ಇಂದು ಯಾರೂ ಊಹಿಸಲಿಕ್ಕೂ ಸಾಧ್ಯವಾಗದ ಅಮಾನುಷ ತೆರಿಗೆ ಪದ್ಧತಿಯೊಂದು ಕೇರಳದ ಮಲಬಾರ್‌ ಪ್ರಾಂತ್ಯದಲ್ಲಿತ್ತು. ಆ ವಿಲಕ್ಷಣ, ಅಮಾನವೀಯ ನಿಯಮಕ್ಕೆ ನಂಗೇಲಿ ಎಂಬ ದಲಿತ ಮಹಿಳೆ ಕೊನೆ ಹಾಡಿದ ರೀತಿಯಂತೂ ಹೃದಯ ವಿದ್ರಾವಕವಾಗಿತ್ತು. 

ಕೇರಳದಲ್ಲಿ ಮಹಿಳೆಯರ ಸ್ತನಗಳನ್ನೇ ಗುರಿಯಾಗಿಸಿ ವಿಧಿಸಲಾಗಿದ್ದ ಒಂದು ಅಮಾನುಷ ತೆರಿಗೆ ಪದ್ಧತಿಯ ಬಗ್ಗೆ ನಿಮಗೆ ಗೊತ್ತೆ? ಹೌದು, ಅದೇ ಮುಲಕ್ಕರಂ ಅಥವಾ ಸ್ತನ ತೆರಿಗೆ. ಕೇರಳದ ಮಲಬಾರ್‌ ಪ್ರಾಂತದಲ್ಲಿ ಇದು ಜಾರಿಯಲ್ಲಿತ್ತು. ಈ ಹಿಂದೆ ನಂಬೂದರಿ ಜಾತಿಯ ತಿರುವಾಂಕೂರಿನ ಅರಸರು ಕೇರಳದಲ್ಲಿ ‘ಮುಲಕ್ಕರ’ ಎಂಬ ಅಮಾನವೀಯ ತೆರಿಗೆ ಪದ್ಧತಿಯನ್ನು ಅಲ್ಲಿನ ಕೆಳವರ್ಗದ ಮಹಿಳೆಯರ ಮೇಲೆ ಹೇರಿದ್ದರು. ಋತುಮತಿಯಾದ ಕೆಳವರ್ಗದ ಮಹಿಳೆಯರು ಮೇಲ್ವಸ್ತ್ರ ಧರಿಸದೆ ಇರಬೇಕು. ಧರಿಸಿದರೆ ಅದಕ್ಕಾಗಿ ಅವರು ತೆರಿಗೆ ಕಟ್ಟಬೇಕಾಗಿತ್ತು. 

ಆ ತೆರಿಗೆ ಪದ್ಧತಿ ಹೀಗಿತ್ತು- ದಲಿತ ಮಹಿಳೆಯರು ತಮ್ಮ ಸ್ತನಗಳ ಗಾತ್ರಕ್ಕನುಗುಣವಾಗಿ ತೆರಿಗೆ ಪಾವತಿಸಬೇಕಿತ್ತು. ಯಾವುದೇ ಕಾರಣಕ್ಕೂ ದಲಿತ ಮಹಿಳೆಯರು ತಮ್ಮ ಸ್ತನ ಮುಚ್ಚಿಕೊಳ್ಳುವಂತಿರಲಿಲ್ಲ. ತಿರುವನಂತಪುರಂ ಸಂಸ್ಥಾನದ ಕಲೆಕ್ಟರ್​ಗಳು ಮನೆ, ಮನೆಗೆ ತೆರಳಿ ಮಹಿಳೆಯರಿಂದ ಸ್ತನ ತೆರಿಗೆ ವಸೂಲಿ ಮಾಡುತ್ತಿದ್ದರು. ಟ್ಯಾಕ್ಸ್ ಕಟ್ಟಲಾಗದ ಬಡ ಮಹಿಳೆಯರು ತಮ್ಮ ಎದೆ ಮುಚ್ಚಿಕೊಳ್ಳಲಾರದೇ ಬರೀ ಮೈಯಲ್ಲೇ ತಿರುಗುವಂತಾಗಿತ್ತು. ಈ ತೆರಿಗೆಯ ಹಿಂದೆ ದಲಿತ ಮಹಿಳೆಯರ ಅಂಗಸೌಷ್ಠವ ಸವಿಯುವ ಮೇಲ್ವರ್ಗದ ನೀಚತನನಿತ್ತು. ಜೊತೆಗೆ ದಲಿತರನ್ನು ತೆರಿಗೆಯ ಭಯದಲ್ಲಿ ದಮನಿತರನ್ನಾಗಿಸಿ ಅವರನ್ನು ಸಾಲದಲ್ಲಿ ಮುಳುಗಿಸಿ ಶಾಶ್ವತ ಜೀತದಾಳುಗಳನ್ನಾಗಿಸುವ ಉದ್ದೇಶವಿತ್ತು. ಈ ಪದ್ಧತಿಯನ್ನು ಎಲ್ಲರೂ ದ್ವೇಷಿಸುತ್ತಿದ್ದರು. ಆದರೆ ಪ್ರಬಲ ಮೇಲ್ವರ್ಗದವರ ವಿರುದ್ಧ ಹೋರಾಡಲು ಇವರಿಗೆ ಶಕ್ತಿಯಾಗಲೀ ಸಾಮರ್ಥ್ಯವಾಗಲೀ ಇರಲಿಲ್ಲ.

ಸಾವಿರಾರು ಮಹಿಳೆಯರು ಸ್ತನ ತೆರಿಗೆ ಪಾವತಿಸಲಾಗದೇ, ತಮ್ಮ ಹೆಣ್ತನವನ್ನೂ ಕಾಪಾಡಿಕೊಳ್ಳಲಾರದೇ ಕಣ್ಣೀರು ಸುರಿಸುತ್ತಿದ್ದ ಕಾಲದಲ್ಲಿ ಕೆರಳಿ ಎದ್ದು ನಿಂತವಳು ನಂಗೇಲಿ. ಕೇರಳದ ಚೆರುತಲಾ ಗ್ರಾಮದ ಈಳವ ಸಮುದಾಯಕ್ಕೆ ಸೇರಿದವಳು ನಂಗೇಲಿ. ಈ ಹತಾಶ ಸಂದರ್ಭದಲ್ಲಿ ನಂಗೇಲಿ ಸಿಡಿದೆದ್ದಳು. ಇವರನ್ನು ಮೇಲ್ವಸ್ತ್ರ ತೊಟ್ಟಿದ್ದಕ್ಕಾಗಿ ತೆರಿಗೆ ನೀಡುವಂತೆ ಬಲವಂತ ಪಡಿಸಲಾಯಿತು. ತನ್ನ ಆತ್ಮಾಭಿಮಾನಕ್ಕೇ ಧಕ್ಕೆ ತರುವ ಈ ವ್ಯವಸ್ಥೆಯ ವಿರುದ್ದ ಆಕೆ ಸಿಡಿದೆದ್ದರು. ಮೇಲ್ವರ್ಗದ ಈ ಘೋರತೆಗೆ ತನ್ನದೇ ರೀತಿಯಲ್ಲಿ ಈಕೆ ಪ್ರತಿಭಟಿಸಿದಳು. ದಲಿತರಾದರೇನು? ನಾವೂ ಮಾನವರಲ್ಲವೇ, ನಮಗೂ ಮಾನವಿಲ್ಲವೇ ಎಂದು ದಿಟ್ಟವಾಗಿ ಎಲ್ಲರೆದುರು ಹೇಳಿ ತಾನು ಸ್ವತಃ ಮೇಲ್ವಸ್ತ್ರ ಧರಿಸಿ ಉಳಿದವರಿಗೂ ಧರಿಸುವಂತೆ ಪ್ರೇರೇಪಿಸಿದಳು. ಆದರೆ ಈ ಕ್ರಮ ಮೇಲ್ವರ್ಗದ ಜನರಿಗೆ ಅಪಾರವಾದ ಕೋಪ ಬರಿಸಿತು. ದಲಿತ ಮಹಿಳೆಯೊಬ್ಬಳು ತಮಗೆ ಎದುರಾಗಿ ನಿಲ್ಲುವುದು ಅವರ ದುರಭಿಮಾನಕ್ಕೆ ಕೊಡಲಿ ಏಟು ನೀಡಿತ್ತು. ಈಕೆಯ ದಿಟ್ಟ ಕ್ರಮವನ್ನು ಆಕೆಯ ಪತಿಯೂ ಬೆಂಬಲಿಸಿದರು. 

ವಿಶ್ವದ ಸುಂದರ ನಗರ ಬಿಟ್ಟು ಭಾರತಕ್ಕೆ ಬಂದು 'ಬದುಕು ಬದಲಿಸಿದ ದೇಶ'ಎಂದ ಡ್ಯಾನಿಶ್ ಯುವತಿ!

ನಂಗೇಲಿಯ ಸುದ್ದಿ ಇಡೀ ರಾಜ್ಯ ದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ನಂಗೇಲಿಯ ಸಾವಿನ ಸುದ್ದಿ ತಿಳಿದು ಕಂಗಾಲಾದ ಆಕೆಯ ಗಂಡ, ಹೊತ್ತಿ ಉರಿಯುತ್ತಿದ್ದ ಆಕೆಯ ಚಿತೆಗೆಹಾರಿ ಪ್ರಾಣಬಿಟ್ಟ. ಇದು ಪುರುಷನೊಬ್ಬ ಸತಿ ಸಹಗಮನ ಪದ್ಧತಿಗೆ ಒಳಗಾದ ಮೊದಲ ಪ್ರಕರಣ ಎಂದು ಇತಿಹಾಸದಲ್ಲಿ ದಾಖಲಾಯ್ತು. ನಂಗೆಲಿಯ ಸಾವಿನಿಂದ ಎಚ್ಚೆತ್ತ ತಿರುವನಂತಪುರ ಆಡಳಿತ ಸ್ತನ ತೆರಿತೆ ರದ್ದು ಮಾಡಿತು. ಆಕೆಯ ಗೌರವಾರ್ಥವಾಗಿ ಆಕೆ ಜೀವಿಸಿದ್ದ ಊರಿಗೆ ‘ಮುಲಚಿಪರಂಬು’ (ಸ್ತನಗಳುಳ್ಳ ಮಹಿಳೆಯ ಭೂಮಿ) ಎಂದು ಹೆಸರಿಡಲಾಯಿತು. 

ನಂಗೇಲಿಯ ತ್ಯಾಗ ವ್ಯರ್ಥವಾಗಲಿಲ್ಲ. ನಂಗೇಲಿ ಕೋಟ್ಯಂತರ ಅಸಹಾಯಕ ದಲಿತ ಮಹಿಳೆಯರ ಪಾಲಿಗೆ ನಂಗೇಲಿ ವೀರ ವನಿತೆಯಾಗಿ, ಚರಿತ್ರೆಯ ಪುಟ ಸೇರಿದಳು. ಮುಂದೆ ನಾರಾಯಣ ಗುರುಗಳು ಈ ಅಮಾನುಷ ಪದ್ಧತಿಯ ವಿರುದ್ಧ ಹೋರಾಡಿದರು. ಇವರ ಹೋರಾಟವನ್ನು ಪರಿಗಣಿಸಿ ಅಂದಿನ ಬ್ರಿಟಿಷ್ ಸರ್ಕಾರವು ಈ ಸ್ತನತೆರಿಗೆ ಪದ್ಧತಿಯನ್ನು 19 ನೇ ಶತಮಾನದ ಅಂತ್ಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಿತು.

ದಪ್ಪ ಪೃಷ್ಠದ ಫ್ಯಾಷನ್ ಜಗತ್ತು: ಸೌಂದರ್ಯದ ಹೊಸ ಮಾನದಂಡದ ರಹಸ್ಯ ಇಲ್ಲಿದೆ!