ಕಚ್ಚೆ ಸೀರೆಯುಟ್ಟು ಅಜ್ಜಿಯ ಜಬರ್ದಸ್ತ್ ಡಾನ್ಸ್: ವೈರಲ್ ವೀಡಿಯೋ
ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ನಮ್ಮ ಹಿರಿಯರು ಹಲವು ಸಲ ಸಾಬೀತುಪಡಿಸಿದ್ದಾರೆ. ವಯಸ್ಸನ್ನು ಮೀರಿದ ವೃದ್ಧರ ಜೀವನೋತ್ಸಾಹದ ನಡೆ, ತಾರುಣ್ಯ ತುಂಬಿದ ಚಟುವಟಿಕೆಗಳು ಇವತ್ತಿನ ಯುವ ಸಮೂಹವನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.
ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ನಮ್ಮ ಹಿರಿಯರು ಹಲವು ಸಲ ಸಾಬೀತುಪಡಿಸಿದ್ದಾರೆ. ವಯಸ್ಸನ್ನು ಮೀರಿದ ವೃದ್ಧರ ಜೀವನೋತ್ಸಾಹದ ನಡೆ, ತಾರುಣ್ಯ ತುಂಬಿದ ಚಟುವಟಿಕೆಗಳು ಇವತ್ತಿನ ಯುವ ಸಮೂಹವನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಹಾಗೆಯೇ ಇಲ್ಲೊಬ್ಬರು ಅಜ್ಜಿ ತಮ್ಮ ವಯಸ್ಸನ್ನು ಮರೆತು ಮಕ್ಕಳಂತೆ ಸಖತ್ ಆಗಿ ಡಾನ್ಸ್ ಮಾಡಿದ್ದು, ಅಜ್ಜಿಯ ಡಾನ್ಸ್‌ಗೆ ಯುವಕ ಯುವತಿಯರೇ ನಾಚಿ ನೀರಾಗಿದ್ದಾರೆ.
@gordonramashray ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಮುಂದೆ ಇರುವ ಅಜ್ಜಿ ನನ್ನ ಖಿನ್ನತೆಯನ್ನು ದೂರ ಮಾಡಿದರು ಎಂದು ಅವರು ಈ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಸಂಗೀತಾ ರಸಮಂಜರಿ ಇದ್ದು, ಮರಾಠಿ ಹಾಡೊಂದಕ್ಕೆ ಅಲ್ಲಿದ್ದ ಮಹಿಳೆಯರು ನರ್ತಿಸುತ್ತಿದ್ದಾರೆ. ಅವರೊಂದಿಗೆ ಈ ಕಚ್ಚೆ ಸಾರಿ (ಮರಾಠಾ ಶೈಲಿ) ಧರಿಸಿದ ಅಜ್ಜಿಯೂ ಕೂಡ ಡಾನ್ಸ್ (dance) ಮಾಡುತ್ತಿದ್ದು, ಅಜ್ಜಿಯ ಡಾನ್ಸ್ ಮಾತ್ರ ಎಲ್ಲರನ್ನು ಸೆಳೆದಿದೆ.
106ನೇ ವಯಸ್ಸಿನಲ್ಲಿ ಫ್ಲೈಟ್ ಹತ್ತಿದ ಅಜ್ಜಿ, ಶತಾಯುಷಿಯ ಕನಸಿಗೆ ರೆಕ್ಕೆ ಕಟ್ಟಿ ಹಾರಾಡಿಸಿದವರಾರು ಗೊತ್ತಾ ?
ಅಜ್ಜಿಯ ಜಬರ್ದಸ್ತ್ ಸ್ಟೆಪ್‌ಗೆ ಜನ ಫಿದಾ ಆಗಿದ್ದು, ಅನೇಕರು ಈ ದೃಶ್ಯವನ್ನು ವೀಡಿಯೋ ಮಾಡಿಕೊಂಡಿದ್ದಾರೆ. ಅನೇಕರು ವೀಡಿಯೋಗೆ ಕಾಮೆಂಟ್ ಮಾಡಿದ್ದು, ಆಕೆಯ ಉತ್ಸಾಹ ತುಂಬಿದ ಡಾನ್ಸ್‌ಗೆ ತಲೆದೂಗಿದ್ದಾರೆ. ಆಕೆಯ ಅರ್ಧ ವಯಸ್ಸು ಅಲ್ಲದ ನಾನು ಈ ರೀತಿ ಕುಣಿಯಬೇಕಾದರೆ ನನ್ನ ವಿಟಾಮಿನ್ (vitamin) ಡಿ, ಇ, ಎ, ಬಿ ಸೇರಿದಂತೆ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ತನ್ನ ಜೀವನದ ಅತ್ಯುತ್ತಮ ಕ್ಷಣವನ್ನು ಜೀವಿಸುತ್ತಿದ್ದಾಳೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ಅಜ್ಜಿಯೂ ಹೀಗೆ ಇದ್ದರೂ ಹಳೆ ತಲೆಮಾರಿನ ಜನ ತುಂಬಾ ಸಮರ್ಥರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮೊಬೈಲ್ ಒತ್ತಿಕೊಂಡೆ ದಿನದ ಬಹುತೇಕ ಸಮಯ ಕಳೆಯುವ ಯುವ ಸಮೂಹಕ್ಕೆ ಜಾನಪದ ನೃತ್ಯ (Folk Dance) ಇತರ ದೈಹಿಕ ಚಟುವಟಿಕೆಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇದರ ಜೊತೆಗೆ ದೈಹಿಕ ನಿಶ್ಯಕ್ತಿಯೂ ಹೆಚ್ಚು, ಇಂದಿನ ಆಹಾರ ಹಾಗೂ ಜೀವನ ಶೈಲಿಯೂ ಇದಕ್ಕೆ ಕಾರಣ, ಇಂದು ಯುವ ಸಮೂಹಕ್ಕೆ ಸಣ್ಣಪುಟ್ಟ ಕೆಲಸಕ್ಕೂ ಸುಸ್ತಾಗಿ ಬಿಡುತ್ತಾರೆ. ಆದರೆ ಈ ಅಜ್ಜಿ ತಮ್ಮ ವಯಸ್ಸನ್ನು ಮೀರಿ ಈ ರೀತಿ ಉತ್ಸಾಹದಿಂದ ನೃತ್ಯ ಮಾಡುತ್ತಿರುವುದು ಯುವ ಸಮೂಹಕ್ಕೆ ಮಾದರಿ ಆಗಿದೆ.
ಮಗನ ಮಗುವಿಗೆ ಜನ್ಮ ನೀಡಿದ ತಾಯಿ, ಈಕೆ ಅಜ್ಜಿಯೂ ಹೌದು, ತಾಯಿಯೂ ಹೌದು!
ಅಬ್ಬಬ್ಬಾ..203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ದಾಖಲೆಗೆ ಸೇರಿದ 80 ವರ್ಷದ ಅಜ್ಜಿ!
ರಕ್ತದಾನವು ಒಬ್ಬ ವ್ಯಕ್ತಿಯು ಮಾಡಬಹುದಾದ ಅತ್ಯಂತ ಪವಿತ್ರ ಕಾರ್ಯವಾಗಿದೆ. ಯಾಕೆಂದರೆ ಇದು ವ್ಯಕ್ತಿಯ ಜೀವವನ್ನು ಉಳಿಸಲು ಸಹಾಯ ಮಾಡುತ್ತದೆ. ರಕ್ತದಾನವನ್ನು ಮನುಕುಲಕ್ಕೆ ಅತ್ಯಂತ ಮೌಲ್ಯಯುತವಾದ ಸೇವೆ ಎಂದು ಪರಿಗಣಿಸಲಾಗಿದೆ, ಕೇವಲ ಒಂದು ರಕ್ತದಾನವು ಒಂದಕ್ಕಿಂತ ಹೆಚ್ಚು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಯಾಕೆಂದರೆ ರಕ್ತವನ್ನು ಅದರ ವಿಭಿನ್ನ ಘಟಕಗಳಾಗಿ ವಿಂಗಡಿಸಬಹುದು ಮತ್ತು ಅಗತ್ಯವಿರುವ ರೋಗಿಗಳಿಗೆ ಸಹಾಯ ಮಾಡಲು ವಿವಿಧ ರೀತಿಯಲ್ಲಿ ಬಳಸಬಹುದು. ಅದಕ್ಕಾಗಿಯೇ ತಜ್ಞರು ಆರೋಗ್ಯವಂತ ಜನರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ರಕ್ತದಾನಿಗಳಾಗಿ ಸೈನ್ ಅಪ್ ಮಾಡಲು ಸಲಹೆ ನೀಡುತ್ತಾರೆ.
ಜೀವ ಉಳಿಸಲು ನಾವು ಒಂದಕ್ಕಿಂತ ಹೆಚ್ಚು ಬಾರಿ ರಕ್ತದಾನ (Blood donation) ಮಾಡಿದ್ದೇವೆ ಎಂದು ಹೇಳುವ ಮೂಲಕ ನಮ್ಮಲ್ಲಿ ಹಲವರು ಹೆಮ್ಮೆಪಡಬಹುದು. ಆದರೆ 80 ವರ್ಷದ ಜೋಸೆಫೀನ್ ಮಿಚಾಲುಕ್ ಎಂಬ ವೃದ್ಧೆ ತನ್ನ ಜೀವಮಾನವಿಡೀ ರಕ್ತದಾನ ಮಾಡುತ್ತಲೇ ಬಂದಿದ್ದಾರೆ. ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು (Guinness World Record) ಗಳಿಸಿದ್ದಾರೆ.
22ನೇ ವಯಸ್ಸಿನಿಂದಲೇ ರಕ್ತದಾನ ಮಾಡಲು ಆರಂಭಿಸಿದ್ದ ವೃದ್ಧೆ
ಜೋಸೆಫೀನ್ 1965ರಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ರಕ್ತದಾನ ಮಾಡಲು ಪ್ರಾರಂಭಿಸಿದರು. ಅಂದಿನಿಂದ, ಅವರು ಅಸಂಖ್ಯಾತ ಜನರ ಜೀವಗಳನ್ನು ಉಳಿಸಲು ಒಟ್ಟು 203 ಘಟಕಗಳನ್ನು ದಾನ ಮಾಡಿದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಡಾಟ್ ಕಾಮ್ ಪ್ರಕಾರ, ಹೆಚ್ಚು ಸಂಪೂರ್ಣ ರಕ್ತದಾನ ಮಾಡಿದ (ಮಹಿಳೆ) ಹಿಂದಿನ ದಾಖಲೆಯನ್ನು ಭಾರತದ ಮಧುರಾ ಅಶೋಕ್ ಕುಮಾರ್ ಹೊಂದಿದ್ದಾರೆ. ಅವರು ತಮ್ಮ ಜೀವನದಲ್ಲಿ 117 ಯುನಿಟ್ ದಾನ ಮಾಡಿದ್ದರು. ಜೋಸೆಫೀನ್ 1965 ರಲ್ಲಿ ರಕ್ತದಾನದ ಅಪಾಯಿಂಟ್‌ಮೆಂಟ್ ಅನ್ನು ಹೊಂದಿದ್ದ ತನ್ನ ಅಕ್ಕನಿಂದ ದಾನಿಯಾಗಿ ಸೇರಿಕೊಂಡರು. ಅಂದಿನಿಂದ, ಅವರು ಎಂದಿಗೂ ರಕ್ತದಾನ ಮಾಡುವುದನ್ನು ನಿಲ್ಲಿಸಲಿಲ್ಲ.