Sonam Kapoor ಮಾತ್ರ ಅಲ್ಲ, Katrina Kaif ಸಹ ಇಷ್ಟು ಬೇಗ ಅಮ್ಮ ಆಗ್ತಿದಾರಾ?

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ಆಗಿ ಆಗಲೇ ಕೆಲವು ತಿಂಗಳು ಕಳೆದಿದೆ. ಇತ್ತ ಸೋನಂ ಕಪೂರ್ ಸ್ವೀಟ್ ನ್ಯೂಸ್ ಕೊಟ್ಟಂತೆ ಇವ್ರೂ ಗುಡ್ ನ್ಯೂಸ್ ಕೊಡ್ತಾರಾ?
 

Does Katrina Kaif going to give good news soon?

ಕತ್ರಿನಾ ಕೈಫ್ (Katrina Kaif) ಬಾಲಿವುಡ್ (Bllywwod) ನ ಜನಪ್ರಿಯ ತಾರೆ. 2003ರಲ್ಲಿ ಬಾಲಿವುಡ್ ಗೆ ಬಂದ ಈಕೆ ಈವರೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇತ್ತೀಚೆಗೆ ಅವರ ಯಾವ ಸಿನಿಮಾಗಳೂ ಹೆಚ್ಚು ಹೆಸರು, ದುಡ್ಡು ಮಾಡಿಲ್ಲ. ಹಾಗಂತ ಫಿಸಿಕ್ ನಲ್ಲಾಗಲೀ, ಲುಕ್ ನಲ್ಲಾಗಲೀ ಕ್ಯೂಟ್ ನೆಸ್ ಒಂಚೂರೂ ಕಳ್ಕೊಳ್ಳದೇ ಇರುವ ಈ ನಟಿ ಬಾಲಿವುಡ್ ನಲ್ಲಿ ತನ್ನ ಚಾರ್ಮ್ ಕಳೆದುಕೊಂಡಿಲ್ಲ. ಈಕೆ ಕೆಲವು ತಿಂಗಳ ಹಿಂದೆ ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kowshal) ಅವರನ್ನು ಮದುವೆಯಾಗಿ ಸುದ್ದಿಯಲ್ಲಿದ್ದರು. 38 ವರ್ಷ ವಯಸ್ಸಿನ ಈ ನಟಿ ಮದುವೆಯಾದದ್ದು 33 ವರ್ಷದ ವಿಕ್ಕಿ  ಅವರನ್ನು. ಆದರೆ ತನ್ನ ಹಾಟ್ ಲುಕ್ ಮೂಲಕವೇ ಹುಡುಗಿಯರ ಮನಗೆದ್ದ ವಿಕ್ಕಿಗೆ ಕತ್ರಿನಾರಂಥಾ ಟಾಪ್ ಪೊಸಿಶನ್ ನಲ್ಲಿರುವ ನಟಿ ಮನಸೋತದ್ದರಲ್ಲಿ ಏನೂ ಆಶ್ಚರ್ಯ ಇಲ್ಲ. ಇವರ ಮದುವೆಯಾಗಿ ಕೆಲವು ತಿಂಗಳುಗಳಾಗಿವೆ. ಈ ಜೋಡಿ ಮೊನ್ನೆ ಮೊನ್ನೆ ಜೊತೆಯಾಗಿ ಹೋಳಿ ಹಬ್ಬ ಆಚರಿಸಿಕೊಂಡಿತು. ತನ್ನ ಅತ್ತೆಯ ಫ್ಯಾಮಿಲಿ ಜೊತೆಗೆ ಹೋಳಿ ಆಚರಿಸಿಕೊಂಡ ಮೇಲೆ ಕತ್ರಿನಾ ಏನೋ ಗುಟ್ಟು ಮಾಡ್ತಿದ್ದಾರಾ ಅನ್ನೋ ಅನುಮಾನ ಅವರ ಫ್ಯಾಮಿಲಿಯಲ್ಲೇ ಕೆಲವರಿಗೆ ಅನುಮಾನ ಬಂದಿದೆ. 

ಬಾಡಿಗೆ ತಾಯಿ ಮೂಲಕ ಮಗು ಪಡೆಯುವ ಪ್ಲಾನ್ ಮಾಡಿದ್ದಾರಾ ನಯನತಾರಾ-ವಿಘ್ನೇಶ್?

ಅವರನ್ನು ಇಲ್ಲಿ ಕಂಡ ಆಪ್ತರೊಬ್ಬರು ಒಂದು ಸುದ್ದಿ ಹೊರಬಿಟ್ಟಿದ್ದಾರೆ. ಕತ್ರಿನಾ ಮೊದಲಿನ ಹಾಗಿಲ್ಲ. ಅವರ ಫಿಸಿಕ್ ನೋಡಿದ್ರೆ ಸ್ವಲ್ಪದರಲ್ಲೇ ಗುಡ್ ನ್ಯೂಸ್ ಹೇಳೋ ಹಾಗೆ ಕಾಣ್ತಿದ್ದಾರೆ ಅಂದಿದ್ದಾರೆ. ಅವರ ಈ ಮಾತು ರೆಕ್ಕೆ ಪುಕ್ಕ ಕಟ್ಕೊಂಡು ಬಾಲಿವುಡ್ ನಲ್ಲೆಲ್ಲ ಓಡಾಡ್ತಿದೆ. ಕತ್ರಿನಾ ಇಷ್ಟು ಬೇಗ ಪ್ರೆಗ್ನೆಂಟಾ? ಇನ್ನೂ ಮದುವೆಯಾಗಿ ಕೆಲವೇ ದಿನಗಳಾಗಿವೆ. ಹೀಗಾದ್ರೆ ಅವ್ರು ಲೈಫನ್ನ ಎನ್ ಜಾಯ್ ಮಾಡೋದ್ಯಾವಾಗ ಅಂತ ಕೆಲವರು ಮೂಗು ಮುರಿದಿದ್ದಾರೆ. ಇನ್ನೂ ಕೆಲವರು ಒಂದು ವೇಳೆ ಕತ್ರಿನಾ ಪ್ರೆಗ್ನೆಂಟೇ ಆಗಿದ್ರೆ ತುಂಬ ಒಳ್ಳೆಯ ಕೆಲಸ ಮಾಡಿದಂಗಾಯ್ತು ಅಂದಿದ್ದಾರೆ. ಅಲ್ಲಿಗೆ ಕತ್ರಿನಾ ಗುಡ್ ನ್ಯೂಸ್ ಹೇಳೋದಕ್ಕೂ ಮೊದಲೇ ಅವರ ಪ್ರೆಗ್ನೆನ್ಸಿ ಬಗ್ಗೆ ಚರ್ಚೆ ಶುರುವಾಗಿದೆ. ಎಷ್ಟಾದರೂ ಸೆಲೆಬ್ರಿಟಿ ಲೈಫು, ಜನರಿಗೆ ಈ ಬಗ್ಗೆ ಅತಿಯಾದ ಕುತೂಹಲ ಇದ್ದೇ ಇದೆ. ಅದರಲ್ಲೂ ವಿಕ್ಕಿ ಮತ್ತು ಈಕೆ ಸಖತ್ ಕ್ಯೂಟ್ ಕಪಲ್ಸ್ ಅಂತಲೇ ಜನರಿಂದ ಬೆನ್ನು ತಟ್ಟಿಸಿಕೊಂಡವರು. ಹೀಗಿರುವಾಗ ಇವರ ಮ್ಯಾರೇಜ್ ಲೈಫ್‌ನ ಅಪ್‌ಡೇಟ್ಸ್‌ಗೆ ಜನ ಕಾಯೋದ್ರಲ್ಲಿ ಏನೂ ಅಚ್ಚರಿ ಇಲ್ಲ. 

ಇದೇ ನನ್ನ ಫಸ್ಟ್ ಆ್ಯಂಡ್ ಲಾಸ್ಟ್ ಐಟಂ ಸಾಂಗ್; ಚಿರಂಜೀವಿ ಜೊತೆ ಹೆಜ್ಜೆ ಹಾಕಿದ ಬಳಿಕ ರೆಜಿನಾ ಹೀಗಂದಿದ್ದೇಕೆ?

ಕತ್ರಿನಾ ಈಗಲೇ ಪ್ರೆಗ್ನೆಂಟ್ (Pregnant) ಆದರೆ ಉತ್ತಮ ಅಂತ ಜನ ಹೇಳೋದಕ್ಕೂ ಕಾರಣ ಇದೆ. ಕತ್ರಿನಾಗೆ ಈಗ ವಯಸ್ಸು 38 ದಾಟಿದೆ. ವೈದ್ಯರು ಮಗು ಮಾಡಿಕೊಳ್ಳಲು ಹೆಣ್ಣಿಗೆ ಬೆಸ್ಟ್ ಏಜ್ ಅಂತ ಸಜೆಸ್ಟ್ ಮಾಡೋದು 25ರಿಂದ 30ರ ವಯೋಮಾನವನ್ನು. ಆದರೆ ಇವರು ಈ ವಯಸ್ಸನ್ನು ಈಗಾಗಲೇ ಕ್ರಾಸ್ ಮಾಡಿದ್ದಾರೆ. ಸೆಲೆಬ್ರಿಟಿ ಲೈಫಲ್ಲಿ ಇದೆಲ್ಲ ಕಾಮನ್ ಅನ್ನಬಹುದು. ಆದರೆ ಪ್ರೆಗ್ನೆನ್ಸಿಯಲ್ಲಿ ಮಹಿಳೆಯ ವಯಸ್ಸು ಹೆಚ್ಚಾದಷ್ಟೂ ಸಮಸ್ಯೆಗಳೂ ಹೆಚ್ಚಾಗುತ್ತಾ ಹೋಗುತ್ತವೆ. ಬಿಪಿ, ಶುಗರ್‌ನಂಥಾ ಸಮಸ್ಯೆಗಳು ಕಾಣಿಸಿಕೊಳ್ಳೋದು ಬಹುಮುಖ್ಯ ಕಾರಣ ಆದರೆ, ಮಗುವಿನ ಬೆಳವಣಿಗೆಯಲ್ಲಿ ರಿಸ್ಕ್ ಫ್ಯಾಕ್ಟರ್ ಇರೋದನ್ನೂ ಅಲ್ಲಗಳೆಯಲಾಗೋದಿಲ್ಲ. ಹೀಗಾಗಿ ಬೇಗ ಮಗುವಾದಷ್ಟೂ ಉತ್ತಮ ಅಂತಾರೆ ತಜ್ಞರು. ಜೊತೆಗೆ ಗಂಡ ಹೆಂಡತಿ ನಡುವೆ ಮಗು ಬೇಗ ಆದರೆ ಅಷ್ಟಾಗಿ ವೈಮನಸ್ಸು ಬೆಳೆಯಲ್ಲ ಅನ್ನೋ ಮಾತೂ ಇದೆ. 

ಇಷ್ಟೆಲ್ಲ ಆದರೂ ಕತ್ರಿನಾ ಇನ್ನೂ ತಾನು ಪ್ರೆಗ್ನೆಂಟ್ ಹೌದೋ ಅಲ್ಲವೋ ಅನ್ನೋದನ್ನು ಕನ್ ಫರ್ಮ್ ಮಾಡಿಲ್ಲ. ವಿಕ್ಕಿಯೂ ಎಲ್ಲೂ ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಆದರೆ ರೂಮರ್ಸ್ ಮಾತ್ರ ಸುಳಿದಾಡುತ್ತಲೇ ಇದೆ. ಇದಕ್ಕೆ ಪೂರಕ ಅನ್ನೋ ಹಾಗೆ ಟೈಗರ್ ೩ ಚಿತ್ರದ ಬಳಿಕ ಕತ್ರಿನಾ ಮತ್ಯಾವ ಸಿನಿಮಾಕ್ಕೂ ಸೈನ್ ಮಾಡಿಲ್ಲ. ಅಲ್ಲಿಗೆ ಫ್ಯಾಮಿಲಿ ಲೈಫಲ್ಲಿ ಸೆಟಲ್ ಆಗೋ ಸೂಚನೆ ತೋರಿಸಿದ್ದಾರೆ. ಹಿಂದೆ ತನ್ನ ಪ್ರೇಮ ವೈಫಲ್ಯಗಳ ಬಗ್ಗೆ, ವೈಯುಕ್ತಿಕ ಬದುಕಿನ ನೋವಿನ ಬಗ್ಗೆ ಹೇಳಿಕೊಂಡಿದ್ದರು ಕತ್ರಿನಾ. ವಿಕ್ಕಿ ಜೊತೆಗೆ ಪ್ರೀತಿಯಲ್ಲಿ ಬಿದ್ದ ಮೇಲೆ ಅವೆಲ್ಲ ಮಾಯವಾದಂತಿದೆ. ಇನ್ನು ಈ ಕ್ಯೂಟ್ ಜೋಡಿಗೆ ಪಾಪುವೊಂದು ಬಂದರೆ ಲೈಫ್ ಇನ್ನಷ್ಟು ಖುಷಿಯಾಗಿ ಸಾಗೋದ್ರಲ್ಲಿ ಅನುಮಾನ ಇಲ್ಲ. 

Instagramನಲ್ಲಿ ನಾಗಚೈತನ್ಯರನ್ನು ಅನ್ ಫಾಲೋ ಮಾಡಿದ ನಟಿ ಸಮಂತಾ
 

Latest Videos
Follow Us:
Download App:
  • android
  • ios