Parenting: ಈಗಿನ ಮಕ್ಕಳ ಸಂಭಾಳಿಸೋದ್ರಲ್ಲಿ ಅಪ್ಪಂದಿರು ಸುಸ್ತೋ ಸುಸ್ತು
ಮನೆಗೆ ಮೊದಲ ಬಾರಿ ಮಗು (Baby) ಆಗಮಿಸಿದಾಗ ತಾಯಿಗಷ್ಟೇ ಅಲ್ಲ. ತಂದೇಗೂ ಒಂದು ಅಗ್ನಿಪರೀಕ್ಷೆಯೇ ಸರಿ. ಏಕೆಂದರೆ ತಾಯಿ (Mother) ರೀತಿ ಮಗುವನ್ನು ಸಂಬಾಳಿಸುವುದು ತಂದೆಗೆ(Father) ಕಷ್ಟ. ಪೋಷಕತ್ವವು(Parenting) ಹಲವಾರು ಜವಾಬ್ದಾರಿಗಳು ಹಾಗೂ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಸಣ್ಣ ಸಂತೋಷಗಳು ಅಸಂಖ್ಯಾತವಾಗಿದ್ದರೆ ಕೆಲ ತಂದೆಗೆ ಅದು ಸವಾಲಾಗಿದ್ದು ಆಯಾಸ(Anxiety) ಹೆಚ್ಚು ಮಾಡುತ್ತದೆ.
ಮನೆಗೆ ಮೊದಲ ಬಾರಿ ಮಗು (Baby) ಆಗಮಿಸಿದಾಗ ತಾಯಿಗಷ್ಟೇ ಅಲ್ಲ ತಂದೇಗೂ ಒಂದು ಅಗ್ನಿಪರೀಕ್ಷೆಯೇ ಸರಿ. ಏಕೆಂದರೆ ತಾಯಿ(Mother) ರೀತಿ ಮಗುವನ್ನು ಸಂಬಾಳಿಸುವುದು ತಂದೆಗೆ(Father) ಕಷ್ಟದ ಸಂಗತಿ. ಪೋಷಕತ್ವವು (Parenting) ಹಲವಾರು ಜವಾಬ್ದಾರಿಗಳು ಹಾಗೂ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಸಣ್ಣ ಸಂತೋಷಗಳು ಅಸಂಖ್ಯಾತವಾಗಿದ್ದರೆ ಕೆಲ ತಂದೆಗೆ ಅದು ಸವಾಲಾಗಿದ್ದು ಆಯಾಸ (Anxiety) ಹೆಚ್ಚು ಮಾಡುತ್ತದೆ.
ಮಗುವನ್ನು ಸಂಭಾಳಿಸುವ ಭರದಲ್ಲಿ ತಾಯಿ ಪ್ರಸವ ನಂತರ ಸುಸ್ತನ್ನು(Tired) ಅನುಭವಿಸುವುದರ ಜೊತೆಗೆ ಖಿನ್ನತೆಗೂ (Depression) ಒಳಗಾಗುತ್ತಾಳೆ. ಅದೇ ರೀತಿ ತಂದೆಯೂ ಕೆಲ ಸಂದರ್ಭದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಾನೆ. ಬೆಳೆಯುವ ಮಗುವಿನ ಎಲ್ಲಾ ರೀತಿಯ ಬೇಡಿಕೆಗಳನ್ನು ಈಡೇರಿಸುವುದರಲ್ಲಿ ಒತ್ತಡವನ್ನು (Stress) ಅನುಭವಿಸುತ್ತಾನೆ. ಏಕೆಂದರೆ ಬಹುತೇಕ ಪುರುಷರು ವೃತ್ತಿಪರ ಬದ್ಧತೆ (Professional Commitments) ಮತ್ತು ಪೋಷಕರ ಜವಾಬ್ದಾರಿ ಎರಡನ್ನೂ ನಿಭಾಯಿಸುತ್ತಾ ಆತಂಕ ಮತ್ತು ಒತ್ತಡಕ್ಕೆ ಸಿಲುಕಲು ಕಾರಣವಾಗುತ್ತದೆ.
ಪೋಷಕರಿಗೆ ಹಲವು ರೀತಿಯ ಜವಾಬ್ದಾರಿಗಳು ಇರುತ್ತವೆ. ಮನೆ (Home) ಹಾಗೂ ವೃತ್ತಿ(Work) ಎರಡನ್ನೂ ನಿಭಾಯಿಸುವ ಒತ್ತಡ ಅವರಲ್ಲಿರುತ್ತದೆ. ಆರ್ಥಿಕತೆ(Financial), ಹಣಕಾಸು, ಉದ್ಯೋಗ(Work), ಮನೆ(Home) ಹಾಗೂ ಮಕ್ಕಳಿಗೆ(Childrens) ತಮ್ಮದೇ ಆದ ಅಗತ್ಯತೆಗಳಿಗೆ ಗಮನ ಕೊಡಬೇಕಾಗುತ್ತದೆ. ವಿಶೇಷವಾಗಿ ಆರಂಭಿಕ ಹಂತದಲ್ಲಿ ಈ ಎಲ್ಲಾ ವಿಷಯಗಳು ತಂದೆಗೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು ಎಂದು ಮನಶಾಸ್ತçಜ್ಞರು(Psychologist) ಅಭಿಪ್ರಾಯಿಸಿದ್ದಾರೆ.
New Dad: ಮೊದಲ ಬಾರಿ ತಂದೆಯಾಗ್ತಿದ್ದರೆ ನಿಮ್ಮ ತಯಾರಿ ಹೀಗಿರಲಿ
ಒತ್ತಡದ ಸಂದಿಗ್ಧತೆ
ಇAದಿನ ಕಾಲಘಟ್ಟದಲ್ಲಿ ಬೆಂಬಲಿಸುವ ವ್ಯವಸ್ಥೆ(Supporting System) ಕಡಿಮೆ ಪ್ರಮಾಣದಲ್ಲಿದೆ. ಹಿಂದಿನ ಕಾಲದಲ್ಲೆಲ್ಲಾ ಅವಿಭಕ್ತ ಕುಟುಂಬ(Joint Family) ವ್ಯವಸ್ಥೆ ಇತ್ತು. ಅಲ್ಲದೆ ಮಗುವನ್ನು ನೋಡಿಕೊಳ್ಳಲು ಮನೆಯ ಹಲವು ಸದಸ್ಯರು ಇರುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ವಿಭಕ್ತ(Nuclear Family) ಕುಟುಂಬವೇ ಹೆಚ್ಚಿದ್ದು, ಒಂದು ಮಗುವನ್ನು ನೋಡಿಕೊಳ್ಳುವುದೇ ಕಷ್ಟವಾಗಿದೆ. ಹಾಗಾಗಿ ಮಗುವನ್ನು ನೋಡಿಕೊಳ್ಳಲು ತಂದೆ ತಾಯಿ ಇಬ್ಬರೂ ಇರಲೇಬೇಕಾದ ಪರಿಸ್ಥಿತಿ ಈಗಿನ ಕಾಲದ ಪೋಷಕರಲ್ಲಿದೆ. ಹೊಸ ಜೀವನ ಶೈಲಿ ಹೊಂದುಕೊಳ್ಳುವಾಗ ಒತ್ತಡವನ್ನು(Stress) ತಾವೇ ತಂದುಕೊಳ್ಳುತ್ತಾರೆ. ಹಲವು ತಂದೆಯರಲ್ಲಿ ದೀರ್ಘಕಾಲದ ಒತ್ತಡ(Chronic Stress), ಆತಂಕ(Anxiety) ಮತ್ತು ಖಿನ್ನತೆಗೆ ಒಳಗಾಗುವುದನ್ನು(Depression) ಕಾಣಬಹುದು.
ಮೊದಲ ಮಗುವಿನಲ್ಲೇ ಪೋಷಕರು ನಿದ್ರಾಹೀನತೆ(Lack of Sleep), ನಿರಂತರ ಚಿಂತೆ(Constant Worrying) ಬಹಳಷ್ಟು ಮಂದಿಯಲ್ಲಿ ಕಾಣಬಹುದು. ಈ ಆಯಾಸದ ಮಟ್ಟ ಬಹಳಷ್ಟು ವಿಷಯಗಳ ಮೇಲೆ ಅವಲಂಬಿತವಾಗಿದೆ. ಆ ಕ್ಷಣ ಕೆಲಸವೂ ಅಷ್ಟೇ ಒತ್ತಡದಿಂದ ಇರುತ್ತದೆ. ಸಂಗಾತಿಯೂ ಕೆಲಸಕ್ಕೆ ಹೋಗುತ್ತಿದ್ದರೆ ಮಗುವಿನೊಂದಿಗೆ ಜೀವನದ ನಿರೀಕ್ಷೆಗಳು ಮತ್ತು ವಾಸ್ತವಿಕತೆಯೂ ಹೆಚ್ಚಾಗಿರುತ್ತದೆ.
'ಎಕ್ಸ್‌ಕ್ಯೂಸ್ ಮೀ' ನಟ ಸುನಿಲ್ ರಾವ್ ಫಾದರ್ ಡೈರಿ; ಫೋಟೋ ನೋಡಿ!
ಮನೆಯಲ್ಲಿ ಅಸಮತೋಲನ
ತಾಯಿ ಮಗುವನ್ನು ಬೆಳೆಸುವುದರ ಮೇಲೆ ಕೇಂದ್ರೀಕರಿಸುತ್ತಾಳೆ. ಬೆಂಬಲದ ಮೂಲವಾಗಿ ನಿರಂತರ ಬದಲಾಗುವ ನಿರೀಕ್ಷೆಗಳೊಂದಿಗೆ ತಂದೆಯ ಜವಾಬ್ದಾರಿಯು(Responsibility) ಎರಡು ಪಟ್ಟು ಹೆಚ್ಚಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ತಂದೆಯAದಿರು ಮನೆಯಲ್ಲಿ ಕೆಲಸ ಮಾಡುವುದರಿಂದ ಕೇವಲ ಆರ್ಥಿಕ ವ್ಯವಸ್ಥೆ(Financial System) ಬಗ್ಗೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಏಕೆಂದರೆ ತಂದೆಯು ಸಕ್ರಿಯ ಪಾತ್ರವನ್ನು ವಹಿಸುತ್ತಾರೆ ಮತ್ತು ಮಗುವನ್ನು ಬೆಳೆಸುವಲ್ಲಿ ಸಮಾನವಾಗಿ ಕೊಡುಗೆ ನೀಡುತ್ತಾರೆ.
ಮಗುವಿನ ಬೆಳವಣಿಗೆ ಮತ್ತು ಮಾನಸಿಕ ಆರೋಗ್ಯದ(Mental Health) ಮೇಲೆ ತಂದೆಯು ಬಲವಾದ ಪರಿಣಾಮ ಬೀರುತ್ತಾನೆ. ಒಂದು ಅಧ್ಯಯನದ ಪ್ರಕಾರ ಒಬ್ಬ ಸ್ನೇಹಪರ ತಂದೆ(Friendly Father) ಮತ್ತು ಮಗುವಿನ ಸಂಬAಧಗಳು ಮಗುವಿನ ಯೋಗಕ್ಷೇಮದ ಜೊತೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯದ(Physical Health) ಮೇಲೆ ಭಾರಿ ಪರಿಣಾಮ ಬೀರುತ್ತಾನೆ.
ಮಗು ಹುಟ್ಟಿದ್ರೆ ಫ್ರೆಂಡ್ಸ್ ದೂರವಾಗ್ತಾರಾ?
ಸಾಂಕ್ರಾಮಿಕ ಸಂಕಟ
ಕೋವಿಡ್ ಸಾಂಕ್ರಾಮಿಕ ರೋಗವು ಹಲವು ರೀತಿಯ ಬದಲಾವಣೆಗಳನ್ನು ತಂದವು. ವರ್ಕ್ಫ್ರಮ್ ಹೋಂ(Work From Home) ಕಾನ್ಸೆಪ್ಟ್ ಬಂದಮೇಲAತು ಇನ್ನೂ ಹೆಚ್ಚಿನ ಪರಿಣಾಮಬೀರಿತು. ಮೊದಲ ಮಗುವನ್ನು ಪಡೆದವರಿಗೆ ಈ ಸಂಕಷ್ಟ ಅರ್ಥವಾಗುತ್ತದೆ. ಒಂದು ಕಡೆ ಉದ್ಯೋಗದ ಪ್ರಶರ್(Work Pressure) ಹೆಚ್ಚಿದರೆ ಮತ್ತೊಂದು ಕಡೆ ಮನೆಯಲ್ಲಿ ಟೈಂ ಸ್ಪೆಂಡ್ ಮಾಡುವುದಿರಲಿ, ವಯಕ್ತಿಕವಾಗಿಯೂ ಸಮಯ ಕೊಡುವುದಕ್ಕೂ ಅವಕಾಶವೇ ಇಲ್ಲದಂತಾಗಿದೆ. ಈ ಸಮಯವು ನಿಜವಾಗಿಯೂ ಒತ್ತಡಕ್ಕೆ ಸಿಲುಕುವಂತೆ ಮಾಡಿತು.
ಐಟಿ ಕ್ಷೇತ್ರದಲ್ಲಿ(IT Sector) ಕೆಲಸದ ಮೀತಿ ಮೀರಿದ್ದಲ್ಲದೆ, ಬ್ಯಾಕ್ ಟು ಬ್ಯಾಕ್ ಮೀಟಿಂಗ್‌ಗಳು(Back To Back Meeting), ಜೂಮ್ ಕಾಲ್‌ಗಳು(Zoom Call). ಇದರಿಂದ ಬಹಳ ತೊಂದರೆಯಾಯಿತು. ಟ್ವಿನ್ಸ್ ಮಕ್ಕಳ(Twins) ಹೊಂದಿದವರ ಪರಿಸ್ಥಿತಿ ಅದೋಗತಿಗೆ ತಲುಪಿತು. ಏಕೆಂದರೆ ಕೆಲಸ ಹಾಗೂ ಮನೆಯಲ್ಲಿ ಮಗುವಿನ ನಿರ್ವಹಣೆ ಕೇವಲ ತಾಯಿಯೊಬ್ಬಳಿಗೆ ಬಿಟ್ಟು ಬಿಡುವುದು ಹಲವು ಗಂಡಸರಿಗೆ ಕಷ್ಟವಾಯಿತು. ಮಗುವನ್ನು ಸಂಭಾಳಿಸುತ್ತಾ ಕೆಲಸವನ್ನೂ ನಿರ್ವಹಿಸುವುದು ತಂದೆಯAದಿರಿಗೆ ಒತ್ತಡ ಹೆಚ್ಚುವಂತೆ ಮಾಡಿತು. ಈ ಸಂದರ್ಭವನ್ನು ಜೊತೆಯಲ್ಲಿ ಕೆಲಸ ಮಾಡುವವರಿಗೆ ತಿಳಿಸಬೇಕಾಯಿತು ಕೂಡ.
ಸಮತೋಲನ
ಈ ಕೋವಿಡ್ ಪ್ಯಾಂಡಮಿಕ್(Pandemic) ಸಂದರ್ಭವನ್ನು ನಿಭಾಯಿಸುವುದು ಪೋಷಕರಿಗೆ ಕಷ್ಟ. ಏಕೆಂದರೆ ಮನೆ, ಕೆಲಸ, ಹಾಗೂ ಮಕ್ಕಳ ಜೊತೆ ಟೈಂ ಸ್ಪೆಂಡ್ ಮಾಡುವುದು ಸವಾಲಾಗಿತ್ತು. ಕೆಲ ತಂದೆಯAದಿರು ಇದನ್ನು ಸುಲಭವಾಗಿ ನಿಭಾಯಿಸಿದ್ದಾರೆ ಕೂಡ. ಉದ್ಯೋಗದ ಸಮಯ ಹೊರತು ಪಡಿಸಿ ಮನೆಯಲ್ಲಿ ಮಕ್ಕಳನ್ನು ಆಡಿಸುವುದು(Playing), ಸಿನಿಮಾ(Movie), ಆಟವಾಡುವುದು, ಅಡುಗೆ(Cooking), ವಯಕ್ತಿ ಆರೋಗ್ಯದ ಬಗ್ಗೆ ಕಾಳಜಿಯನ್ನು ಮಾಡಿಕೊಂಡವರಿದ್ದಾರೆ. ಅದಕ್ಕೆಂದೆ ಇರುವ ಟೈಂನಲ್ಲೇ ಸ್ವಲ್ಪ ಸಮಯವನ್ನೂ ಡಿವೈಡ್(Devide) ಮಾಡಿಕೊಂಡು ಉತ್ತಮವಾಗಿ ನಿರ್ವಹಿಸಿದ್ದಾರೆ. ಅದು ಎಷ್ಟೇ ಒತ್ತಡದಲ್ಲಿದ್ದರೂ ದಿನಕ್ಕೆ ಇಷ್ಟು ಸಮಯ ಇಂತಿದ್ದಕ್ಕೆ ಎಂದು ಮಾಡಿಕೊಂಡರೆ ಉತ್ತಮ ಜೀವನ ನಡೆಸಲು ಸಾಧ್ಯ.