ರೈತನ ಐವರು ಪುತ್ರಿಯರೂ ರಾಜಸ್ಥಾನ ಆಡಳಿತ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣ!

* ಶಾಲೆಗೆ ಹೋಗದ ಹೆಣ್ಣುಮಕ್ಕಳ ಅದ್ವಿತೀಯ ಸಾಧನೆ

* ರೈತನ ಐವರು ಪುತ್ರಿಯರೂ ರಾಜಸ್ಥಾನ ಆಡಳಿತ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣ

* ಒಬ್ಬರಿಗೊಬ್ಬರು ಪಾಠ ಮಾಡಿ ಉನ್ನತ ಹುದ್ದೆಗೇರಿದರು

Rajasthan Five daughters of farmer are now RAS officers pod

ಜೈಪುರ(ಜು.16): ಹೆಣ್ಣು ಮಕ್ಕಳೆಂದು ಮೂಗು ಮುರಿಯುವವರ ಮಧ್ಯೆಯೇ ಬಡ ರೈತನ ಐವರು ಹೆಣ್ಣುಮಕ್ಕಳು ಅಸಾಧಾರಣ ಸಾಧನೆ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಐಎಎಸ್ ಪರೀಕ್ಷೆಗೆ ಓದಿನ ತಯಾರಿ ಹೇಗಿರಬೇಕು?

ಹೌದು ಇಲ್ಲಿನ ಹನುಮಾನಘರ್‌ ನಗರದ ರೈತರೊಬ್ಬರ ಐವರು ಹೆಣ್ಣು ಮಕ್ಕಳು ಪ್ರತಿಷ್ಠಿತ ರಾಜಸ್ಥಾನ ಆಡಳಿತಾತ್ಮಕ ಸೇವೆ(ಆರ್‌ಎಎಸ್‌) ಹುದ್ದೆ ಅಲಂಕರಿಸಿ ಸಾಧನೆಗೈದಿದ್ದಾರೆ.

ಇತಿಹಾಸ ಬರೆದ ರಝಿಯಾ; ಬಿಹಾರ ಮುಸ್ಲಿಂ ಸಮುದಾಯದ ಮೊದಲ ಮಹಿಳಾ DSP!

2018ರ ಆರ್‌ಎಎಸ್‌ ಪರೀಕ್ಷಾ ಫಲಿತಾಂಶ ಜು.13ರಂದು ಪ್ರಕಟವಾಗಿದ್ದು, ಅದರಲ್ಲಿ ರೈತ ಸಹದೇವ್‌ ಸಹರನ್‌ ಪುತ್ರಿಯರಾದ ಅಂಶು, ರೀತು ಮತ್ತು ಸುಮನ್‌ ತೇರ್ಗಡೆಯಾಗಿದ್ದಾರೆ. ಅದಕ್ಕೂ ಹಿಂದಿನ ಆರ್‌ಎಎಸ್‌ ಪರೀಕ್ಷೆಯಲ್ಲಿ ಹಿರಿಯ ಸಹೋದರಿಯರಾದ ರೋಮ ಮತ್ತು ಮಂಜು ತೇರ್ಗಡೆಯಾಗಿ ಸರ್ಕಾರಿ ಹುದ್ದೆ ಅಲಂಕರಿಸಿದ್ದಾರೆ.

6ನೇ ಪ್ರಯತ್ನದಲ್ಲಿ UPSC ಪಾಸ್: ಕಾನ್ಸ್‌ಟೇಬಲ್ ಈಗ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್

ವಿಶೇಷ ಎಂದರೆ ಇವರಾರೂ 5ನೇ ತರಗತಿ ನಂತರ ಶಾಲೆಗೆ ಹೋಗಿ ಕಲಿತಿಲ್ಲ. ಮನೆಯಲ್ಲಿಯೇ ಇದ್ದು ವಿದ್ಯಾಭ್ಯಾಸ ಮುಗಿಸಿದ್ದಾರೆ. ಮನೆಯಲ್ಲಿ ಕಡು ಬಡತನ ಇದ್ದಿದ್ದರಿಂದ ಒಬ್ಬರಿಗೊಬ್ಬರು ನೆರಳಾಗಿ ಮನೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಈ ಹೆಣ್ಣು ಮಕ್ಕಳ ಸಾಧನೆ ಕಂಡು ಇಡೀ ಗ್ರಾಮಸ್ಥರು ಹೆಮ್ಮೆ ಪಟ್ಟಿದ್ದಾರೆ.

Latest Videos
Follow Us:
Download App:
  • android
  • ios