗಳನ್ನು ಗಳಿಸಿದ್ದಾರೆ. ಹರಿಯಾಣದ ಸೋನಿಪತ್‌ನ ದೀನ್ಬಂಧು ಚೋಟುರಾಮ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರೆ.

ಎಂಜಿನಿಯರಿಂಗ್ ಮುಗಿಸಿದ ನಂತರ ನಿಧಿ ಹೈದರಾಬಾದ್‌ಗೆ ಟೆಕ್ ಮಹೀಂದ್ರಾದಲ್ಲಿ ಡಿಸೈನ್ ಎಂಜಿನಿಯರ್ ಆಗಿ ಕೆಲಸ ಮಾಡಲು ಹೋದರು. ಆದರೆ 2017 ರಲ್ಲಿ ತನ್ನ ಕೆಲಸವನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದಳು.

Latest Videos
Follow Us:
Download App:
  • android
  • ios