Asianet Suvarna News Asianet Suvarna News

ಸಿಂಗಲ್ ಪೇರೆಂಟಿಂಗ್ ಕಷ್ಟ ಏನು? ತುಷಾರ್ ಕಪೂರ್ ಅನುಭವದ ಮಾತು

ಬಾಲಿವುಡ್‌ನಲ್ಲಿ ಸಿಂಗಲ್ ಪೋಷಕರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಸಂಸಾರದ ಜಂಜಾಟಕ್ಕೆ ಸಿಲುಕಿ ಸ್ವತಂತ್ರ ಕಳೆದುಕೊಳ್ಳಲು ಇಷ್ಟ ಪಡದ ಅನೇಕರು ಇಂದು ಸಿಂಗಲ್ ಪೇರೆಂಟಿಂಗ್ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಬಾಡಿಗೆ ತಾಯಿ ಮೂಲಕ ಮಗು ಪಡೆದು ಸಿಂಗಲ್ ಪೇರೆಂಟ್ ಅಥವಾ ಸಿಂಗಲ್ ಡ್ಯಾಡ್ ಆಗಿರುವ ಬಾಲಿವುಡ್‌ ನಟ ತುಷಾರ್ ಕಪೂರ್ ಅವರು ಈಗ ಸಿಂಗಲ್ ಪೇರೆಂಟಿಗ್ ಬಗ್ಗೆ ತಮ್ಮ ಅನುಭವವನ್ನು ಮಾತನಾಡಿದ್ದಾರೆ. 
 

Actor Tusshar Kapoor speaks about single parenting life akb
Author
Mumbai, First Published Jun 18, 2022, 5:03 PM IST

ಬಾಲಿವುಡ್‌ನಲ್ಲಿ ಸಿಂಗಲ್ ಪೋಷಕರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಸಂಸಾರದ ಜಂಜಾಟಕ್ಕೆ ಸಿಲುಕಿ ಸ್ವತಂತ್ರ ಕಳೆದುಕೊಳ್ಳಲು ಇಷ್ಟ ಪಡದ ಅನೇಕರು ಇಂದು ಸಿಂಗಲ್ ಪೇರೆಂಟಿಂಗ್ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಬಾಡಿಗೆ ತಾಯಿ ಮೂಲಕ ಮಗು ಪಡೆದು ಸಿಂಗಲ್ ಪೇರೆಂಟ್ ಅಥವಾ ಸಿಂಗಲ್ ಡ್ಯಾಡ್ ಆಗಿರುವ ಬಾಲಿವುಡ್‌ ನಟ ತುಷಾರ್ ಕಪೂರ್ ಅವರು ಈಗ ಸಿಂಗಲ್ ಪೇರೆಂಟಿಗ್ ಬಗ್ಗೆ ತಮ್ಮ ಅನುಭವವನ್ನು ಮಾತನಾಡಿದ್ದಾರೆ. 

ನಟ ತುಷಾರ್ ಕಪೂರ್ (Actor Tusshar Kapoor) 2016 ರಲ್ಲಿ ಮಗ ಲಕ್ಷ್ಯನನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿ ಗಂಡು ಮಗುವಿಗೆ ತಂದೆಯಾಗಿದ್ದರು. ಏಕಾಂಗಿ ಪೋಷಕರಾಗಿರುವ ತುಷಾರ್  ತಮ್ಮ ಕುಟುಂಬದ ಸಹಾಯದಿಂದ ಪುತ್ರ ಲಕ್ಷ್ಯನನ್ನು ಬೆಳೆಸುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ನಟ ಒಂಟಿ ತಂದೆಯಾಗಿರುವ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ ಮತ್ತು ತಮ್ಮ ಪುತ್ರ ದೊಡ್ಡವನಾದ ನಂತರ ಈ ವಿಭಿನ್ನ ಕುಟುಂಬದ ಬಗ್ಗೆ ಅವರು ತಮ್ಮ ಮಗನಿಗೆ ವಿವರಿಸುವುದಾಗಿ ಹೇಳಿದ್ದಾರೆ. 

ಚಿತ್ರರಂಗದಲ್ಲಿರುವ ಏಕೈಕಾ ಸಪೋರ್ಟರ್‌ ಹೆಸರು ರಿವೀಲ್ ಮಾಡಿದ ನಟಿ ಕಂಗನಾ ರಣಾವತ್!

ತುಷಾರ್, ಬಾಲಿವುಡ್‌ ಹಿರಿಯ ನಟ ಜೀತೇಂದ್ರ (Jeetendra) ಮತ್ತು ನಿರ್ಮಾಪಕಿ ಶೋಭಾ ಕಪೂರ್ (Shobha Kapoor) ಅವರ ಪುತ್ರ. ಹಾಗೂ ಟಿವಿ ನಿರ್ಮಾಪಕಿ ಏಕ್ತಾ ಕಪೂರ್ (Ekta Kapoor) ಅವರ ಸಹೋದರ. ಅವರು 2001 ರ ಹಿಟ್ ಮುಜೆ ಕುಚ್ ಕೆಹನಾ ಹೈ (Mujhe Kucch Kehna Hai) ಚಿತ್ರದ ಮೂಲಕ ಕರೀನಾ ಕಪೂರ್ (Kareena Kapoor) ಅವರೊಂದಿಗೆ ತಮ್ಮ ಸಿನಿಮಾ ಪಯಣವನ್ನು ಪ್ರಾರಂಭಿಸಿದರು. ನಂತರ ಅವರು ಖಾಕಿ, ಕ್ಯಾ ಕೂಲ್ ಹೇ ಹಮ್, ಗೋಲ್ಮಾಲ್, ಶೂಟೌಟ್ ಅಟ್ ಲೋಖಂಡವಾಲಾ ಮತ್ತು ದಿ ಡರ್ಟಿ ಪಿಕ್ಚರ್ (The Dirty Picture) ಸೇರಿದಂತೆ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ತಮ್ಮ ಈ ವಿಶಿಷ್ಟ ಕುಟುಂಬದ ಬಗ್ಗೆ ಮತ್ತು ಭವಿಷ್ಯದಲ್ಲಿ ಅದನ್ನು ಮಗ ಲಕ್ಷ್ಯಗೆ ಹೇಗೆ ತಿಳಿಸಲು ಬಯಸುವೆ ಎಂಬ ಬಗ್ಗೆ ಮಾತನಾಡಿದ ತುಷಾರ್, ಎಲ್ಲಾ ಕುಟುಂಬಗಳು ಪರಸ್ಪರ ಭಿನ್ನವಾಗಿವೆ ಎಂದು ನಾನು ಅವನಿಗೆ ಹೇಳುತ್ತೇನೆ. ಕೆಲವೊಮ್ಮೆ ಎರಡು ವಿಭಿನ್ನ ದೇಶಗಳಲ್ಲಿ ಪೋಷಕರು ಇರುವ ಕುಟುಂಬಗಳಿವೆ. ಜೊತೆಗೆ ಹುಟಟುವಾಗ ಇಬ್ಬರು ಪೋಷಕರಿದ್ದರೂ ಬಾಲ್ಯದಲ್ಲೇ ಓರ್ವ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿದ್ದಾರೆ. ಮದುವೆಯಾಗಿ ಬೇರ್ಪಟ್ಟ ಕಾರಣಕ್ಕೆ ಕೇವಲ ಒಂದು ಪೋಷಕರೊಂದಿಗೆ ವಾಸಿಸುವ ಮಕ್ಕಳಿದ್ದಾರೆ. ಅಲ್ಲದೇ ಅಜ್ಜಿಯೊಂದಿಗೆ ಬೆಳೆಯುತ್ತಿರುವ ಮಕ್ಕಳಿದ್ದಾರೆ. ಆದರಿಂದ ಪ್ರತಿ ಕುಟುಂಬವೂ ಒಂದಕ್ಕಿಂತ ಒಂದು ವಿಭಿನ್ನ ಎಂದು ಅವರು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 

ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಕಾರಣ ಬಿಚ್ಚಿಟ್ಟ ತುಷಾರ್‌ ಕಪೂರ್‌
 

ಇತರ ಅನೇಕ ಅಸಾಂಪ್ರದಾಯಿಕ ಕುಟುಂಬಗಳನ್ನು ಸಮಾಜವು ಪ್ರಶ್ನಿಸುವುದಿಲ್ಲ ಎಂಬುದನ್ನು ತುಷಾರ್ ಒಪ್ಪಿಕೊಂಡರು ಆದರೆ ಅವರು ಆರಂಭದಿಂದಲೂ ಒಂಟಿಯೇ ಆಗಿರುವುದರಿಂದ ಅವರನ್ನು ಎಲ್ಲರೂ ಕೇಳುತ್ತಾರೆ ಎಂಬುದನ್ನು ಅವರು ಒಪ್ಪಿಕೊಂಡರು.  ನನ್ನ ವಿಷಯದಲ್ಲಿ ನಾನು ಒಬ್ಬಂಟಿ ಮತ್ತು ಮದುವೆಯಾಗಿಲ್ಲ ಎಂದು ನನ್ನನ್ನು ಪದೇ ಪದೇ ಪ್ರಶ್ನಿಸಲಾಗುತ್ತದೆ. ಹಾಗಂತ ಅದಕ್ಕೇನು ನನಗೆ ಬೇಜಾರಿಲ್ಲ, ಅವರು ಕೇಳುವುದರಲ್ಲೂ ತಪ್ಪಿಲ್ಲ, ಅವರ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿದೆ ಎಂದು ಅವರು ಹೇಳಿದರು. 

ನಾನು ವಿಭಿನ್ನವಾಗಿರುವುದು ಎಂದರೆ ನಿಷ್ಕ್ರಿಯವಾಗಿರುವುದು ಎಂದಲ್ಲ. ಒಂದು 'ವಿಭಿನ್ನ' ಕುಟುಂಬವು 'ನಿಷ್ಕ್ರಿಯ' ಕುಟುಂಬವಲ್ಲ. ಈ  ಸಂಪ್ರದಾಯವನ್ನು  ಮುರಿಯಲು ನಾನು ಭಾವಿಸುತ್ತೇನೆ. ನಮ್ಮ ಕುಟುಂಬ ಸಂಪೂರ್ಣ ಕುಟುಂಬ ಎಂದು ನಾನು ಪುತ್ರ ಲಕ್ಷ್ಯಗೆ ಹೇಳಿದ್ದೇನೆ. ಅವನು ನಮ್ಮೊಂದಿಗೆ ಪೋಷಣೆ, ಸುಭದ್ರತೆ ಮತ್ತು ಆತ್ಮವಿಶ್ವಾಸದೊಂದಿಗೆ ಬೆಳೆಯುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಮತ್ತು ಸಾಮಾನ್ಯ ಕುಟುಂಬವು ಹೀಗಿರಬೇಕು ಎಂದು ನಾನು ಭಾವಿಸುತ್ತೇನೆ ಎಂದು ತುಷಾರ್ ಹೇಳಿದ್ದಾರೆ. 

ತುಷಾರ್ ತಮ್ಮ ಬ್ಯಾನರ್ ತುಷಾರ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ 2020ರಲ್ಲಿ ನಿರ್ಮಾಣವಾದ ಲಕ್ಷ್ಮಿ ಎಂಬ ಸಿನಿಮಾಗೆ ಸಹ ನಿರ್ಮಾಪಕರಾಗಿದ್ದರು. ಅಲ್ಲದೇ ಕಳೆದ ವರ್ಷ ಅವರು ಬ್ಯಾಚುಲರ್ ಡ್ಯಾಡ್ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದರಲ್ಲಿ ಅವರು ಏಕ ಪೋಷಕರಾಗುವ ಸವಾಲುಗಳ ಬಗ್ಗೆ ಬರೆದಿದ್ದಾರೆ.

Follow Us:
Download App:
  • android
  • ios