Asianet Suvarna News Asianet Suvarna News

Endometriosis: ಸೆಕ್ಸ್ ಜೀವನ ಹಾಳು ಮಾಡಿ ನೋವಿನ ಮುಟ್ಟಿಗೆ ಕಾರಣವಾಗುತ್ತೆ ಈ ರೋಗ!

ಮಹಿಳೆ ದೇಹದಲ್ಲಿ ಹಾರ್ಮೋನ್ ಗಳ ಬದಲಾವಣೆ ಹೆಚ್ಚಿರುತ್ತದೆ. ಸಣ್ಣಪುಟ್ಟ ರೋಗವನ್ನೂ ಮಹಿಳೆ ಗಮನಿಸೋದು ಅಗತ್ಯ. ಅದರ ನಿರ್ಲಕ್ಷ್ಯ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಪರಿಸ್ಥಿತಿ ಕೈಮೀರುವ ಮೊದಲು ಎಚ್ಚೆತ್ತರೆ ಉತ್ತಮ. 

Here Are Tips To Manage Endometriosis roo
Author
First Published Nov 28, 2023, 12:19 PM IST

ಕೆಲಸ, ಸಮಯದ ಹಿಂದೆ ಓಡುವ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ಸಾಧ್ಯವಾಗ್ತಿಲ್ಲ. ಉತ್ತಮ ಆಹಾರ ಹಾಗೂ ಆರೋಗ್ಯಕರ ಜೀವನ ಶೈಲಿಯಿಂದ ಜನರು ಬಹುದೂರ ಓಡಿದ್ದಾರೆ. ಅವರ ಈ ಜೀವನ ಆರೋಗ್ಯವನ್ನು ಸಂಪೂರ್ಣ ಹಾಳು ಮಾಡ್ತಿದೆ. ಜನರು ತಮ್ಮ ದೇಹದಲ್ಲಾಗುವ ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡ್ತಾರೆ. ಇದ್ರಲ್ಲಿ ಮಹಿಳೆಯರು ಮುಂದಿದ್ದಾರೆ. ಕೆಲಸ, ಮನೆ, ಕುಟುಂಬದ ಕೆಲಸದಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸುವುದಿಲ್ಲ. ಇದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಅದ್ರಲ್ಲಿ ಎಂಡೊಮೆಟ್ರಿಯೊಸಿಸ್ ಕೂಡ ಸೇರಿದೆ. ಎಂಡೊಮೆಟ್ರಿಯೊಸಿಸ್ ಮುಟ್ಟಿನ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ ಮತ್ತು ಬಂಜೆತನವನ್ನು ಉಂಟುಮಾಡುತ್ತದೆ. ನಾವಿಂದು ಎಂಡೊಮೆಟ್ರಿಯೊಸಿಸ್ ಲಕ್ಷಣ ಹಾಗೂ ಅದರಿಂದ ರಕ್ಷಣೆ ಹೇಗೆ ಎಂಬುದನ್ನು ವಿವರಿಸ್ತೇವೆ.

ಎಂಡೊಮೆಟ್ರಿಯೊಸಿಸ್ (Endometriosis) ಎಂದರೇನು? : ಗರ್ಭಾಶಯ (Uterus) ದ ಒಳಪದರವು ಗರ್ಭಾಶಯದ ಹೊರಗೆ ಬೆಳೆಯಲು ಶುರು ಮಾಡುತ್ತದೆ. ಈ ಎಂಡೋಮೆಟ್ರಿಯಲ್ ಅಂಗಾಂಶವನ್ನು ಎಂಡೊಮೆಟ್ರಿಯೊಸಿಸ್ ಎಂದು ಕರೆಯುತ್ತಾರೆ. ಇದು 18 ರಿಂದ 35 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕಾನಿಸಿಕೊಳ್ಳುತ್ತದೆ. ಭಾರತದಲ್ಲಿ 25 ಮಿಲಿಯನ್ ಮಹಿಳೆಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿ ಈ ಸಮಸ್ಯೆಗೆ ಮುಖ್ಯ ಕಾರಣ ಎಂದು ತಜ್ಞರು ಹೇಳಿದ್ದಾರೆ. 

ಸ್ತ್ರೀವಾದ ಎನ್ನುವ ಹುಚ್ಚಾಟ ಬಿಟ್ಟು ಕೆಲಸದತ್ತ ಗಮನ ಕೊಡಿ: ಗಂಡು-ಹೆಣ್ಣು ಸಮಾನರಲ್ಲ; ನಟಿ ನೀನಾ ಗುಪ್ತಾ

ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಅಸಮತೋಲನವೇ ಇದಕ್ಕೆ ಮುಖ್ಯ ಕಾರಣ. ಇದ್ರಿಂದ ಪಿಸಿಒಡಿ, ತೂಕ ಹೆಚ್ಚಳ, ಮುಖದ ಮೇಲೆ ಕೂದಲು, ಥೈರಾಯ್ಡ್ ಸೇರಿದಂತೆ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಎಂಡೊಮೆಟ್ರಿಯೊಸಿಸ್ ಲಕ್ಷಣಗಳು : 

ಅಧಿಕ ರಕ್ತಸ್ರಾವ : ಮುಟ್ಟಿನ ಸಮಯದಲ್ಲಿ ನಿಮಗೆ ಅಧಿಕ ರಕ್ತಸ್ರಾವ ಆಗ್ತಿದ್ದರೆ ಎಚ್ಚೆತ್ತುಕೊಳ್ಳಿ. ಇದು ಎಂಡೊಮೆಟ್ರಿಯೊಸಿಸ್ ಲಕ್ಷಣವಿರಬಹದು. ಪದೇ ಪದೇ ಪ್ಯಾಡ್ ಬದಲಿಸುವ ಸ್ಥಿತಿಯಲ್ಲಿ ನೀವಿದ್ದರೆ ವೈದ್ಯರನ್ನು ಭೇಟಿಯಾಗೋದು ಒಳ್ಳೆಯದು. ಅತಿಯಾದ ರಕ್ತಸ್ರಾವ ರಕ್ತಹೀನತೆಗೆ ಕಾರಣವಾಗುತ್ತದೆ. ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗಿ ದೌರ್ಬಲ್ಯ ಕಾಣಿಸಿಕೊಳ್ಳುತ್ತದೆ. 

ಟೈಟಾನಿಕ್ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿ ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ: ಅಂದಿನ ದಿನಗಳ ನೆನೆದ ನಟಿ ಕೇಟ್​

ಕೆಳ ಭಾಗದ ಹೊಟ್ಟೆಯಲ್ಲಿ ನೋವು : ಪಿರಿಯಡ್ಸ್ ಸಮಯದಲ್ಲಿ ಸೆಳೆತದ ಸಮಸ್ಯೆ ಹೆಚ್ಚಾಗುತ್ತದೆ. ಹಾರ್ಮೋನಿನ ಅಸಮತೋಲನವು ನೋವನ್ನು ತೀವ್ರಗೊಳಿಸುತ್ತದೆ. ಮುಟ್ಟಿನ ಸಮಯದಲ್ಲಿ ಎಂಡೊಮೆಟ್ರಿಯಲ್ ಲೈನಿಂಗ್ ಬೆಳೆಯುತ್ತದೆ ಮತ್ತು ಒಡೆಯುತ್ತದೆ. ಇದು ದೇಹದ ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ. ಇದು ಅಸಾಮಾನ್ಯ ನೋವಿನ ಸಮಸ್ಯೆಯನ್ನು ಸೃಷ್ಟಿಸುತ್ತದೆ.

ಮೂತ್ರ ವಿಸರ್ಜನೆ ವೇಳೆ ನೋವು : ಮುಟ್ಟಿನ ಸಮಯದಲ್ಲಿ ಮೂತ್ರ ಹಾಗೂ ಮಲ ವಿಸರ್ಜನೆ ವೇಳೆ ನೋವು ಕಾಣಿಸಿಕೊಂಡ್ರೆ ಎಂಡೊಮೆಟ್ರಿಯೊಸಿಸ್‌ ಲಕ್ಷಣ. ಇದು ಮಲಬದ್ಧತೆಗೂ ಕಾರಣವಾಗುತ್ತದೆ. ಅನೇಕ ಬಾರಿ ಮೂತ್ರದಲ್ಲಿ ರಕ್ತ ಬರುತ್ತದೆ.

ಲೈಂಗಿಕ ಕ್ರಿಯೆಗೆ ಅಡ್ಡಿ : ಎಂಡೊಮೆಟ್ರಿಯೊಸಿಸ್‌ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆ ಲೈಂಗಿಕ ಸಮಯದಲ್ಲಿ ವಿಪರೀತ ನೋವು ಅನುಭವಿಸುತ್ತಾಳೆ. ಇದ್ರಿಂದ ಸೆಕ್ಸ್ ಆನಂದ ಕಡಿಮೆಯಾಗುತ್ತದೆ. ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇರುತ್ತದೆ.

ಎಂಡೊಮೆಟ್ರಿಯೊಸಿಸ್‌ ನಿಂದ ರಕ್ಷಣೆ ಹೇಗೆ? :

ನಿದ್ರೆ : ಅತಿಯಾದ ಆಯಾಸ, ಒತ್ತಡ ಮತ್ತು ನಿದ್ರೆಯ ಕೊರತೆಯು ಎಂಡೊಮೆಟ್ರಿಯೊಸಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿ ದಿನ ಎಂಟು ಗಂಟೆ ನಿದ್ರೆ ಮಾಡಿ. ಕೆಫೀನ್ ಆಹಾರದಿಂದ ದೂರವಿರಿ.

ಹೈಡ್ರೀಕರಣ : ದೇಹಕ್ಕೆ ನೀರಿನ ಅಗತ್ಯ ಹೆಚ್ಚಿದೆ. ನಿತ್ಯ ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಸೇವನೆ ಮಾಡಿದ್ರೆ ದೇಹ ಹೈಡ್ರೀಕರಣಗೊಂಡು ಉರಿಯೂತ ಕಡಿಮೆಯಾಗುತ್ತದೆ. ಇದರಿಂದ ದೇಹದ ಸೆಳೆತ ಕಡಿಮೆ ಆಗುತ್ತದೆ. ನೀರಿನ ಜೊತೆ ನೀವು ದ್ರವ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡಬೇಕು.

ವ್ಯಾಯಾಮ : ಜೀವನ ಶೈಲಿಯಲ್ಲಿ ಬದಲಾವಣೆ ಬಹಳ ಮುಖ್ಯ. ಪ್ರತಿ ನಿತ್ಯ ವ್ಯಾಯಾಮ ಮಾಡಬೇಕು. ವ್ಯಾಯಾಮದಿಂದ ಈಸ್ಟ್ರೊಜೆನ್ ಮಟ್ಟಗಳು ಮತ್ತು ಉರಿಯೂತ ಎರಡೂ ಕಡಿಮೆಯಾಗಲು ಪ್ರಾರಂಭಿಸುತ್ತವೆ. ಮಿದುಳಿನಲ್ಲಿ ಎಂಡಾರ್ಫಿನ್ ಎಂಬ ಭಾವನೆ ಹೆಚ್ಚಾಗುತ್ತದೆ. ಇದು ಕೆಳ ಹೊಟ್ಟೆ ನೋವಿಗೆ ಪರಿಹಾರ ನೀಡುತ್ತದೆ.

ಆಹಾರ : ವ್ಯಾಯಾಮದ ಜೊತೆ ಆಹಾರ ಅಗತ್ಯ. ಜೀವಸತ್ವಗಳು ಮತ್ತು ಖನಿಜಗಳ ಹೊರತಾಗಿ, ಒಮೆಗಾ 3 ಕೊಬ್ಬಿನಾಮ್ಲಗಳನ್ನು ಸಹ ಆಹಾರದಲ್ಲಿ ಸೇರಿಸಿ. ಹಣ್ಣು – ತರಖಾರಿ ಸೇವನೆ ಮಾಡಿ. 

Latest Videos
Follow Us:
Download App:
  • android
  • ios