Asianet Suvarna News Asianet Suvarna News

ಮಗು ಹಾಸಿಗೆ ಒದ್ದೆ ಮಾಡಿಕೊಳ್ಳುತ್ತಾ? ಚಿಂತಿಸಬೇಡಿ ಇಲ್ಲಿವೆ ಪರಿಹಾರ

ತಾಯಂದಿರು(Mothers) ತಮ್ಮ ಮಕ್ಕಳ ಬಗ್ಗೆ ಎಷ್ಟು ಎಚ್ಚರ ಹಾಗೂ ಕಾಳಜಿ ವಹಿಸುತ್ತಾರೆಂದರೆ ಮಗುವಿನ(Babies) ಪ್ರತೀ ಹೆಜ್ಜೆಯ ಹಿಂದೆ ಆಕೆ ಕಾವಲಾಗಿ ನಿಂತಿರುತ್ತಾಳೆ. ಐದು ವರ್ಷದೊಳಗಿನ(5 Years) ಮಕ್ಕಳು ಸಾಮಾನ್ಯವಾಗಿ ಹಾಸಿಗೆಯಲ್ಲಿ(Bed) ಮೂತ್ರವಿಸರ್ಜನೆ(Urine) ಮಾಡುವುದು ಕಾಮನ್. ಇದು ಕಾಮನ್ ವಿಷಯವಾದರೂ ಐದು ವರ್ಷದ ನಂತರವೂ ಮುಂದುವರಿದರೆ ಅದನ್ನು ಎಂದಿಗೂ ನೆಗ್ಲೆಕ್ಟ್ ಮಾಡಬಾರದು. ಏಕೆ ಈ ಬಗ್ಗೆ ಮಾಹಿತಿ ಇಲ್ಲಿದೆ.

How to Stop Bed Wetting By Childrens
Author
Bangalore, First Published Jun 22, 2022, 5:44 PM IST

ತಾಯಂದಿರು(Mothers) ತಮ್ಮ ಮಕ್ಕಳ ಬಗ್ಗೆ ಎಷ್ಟು ಎಚ್ಚರ ಹಾಗೂ ಕಾಳಜಿ ವಹಿಸುತ್ತಾರೆಂದರೆ ಮಗುವಿನ(Babies) ಪ್ರತೀ ಹೆಜ್ಜೆಯ ಹಿಂದೆ ಆಕೆ ಕಾವಲಾಗಿ ನಿಂತಿರುತ್ತಾಳೆ. ಐದು ವರ್ಷದೊಳಗಿನ(5 Years) ಮಕ್ಕಳು ಸಾಮಾನ್ಯವಾಗಿ ಹಾಸಿಗೆಯಲ್ಲಿ(Bed) ಮೂತ್ರವಿಸರ್ಜನೆ(Urine) ಮಾಡುವುದು ಕಾಮನ್. ಇದು ಕಾಮನ್ ವಿಷಯವಾದರೂ ಐದು ವರ್ಷದ ನಂತರವೂ ಮುಂದುವರಿದರೆ ಅದನ್ನು ಎಂದಿಗೂ ನೆಗ್ಲೆಕ್ಟ್ ಮಾಡಬಾರದು. ಏಕೆ ಈ ಬಗ್ಗೆ ಮಾಹಿತಿ ಇಲ್ಲಿದೆ.

ಪ್ರತೀ ತಾಯಿ ರಾತ್ರಿಯ(Night) ನಿದ್ರೆ(Sleep) ಸುಖವಾಗಿರಬೇಕು ಎಂದು ಬಯಸುತ್ತಾಳೆ. ತನ್ನ ಮಗುವಿನ ಹಾಸಿಗೆ ಒದ್ದೆಯಾಗದಿದ್ದರೆ ನಿಶ್ಚಿಂತೆಯಿAದ ಮಲಗಬಹುದು. ಹಾಗೂ ಮರು ದಿನ ಫ್ರೆಶ್ ಮೂಡ್‌ನಲ್ಲಿ(Fresh Mood) ಎದ್ದೇಳಬಹುದು. ಐದು ವರ್ಷದೊಳಗಿನ ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವುದು ಸಾಮಾನ್ಯ ಸಂಗತಿ. ಆದರೆ ಐದು ವರ್ಷದ ನಂತರವೂ ನಿಮ್ಮ ಮಗು ಹಾಸಿಗೆಯಲ್ಲಿ ವಿಸರ್ಜಿಸುತ್ತಿದೆ ಎಂದರೆ ಅದನ್ನು ನೆಗ್ಲೆಕ್ಟ್ ಮಾಡಬಾರದು. ಹೀಗೆ ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಬೇಕು. ರಾತ್ರಿ ಮಲಗುವ ಮುನ್ನ ಮಗುವನ್ನು ಒಮ್ಮೆ ಮೂತ್ರವಿಸರ್ಜನೆಗೆ ಕರೆದೊಯ್ಯುವುದು ಒಳ್ಳೆಯದು.ಹಾಗಾದರೆ ಮಗು ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡುವುದನ್ನು ತಪ್ಪಿಸುವುದು ಹೇಗೆ? ಯಾವೆಲ್ಲಾ ಕ್ರಮಗಳನ್ನು(Precautions) ತಾಯಿ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

46ನೇ ವಯಸ್ಸಿಗೆ ಮೂರನೇ ಮಗು; ವೈಯಕ್ತಿಕ ಜೀವನದ ಸೀಕ್ರೆಟ್‌ ಬಿಚ್ಚಿಟ್ಟ ಅರ್ಜುನ್ ರಾಮ್ ಪಾಲ್

ಮಗು ಹಾಸಿಗೆಯಲ್ಲಿ ಮೂತ್ರವಿಸರ್ಜಿಸುವುದು ಏಕೆ?
ಐದು ವರ್ಷದವರೆಗೂ ಮಗು ಹಾಸಿಗೆಯಲ್ಲಿ ವಿಸರ್ಜಿಸುತ್ತಿದೆ ಎಂದರೆ ಅದು ಸಾಮಾನ್ಯ ವಿಚಾರ. ಇದು ಬೆಳವಣಿಗೆಯ(Growth) ಸಂಕೇತ ಎಂದು ತಜ್ಞರು ಹೇಳುತ್ತಾರೆ. ಆದರೂ ಕೆಲ ಮಕ್ಕಳು ಐದು ವರ್ಷದ ನಂತರವೂ ಈ ಅಭ್ಯಾಸಕ್ಕೆ ಒಗ್ಗಿಕೊಂಡಿರುವವರು ಇದ್ದಾರೆ. ಅದನ್ನು ತೊಡೆದುಹಾಕಲು ಪ್ರಯತ್ನಿಸಿದರೂ ಸಾಧ್ಯವಾಗದಿದ್ದಾಗ ನಿಮ್ಮ ವೈದ್ಯರಿಗೆ(Doctors) ಪರಿಹಾರಕ್ಕಾಗಿ ಸಂಪರ್ಕಿಸಬೇಕಾಗುತ್ತದೆ.
ವಯಸ್ಸನ್ನು ಹೊರತುಪಡಿಸಿ ಮಗು 5 ವರ್ಷಕ್ಕಿಂತ ಮೇಲ್ಪಟ್ಟು ಹಾಸಿಗೆಯಲ್ಲಿ ಒದ್ದೆಯಾಗುತ್ತಿದ್ದರೆ, ನಿಮ್ಮ ಮಗುವಿನ ನಿಯಂತ್ರಣದಲ್ಲಿ ಇಲ್ಲವೆಂದರ್ಥ. ಏಕೆಂದರೆ ಆರೋಗ್ಯದಲ್ಲಿ ಕೆಲ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಯಾವೆಲ್ಲಾ ಸಮಸ್ಯೆಗಳು ಎದುರಾಗಬಹುದು ಇಲ್ಲಿದೆ ಡಿಟೇಲ್ಸ್.

1. ಮೂತ್ರಕೋಶ ಅಭಿವೃದ್ಧಿ
ಮಗುವಿನ ಮೂತ್ರಕೋಶವು(Bladder) ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲದಿರಬಹುದು. ಏಕೆಂದರೆ ಮೂತ್ರಪಿಂಡಗಳ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಗಳಿರಬಹುದು. ಇಲ್ಲವೇ ಮೂತ್ರಕೋಶದಲ್ಲಿ ಸಮಸ್ಯೆಯನ್ನು ಉಂಟುಮಾಡುವ ನರಗಳಲ್ಲಿ ಸಮಸ್ಯೆಗಳಿರಬಹುದು. ಇವು ಮಗುವಿಗೆ ಮೂತ್ರ ವಿಸರ್ಜನೆಯನ್ನು(Urination) ನಿಯಂತ್ರಿಸಲು ಕಷ್ಟವಾಗುತ್ತವೆ. 

2. ಮಲಗುವ ಸಮಸ್ಯೆ
ಮಗು ನಿದ್ರೆಯಲ್ಲಿ ಉಸಿರುಕಟ್ಟುವಿಕೆ(Sleep Apnea) ಇದರ ಪರಿಣಾಮವಾಗಿ ಹಾಸಿಗೆ ಒದ್ದೆಯಾಗುತ್ತದೆ. ಇದು ಬಹುದೊಡ್ಡ ಸಮಸ್ಯೆ ಎಂದು ಹೇಳಲಾಗುತ್ತದೆ. ಯಾವ ವ್ಯಕ್ತಿ ನಿದ್ರೆಯಲ್ಲಿ ಉಸಿರುಕಟ್ಟುತ್ತಾನೊ ಅವರಿಗೆ ನಿದ್ರೆಯಲ್ಲಿ ತಮ್ಮ ಉಸಿರಾಟದ(Breathing) ಬಗ್ಗೆ ಅರಿವಿರುವುದಿಲ್ಲ(Unconscious). ಇದ್ದಕ್ಕಿದತೆ ಜೋರಾಗಿ ಉಸಿರಾಡುತ್ತಾರೆ(Fast Breathing) ಮತ್ತು ನಂತರ ನಿಲ್ಲಿಸುತ್ತಾರೆ. ಅಂದರೆ ಒಬ್ಬ ವ್ಯಕ್ತಿಯು ಜೋರಾಗಿ ಗೊರಕೆ(Snores Loud) ಹೊಡೆಯುತ್ತಾನೆ ಮತ್ತು ಈ ಬಗ್ಗೆ ಆತನಿಗೆ ಅರಿವಿರುವುದಿಲ್ಲ., ಯಾರು ಈ ಸಮಸ್ಯೆ ಅನುಭವಿಸುತ್ತಿರುತ್ತಾರೊ ಅವರಿಗೆ ನಿದ್ರಿಸುವುದು ತೃಪ್ತಿ ನೀಡುವುದಿಲ್ಲ.
ಕೆಲ ಮಕ್ಕಳು ಈ ರೀತಿಯ ಸಮಸ್ಯೆಗಳಿಗೆ ಸಿಲುಕಿದ್ದು, ತಮ್ಮ ನಡವಳಿಕೆ(Behaviour) ಹಾಗೂ ಒಲವಿನ ಬಗ್ಗೆಯೂ ಸಮಸ್ಯೆ ಹೊಂದಿರುತ್ತಾರೆ. ಬಹುಶಃ ನಿಮ್ಮ ಮಗುವು ಈ ಸಮಸ್ಯೆಯನ್ನು ಎದುರಿಸುತ್ತಿದ್ದು ಹಾಸಿಗೆ ಒದ್ದೆಯಾಗಲು ಕಾರಣವಾಗಿರಬಹುದು.

ಸಿಂಗಲ್ ಪೇರೆಂಟಿಂಗ್ ಕಷ್ಟ ಏನು? ತುಷಾರ್ ಕಪೂರ್ ಅನುಭವದ ಮಾತು

3. ಮೂತ್ರದಲ್ಲಿ ಇನ್ಫೆಕ್ಷನ್
ಮಗುವಿನ ಮೂತ್ರ ವಿಸರ್ಜನೆಯಲ್ಲಿ ಉರಿ ಎದುರಾದರೆ ರಾತ್ರಿ ಹಾಸಿಗೆಯಲ್ಲಿ ಮೂತ್ರವಿಸರ್ಜನೆ ನಿಯಂತ್ರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಇನ್ಫೆಕ್ಷನ್ ಇದ್ದಲ್ಲಿ ಆಗಾಗ್ಗೆ ಬಾತ್‌ರೂಮ್‌ಗೆ ಹೋಗಬೇಕಾಗುತ್ತದೆ. ಮಗುವಿನ ಜನನಾಂಗದಲ್ಲಿ ಉರಿ ಅಥವಾ ಸುಡುವ ಸಂವೇದನೆಯನ್ನು(Burning Sensations) ಅನುಭವಿಸುತ್ತಿರಬಹುದು. ಅಥವಾ ಮಗುವಿಗೆ ಮೂತ್ರವಿಸರ್ಜಿಸಲು ಕೆಲವು ರೀತಿಯ ಅಸ್ವಸ್ಥತೆಯನ್ನು(Uncomfortable) ನಿಯಂತ್ರಿಸಲು ಅಥವಾ ಅನುಭವಿಸಲು ಸಾಧ್ಯವಾಗದಿರಬಹುದು ಈ ರೀತಿಯ ಸಮಸ್ಯೆ ಕಂಡಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

4. ಡಯಾಬಿಟಿಕ್ ಇರಬಹುದು
ಡಯಾಬಿಟಿಕ್(Diabetes) ಇರುವವರಿಗೆ ಸಾಮಾನ್ಯವಾಗಿ ಮೂತ್ರ ವಿಸರ್ಜನೆ ಕಂಟ್ರೋಲ್ ಮಾಡಲು ಸಾಧ್ಯವಾಗುವುದಿಲ್ಲ. ಅವರು ಆಗಾಗ್ಗೆ ವಿಸರ್ಜಿಸಲು ಹೋಗುತ್ತಿರುತ್ತಾರೆ. ದೇಹದಲ್ಲಿನ ಗ್ಲೂಕೋಸ್(Glucose) ಮತ್ತು ಸಕ್ಕರೆಗಳು(Sugar) ಸುಲಭವಾಗಿ ಸಂಸ್ಕರಿಸಲು ಆಗುವುದಿಲ್ಲ. ಹಾಗಂತ ಮಗು ಹಾಸಿಗೆಯನ್ನು ಒದ್ದೆ ಮಾಡುತ್ತಿದೆ ಎಂದರೆ ಅದು ಮಧುಮೇಹ ಎಂದರ್ಥವಲ್ಲ. ಇದರ ಬಗ್ಗೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

5. ಮನಸ್ಸಿನ ಒತ್ತಡ
ಒತ್ತಡ(Stress) ಕೇವಲ ದೊಡ್ಡವರಿಗಷ್ಟೇ ಅಲ್ಲ ಮಕ್ಕಳಿಗೂ ಬರುತ್ತದೆ. ಆಗಾಗ್ಗೆ ಮಗು ಹಾಸಿಗೆ ಒದ್ದೆ ಮಾಡುತ್ತಿದ್ದರೆ ಅದಕ್ಕೆ ಹಲವು ಕಾರಣಗಳಿವೆ. ಯಾವುದಾದರು ಒಂದು ವಿಷಯಕ್ಕೆ ಹೆದರಿರುವುದು, ಭಯ, ಆಘಾತ, ಒತ್ತಡಗಳಿಂದಿರಬಹುದು. ನಮಗೆ ಗೊತ್ತಿಲ್ಲದೆ ಟೀಚರ್(Teacher) ಬಗ್ಗೆ ಹೆದರಿರಬಹುದು ಅಥವಾ ಮನೆಯಲ್ಲಿ ಯಾರಿಂದಲಾದರೂ ತೊಂದರೆಗೆ(Problems) ಒಳಗಾಗಿರಬಹುದು. 

Parenting: ಈಗಿನ ಮಕ್ಕಳ ಸಂಭಾಳಿಸೋದ್ರಲ್ಲಿ ಅಪ್ಪಂದಿರು ಸುಸ್ತೋ ಸುಸ್ತು

ಇದನ್ನು ನಿಯಂತ್ರಿಸುವುದು ಹೇಗೆ?
ಹಾಸಿಗೆಯಲ್ಲಿ ಆಗಾಗ್ಗೆ ಮಗು ಒದ್ದೆ ಮಾಡುತ್ತಿದೆ ಎಂದರೆ ಅದಕ್ಕೆ ಕಾರಣ ಹುಡುಕಿ ದೊಡ್ಡವರೇ ಈ ಬಗ್ಗೆ ಕಾಳಜಿ ವಹಿಸಬೇಕು. ಒಂದು ವಯಸ್ಸಿನ ವರೆಗೂ ಇದೆಲ್ಲಾ ಸಾಮಾನ್ಯವಾಗಿದ್ದರೂ, ಟೀನೇಜ್‌ನಲ್ಲಿ(Teenage) ಈ ರೀತಿಯ ಸಮಸ್ಯೆ ಕಂಡರೆ ಡಾಕ್ಟರ್ ಸಂಪರ್ಕಿಸುವುದು ಒಳ್ಳೆಯದು. ಅದಲ್ಲದೆ ಮನೆಯಲ್ಲೇ ಕೆಲ ಪ್ರಾö್ಯಕ್ಟೀಸ್‌ಗಳನ್ನು ಮಾಡಬಹುದು.

1. ಮಗು ರಾತ್ರಿ ಮಲಗುವ ಮುನ್ನ ದ್ರವ ಪದಾರ್ಥಗಳನ್ನು(Liquid Items) ಸೇವಿಸದಂತೆ ನೋಡಿಕೊಳ್ಳಿ. ಜ್ಯೂಸ್(Juice) ರೀತಿಯ ಪದಾರ್ಥಗಳನ್ನು ನೀಡಬೇಡಿ. ಒಂದು ವೇಳೆ ಹಾಲನ್ನು(Milk) ನೀಡಿದರೆ, ಮಲಗುವ ಒಂದು ಗಂಟೆಗೂ ಮುನ್ನ ನೀಡುವುದು ಒಳ್ಳೆಯದು. ಹಾಗೆ ಹಾಸಿಗೆಗೆ ಹೋಗುವ ಮುನ್ನ ಒಮ್ಮೆ ವಾಶ್‌ರೂಮ್‌ಗೆ(Washroom) ಕರೆದೊಯ್ದು ಮಲಗಿಸುವುದು ಒಳ್ಳೆಯದು. ಪ್ರತೀ ದಿನ ಈ ರೀತಿಯ ಪ್ರಾö್ಯಕ್ಟೀಸ್ ಮಾಡುವುದರಿಂದ ರಾತ್ರಿ ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡುವುದು ತಪ್ಪುತ್ತದೆ.
2. ಮಗುವನ್ನು ಆಗಾಗ್ಗೆ ಟೈಂ(Time) ನೋಡಿಕೊಂಡು ವಾಶ್‌ರೂಮ್‌ಗೆ ಕರೆದೊಯ್ಯುವುದು ಒಳ್ಳೆಯ ಅಭ್ಯಾಸ. ಇದರಿಂದ ಮಗು ಎಲ್ಲೆಂದರಲ್ಲಿ ಮೂತ್ರವಿಸರ್ಜನೆ ಮಾಡುವುದು ತಪ್ಪುತ್ತಲ್ಲದೆ, ವಾಶ್‌ರೂಮ್‌ಗೆ ಹೋಗಿಯೇ ಮಾಡಬೇಕು ಎಂಬುದು ಅವುಗಳಿಗೂ ರೂಢಿಯಾಗುತ್ತದೆ. ಅಷ್ಟೇ ಅಲ್ಲದೆ ಸ್ವಯಂ(Self) ವಾಶ್‌ರೂಮ್‌ಗೆ ಹೋಗುವುದು ಪ್ರಾö್ಯಕ್ಟೀಸ್ ಆಗುತ್ತದೆ.
3. ರಾತ್ರಿ(Night) ಮಕ್ಕಳು ಏನು ಆಹಾರ ಸೇವಿಸಿದರು ಎಂಬುದು ಬಹಳ ಮುಖ್ಯ. ಅಲ್ಲದೆ ರಾತ್ರಿ ಸಿಹಿ ತಿಂಡಿಗಳನ್ನು(Sweet Items) ನೀಡಬೇಡಿ. ಏಕೆಂದರೆ ಸಿಹಿ ಅಂಶ ರಾತ್ರಿಯಲ್ಲಿ ಮೂತ್ರವಿಸರ್ಜನೆಗೆ ಪ್ರಚೋಧಿಸುತ್ತದೆ. 
4. ನಿಮ್ಮ ಮಗುವನ್ನು ಮಧ್ಯ ರಾತ್ರಿ(Mid Night) ಎಬ್ಬಿಸಿ ವಾಶ್‌ರೂಮ್‌ಗೆ ಕರೆದುಕೊಂಡು ಹೋಗುವುದು ಒಳ್ಳೆಯದಲ್ಲ. ಅದರ ಬದಲಾಗಿ ಮಲಗುವ ಮುನ್ನ ವಾಶ್‌ರೂಮ್‌ಗೆ ಕರೆದೊಯ್ಯುವುದು ಒಳ್ಳೆಯದು. ಹಾಗೂ  ಮಕ್ಕಳಿಗೆ ರಾತ್ರಿ ನಿದ್ರೆ ಚೆನ್ನಾಗಿ ಆದರೆ ನಾಳೆಯ ದಿನ ಚೆನ್ನಾಗಿರುತ್ತದೆ. ಅದೇ ರಾತ್ರಿ ನಿದ್ರೆ ಸರಿಯಾಗದಿದ್ದರೆ ನಾಳೆಯ ದಿನ ಏರಿಳಿತಗಳಿಂದ ಕೂಡಿರುತ್ತದೆ. 
5. ಹಾಸಿಗೆಯ ಕೆಳಗೆ ಂದು ಪ್ಲಾಸ್ಟಿಕ್ ಶೀಟ್(Plastic Sheet) ಹಾಸಿ ಮಗುವನ್ನು ಮಲಗಿಸಬಹುದು. ಇದರಿಂದ ಹಾಸಿಗೆ ಹಾಳಾಗುವುದು, ದುರ್ವಾಸನೆ(Bad Smell) ಮೂಡುವುದು ತಪ್ಪಿಸಬಹುದು. 
6. ರಾತ್ರಿ ಮಗು ಮಲಗುವ ಮುನ್ನ ಅವುಗಳಿಗೆ ಬೆದರಿಸುವುದು(Rude), ಹೆದರಿಸುವುದು(Scream) ಮಾಡುವುದು ಒಳ್ಳೆಯದಲ್ಲ. ತಾಯಿ ಮಗುವಿನ ಬಗ್ಗೆ ತಾಳ್ಮೆ(Patient) ಹಾಗೂ ಸಮಾಧಾನದಿಂದ(Calm) ವರ್ತಿಸಬೇಕು. ಅಲ್ಲದೆ ಹಾಸಿಗೆ ಒದ್ದೆಯಾಯಿತು ಎಂದು ಮಗುವಿಗೆ ಬೈಯ್ಯುವುದು ಹಾಗೂ ಹೆದರಿಸುವುದು ಮಾಡಬೇಡಿ. ಹೀಗೆ ಮಾಡಿದಲ್ಲಿ ಮಗು ನಿಮ್ಮನ್ನು ಕಂಡರೆ ಹೆದರುವ, ಹಿಂದೆ ಸರಿಯುವ ಸಾಧ್ಯತೆಗಳು ಹೆಚ್ಚು.  

Follow Us:
Download App:
  • android
  • ios