Asianet Suvarna News Asianet Suvarna News

ಟೈಟಾನಿಕ್ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿ ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ: ಅಂದಿನ ದಿನಗಳ ನೆನೆದ ನಟಿ ಕೇಟ್​

ಟೈಟಾನಿಕ್ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿ ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ ಎಂದು  ಅಂದಿನ ದಿನಗಳ ನೆನೆದ ನಟಿ ಕೇಟ್​ ಕೇಟ್ ವಿನ್ಸ್​ಲೆಟ್​ 
 

Kate Winslet Regrets Getting Naked for Titanic her Life Became Hell for Years suc
Author
First Published Nov 27, 2023, 4:43 PM IST

1997ರಲ್ಲಿ ತೆರೆ ಕಂಡಿದ್ದ ಟೈಟಾನಿಕ್​ ಚಿತ್ರವನ್ನು ನೋಡಿದವರು ಬಹುಶಃ ಯಾರೂ ಮರೆಯಲಿಕ್ಕಿಲ್ಲ. ಚಿತ್ರ ಬಿಡುಗಡೆಯಾಗಿ 26 ವರ್ಷ ಕಳೆದರೂ ಆ ಚಿತ್ರವನ್ನು ಮೆಲುಕು ಹಾಕುವವರು ಹಲವರು. ಆಗಿನ ಕಾಲದಲ್ಲಿ ಈ ಚಿತ್ರ 210 ಮಿಲಿಯನ್​ ಡಾಲರ್​ ಅಂದರೆ ಸುಮಾರು 18 ಸಾವಿರ ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಈಗಿನ ಬೆಲೆಗೆ ಹೋಲಿಸಿದರೆ ಇದರ ದರ ಸುಮಾರು 337 ಮಿಲಿಯನ್​ ಡಾಲರ್​ ಎಂದರೆ,  ಸುಮಾರು 28 ಸಾವಿರ ಕೋಟಿ ರೂಪಾಯಿಗಳು ಎಂಬ ಲೆಕ್ಕಾಚಾರವಿದೆ. ಈ ಚಿತ್ರದಲ್ಲಿ ಎಲ್ಲರ ಕಣ್ಣು ಕುಕ್ಕಿದ್ದು ನಟಿ ಕೇಟ್ ವಿನ್ಸ್ ಲೆಟ್. ಆಗ 20 ವರ್ಷದವರಿದ್ದ ಕೇಟ್​ ಈ ಚಿತ್ರದಲ್ಲಿ ಸಂಪೂರ್ಣ ನಗ್ನವಾಗಿ ಕಾಣಿಸಿಕೊಂಡಿದ್ದು ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿತ್ತು. ಇಂದಿನ ಕೆಲ ನಟಿಯರು ಯಾವುದೇ ಅಳುಕಿಲ್ಲದೇ ನಗ್ನರಾಗಲು ಮುಂದೆ ಬರುವುದು ಉಂಟು. ಆದರೆ 27 ವರ್ಷಗಳ ಹಿಂದೆ ಇದು ಸುಲಭದ ಮಾತಾಗಿರಲಿಲ್ಲ. ಅಂಥ ಸಮಯದಲ್ಲಿ ಸಿನಿಮಾಕ್ಕಾಗಿ ನಗ್ನರಾಗಿ ಹಲ್​ಚಲ್​ ಸೃಷ್ಟಿಸಿದ್ದರು ಕೇಟ್​.

 ಜೇಮ್ಸ್ ಕ್ಯಾಮರೂನ್ ನಿರ್ದೇಶನದಲ್ಲಿ ಬ್ರಿಟಿಷ್ ನಟಿಯ ನಗ್ನ ದೃಶ್ಯವನ್ನು ಚಲನಚಿತ್ರ ನಿರ್ಮಾಣದ ಇತಿಹಾಸದಲ್ಲಿ ಅತ್ಯಂತ ಅಪ್ರತಿಮ ದೃಶ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.  ಆದರೆ ಇದೇ ನಗ್ನ ದೃಶ್ಯ ತಮ್ಮ ಜೀವನದ ಮೇಲೆ ಅಪಾರ ಕೆಟ್ಟ ಪರಿಣಾಮ ಉಂಟು ಮಾಡಿತು ಎಂಬ ಬಗ್ಗೆ ಈಗ ಕೇಟ್​ ಹೇಳಿದ್ದಾರೆ. ಕೆಲ ವರ್ಷಗಳ ವರೆಗೆ ಇದು ಬದುಕನ್ನೇ ನರಕ ಮಾಡಿತು ಎಂದು ಹೇಳಿಕೊಂಡಿದ್ದಾರೆ. ನಾನು ಅನೇಕರಿಂದ ಕೀಳು ಮಟ್ಟದಲ್ಲಿ ಕಾಣಿಸಿಕೊಂಡೆ. ಈಗ ಕಾಲ ಬದಲಾಗಿ ಇಂಥ ದೃಶ್ಯಗಳನ್ನು ಸ್ವೀಕರಿಸುವವರು ಇದ್ದಾರೆ. ಆದರೆ ಅಂದಿನ ದಿನಗಳಲ್ಲಿ ನಾನು ತುಂಬಾ ನೊಂದುಕೊಂಡೆ. ಜನರು ನನ್ನ ಬಾಡಿ ಷೇಮ್​ ಮಾಡಿದರು. ನನ್ನನ್ನು ನೋಡುವ ದೃಷ್ಟಿಯೂ ಬದಲಾಯಿತು. ಇದರಿಂದ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೆ ಎಂದಿದ್ದಾರೆ ನಟಿ ಕೇಟ್​. 

39 ವರ್ಷ ಹಿರಿಯ ಶಕ್ತಿ ಕಪೂರ್​ ಜತೆ ಪೂನಂ ಪಾಂಡೆಯ ಮಳೆಯಲ್ಲಿನ ಫಸ್ಟ್​ ನೈಟ್​ ಸೀನ್: ಬೆಚ್ಚಿಬಿದ್ದ ಪ್ರೇಕ್ಷಕರು!

ಪಡ್ಡೆಗಳ ಬೇಡಿಕೆ ಪೂರೈಸಲು ಕೇಟ್ ಬೆತ್ತಲಾಗುತ್ತಾಳೆ ಎಂದುಕೊಂಡವರೇ ಹೆಚ್ಚು. ಆದರೆ ಅದು ತಪ್ಪು ಗ್ರಹಿಕೆ ಎಂದು ಈ ಹಿಂದೆ ಕೇಟ್​ ಹೇಳಿದ್ದರು.  ' ನಾನು ಸಿನಿಮಾದಲ್ಲಿ ಬೆತ್ತಲಾಗುವುದರಿಂದ ನನ್ನ ಮಹಿಳಾ ಅಭಿಮಾನಿಗಳು ತಮ್ಮ ಫಿಗರ್ ಬಗ್ಗೆ ಅಭಿಮಾನದಿಂದ ನೋಡುವಂತಾಗುತ್ತದೆ. ನಾನೇನು ಜೀರೋ ಫಿಗರ್ ಹೊಂದಿಲ್ಲ. ಆಕರ್ಷಕ ಅಥವಾ ದೊಡ್ದ ಸ್ತನ, ನಿತಂಬ ಹೊಂದಿಲ್ಲ. ಆದರೆ, ನನ್ನ ದೇಹ ಸೌಂದರ್ಯವನ್ನು ಆತ್ಮವಿಶ್ವಾಸದಿಂದ ಯಾವುದೇ ಮುಜುಗರವಿಲ್ಲದೆ ಹೆಮ್ಮೆಯಿಂದ ನನ್ನನು ನಾನು ತೆರೆಯ ಮೇಲೆ ಪ್ರತಿನಿಧಿಸುತ್ತೇನೆ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯ ಎಂದು ಈ ಹಿಂದೆ ನಟಿ ಮ್ಯಾಗಜೀನ್​ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಇದೀಗ ಅದರಿಂದ ಆಗಿರುವ ನಕಾರಾತ್ಮಕ ಅನುಭವವನ್ನೂ ಬಿಚ್ಚಿಟ್ಟಿದ್ದಾರೆ. 

ಆದರೆ ಇಂದು ಕಾಲ ಬದಲಾಗಿದೆ. ಜನರು ಇಂಥ ದೃಶ್ಯಗಳನ್ನು ಸ್ವೀಕರಿಸುತ್ತಾರೆ. ಇದು ತುಂಬಾ ಖುಷಿಯ ವಿಷಯ ಎಂದಿರುವ ಕೇಟ್​, ಟೈಟಾನಿಕ್​ನಂಥ ಚಿತ್ರವನ್ನು ಮರುಸೃಷ್ಟಿ ಮಾಡುವುದಾದರೆ ಈಗಲೂ ಅದಕ್ಕೆ ಸಿದ್ಧ ಎಂದಿದ್ದಾರೆ. ಈಗಲೂ ರೋಮ್ಯಾಂಟಿಕ್ ಪಾತ್ರ ಸಿಕ್ಕರೆ ಮಾಡಲು ಸಿದ್ಧ. ಟೈಟಾನಿಕ್ ನ ರೋಸ್ ಡಿವಿಟ್ ಬುಕತರ್ ಆಗಿ ಕಾಣಿಸಿಕೊಳ್ಳಲಾರೆ. ಆದರೆ, ಪ್ರಣಯ ದೃಶ್ಯದಲ್ಲಿ ಅಭಿನಯಿಸಲು ಮನ ಹಾತೊರೆಯುತ್ತದೆ ಎಂದಿದ್ದಾರೆ ಕೇಟ್​. ಅಂದಹಾಗೆ ನಟಿಗೆ ಈಗ 49 ವರ್ಷ ವಯಸ್ಸು. 

20 ವರ್ಷ ಹಿರಿಯ ನಟಿ ಜತೆ ಮದ್ವೆಯಾಗ ಹೊರಟಿದ್ದ ಅಭಿಷೇಕ್​ ಬಚ್ಚನ್​: ನಿಮ್ಮ ಜೊತೆ ಮಲಗಲೇ ಎಂದು ಕೇಳಿದ್ರಂತೆ!
 

Follow Us:
Download App:
  • android
  • ios