ವಿವಾದಗಳ ರಾಣಿ Kangana Ranaut ಹಾಟ್ ಬಿಕಿನಿ ಫೋಟೋಗಳು
ತನ್ನ ವಿವಾದಾತ್ಮಕ ಹೇಳಿಕೆಗಳು ಮತ್ತು ಪ್ರತಿಯೊಂದು ವಿಷಯದ ಬಗ್ಗೆ ಮಾತನಾಡುವ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ (Kangana Ranaut) 35 ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು 23 ಮಾರ್ಚ್ 1987 ರಂದು ಅಂಬಾಲಾದಲ್ಲಿ ಜನಿಸಿದರು. ಕಂಗನಾ ಬಾಲ್ಯದಿಂದಲೂ ಹಠಮಾರಿ ಮತ್ತು ಯಾವಾಗಲೂ ತನಗೆ ಬೇಕಾದುದನ್ನು ಮಾಡುತ್ತಿದ್ದರು.ಕಂಗನಾ ಅವರ ಹುಟ್ಟುಹಬ್ಬದ ಸಂಧರ್ಭದಲ್ಲಿ ಅವರ ಬಗ್ಗೆ ಕೆಲವು ಇಂಟರೆಸ್ಟಿಂಗ್ ವಿಷಯಗಳು ಹಾಗೂ ನಟಿಯ ಹಾಟ್ ಫೋಟೋಗಳು ಇಲ್ಲಿವೆ.
ಕಂಗನಾ ರಣಾವತ್ ಅವರನ್ನು ಬಾಲಿವುಡ್ನ ರಾಣಿ ಎಂದು ಪರಿಗಣಿಸಲಾಗಿದೆ. ಬ್ಯಾಕ್-ಟು-ಬ್ಯಾಕ್ ಹಿಟ್ಗಳನ್ನು ನೀಡಿದ ನಂತರ ಅವರು ಬಾಲಿವುಡ್ನ ಟಾಪ್ನಲ್ಲಿದ್ದಾರೆ.ಕಂಗನಾ ರಣಾವತ್ ಪ್ರಸ್ತುತ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ.
ಬಾಲಿವುಡ್ಗೆ ಕಾಲಿಡುವ ಮುನ್ನ ಕಂಗನಾ ರಣಾವತ್ ಡಾಕ್ಟರ್ ಆಗುವ ಕನಸು ಹೊಂದಿದ್ದರು ಮೂಲಗಳ ಪ್ರಕಾರ, ಅವಳು ವೈದ್ಯೆಯಾಗಬೇಕೆಂದು ಬಯಸಿದ್ದರು ಆದರೆ ಕೆಮಿಸ್ಟ್ರಿ ಯುನಿಟ್ ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ಅವರು ಮನಸ್ಸನ್ನು ಬದಲಾಯಿಸಿದ್ದರು.
ಆಕೆ ತನ್ನ 16 ನೇ ವಯಸ್ಸಿನಲ್ಲಿ ತನ್ನ ಕುಟುಂಬವನ್ನು ತೊರೆದರು ಮತ್ತು ತನ್ನದೇ ಆದ ವೃತ್ತಿಯನ್ನು ಮಾಡಲು ದೆಹಲಿಗೆ ತೆರಳಿದರು ಎಂದು ವರದಿಯಾಗಿದೆ. ಕುಟುಂಬದ ಯಾವುದೇ ಸಹಾಯವಿಲ್ಲದೆ ಏಕಾಂಗಿಯಾಗಿ ಸಾಧಿನೆ ಮಾಡಿದ್ದಾರೆ.
ಬೋಲ್ಡ್ ಆಗಿ ತನ್ನ ನಂಬಿಕೆಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವ ಕಂಗನಾ ಸಾಮಾಜಿಕ ಮಾಧ್ಯಮದಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ.
ಅಸ್ಮಿತಾ ಥಿಯೇಟರ್ ಗ್ರೂಪ್ಗೆ ಸೇರುವ ಮೊದಲು ಸ್ವಲ್ಪ ಕಾಲ ಮಾಡೆಲ್ ಆಗಿ ಕೆಲಸ ಮಾಡಿದ ಕಂಗನಾ ರಣಾವತ್ ಅವರು 19 ವರ್ಷದವಳಿದ್ದಾಗ ಗ್ಯಾಂಗ್ಸ್ಟರ್ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಆದಾಗ್ಯೂ, ಗ್ಯಾಂಗ್ಸ್ಟರ್ಗೆ ಮೊದಲು, ಪಹ್ಲಾಜ್ ನಿಹಲಾನಿ ಅವರನ್ನು ಲವ್ ಯೂ ಬಾಸ್ ಚಿತ್ರಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದರು.
ಕಂಗನಾ ರಣಾವತ್ ಬಾಲಿವುಡ್ನಲ್ಲಿ ಎರಡನೇ ಅತಿ ಹೆಚ್ಚು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಈವರೆಗೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಐದು ರಾಷ್ಟ್ರ ಪ್ರಶಸ್ತಿ ಪಡೆದಿರುವ ಶಬಾನಾ ಅಜ್ಮಿ ಮೊದಲ ಸ್ಥಾನದಲ್ಲಿದ್ದಾರೆ.
ಕಂಗನಾ ಯಾವಾಗಲೂ ಬೋಲ್ಡ್ ಆಗಿ ಮಾತನಾಡುವ ವ್ಯಕ್ತಿಯಾಗಿದ್ದು ಈ ಕಾರಣಕ್ಕಾಗಿ ಹಲವಾರು ಸಮಸ್ಯೆಗಳನ್ನು ಸೃಷ್ಟಿಸಿದ್ದಾರೆ. ಸ್ವಜನಪಕ್ಷಪಾತದ ವಿರುದ್ಧ ವಾದ ಮಾಡುವುದರಿಂದ ಹಿಡಿದು ರಾಜಿಕೀಯದ ಆಗು ಹೋಗುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ..
ಕಂಗನಾ ರಣಾವತ್ ಕೂಡ ನ್ಯೂಯಾರ್ಕ್ ಫಿಲ್ಮ್ ಸ್ಕೂಲ್ ನಲ್ಲಿ ಓದಿದ್ದಾರೆ. '2014 ರ ಚಳಿಗಾಲದಲ್ಲಿ ನ್ಯೂಯಾರ್ಕ್ನ ಶಾಲೆಯಲ್ಲಿದ್ದ ಕಂಗನಾ ಅವರ ಥ್ರೋಬ್ಯಾಕ್ ಫೋಟೋ' ಎಂದು ಕ್ಯಾಪ್ಷನ್ ನೀಡಿ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವನ್ನು ಅಪ್ಲೋಡ್ ಮಾಡಲಾಗಿದೆ.
ಕಂಗನಾ ಈಗ OTT ನಲ್ಲಿ ಲಾಕ್ ಅಪ್ ರಿಯಾಲಿಟಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಈ ವರ್ಷ ತೇಜಸ್ ಮತ್ತು ಧಾಕಡ್ ಬಿಡುಗಡೆ ಮಾಡಲು ಅವರು ಯೋಜಿಸಿದ್ದಾರೆ. ಅವರು ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ, ಎಮರ್ಜೆನ್ಸಿ ಮತ್ತು ದಿ ಇನ್ಕಾರ್ನಿಷನ್: ಸೀತಾ ಸಿನಿಮಾಗಳನ್ನು ಹೊಂದಿದ್ದಾರೆ.
ನಟಿಯ ನಿರ್ಮಾಣದ ಪ್ರಯತ್ನವಾದ ಟಿಕು ವೆಡ್ಸ್ ಶೇರು ಕೊನೆಗೊಂಡಿದೆ. ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.