46ನೇ ವಯಸ್ಸಿಗೆ ಮೂರನೇ ಮಗು; ವೈಯಕ್ತಿಕ ಜೀವನದ ಸೀಕ್ರೆಟ್ ಬಿಚ್ಚಿಟ್ಟ ಅರ್ಜುನ್ ರಾಮ್ ಪಾಲ್
ಮಕ್ಕಳಿಗೆ ಕೂಲ್ ಡ್ಯಾಡಿ ಆಂಡ್ ಸ್ನೇಹಿತನಾಗಿರುವ ಅರ್ಜುನ್ ರಾಮ್‌ಪಾಲ್ ಮೂರನೇ ಮಗುವನ್ನು ಬರ ಮಾಡಿಕೊಳ್ಳುವಾಗ ಜೀವನ ಹೇಗಿತ್ತು ಎಂದು ಹಂಚಿಕೊಂಡಿದ್ದಾರೆ.
ಬಹುಭಾಷಾ ನಟ ಅರ್ಜುನ್ ರಾಮ್‌ಪಾಲ್ ದಿ ಮೋಸ್ಟ್ ಹ್ಯಾಪಿ ಮ್ಯಾನ್. ಸಿನಿಮಾ ಮತ್ತು ಪೇರೆಂಟಿಂಗ್ ಲೈಫ್‌ನಲ್ಲಿ ಬ್ಯುಸಿಯಾಗಿರುವ ಅರ್ಜುನ್ ನಾಲ್ಕನೇ ಮಗುವನ್ನು ಬರ ಮಾಡಿಕೊಳ್ಳುವಾಗ ಜೀವನ ಹೇಗಿತ್ತು, ಜನರು ಹೇಗೆ ಕಾಮೆಂಟ್ ಮಾಡಿದ್ದರು ಮತ್ತು ಮೂರು ಮಕ್ಕಳ ಜೊತೆ ಹೇಗೆ ಸ್ನೇಹ ಕಾಪಾಡಿಕೊಳ್ಳುತ್ತಾರೆ ಎಂದು ಹಂಚಿಕೊಂಡಿದ್ದಾರೆ. 28ನೇ ವಯಸ್ಸಿಗೆ ಅರ್ಜುನ್ ಪುತ್ರಿ ಮಹಿಕಾ (20) ಬರ ಮಾಡಿಕೊಂಡರು ಆನಂತರ ಮೈರಾ (17). 46ನೇ ವಯಸ್ಸಿಗೆ ಅರಿಕ್‌ನ (2)ಸ್ವಾಗತಿಸಿಕೊಂಡರು.
40ರಲ್ಲಿ ಫಾದರ್ ಫೀಲ್:
'40ರ ವಯಸ್ಸಿನಲ್ಲಿ ಮಕ್ಕಳು ಮಾಡಿಕೊಳ್ಳುವುದು ಡಿಫರೆಂಟ್ ಅನುಭವ. 28ನೇ ವಯಸ್ಸಿಗೆ ಹೇಗೆ ಪುತ್ರಿ ಮಹಿಕಾಳನ್ನು ಬರ ಮಾಡಿಕೊಂಡೆ ಅದೇ ರೀತಿ 46ನೇ ವಯಸ್ಸಿಗೆ ಅರಿಕ್‌ನನ್ನು ಬರ ಮಾಡಿಕೊಂಡೆ. 20ರಲ್ಲಿ ಮಕ್ಕಳು ಮಾಡಿಕೊಂಡರೆ ಆತಂಕವೇ ಹೆಚ್ಚು ಎಲ್ಲವೂ ಹೊಸದು, ಜೀವನದಲ್ಲಿ ಸೆಟಲ್ ಆಗಬೇಕಾ ಅಥವಾ ಮಕ್ಕಳನ್ನು ನೋಡಿಕೊಳ್ಳಬೇಕಾ ಗೊತ್ತಾಗುವುದಿಲ್ಲ. ಮಕ್ಕಳಿ ಒಳ್ಳೆಯ ಜೀವನ ಕೊಡಬೇಕೆಂದು ನಾವು ಅವರಿಗೆ ಸಮಯವೇ ಕೊಡುವುದಿಲ್ಲ. ಆದರೆ ಮೂವರು ಮಕ್ಕಳನ್ನು ಒಂದೇ ರೀತಿ ನೋಡುತ್ತಿರುವೆ. ಮೂವರು ನನಗೆ ಒಳ್ಳೆಯ ಸ್ನೇಹಿತರು ಒಟ್ಟಿಗೆ ನನ್ನ ಮೇಲೆ ಪ್ರ್ಯಾಂಕ್ ಪ್ರಯೋಗ ಮಾಡುತ್ತಾರೆ. ಮಹಿಕಾ ಮತ್ತು ಮೈರಾ ಗ್ಯಾಂಗ್‌ಗೆ ಪತ್ನಿ ಕೂಡ ಸೇರಿಕೊಂಡಿದ್ದಾಳೆ' ಎಂದು ಅರ್ಜುನ್ ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಜೀವನ ಬದಲಾಯಿಸಿದ ಪುತ್ರ:
'ಪ್ಯಾಂಡಮಿಕ್ ಶುರುವಾಗುವ ಕೆಲವು ದಿನಗಳ ಮುನ್ನ ಪುತ್ರನನ್ನು ಬರ ಮಾಡಿಕೊಂಡಿದ್ದು. ಎರಡು ವರ್ಷ ಪ್ಯಾಂಡಮಿಕ್‌ನಲ್ಲಿ ಮನೆಯಲ್ಲಿ ಇರಬೇಕಿತ್ತು ಈ ಸಮಯದಲ್ಲಿ ಪುತ್ರನ ಪ್ರತಿಯೊಂದು ಚಲನವಲನಗಳನ್ನು ಗಮನಿಸಿರುವೆ ಹೀಗಾಗಿ ಆತನ ಜೊತೆ ಬಾಂಧವ್ಯ ವಿಭಿನ್ನವಾಗಿದೆ. ನನ್ನ ಪತ್ನಿಗೆ ಚಿಕ್ಕ ವಯಸ್ಸು ನಾನು ಮಗುವನ್ನು ಹೇಗೆ ಮ್ಯಾನೇಜ್ ಮಾಡಲಿ? ಇದೆಲ್ಲಾ ಕಷ್ಟವಾಗುತ್ತದೆ ಎಂದು ಚಿಂತಿಸುತ್ತಿದ್ದಳು. ಪ್ಯಾಂಡಮಿಕ್‌ನಿಂದ ನಾವಿಬ್ಬರೂ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಕಾರಣ ಜೀವನ ಕೂಲ್ ಆಗಿದೆ. ಸಹೋದರಿಯರ ಜೊತೆ ಎಂಜಾಯ್ ಮಾಡುತ್ತಾನೆ' ಎಂದು ಅರ್ಜುನ್ ಹೇಳಿದ್ದಾರೆ.
ಪಾರ್ಟಿಯಲ್ಲಿ Ajay Devgn ಮತ್ತು Arjun Rampal ಪುತ್ರಿಯರು ಫೋಟೋ ವೈರಲ್!
ಪುತ್ರಿಯರ ಜೊತೆ:
'ಇಬ್ಬರೂ ಹೆಣ್ಣು ಮಕ್ಕಳ ಜೊತೆ ನಾನು ತುಂಬಾ ಮಾತನಾಡುತ್ತೀನಿ. ಅವರ ತುಂಟ ಮಾತುಗಳು ಮತ್ತು ಗಾಸಿಪ್‌ಗಳ ಬಗ್ಗೆ ನನಗೆ ಇಷ್ಟವಿಲ್ಲ ಅಂದರೂ ಬಿಡುವುದಿಲ್ಲ. ನಿಮಗಿಂತ ನಾನು ಸೂಪರ್ ಕೂಲ್ ಆಗಿರುವೆ ಎಂದು ರೇಗಿಸುವೆ. ಜೀವನ ಅದ್ಭುತವಾಗಿ ಇನ್ನೂ ಹೆಚ್ಚಿಗೆ ಮಕ್ಕಳು ಬೇಕು ಅನಿಸುತ್ತಿದೆ. ನನ್ನ ಮಾಜಿ ಪತ್ನಿ ಹೆಣ್ಣು ಮಕ್ಕಳನ್ನು ಚೆನ್ನಾಗಿ ಬೆಳೆಸಿದ್ದಾಳೆ. ಹೀಗಾಗಿ ನನಗೆ ಯಾವ ಕಷ್ಟನೂ ಇಲ್ಲ. ನನ್ನ ಮಕ್ಕಳು ನನ್ನ ಜೀವನ, ದಿನವೂ ಒಂದೊಂದು ಪಾಠ ಹೇಳಿಕೊಡುತ್ತಾರೆ' ಎಂದಿದ್ದಾರೆ ಅರ್ಜುನ್.
Love after Divorce: 15 ವರ್ಷ ಕಿರಿಯವಳ ಜೊತೆ ಪ್ರೀತಿಯಲ್ಲಿ ಬಿದ್ದ ನಟ!
'ಪ್ರೀತಿ, ಸ್ನೇಹ ಮತ್ತು ಬಾಯ್‌ಫ್ರೆಂಡ್ ಬಗ್ಗೆ ಮಾತನಾಡುವುದುಕ್ಕೆ ಅವರಿಗೆ ಇನ್ನೂ ಭಯ ಇರಬೇಕು ಆದರೆ ವಿಚಿತ್ರಕಥೆಗಳನ್ನು ಹೇಳಿ ಅನೇಕ ಸಲ ನನಗೆ ಪ್ರ್ಯಾಂಕ್ ಮಾಡಿದ್ದಾರೆ. ಸರಿ ನೋಡೋಣ ಬಿಡಿ ಎಂದು ನಾನು ಕೂಲ್ ಆಗಿ ಹೇಳುವೆ ಆದರೆ ಅವರು ಇಲ್ಲ ಬೇಡ ಬೇರೆ ರೀತಿ ರಿಯಾಕ್ಟ್ ಮಾಡಿ ಎಂದು ಕೇಳಿಕೊಳ್ಳುತ್ತಾರೆ. ಈಗ ಪೇರೆಂಟಿಂಗ್ ರೀತಿ ಬದಲಾಗಿದೆ. ನಮ್ಮ ಪೋಷಕರು ಇರುವ ರೀತಿ ಬೇರೆ ನಾವು ನಮ್ಮ ಮಕ್ಕಳ ಜೊತೆ ಇರುವ ರೀತಿನೇ ಬೇರೆ. ನನ್ನ ಸಲಹೆ ಏನೆಂದರೆ ಮಕ್ಕಳ ಜೊತೆ ಸ್ನೇಹಿತರಾಗಿ ಇರುವುದು. ಎರಡನೇ ಪುತ್ರಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ಪ್ರಯಾಣ ಮಾಡಿದಾಗ ಬೇಸರವಾಯ್ತು.ತುಂಬಾ ರಕ್ಷಣೆ ಮಾಡಿ ಬೆಳೆಸಿರುವ ಮಗಳು ಈಗ ವಿದೇಶ ಪ್ರಯಾಣ ಮಾಡಿ ಬೋಲ್ಡ್ ಆಗಿರುವುದನ್ನು ನೋಡಲು ಖುಷಿಯಾಗುತ್ತದೆ' ಎಂದು ಅರ್ಜುನ್ ಹೇಳಿದ್ದಾರೆ.