ಪ್ರಾಣ ಪಣಕ್ಕಿಟ್ಟು, ಒಟ್ಟಿಗೆ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ಅವಳಿ ಮಕ್ಕಳು ಜನಿಸುವುದು ಸಾಮಾನ್ಯ, ಇನ್ನೂ ಕೆಲವು ಮಹಿಳೆಯರು ತ್ರಿವಳಿ ಮಕ್ಕಳಿಗೂ ಜನ್ಮ ನೀಡಿದ ಉದಾಹರಣೆಗಳಿವೆ. ಆದರೆ ಒಟ್ಟಿಗೆ ನಾಲ್ಕು ಮಕ್ಕಳು ಹುಟ್ಟಿರುವುದು ಸ್ವಲ್ಪ ವಿರಳ. ಉತ್ತರ ಪ್ರದೇಶದ ಗಾಜಿಯಾಬಾದ್ ಮಹಿಳೆಯೊಬ್ಬರು ಒಂದೇ ಬಾರಿಗೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಲ್ಲಿದ್ದಾರೆ. ಎಲ್ಲಾ ನಾಲ್ಕು ಮಕ್ಕಳೂ ಮತ್ತು ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ.
ಉತ್ತರ ಪ್ರದೇಶ ಗಾಜಿಯಾಬಾದ್ ಯಶೋದಾ ಆಸ್ಪತ್ರೆಯಲ್ಲಿ ಮಹಾನ್ ತಾಯಿಯೊಬ್ಬಳು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಹೆರಿಗೆಗಾಗಿ ದಾಖಲಾದ ಮಹಿಳೆಯು ಮೂರು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಯಶಸ್ವಿಯಾಗಿ ಜನ್ಮ ನೀಡಿದ್ದಾರೆ. ಪ್ರಸ್ತುತ ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ತಾಯಿ ಆರೋಗ್ಯವಾಗಿದ್ದಾರೆ.
ಡಾ. ಶಶಿ ಅರೋರಾ ಮತ್ತು ಯಶೋದ ಆಸ್ಪತ್ರೆಯ ಡಾ. ಸಚಿನ್ ದುಬೆ ಅವರ ಮೇಲ್ವಿಚಾರಣೆಯಲ್ಲಿ ಅಪರೇಷನ್ ಮೂಲಕ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ ಈ ತಾಯಿ.
ಹೆರಿಗೆ ಸಮಯದಲ್ಲಿ ಜೀವಕ್ಕೆ ಅಪಾಯವಿತ್ತು. ನಾಲ್ಕು ಮಕ್ಕಳ ಡೆಲೆವರಿ ಮಾಡಿಸುವುದು ಕಠಿಣ ಸವಾಲಾಗಿತ್ತು ಆದರೆ ನಮ್ಮ ತಂಡವು ಈ ಅಸಾಧ್ಯವಾದ ಕೆಲಸವನ್ನು ಪೂರ್ಣ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಸಾಧ್ಯವಾಯಿತು ಎಂದು ಡಾ.ಶಶಿ ಅರೋರಾ ಹೇಳಿದ್ದಾರೆ.
ವೈದ್ಯರ ಪ್ರಕಾರ, ಮಹಿಳೆಯನ್ನು ಈಗ ಎರಡು ಮೂರು ದಿನಗಳವರೆಗೆ ಆಸ್ಪತ್ರೆಯಲ್ಲಿಡಬೇಕಾಗುತ್ತದೆ. ಈ ಮಕ್ಕಳನ್ನು ನೋಡಲು ಜನರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ.
ಮೂರು ಗಂಡು ಮಕ್ಕಳು ತಲಾ 1 ಕೆಜಿ, ಹೆಣ್ಣು ಮಗು ತೂಕ 1 ಕೆಜಿ 100 ಗ್ರಾಂ ಇದೆ.
ವಿಟ್ರೊ ಫರ್ಟಿಲೈಜೇಷನ್ ಟೆಕ್ನಿಕ್ ಮೂಲಕ ಈ ತಾಯಿ ಕನ್ವೀವ್ ಆಗಿದ್ದಳು. ತಾಯಿ ಮತ್ತು ಮಕ್ಕಳೆಲ್ಲರೂ ಆರೋಗ್ಯವಾಗಿದ್ದಾರೆ. ಈ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳು ಒಟ್ಟಿಗೆ ಜನಿಸಿರುವುದು ಮೊದಲ ಪ್ರಕರಣವೆಂದಿದ್ದಾರೆ ವೈದ್ಯರು.